ಆನೆಗಳ ಸಭೆಯ ತೀರ್ಮಾನದಂತೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರ. - ಗುರುಮೂರ್ತಿ ಜೋಗಿಬೈಲು.
ಗೆ , ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ . ಮಾನ್ಯ ಅರಣ್ಯ ಸಚಿವರು ಕರ್ನಾಟಕ ಸರ್ಕಾರ . ಮತ್ತು ಹಿರಿಯ ಅರಣ್ಯ ಅಧಿಕಾರಿಗಳು . ಕರ್ನಾಟಕ ಸರ್ಕಾರ . ಯಿಂದಾ , ಕಾಡಿನ ಆನೆಗಳು . ಮಾನ್ಯರೆ , ಇತ್ತೀಚೆಗೆ ನಮ್ಮ ಗುಂಪಿನ ಆನೆಯೊಂದನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಆ ಆನೆ ಮರಣಿಸಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಭಾವಿಸುತ್ತೇವೆ . ಅಂತಹುದೇ ಕಾರ್ಯಾಚರಣೆಯಲ್ಲಿ ಮನುಷ್ಯರು ಸೆರೆ ಹಿಡಿದು ಹಿಂಸಿಸಿ ಸಾಕಿಕೊಂಡು " ಅರ್ಜುನ " ಎಂದು ಹೆಸರಿಟ್ಟುಕೊಂಡಿದ್ದ ಆನೆಯೂ ಮರಣಿಸಿದೆಯಷ್ಟೆ . ಅದಕ್ಕಾಗಿ ತಾವು ಸಂತಾಪ ವ್ಯಕ್ತಪಡಿಸಿರುವ ಸಂಗತಿ ತಿಳಿಯಿತು . ತಮ್ಮ ಸೂಕ್ಷ್ಮತೆಗೆ ಅಭಾರಿಗಳಾಗಿದ್ದೇವೆ . ಮನುಷ್ಯ ಲೋಕದ ತಾರತಮ್ಯದ ರೂಡಿಯಂತೆ ಎರಡೂ ಆನೆಗಳ ...