Posts

Showing posts from 2017

ಪ್ರದ್ಯುಮ್ನನ ಕೊಲೆಯಂಥ ಘಟನೆಗಳಿಗೆ ಕೊನೆ ಎಂದು?

Image
“ಶೈಕ್ಷಣಿಕ ವ್ಯವಸ್ಥೆಯ ಲೋಪಕ್ಕೆ ಇನ್ನೊಂದು ಬಲಿ - ಪ್ರದ್ಯುಮ್ನನ ಕೊಲೆ”   ದೇಶದ ಆಡಳಿತದ ಕೇಂದ್ರ ಸ್ಥಾನ ದೆಹೆಲಿಯ ಸಮೀಪದಲ್ಲೇ   ಗು ಗಾ೯೦ ವ ( ಗುರುಗ್ರಾಮ ) ಇರುವುದು . ಇಲ್ಲಿನ   ರೆಯಾನ ಇಂಟರ ನ್ಯಾಷ್ಯನಲ್ ಸ್ಕೂಲ್ ನಲ್ಲಿ 7 ವರ್ಷದ ಬಾಲಕ ಪ್ರದ್ಯುಮನ ಕೊಲೆ   ನಡೆದು 2 ತಿಂಗಳು ಗತಿಸಿರುವುದು . ಶಾಲೆಯಲ್ಲಿ ನಡೆದ ಬಾಲಕನ ಕೊಲೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪಾಲಕರಲ್ಲಿ ಆತಂಕವನ್ನು ಸ್ವೃಷ್ಠಿ ಮಾಡಿರುವುದು . 7 ವರ್ಷದ ಬಾಲಕನನ್ನು ಕೊಲೆ ಮಾ ಡಿ ದವರಾರು ? ಪ್ರಾರಂಭದಲ್ಲಿ ಶಾಲೆಯ ಬಸ್ ಕಂಡಕ್ಟರ್   ಅಶೋಕನ ಮೇಲೆ ಆಪಾದನೆ , ಬಂಧನ ಆಯ್ತು , ಸಿಬಿಐ ತನಿಖೆಯ ನಂತರ ಅದೇ ಶಾಲೆಯ 11 ನೇತರಗತಿಯ ವಿದ್ಯಾ ಥಿ೯ ಯೇ ಕೊಲೆಗಾರ ಎಂದು ತಿಳಿದು ಬಂದಿರುವುದು . ಕೊಲೆಗೆ ಕಾರಣ ಪರೀಕ್ಷೆಯನ್ನು ಮುಂದುಡುವುದೇ ಆಗಿರುವುದು .  ಚಿಕ್ಕ ಕಾರಣಕ್ಕಾಗಿ ಕೊಲೆಯ ಅಗತ್ಯ ಏನಿತ್ತು ? ಅದೂ 7 ವರ್ಷದ ಮುಗ್ದ ಬಾಲಕನನ್ನು ಕೊಲೆ ಮಾಡುವ ಅಗತ್ಯವಿತ್ತೇ ? ಕೊಲೆ ಮಾಡಿದ ವಿದ್ಯಾ ಥಿ೯ ಮಾನಸಿಕವಾಗಿ ಖಿನ್ನನ್ನಾಗಿದ್ದನೆ ?  ಕೊಲೆಗಾರನನ್ನು ಬಾಲ ಅಪರಾಧಿ ಎಂದು ಪರಿಗಣಿಸದೇ ಜೀವಾವಧಿ ಶಿಕ್ಷೆ ನೀಡಬೇಕೆಂಬ ಆಗ್ರಹ , ಶಾಲೆಯ ಆಡಳಿತವನ್ನು ಕೆಲವು ದಿನ ತಾವೇ ತೆಗೆದುಕೊಳ್ಳುವೆವು ಎಂಬ ಸ ಕಾ೯ ರದ ನಿ ಧಾ೯ ರ ...

Kannada Mahabharat

Image
http://www.vyasaonline.com/translations/

ಕೃಪೆ ವಾಟ್ಸಪ್

ನವಯುಗದ ಸೊಸೆಯ ಹೊಸಾ ಒಪ್ಪಂದ ! ತಾನು ಶಾಪಿಂಗ್ ಗೆ ಅಥವಾ ವಿಹಾರಕ್ಕೆ ಹೋದಾಗ ನನ್ನ ಮಗುವನ್ನು ಅತ್ತೆ ನೋಡಿಕೊಳ್ಳಲಿ. ಅವರ ಮಗುವನ್ನು ನಾನು ನೋಡಿಕೊಳ್ತೇನೇ.... ***** ಗಂಡ ಹೆಂಡತಿ ಸೀರೆ ಶಾಪಿಂಗ್ ಹೋದರು. ಹೆಂಡತಿ ಹೆಚ್ಚೂಕಮ್ಮಿ ನೂರು ಸೀರೆ ತೆಗೆದು, ಅದರಲ್ಲಿ 25 ಶಾರ್ಟ್ಲಿಸ್ಟ್ ಮಾಡಿ, ಗಂಡನಿಗೆ ಅದರಿಂದ ಐದು ಸೀರೆ ಆರಿಸಲು ಹೇಳಿ. ಕಡೆಯಲ್ಲಿ ಒಂದು ಸೀರೆ ಆರಿಸ್ತಾಳೆ. ಉಫ್ ಅಂತ ಉಸಿರುಬಿಟ್ಟ ಗಂಡ ಹೇಳಿದ: "ಹಿಂದಿನ ಕಾಲದಲ್ಲಿ ಸೀರೆ ಇರಲಿಲ್ಲ ನೋಡು. ಬರೀ ಎಲೆಗಳಿಂದ ಮೈ ಮುಚ್ಕೊಳ್ತಾ ಇದ್ರಂತೆ. ಅವನೇ ಪುಣ್ಯವಂತ" ಹೆಂಡತಿ ತಣ್ಣಗೆ ಉತ್ತರಿಸಿದಳು. "ಯಾರಿಗೊತ್ತು? ಈ ಎಲೆ ಬೇಡ, ಆ ಎಲೆ ಬೇಕು,  ಈ ಮರದ್ದು ಬೇಡ, ಆ ಮರದ್ದು ತಗೊಂಬಾ, ಈ ಕಲರ್ ಚೆನ್ನಾಗಿಲ್ಲ ಅಂತ ಅವನ್ನ ಎಷ್ಟು ಮರ ಹತ್ತಿ ಇಳಿಸಿದ್ಲೋ ನೀವೇನು ನೋಡಿದ್ರಾ?" ನೀತಿ: ಶಾಪಿಂಗ್ ಮಾಡುವಾಗ ಹೆಣ್ಣುಮಕ್ಕಳ ಜೊತೆ ವಾದಿಸಬಾರದು. ***** ಗಂಡ : ಏನೇ ಇದು! ನನಗೆ ಬೆಂಡೇಕಾಯಿ ಆಗದು ಅಂತ ಗೊತ್ತಿದ್ದೂ ಬೆಂಡೆಕಾಯಿಯದ್ದೇ ಎಂಟ್ಹತ್ತು ಐಟಂ ಮಾಡಿದೀ? ನಾನು ಊಟ ಮಾಡೋದು ಬೇಡವಾ?? ಹೆಂಡತಿ : ಆಹಾಹಾ...ಬೆಂಡೆಕಾಯಿ ಆಗದಾ? ಮತ್ತ್ಯಾಕೋ ಅವಳು ಯಾರೋ ಮಿಟುಕಲಾಡಿ ಎಫ್ಬಿಯಲ್ಲಿ ಬೆಂಡೆಕಾಯಿ ಪಲ್ಯದ ಫೋಟೋ ಹಾಕಿದ್ರೆ "ವಾವ್...ಬಾಯಿಯಲ್ಲಿ ನೀರು ಬರ್ತಾ ಇದೆ. ನಿಮ್ಮಡುಗೆ ಅಂದ್ರೆ ಕೇಳ್ಬೇಕಾ? ಊಟಕ್ಕೆ ಬರಲಾ.." ಎಂದು ಕಾಮೆಂಟ್ ...

ಅಧಿಕ ತೂಕ, ಹೊಟ್ಟೆ ಸುತ್ತದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..?

