Posts

Showing posts from 2021

ಸಂಗ್ರಹ

ಇದು ನನಗೆ ವ್ಯಾಟ್ಸಪ್ ಬಂದ ಮೆಸೇಜ್, ಎಷ್ಟು ಚೆನ್ನಾಗಿ ಬರೆದಿದ್ದಾರೆ , ಓದಿದ ನನಗೆ ನಮ್ಮ ಮನೆಯ ಹಳೇ ದೀಪಾವಳಿ ಕಣ್ಣಮುಂದೆ ಬಂದಂತಾಯಿತು 👌👌👌 *ಪ್ಲವನಾಮ ಸಂವತ್ಸರದ* *ದೀಪಾವಳಿ ಹಬ್ಬದ ಆರಂಭದ ದಿನ* ಎಲ್ಲರಿಗೂ ಜಗತ್ತಿಗೂ‌‌‌ ಶುಭವನ್ನು‌ ಹಾರೈಸುತ್ತಾ....  *ಇಂದು ನೀರು ತುಂಬುವ ಹಬ್ಬ* ಹೌದೇ??  ಹೌದು. ಆದರೆ ನೀರು ತುಂಬಲು *ಹಂಡೆ ಇಲ್ಲ. ಕೊಡವಿಲ್ಲ. ಬೋಸಿ ಇಲ್ಲವೇ ಇಲ್ಲ* ಸುಣ್ಣದ ಪಟ್ಟೆ ಕೆಮ್ಮಣ್ಣು ಇಲ್ಲ.  *ಹಂಡೆಯ ಸುತ್ತ ಸುತ್ತಲು ಮಾಲಿಂಗನ ಬಳ್ಳಿ* ಇಲ್ಲ.  ನರಕ ಚತುರ್ದಶಿಯಂದು ಅಭ್ಯಂಗ ಸ್ನಾನಕ್ಕಾಗಿ ಧಗಧಗಿಸುವ ನೀರೊಲೆ ಇಲ್ಲ. ಸೆಗಣಿ ಕದಡಿದ ನೀರು ಹಾಕಿ ಅಂಗಳ‌ ಸಾರಿಸಿ  ದೊಡ್ಡ ದೊಡ್ಡ ರಂಗೋಲಿ ಇಡುವ ಪೈಪೋಟಿ ಇಲ್ಲ.  ಅಕ್ಕಿ ನೆನೆಸಿ, ನುಣ್ಣಗೆ ಒರಳಿನಲ್ಲಿ‌ ತಿರುವಿ,  ಹತ್ತಿಯ ತುಂಡಿನ ಸಹಾಯದಿಂದ ಹೊಸ್ತಿಲು, ಮೆಟ್ಟಿಲು ದೇವರ ಮುಂದೆ, ನಡುಮನೆ, ಕೋಣೆ ಕೋಣೆಗಳ ಗೋಡೆ ನೆಲದ ಅಂಚಿನಲ್ಲಿ ..  ಬೆರಳಿನಲ್ಲಿ ಇಡುತ್ತಿದ್ದ ಅಕ್ಕಿಹಿಟ್ಟಿನ ರಂಗೋಲಿ ಇಲ್ಲ... ಸೆಗಣಿಯಿಂದ ಕೆರಕನನ್ನು ಮಾಡಿ, ಗುಂಡನೆಯ ಚೆಂಡು ಹೂ ಸಿಕ್ಕಿಸಿ, ಮನೆಯ ಪ್ರತಿ ಬಾಗಿಲಿನ ಹೊಸ್ತಿಲಿನ ಅಂಚಿನಲ್ಲಿ ಇಡಲು ಎಷ್ಟೊಮನೆಗಳಿಗೆ ಹೊಸ್ತಿಲೇ ಇಲ್ಲ ಬೆಳಗಿನ ಜಾವ ಮೂರು ನಾಲ್ಕುಗಂಟೆಗೇ  ಎಣ್ಣೆ ನೀರಿಗಾಗಿ ಎಬ್ಬಿಸುತ್ತಿದ್ದ ಅಮ್ಮ, ನಡು ಮನೆ ಸಾರಿಸಿ ರಂಗೋಲಿ ಇಟ್ಟು ಮಣೆ ಹಾಕಿ ಮಕ್ಕಳನ್ನೆಲ್ಲಾ  ಸಾಲಾಗಿ...

ಸುಭಾಷಿತ

ಮುರಿದ ಲೇಖನಿಯು ಒಳ್ಳೆಯದನ್ನು  ಬರೆಯಲು ಬಿಡುವುದಿಲ್ಲ, ಅಂತೆಯೇ ಅಸೂಯೆಯ ಗುಣವು  ಉತ್ತಮ ಜೀವನ ನಡೆಸಲು ಬಿಡುವುದಿಲ್ಲ! 

ಸುಭಾಷಿತ

Image

ಸುಭಾಷಿತ

ಸಂಬಂಧಗಳಲ್ಲಿ ಏನನ್ನಾದರೂ ಅಪೇಕ್ಷಿಸುವುದು ಸ್ವಾರ್ಥವಲ್ಲ, ಆದರೆ ಏನಾದರು ಅಪೇಕ್ಷೆ ಇಟ್ಟುಕೊಂಡೇ ಸಂಬಂಧಕಟ್ಟಿಕೊಳ್ಳುವುದು ಸ್ವಾರ್ಥ ಎನಿಸುವುದು. 

ಸುಭಾಷಿತ

ಹಣ - ಸಂಪತ್ತಿನ ದಾಹ ಎನ್ನುವುದು ತುಂಬಾ ಬಿಸಿಯಾಗಿರುತ್ತದೆ.  ಎಲ್ಲಕ್ಕಿಂತ ಮೊದಲು ಸಂಬಂಧಗಳನ್ನು ಸುಟ್ಟು ಭಸ್ಮ ಮಾಡುತ್ತದೆ.