ಕೃಪೆ ವಾಟ್ಸಪ್
ನವಯುಗದ ಸೊಸೆಯ ಹೊಸಾ ಒಪ್ಪಂದ ! ತಾನು ಶಾಪಿಂಗ್ ಗೆ ಅಥವಾ ವಿಹಾರಕ್ಕೆ ಹೋದಾಗ ನನ್ನ ಮಗುವನ್ನು ಅತ್ತೆ ನೋಡಿಕೊಳ್ಳಲಿ. ಅವರ ಮಗುವನ್ನು ನಾನು ನೋಡಿಕೊಳ್ತೇನೇ.... ***** ಗಂಡ ಹೆಂಡತಿ ಸೀರೆ ಶಾಪಿಂಗ್ ಹೋದರು. ಹೆಂಡತಿ ಹೆಚ್ಚೂಕಮ್ಮಿ ನೂರು ಸೀರೆ ತೆಗೆದು, ಅದರಲ್ಲಿ 25 ಶಾರ್ಟ್ಲಿಸ್ಟ್ ಮಾಡಿ, ಗಂಡನಿಗೆ ಅದರಿಂದ ಐದು ಸೀರೆ ಆರಿಸಲು ಹೇಳಿ. ಕಡೆಯಲ್ಲಿ ಒಂದು ಸೀರೆ ಆರಿಸ್ತಾಳೆ. ಉಫ್ ಅಂತ ಉಸಿರುಬಿಟ್ಟ ಗಂಡ ಹೇಳಿದ: "ಹಿಂದಿನ ಕಾಲದಲ್ಲಿ ಸೀರೆ ಇರಲಿಲ್ಲ ನೋಡು. ಬರೀ ಎಲೆಗಳಿಂದ ಮೈ ಮುಚ್ಕೊಳ್ತಾ ಇದ್ರಂತೆ. ಅವನೇ ಪುಣ್ಯವಂತ" ಹೆಂಡತಿ ತಣ್ಣಗೆ ಉತ್ತರಿಸಿದಳು. "ಯಾರಿಗೊತ್ತು? ಈ ಎಲೆ ಬೇಡ, ಆ ಎಲೆ ಬೇಕು, ಈ ಮರದ್ದು ಬೇಡ, ಆ ಮರದ್ದು ತಗೊಂಬಾ, ಈ ಕಲರ್ ಚೆನ್ನಾಗಿಲ್ಲ ಅಂತ ಅವನ್ನ ಎಷ್ಟು ಮರ ಹತ್ತಿ ಇಳಿಸಿದ್ಲೋ ನೀವೇನು ನೋಡಿದ್ರಾ?" ನೀತಿ: ಶಾಪಿಂಗ್ ಮಾಡುವಾಗ ಹೆಣ್ಣುಮಕ್ಕಳ ಜೊತೆ ವಾದಿಸಬಾರದು. ***** ಗಂಡ : ಏನೇ ಇದು! ನನಗೆ ಬೆಂಡೇಕಾಯಿ ಆಗದು ಅಂತ ಗೊತ್ತಿದ್ದೂ ಬೆಂಡೆಕಾಯಿಯದ್ದೇ ಎಂಟ್ಹತ್ತು ಐಟಂ ಮಾಡಿದೀ? ನಾನು ಊಟ ಮಾಡೋದು ಬೇಡವಾ?? ಹೆಂಡತಿ : ಆಹಾಹಾ...ಬೆಂಡೆಕಾಯಿ ಆಗದಾ? ಮತ್ತ್ಯಾಕೋ ಅವಳು ಯಾರೋ ಮಿಟುಕಲಾಡಿ ಎಫ್ಬಿಯಲ್ಲಿ ಬೆಂಡೆಕಾಯಿ ಪಲ್ಯದ ಫೋಟೋ ಹಾಕಿದ್ರೆ "ವಾವ್...ಬಾಯಿಯಲ್ಲಿ ನೀರು ಬರ್ತಾ ಇದೆ. ನಿಮ್ಮಡುಗೆ ಅಂದ್ರೆ ಕೇಳ್ಬೇಕಾ? ಊಟಕ್ಕೆ ಬರಲಾ.." ಎಂದು ಕಾಮೆಂಟ್ ...