ಅಧಿಕ ತೂಕ, ಹೊಟ್ಟೆ ಸುತ್ತದ ಕೊಬ್ಬನ್ನು ಅರಿಶಿಣ, ನಿಂಬೆರಸದಿಂದ ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..? ಅರಿಶಿಣ ನಾವು ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಪದಾರ್ಥ. ಇದರಿಂದ ಅಡುಗೆಗೆ ಒಳ್ಳೆಯ ರುಚಿ ಬರುತ್ತದೆ. ಅಷ್ಟೇ ಅಲ್ಲದೆ, ಅರಿಶಿಣವನ್ನು ನಮ್ಮ ಹಿರಿಯರು ಆಂಟಿ ಸೆಪ್ಟಿಕ್ ಆಗಿ, ಗಾಯಗಳು ವಾಸಿಯಾಗಲು ಸಹ ಬಳಸುತ್ತಿದ್ದರು. ಇನ್ನು ನಿಂಬೆರಸ. ಇದನ್ನೂ ಅಷ್ಟೇ ನಾವು ಅಡುಗೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತೇವೆ. ಮುಖ್ಯವಾಗಿ ನಿಂಬೆರಸ, ಸಕ್ಕರೆಯನ್ನು ನೀರಿನಲ್ಲಿ ಬೆರೆಸಿಕೊಂಡು ಶರಬತ್ ತರಹ ಕುಡಿದರೆ ದೇಹ ತಂಪಾಗುತ್ತದೆ. ಆದರೆ ಅರಿಶಿಣ, ನಿಂಬೆರಸಗಳನ್ನು ಉಪಯೋಗಿಸಿ ತೂಕ ಕಡಿಮೆ ಮಾಡಿಕೊಳ್ಳುವ ಸಂಗತಿ ಗೊತ್ತೇ..? ತೂಕವಷ್ಟೇ ಅಲ್ಲ, ಹೊಟ್ಟೆ ಬಳಿ ಸಂಗ್ರಹವಾಗಿರುವ ಕೊಬ್ಬು ಸಹ ಕರಗುತ್ತದೆ. ಅದೇಗೆ ಎಂದು ಈಗ ನೋಡೋಣ. 1. ಒಂದು ಗ್ಲಾಸು ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆರಸವನ್ನು, 1/4 ಟೀಸ್ಫೂನ್ ಅರಿಶಿಣವನ್ನು ಮಿಕ್ಸ್ ಮಾಡಬೇಕು. ಎರಡೂ ಮಿಕ್ಸ್ ಮಾಡಿದ ಬಳಿಕ ಬೇಕೆಂದರೆ ಅದರಲ್ಲಿ ಸ್ವಲ್ಪ ಜೇನು ಬೆರೆಸಬಹುದು. ಆ ರೀತಿ ಮೂರನ್ನೂ ಬೆರೆಸಿ ಆ ನೀರನ್ನು ಉಗುರುಬೆಚ್ಚಗೆ ಇದ್ದಾಗಲೇ ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನಿತ್ಯ ಎರಡು ಬಾರಿ ಈ ಮಿಶ್ರಣವನ್ನು ಕುಡಿದರೆ ವಾರದಲ್ಲಿ ಫಲಿತಾಂಶ ಸಿಗುತ್ತದೆ. ತೂಕ ಕಡಿಮೆಯಾಗುವವರೆಗೂ ಅಥವಾ ಹೊಟ್ಟೆ ಸುತ್ತ ಸಂಗ್ರಹವಾಗಿರುವ ಕೊಬ್ಬು ಕರಗುವವರೆಗೂ ಇದನ್ನು ಕುಡಿಯಬಹುದು. 2. ಒಂದು ನಿಂಬೆಹ...

