Tuesday, January 22, 2019

ಶ್ರೀ ಶ್ರೀ ಶ್ರೀ ನಮನ

ಉರಿವ ತೇಜಕೂ
ಬಡಿವುದೇ ಸಿಡಿಲು
ಉಸಿರ ದಾಟಿರೆ ಒಡಲು?
ಸಿದ್ಧಗಂಗೆಯ ಸಿದ್ಧ
ಬಡಿಸಿದ್ದನಮೃತವ
ಮೃಡಭಕ್ತ ಶ್ರೀಶಿವಕುಮಾರ,
ಇಳೆಯ ಪುಣ್ಯವದೆಲ್ಲ
ತೊಳಗುತಿದೆ ನಭವ, ಶ್ರೀ
ಇಷ್ಟಲಿಂಗವೆ ರವಿರೂಪವಿಂದು!


ರಘು ವಿ.
ಸಂಪಾದಕ, ವಿವೇಕಹಂಸ.

ನುಡಿಮುತ್ತು

 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು