ನೈಸರ್ಗಿಕ ಸಂಪತ್ತಿನ ಪಾಲು ನಮಗೂ ಕೊಡಿ - ರಾಜೇಂದ್ರ ಪ್ರಸಾದ್
ಒಂದು ಪ್ರದೇಶದ ನೈಸರ್ಗಿಕ ಉತ್ಪತ್ತಿಗಳಾದ ಗಾಳಿ ನೀರು ಬೆಳಕು ಭೂಮಿ ಬಿಸಿಲು ಇವೆಲ್ಲವೂ ಆಯಾ ಪ್ರದೇಶದ ಸ್ವತ್ತು. ಅವುಗಳ ಬಳಕೆಯ ಪೂರ್ಣ ಹಕ್ಕು ಆಯಾ ಪ್ರದೇಶದ ಪಶು-ಪ್ರಾಣಿಗಳದ್ದು ಮನುಷ್ಯನನ್ನೂ ಸೇರಿಸಿ. ಇನ್ನೂ ಸಂವಿಧಾನದ ಆಧಾರದಲ್ಲಿ ಹೇಳುವುದಾದರೆ ಇವುಗಳನ್ನು ಅನುಭೋಗಿಸಿ ಬದುಕುವುದು ಮನುಷ್ಯನ ಮೂಲಭೂತ ಹಕ್ಕು. ಈವಾಗ ನಿರ್ಧಿಷ್ಟ ಪ್ರದೇಶದ ಜನ ತಮ್ಮ ನೆಲದ್ಲಲಿ ಬಿದ್ದ, ಹರಿದು ಬಂದ ನೀರನ್ನು ಕೃಷಿ ಮತ್ತು ಕುಡಿಯುವ ನೀರಿಗಾಗಿ ಸಂಗ್ರಹಿಸಿಕೊಳ್ಳುವುದು ತಪ್ಪೇ? ಹಾಗೆ ಸಂಗ್ರಹಿಸಿದ ನೀರನ್ನು ಮತ್ತೊಂದು ಪ್ರದೇಶದ ಕೃಷಿಗಾಗಿ ನಾವೇ ಜಾರಿಗೊಳಿಸಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯ ಉನ್ನತ ಸ್ಥಾನಗಳು ಕಸಿದುಕೊಳ್ಳುವುದು, ಅದನ್ನು ಆದೇಶವೆಂದು ಜಾರಿಗೊಳಿಸುವುದು ನಮಗಿರುವ ಮೂಲಭೂತಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲವೇ ?! ಕಾವೇರಿಯ ನೀರನ್ನು ನಾವು ತಮಿಳುನಾಡಿಗೆ ಬಿಟ್ಟರೆ * ತಮಿಳುನಾಡು ನಮಗೆ ಉಚಿತ ವಿದ್ಯುತ್ ಕೊಡುತ್ತದೆಯೇ ? ವಿದ್ಯುತ್ ಉತ್ಪತ್ತಿಯಾಗುವುದು ನೈಸರ್ಗಿಕ ಮೂಲಗಳಿಂದಲೇ ತಾನೇ! * ಉಚಿತವಾಗಿ ತೂತುಕುಡಿಯಿಂದ ಕರ್ನಾಟಕಕ್ಕೆ ಬೇಕಾದ ಉಪ್ಪನ್ನು ಉಚಿತವಾಗಿ ಸರಬರಾಜು ಮಾಡುತ್ತದೆಯೇ! ಉಪ್ಪಿನ ಮೂಲ ಸಮುದ್ರ. *ಕಾವೇರಿ ನೀರಿನ ಬಳಕೆ ಮಾಡುವ ತಮಿಳುನಾಡಿನ ಪ್ರದೇಶಗಳಲ್ಲಿ ಸಂಗ್ರಹವಾಗುವ ಭೂಕಂದಾಯದಲ್ಲಿ ನಮಗೆ ಭಾಗ ಕೊಡುತ್ತದೆಯೇ?! * ಕಾವೇರಿ ನದೀ ಮುಖಜ ಭೂಮಿಯಲ್ಲಿ ಇದೆ ಎನ್ನಲಾಗುತ್ತಿರುವ ತೈಲ ಮತ್ತು ನೈಸರ್ಗಿ...