ವಯಸ್ಸಾದ ತಂದೆಯನ್ನು ಮಗ ಊರಿನ ಪ್ರಸಿದ್ಧ ಹೋಟೆಲಿಗೆ... -ಕೃಪೆ ವಾಟ್ಸಪ್,

ವಯಸ್ಸಾದ ತಂದೆಯನ್ನು ಮಗ ಊರಿನ ಪ್ರಸಿದ್ಧ ಹೋಟೆಲಿಗೆ ಊಟಕ್ಕೆಂದು ಕರೆದೊಯ್ದಿದ್ದ. ಹೋಟೆಲ್ ಜನಸಂದಣಿಯಿಂದ ತುಂಬಿತ್ತು. ಮಗ ಹೇಗೂ ಜಾಗ ಗಿಟ್ಟಿಸಿದ. ಇವರ ಟೇಬಲ್ಲಿನ ಮತ್ತೊಂದು ಭಾಗದಲ್ಲಿ ನವದಂಪತಿಗಳು ಕುಳಿತಿದ್ದರು. ಊಟ ಪ್ರಾರಂಭವಾಯಿತು. ಈ ವ್ಯಕ್ತಿಯ ತಂದೆ ತುತ್ತನ್ನು ಬಾಯಿಗೆ ಇಡುವಾಗ ಕೈ ನಡುಗಿ ಬಿಳಿ ಅಂಗಿಯ ಮೇಲೆ ಚೆಲ್ಲಿ ಹೋಯಿತು. ಎದುರಿಗೆ ಕುಳಿತಿದ್ದ ಯುವಕ, "'ಛೆ! ಇಷ್ಟು ವಯಸ್ಸಾದವರನ್ನು ಯಾಕಾದರೂ ಇಂತಹ ಹೋಟೆಲಿಗೆ ಕರೆದುಕೊಂಡು ಬರಬೇಕು..? ಅಂಗಿಯೆಲ್ಲಾ ಕೊಳೆ ಮಾಡಿಕೊಂಡರು ನೋಡಿ. ಹೊರಗೆ ಹೇಗೆ ಕರೆದುಕೊಂಡು ಹೋಗ್ತೀರಿ'" ಎಂದು ಕೇಳಿದ. ಆದರೆ ಈ ಮಾತುಗಳು 'ಕೇಳಿಯೋ ಇಲ್ಲವೇನೋ 'ಎಂಬಂತೆ ಆ ವ್ಯಕ್ತಿ ತಾನೇ ತುತ್ತು ಮಾಡಿ ಉಣ್ಣಿಸಿದ. ನಂತರ ವಾಷ್ ರೂಮಿನಲ್ಲಿ ತಂದೆಯ ಅಂಗಿಯ ಕಲೆಯನ್ನು ತಿಕ್ಕಿ ತೊಳೆದು ತನ್ನ ಅಂಗಿಯನ್ನು ತಂದೆಗೆ ಹಾಕಿ, ಆತನ ಅಂಗಿಯನ್ನು ತಾನು ಹಾಕಿಕೊಂಡು ಮೇಲೆ ಕೋಟು ಕೋಟುಹಾಕಿಕೊಂಡ. ತಂದೆಯ ಕೆದರಿದ ಕೂದಲನ್ನು ಸರಿಪಡಿಸಿ ಬೆವರಿದ ಮುಖ ಒರೆಸಿ ಬಿಲ್ ಪಾವತಿಸಿ ಹೊರಡುವಷ್ಟರಲ್ಲಿ ರೆಸ್ಟೊರೆಂಟ್ ಗದ್ದಲ ಸ್ವಲ್ಪ ಕಡಿಮೆಯಾಗಿತ್ತು. ಇನ್ನೇನು ಹೊರ ನಡೆಯಬೇಕೆನ್ನುವಾಗ ಆ ಘಟನೆಯನ್ನು ವೀಕ್ಷಿಸಿದ್ದ ಪಕ್ಕದ ಟೇಬಲಿನಲ್ಲಿದ್ದ ಓರ್ವ ವ್ಯಕ್ತಿ "'ಹಲೋ ಜಂಟಲ್ ಮ್ಯಾನ್ ನೀವೇನೋ ಬಿಟ್ಟು ಹೊರಟಿದ್ದೀರಿ'" ಎಂದು ಜೋರಾಗಿ ಕೂಗಿದ. ಆ ಮಾತು ಕೇಳಿ ಹೋಟೆಲಲ್ಲಿದ್ದವರ...

