ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, July 17, 2017

ವಯಸ್ಸಾದ ತಂದೆಯನ್ನು ಮಗ ಊರಿನ ಪ್ರಸಿದ್ಧ ಹೋಟೆಲಿಗೆ... -ಕೃಪೆ ವಾಟ್ಸಪ್,

ವಯಸ್ಸಾದ ತಂದೆಯನ್ನು ಮಗ ಊರಿನ ಪ್ರಸಿದ್ಧ ಹೋಟೆಲಿಗೆ ಊಟಕ್ಕೆಂದು ಕರೆದೊಯ್ದಿದ್ದ. ಹೋಟೆಲ್ ಜನಸಂದಣಿಯಿಂದ ತುಂಬಿತ್ತು. ಮಗ ಹೇಗೂ ಜಾಗ ಗಿಟ್ಟಿಸಿದ. ಇವರ ಟೇಬಲ್ಲಿನ ಮತ್ತೊಂದು ಭಾಗದಲ್ಲಿ ನವದಂಪತಿಗಳು ಕುಳಿತಿದ್ದರು. ಊಟ ಪ್ರಾರಂಭವಾಯಿತು. ಈ ವ್ಯಕ್ತಿಯ ತಂದೆ ತುತ್ತನ್ನು ಬಾಯಿಗೆ ಇಡುವಾಗ ಕೈ ನಡುಗಿ ಬಿಳಿ ಅಂಗಿಯ ಮೇಲೆ ಚೆಲ್ಲಿ ಹೋಯಿತು. ಎದುರಿಗೆ ಕುಳಿತಿದ್ದ ಯುವಕ,
"'ಛೆ! ಇಷ್ಟು ವಯಸ್ಸಾದವರನ್ನು ಯಾಕಾದರೂ ಇಂತಹ ಹೋಟೆಲಿಗೆ ಕರೆದುಕೊಂಡು ಬರಬೇಕು..? ಅಂಗಿಯೆಲ್ಲಾ ಕೊಳೆ ಮಾಡಿಕೊಂಡರು ನೋಡಿ. ಹೊರಗೆ ಹೇಗೆ ಕರೆದುಕೊಂಡು ಹೋಗ್ತೀರಿ'"
ಎಂದು ಕೇಳಿದ. ಆದರೆ ಈ ಮಾತುಗಳು 'ಕೇಳಿಯೋ ಇಲ್ಲವೇನೋ 'ಎಂಬಂತೆ ಆ ವ್ಯಕ್ತಿ ತಾನೇ ತುತ್ತು ಮಾಡಿ ಉಣ್ಣಿಸಿದ. ನಂತರ ವಾಷ್ ರೂಮಿನಲ್ಲಿ ತಂದೆಯ ಅಂಗಿಯ ಕಲೆಯನ್ನು ತಿಕ್ಕಿ ತೊಳೆದು ತನ್ನ ಅಂಗಿಯನ್ನು ತಂದೆಗೆ ಹಾಕಿ, ಆತನ ಅಂಗಿಯನ್ನು ತಾನು ಹಾಕಿಕೊಂಡು ಮೇಲೆ ಕೋಟು ಕೋಟುಹಾಕಿಕೊಂಡ. ತಂದೆಯ ಕೆದರಿದ ಕೂದಲನ್ನು ಸರಿಪಡಿಸಿ ಬೆವರಿದ ಮುಖ ಒರೆಸಿ ಬಿಲ್ ಪಾವತಿಸಿ ಹೊರಡುವಷ್ಟರಲ್ಲಿ ರೆಸ್ಟೊರೆಂಟ್ ಗದ್ದಲ ಸ್ವಲ್ಪ ಕಡಿಮೆಯಾಗಿತ್ತು. ಇನ್ನೇನು ಹೊರ ನಡೆಯಬೇಕೆನ್ನುವಾಗ ಆ ಘಟನೆಯನ್ನು ವೀಕ್ಷಿಸಿದ್ದ ಪಕ್ಕದ ಟೇಬಲಿನಲ್ಲಿದ್ದ ಓರ್ವ ವ್ಯಕ್ತಿ
"'ಹಲೋ ಜಂಟಲ್ ಮ್ಯಾನ್ ನೀವೇನೋ ಬಿಟ್ಟು ಹೊರಟಿದ್ದೀರಿ'"
ಎಂದು ಜೋರಾಗಿ ಕೂಗಿದ. ಆ ಮಾತು ಕೇಳಿ ಹೋಟೆಲಲ್ಲಿದ್ದವರ ಚಿತ್ತ ಇವರತ್ತ ನೆಟ್ಟಿತು. 'ಇಲ್ಲ ನಾನೇನು ಬಿಟ್ಟು ಹೋಗಿಲ್ಲವಲ್ಲ' ಎಂದ ಮಗ. ಅದಕ್ಕೆ ಆ ವ್ಯಕ್ತಿ
'ಮಗನಾದವನು ತನ್ನ ವಯಸ್ಸಾದ ತಂದೆಯನ್ನು ಹೇಗೆ ನೋಡಿಕೊಳ್ಳಬೇಕೆಂಬ ಅಮೂಲ್ಯ ಪಾಠವನ್ನು ನಮಗೆ ಬಿಟ್ಟು ಹೊರಟಿದ್ದೀರಿ'
ಎಂದ, ಮುಂಚೆ ಕೊಂಕು ನುಡದಿದ್ದ
ಆ ಯುವ ದಂಪತಿಗೆ ನಾಚಿಕೆಯಾಗಿ ಕ್ಷಮೆ ಕೇಳಿದರು.
"ನಾನು ಸಣ್ಣವನಿರುವಾಗ ಅಪ್ಪನನ್ನು ಅದೆಷ್ಟು ಗೋಳು ಹೊಯ್ದುಕೊಂಡಿರಲಿಲ್ಲ. ಆಗೆಲ್ಲಾ ಆತ ಕೋಪಿಸಿಕೊಳ್ಳದೆ ನನ್ನನ್ನು ಮುದ್ದು ಮಾಡಿರಲಿಲ್ವ..? ಈಗ ಅವನು ಮಗು ನಾನು ತಂದೆ"
ಎಂದು ಹೇಳಿದ. ಅಲ್ಲಿದ್ದವರ ಕಣ್ಣಾಲಿ ತುಂಬಿತು. ಮಗ ತಂದೆಯ ಕೈ ಹಿಡಿದುಕೊಂಡು ಮೆಲ್ಲನೆ ಕಾರಿನತ್ತ ಕರೆದೊಯ್ದ.

ಹೌದು,
ವಯಸ್ಸಾದ ಮೇಲೆ ಮನುಷ್ಯ ಮಗುವಿನಂತಾಗುತ್ತಾನೆ. ಮೊದಲು ತನ್ನ ಮಕ್ಕಳನ್ನು ಕೈ ಹಿಡಿದು ಬೆಳೆಸಿದ ಆತನಿಗೆ/ಳಿಗೆ
ನಾವೆಲ್ಲ ಅವರನ್ನು ಮಕ್ಕಳಂತೆ ನೋಡಿಕೊಂಡಾಗ ಬದುಕಿಗೆ ಒಂದು ಅರ್ಥ...

No comments:

Post a Comment