ಪ್ರೌಢಶಾಲಾ ಶಿಕ್ಷಕರ ಗೋಳು ಕೇಳುವವರಾರು?
ಪ್ರೌಢಶಾಲಾ ಶಿಕ್ಷಕರ ಗೋಳು ಕೇಳುವವರಾರು ? ಇಂದು ಹತ್ತನೇ ತರಗತಿಯ ಫಲಿತಾಂಶ ಎನ್ನುವುದು ಒಂದು ಯುದ್ದ ಎನ್ನುವಂತೆ ಆಗಿದೆ . 8 ತರಗತಿಯಿಂದ ಪ್ರೌಢ ಶಾಲೆಗೆ ಮಗು ಬಂದ ದಿನದಿಂದ ಅವರನ್ನು 10 ನೇ ತರಗತಿ ಫಲಿತಾಂಶಕ್ಕಾಗಿ ತಯಾರು ಮಾಡಲಾಗುತ್ತಿದೆ . ಸಂಪೂರ್ಣ ಪ್ರೌಢ ಶಿಕ್ಷಣ ವ್ಯವಸ್ಥೆ ಹತ್ತನೇ ತರಗತಿಯ ಪರಿಕ್ಷೆ ನಡೆದು ಅದರಲ್ಲಿ ಮಕ್ಕಳು ಏನು ಬರೆಯುತ್ತಾರೆ ಎಂಬುದನ್ನು ಅಂಕದಿಂದ ನೋಡಿ ತಿಳಿದುಕೊಳ್ಳುವ ಉದ್ದೇಶಕ್ಕಾಗಿಯೇ ಬದುಕುತ್ತಾ ಇರುವಂತೆ ಕಾಣುವುದು . ನಮ್ಮ ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಾ ಇರುವ ಈ ಅಂಕದ ಹುಚ್ಚು ಸಾಮಾನ್ಯ ಜನರಿಂದ ಹಿಡಿದು ಜನಪ್ರತಿನಿಧಿಗಳ ವರೆಗೆ , ಶೈಕ್ಷಣಿಕ ವ್ಯವಸ್ಥೆಯ ಎಲ್ಲಾ ಸ್ತರದ ಆಡಳಿತಗಾರರಿಗೆ ಅತಿಯಾಗಿಯೇ ಹಿಡಿದಿರುವುದು . ಯಾವಾಗ 10 ನೇ ತರಗತಿ...