ಕತ್ತೆ ಎಂಬ ಹರಿಕಾರನ ಕ್ರಾಂತಿ - ಕೃಪಾಕರ ಸೇನಾನಿ

ಹೆದ್ದಾರಿಯ ಪಕ್ಕದಲ್ಲೇ ಇದ್ದ ಆ ಊರಿನಲ್ಲಿ ಬಡತನ, ಮೂಢನಂಬಿಕೆ ಮತ್ತು ಅಜ್ಞಾನಗಳು ಯಥೇಚ್ಛವಾಗಿ ಮನೆಮಾಡಿದ್ದವು. ರಾಜಕೀಯವಾಗಿ ಪ್ರಭಾವಿಗಳಾಗಿದ್ದ ಒಂದೆರಡು ಮನೆಗಳ ಹೊರತಾಗಿ, ಅಲ್ಲಿದ್ದ ಮಣ್ಣಿನ ಮನೆಗಳಾವುವೂ ಸುಸ್ಥಿತಿಯಲ್ಲಿರಲಿಲ್ಲ. ಎಲ್ಲಾ ಜಾತಿಯ ಜನರ ಆರ್ಥಿಕ ಪರಿಸ್ಥಿತಿ ಮತ್ತು ಅವರ ಮನೆಗಳ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೇ ತೆರನಾಗಿತ್ತು. ಆದರೆ ಎಲ್ಲೆಂದರಲ್ಲಿ ಜಾತಿ ಸೂಚಕ ಸಾಂಕೇತಿಕ ಫಲಕಗಳು, ಬೀದಿಗೊಂದರಂತೆ ಹೆಂಡದಂಗಡಿ ಮತ್ತು ದೇವಸ್ಥಾನಗಳು ಇದ್ದವು. ಅಲ್ಲಿ ಜನಸಂಖ್ಯೆಗೇನು ಕೊರತೆ ಇರಲಿಲ್ಲವಾದರೂ, ಜನರಿಗಿಂತ ಜಾನುವಾರುಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಅವೆಲ್ಲವು ಕಾಡಿನಲ್ಲಿ ಪುಕ್ಕಟ್ಟೆ ಮೇಯ್ದು ಬರುತ್ತಿದ್ದುದರಿಂದ, ಅವು ಹಿಂಡುತ್ತಿದ್ದ ಅರ್ಧ ಲೀಟರ್ ಹಾಲು ಕೂಡ ಅವುಗಳ ಮಾಲೀಕರಿಗೆ ಲಾಭದಾಯಕ ಎಂಬಂತೆ ಕಾಣುತ್ತಿತ್ತು. ಊರ ಸುತ್ತಲೂ ಸಾಕಷ್ಟು ಒಣಭೂಮಿ ಇತ್ತಾದರೂ, ಕಡಿಮೆ ಮಳೆ ಬೀಳುವ ಪ್ರದೇಶವಾದ್ದರಿಂದ ವ್ಯವಸಾಯಕ್ಕೆ ಅಷ್ಟೇನು ಅನುಕೂಲಕರವಾಗಿರಲಿಲ್ಲ. ಹಾಗಾಗಿ ಸೆಗಣಿ ಸಂಗ್ರಹಿಸಿ ಗೊಬ್ಬರ ಮಾಡಿ ಮಾರುವುದು, ಕಾಡಿನಿಂದ ಸೌದೆ ಮತ್ತು ಕಳ್ಳ ನಾಟಗಳನ್ನು ತಂದು ಹತ್ತಿರದ ಪಟ್ಟಣಕ್ಕೆ ಮಾರುವುದು ಅವರ ಮುಖ್ಯ ಕಸುಬಾಗಿತ್ತು. ಆ ಊರಿನಲ್ಲಿ ಮೂವರು ನಕಲಿ ಡಾಕ್ಟರ್‌ಗಳು ವೈದ್ಯಕೀಯ ವೃತ್ತಿ ನಡೆಸಿದ್ದರು. ಎಲ್ಲಾ ಬಗೆಯ ಸಣ್ಣ ಪುಟ್ಟ ಕಾಯಿಲೆಗಳಿಗೂ ಅವರು ಚುಚ್ಚುಮದ್ದನ್ನು ಪ್ರಯೋಗಿಸುತ್ತಿದ್ದುದರಿಂದ ರೋಗಿಗಳಿಗೆ ಅವರ ಬ...

ಸಹಪಂಕ್ತಿ ಭೋಜನ

Image
  ಸಹಪಂಕ್ತಿ ಭೋಜನದ ಬಗ್ಗೆ ಚ ಚೆ೯ ವಾದ ವಿವಿಧಗಳು ಆಗುತ್ತಾ ಇರುವುದು. ಒಟ್ಟಿಗೆ ಹಂಚಿ ತಿನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಬೇಕೆ ? ಆಳುವ ಪ್ರಭುಗಳಿಗೆ , ಧರ್ಮದ ಗುತ್ತಿಗೆ ಪಡೆದವರಿಗೆ , ಪ್ರಗತಿಶೀಲರೆಂಬ ಹಣೆಪಟ್ಟಿ ಹೊಂದಿದವರಿಗೆ ಇಂತಹ ಮಕ್ಕಳ ಸಂದೇಶ....ತಲುಪದೇ ಇರುವುದು ನಮ್ಮ ಶೈಕ್ಷಣಿಕ ವ್ಯವಸ್ಥೆಯ ಅತಿ ದೊಡ್ಡ ದುರಂತವಾಗಿದೆ.

ಮಕ್ಕಳನ್ನು ಯಂತ್ರಗಳನಾನ್ನಗಿಸುವ ವ್ಯವಸ್ಥೆ - ವಿವೇಕ ಬೆಟ್ಕುಳಿ,

Image
ಹುಟ್ಟಿದಾಗ ಅಳುವ, ಆ ನಂತರದಲ್ಲಿ ಹಸಿವಾದಾಗ, ನೋವಾದಾಗ ಅಳುತ್ತಾ, ತನ್ನಷ್ಟಕ್ಕೆ ನಗುತ್ತಾ ಬೆಳೆಯುವ ಮಗು ತೊದಲು ಮಾತನಾಡಿದಾಗ...ಅಮ್ಮ, ಅಪ್ಪ...ಅಣ್ಣ  ಏನೇ ಹೇಳಿದರು ಮನೆ ಮಂದಿಯೆಲ್ಲಾ ಸಂತೋಷದಿಂದ ಆ ಮಗುವಿನ ಸಹಜತೆಯಿಂದ ಆಕಷಿ೯ತರಾಗುವರು. ಯಾವುದೇ ಹುದ್ದೆ, ಅಂತಸ್ತು ಯಾವುದೂ ಸಹಾ ಆ ಮಗುವಿಕೆ ತಿಳಿದರುವುದಿಲ್ಲ, ಮಗುವಿನ ಜನನ ಅದರ ಆಕರ್ಷಣೆಯಿಂದಾಗಿ ಮಗುವಿನ ತಾಯಿ ಸಹಾ ನಿಧಾನವಾಗಿ ಗೌರವಕ್ಕೆ ಅರ್ಹಳಾಗುವಳು. ಇಂತಹ ಮುಗ್ದ ಮನಸ್ಸಿನ ಮಕ್ಕಳು ಚಿಕ್ಕ ಪುಟ್ಟ ಹೆಜ್ಜೆಯನ್ನು ಇಡುತ್ತಾ ಮನೆಯೆಲ್ಲಾ ಓಡಾಡುವುದು. ಅದಕ್ಕೊಂದು ಹೆಸರು, ಜಾತಿ ನೀಡಿ ಯಾವಾಗ ನಾವು ಪ್ರತೇಕ ಗುರುತಿಸುವಿಕೆ ಪ್ರಾರಂಭ ಮಾಡುವೆವು. ಅಂದಿನಿಂದ ಮಕ್ಕಳು ತಮ್ಮತನವನ್ನು ಕಳೆದುಕೊಳ್ಳತೊಡಗುವರು. ಸಹಜವಾಗಿ ಇರುವ ಮಗುವಿಗೆ ಮನೆಯ ಅಂತಸ್ತು, ಅಪ್ಪ ಅಮ್ಮನ ಗೌರವ ಜಾತಿ, ಧರ್ಮದ ರೀತಿ ಈ ಎಲ್ಲವನ್ನು ಆ ಮಗುವಿನ ನಡುವಳಿಕೆ, ಆಹಾರ ವೇಷ ಭೂಷಣದಲ್ಲಿ ಒತ್ತಾಯವಾಗಿ ತುರುಕಲು ಪ್ರಾರಂಭಿಸುವೆವು. ಅದರ ಮುಂದುವರೆದ ಭಾಗವಾಗಿಯೇ ಶಾಲೆಗಳು ಸೃಷ್ಠಿಯಾಗಿರುವುದು. ಯಾವಾಗ ಮಗು ಶಾಲೆಗೆ ಹೋಗಲು ಪ್ರಾರಂಭ ಮಾಡುವುದೋ ಅಂದಿನಿಂದ ಮಗು ಯಾಂತ್ರಿಕ ಮಗುವಾಗಿರುವುದು, ವಿನಹ: ಸಹಜ ಮಗುವಾಗಿರದು. ಸಹಜ ಮಗುವನ್ನು ಯಾಂತ್ರಿಕ ಮಗುವನ್ನಾಗಿಸುವಲ್ಲಿ ಮುಖ್ಯವಾಗಿ ತಾಯಿ, ತಂದೆ ಹಾಗೂ ಶಾಲಾ ಶಿಕ್ಷಕರ ಪಾತ್ರ ಬಹುಮುಖ್ಯವಾಗಿರುವುದು. ಸ್ವಲ್ಪ ಸಹಜತೆ ಬಗ್ಗೆ ಮಾತನಾಡುವ ಅಜ್ಜ, ಅಜ್ಜಿ ಕಡೆ ಸ...

ಮುಗ್ದ ಮನಸ್ಸುಗಳು..

Image
ಪದೇ ಪದೇ ಕಾಡುವ ಹುಡುಗಿ... ...... ಅಂದು ನಿನ್ನ ಪೋಟೋ ತೆಗೆದುಕೊಂಡೆ ಇಂದು ನಿನ್ನನ್ನು ಮರೆಯಲು ಆಗುತ್ತಿಲ್ಲ.ನಿನಗಾಗಿ ನಾನು ಏನು ಮಾಡಲು ಆಗುತ್ತಿಲ್ಲ. ನಮ್ಮ ಸುತ್ತಮುತ್ತಲಿನ ನಿನ್ನಂತ ಸಾವಿರಾರು ಮುಗ್ದ ಮಕ್ಕಳಿಗೆ ಸಿಗಬಹುದಾದ ಸ್ವಾತಂತ್ಯದ ನಿರಿಕ್ಷೇಯಲ್ಲಿ ನಾನು ಇರುವೆನು.......ಕನಸು ಕಾಣುತ್ತಿರುವುವೆನು

ಭಗವದ್ಗೀತೆಯ ಕಿರು ಪರಿಚಯ - ಪ್ರಶ್ನೋತ್ತರಮಾಲಿಕೆ.. Badari Prasad Margasahayam

* ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು..? ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ. * ಯಾವಾಗ ಬೋಧಿಸಿದ..? ಉತ್ತರ : ಇಂದಿನಿಂದ ಸುಮಾರು ೭ ಸಾವಿರ ವರ್ಷಗಳ ಹಿಂದೆ. * ಯಾವ ದಿನ ಬೋಧಿಸಿದ..? ಉತ್ತರ : ರವಿವಾರ. * ಯಾವ ತಿಥಿಯಲ್ಲಿ..? ಉತ್ತರ : ಏಕಾದಶಿಯಂದು. * ಎಲ್ಲಿ ಬೋಧಿಸಿದ..? ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ. * ಎಷ್ಟು ಸಮಯ ಬೋಧಿಸಿದ..? ಉತ್ತರ : ೪೫ ನಿಮಿಷ. * ಅರ್ಜುನನಿಗೇಕೆ ಗೀತೆಯನ್ನು ಬೋಧಿಸಿದ..? ಉತ್ತರ : ಕ್ಷತ್ರಿಯನಿಗೆ ಕರ್ತವ್ಯವಾದದ್ದು ಯುದ್ಧ..ತನ್ನ ಕರ್ತವ್ಯದಿಂದ ಅರ್ಜುನ ವಿಮುಖನಾಗಲು ಬಯಸುತ್ತಾನೆ. ಯುದ್ಧಮಾಡದಿರಲು ನಿಶ್ಚಯಿಸುತ್ತಾನೆ. ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟು ಮಾಡಲು ಹಾಗೂ ಭವಿಷ್ಯದ ಮಾನವಸಂತತಿಗೆ ಧರ್ಮಜ್ಞಾನವನ್ನು ನೀಡಲು ಕೃಷ್ಣ ಗೀತೆಯನ್ನು ಬೋಧಿಸಿದ. * ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ..? ಉತ್ತರ : ಹದಿನೆಂಟು. * ಎಷ್ಟು ಶ್ಲೋಕಗಳಿವೆ..? ಉತ್ತರ : ೭೦೦ ಶ್ಲೋಕಗಳು. * ಗೀತೆಯಲ್ಲಿರುವ ವಿಷಯಗಳಾವವು..? ಉತ್ತರ : ಜ್ಞಾನ - ಭಕ್ತಿ - ಕರ್ಮ - ಯೋಗ ಮಾರ್ಗಗಳ ವಿಸ್ತೃತವಾದ ವ್ಯಾಖ್ಯಾನ..ಈ ಮಾರ್ಗಗಳಲ್ಲಿ ನಡೆಯುವವರು ಖಂಡಿತವಾಗಲೂ ಪರಮಸ್ಥಾನವನ್ನು ಪಡೆಯುತ್ತಾರೆಂದು ಹೇಳಲಾಗಿದೆ.. * ಅರ್ಜುನನನ್ನು ಬಿಟ್ಟರೆ ಗೀತೆಯನ್ನು ಮತ್ತ್ಯಾರು ಕೇಳಿದ್ದಾರೆ..? ಉತ್ತರ : ಧೃತರಾಷ್ಟ್ರ ಹಾಗೂ ಸಂಜಯ. * ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ ಜ್ಞಾನ ...

ಹೊಣೆಯರಿತ ನಾಗರಿಕರಿಂದ - ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.

ಹೊಣೆಯರಿತ ನಾಗರಿಕರಿಂದ: ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಈ  ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇವೆ. ಮಾಧ್ಯಮಗಳ ವರದಿಯ ಪ್ರಕಾರ, ಘನವೆತ್ತ ಕರ್ನಾಟಕ ಸರಕಾರ ಪ್ರಾಥಮಿಕ, ಮಾಧ್ಯಮಿಕ ಹಾಗು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹೊಸ  ಪಠ್ಯಪುಸ್ತಕಗಳನ್ನು ೨೦೧೭ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ನಿರ್ಧರಿಸಿದೆ. ಈ ಹೊಸ ಪಠ್ಯಕ್ರಮ ಬಹಳಷ್ಟು ವಿಕೃತ ಮತ್ತು  ತಪ್ಪುಮಾಹಿತಿಗಳನ್ನು ಒಳಗೊಂಡಿದೆ ಎಂಬ ವದಂತಿ ಹರಿದಾಡುತ್ತಿದೆ. ಘನವೆತ್ತ ರಾಜ್ಯಸರ್ಕಾರ ಹಾಗು  ಪ್ರಾಥಮಿಕ ಶಿಕ್ಷಣ ವಿಭಾಗ ಪುಸ್ತಕಗಳ ಪರಿಷ್ಕರಣೆ ಮತ್ತು ಬದಲಾವಣೆಯ ಬಗ್ಗೆ ಯಾವುದೇ ರೀತಿಯ ಪಾರದರ್ಶಕ ವಿಚಾರ ವಿನಿಮಯ ನಡೆಸಿಲ್ಲ. ಹೊಸ ಪುಸ್ತಕ ರಚನೆಗೆ,ಬೇರೆ ಬೇರೆ ವಿಷಯದಲ್ಲಿ ರಚನೆಯಾದ ಸಮಿತಿಗಳಿಗೆ ತಮ್ಮ ಅಂತಿಮ ಕರಡನ್ನು ಸಲ್ಲಿಸಲು  ೧೫ ಜನವರಿ ೨೦೧೭ ಕೊನೆಯದಿನವಾದರೂ, ಬೇರೆ ಯಾವುದೇ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳದೆ ಸರಕಾರ ಈ ಪಠ್ಯಗಳನ್ನು ನಿಗೂಢರೀತಿಯಲ್ಲಿ ಮುಂದಿನ ಆರು ತಿಂಗಳಲ್ಲಿ ಪ್ರಕಟಿಸಲು ಹೊರಟಿದೆ. ಈ ಪಠ್ಯಪುಸ್ತಕ ಬದಲಾವಣೆಯ ವಿಚಾರದಲ್ಲಿ ಸರಕಾರದ ಮತ್ತು ಪಠ್ಯಪುಸ್ತಕ ಸಮಿತಿಯ ನಡವಳಿಕೆ ಮತ್ತು ನಿಗೂಢತೆ, ಮುಂದಿನ ಪೀಳಿಗೆಗಳ ಮಧ್ಯೆ ವೈಷಮ್ಯ ಮತ್ತು ಅಸಮಾನತೆಯ ಬೀಜ ಬಿತ್ತುವ ಪ್ರಯತ್ನವಾಗಿದೆ ಎಂಬ ಸಂಶಯ ಮೂಡುತ್ತದೆ. ನಮ್ಮ ಮಕ್ಕಳ ಹಾಗು ಅವರ ಪೀಳಿಗೆಯ/ಗಳ ಭವಿಷ್ಯದ ಕಾಳಜಿಯಿಂದ, ಸಮಾಜದ...