Posts
Showing posts from June, 2016
ಬೇಂದ್ರಯವರು ಡಿ.ವಿ.ಜಿ ಯವರ ಬಗ್ಗೆ ಹೇಳಿರುವ ಮೇಚ್ಚುಗೆಯ ಮಾತುಗಳು
- Get link
- X
- Other Apps
ಕರುಣಾಳು ಬಾ ಬೆಳಕೆ .. - ಬಿ.ಎಂ. ಶ್ರೀಕಂಠಯ್ಯ
- Get link
- X
- Other Apps
ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು ಕೇಳನೊಡನೆಯೆ ಸಾಕು ನನಗೊಂದು ಹೆಜ್ಜೆ ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ ಕೈ ಹಿಡಿದು ನಡೆಸೆನ್ನನು ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ ಕೈ ಹಿಡಿದು ನಡೆಸದಿಹೆಯಾ ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು ಇರುಳನ್ನು ನೂಕದಿಹೆಯಾ? ಬೆಳಗಾಗ ಹೊಳೆಯದೆಯೆ ಹಿಂದೊಮ್ಮೆ ನಾನೊಲಿದು ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ - ಬಿ.ಎಂ. ಶ್ರೀಕಂಠಯ್ಯ
"ಕೋರಿಕೆ" - ಈಶ್ವರ ಸಣಕಲ್ಲ
- Get link
- X
- Other Apps
ಜಗವೆಲ್ಲ ನಗುತಿರಲಿ! ಜಗದಳುವು ನನಗಿರಲಿ! ನಾನಳಲು, ಜಗವೆನ್ನನೆತ್ತಿಕೊಳದೇ? ನಾ ನಕ್ಕು, ಜಗವಳಲು ನೋಡಬಹುದೇ? ತೆರವಾಗಿ ನನ್ನೆದೆಯು, ಧರೆಯೆದೆಯು ಉಕ್ಕಿರಲಿ! ಧರೆಯೊಳಗೆ ತೇಲಿಸುವೆನೆನ್ನೆದೆಯನು! ಧರೆ ಬತ್ತಿ, ಎನ್ನೆದೆಯು ಉಕ್ಕಲೇನು? ಪೊಡವಿಯೈಸಿರಿವಡೆದು, ಬಡತನವು ನನಗಿರಲಿ ಕೈಯೊಡ್ಡೆ ಪೊಡವಿಯೆನಗಿಕ್ಕದೇನು? ಪೊಡವಿಯೇ ಮೈಯಳಿಯೆ, ಮಾಡಲೇನು? ವಿಶ್ವವನು ತುಂಬಿರುವ ಈಶ್ವರನೆ ಅಳತೊಡಗೆ, ಸೈತಿಡಲು, ಸೈಪಿಡಲು ಬರುವನಾವಂ? ’ಹೇ ತಂದೆ’,ಎನಲೆನ್ನನವನೆ ಕಾವಂ!
ವಸಂತ ಬಂದ, ಋತುಗಳ ರಾಜ ತಾ ಬಂದ - ಬಿ ಎಂ ಶ್ರೀ
- Get link
- X
- Other Apps
ವಸಂತ ಬಂದ, ಋತುಗಳ ರಾಜ ತಾ ಬಂದ ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ, ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ, ಕೂವೂ , ಜಗ್ ಜಗ್, ಪುವ್ವೀ, ಟೂವಿಟ್ಟವೂ ! ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ, ಇನಿಯರ ಬೇಟ; ಬನದಲಿ ಬೆಳದಿಂಗಳೂಟ, ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಟ, ಕೂವೂ , ಜಗ್ ಜಗ್, ಪುವ್ವೀ, ಟೂವಿಟ್ಟವೂ ! ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು, ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು, ಕೂವೂ , ಜಗ್ ಜಗ್, ಪುವ್ವೀ, ಟೂವಿಟ್ಟವೂ ! ಬಂದ ವಸಂತ - ನಮ್ಮಾ ರಾಜ ವಸಂತ ! ಇಂಗ್ಲಿಷ್ ಗೀತಗಳು’ ಸಂಕಲನದ್ದು. ಆಂಗ್ಲ ಕವಿ Thomas Nashe (1567–1601) ಬರೆದ ’Spring' ಕವಿತೆಯ ಅನುವಾದ.
ವನಸುಮದೊಲೆನ್ನ ಜೀವನವು ವಿಕಸಿಸುವಂತೆ - ಡಿ ವಿ ಜಿ
- Get link
- X
- Other Apps
ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೆ, ಹೇ ದೇವಾ ಜನಕೆ ಸಂತಸವೀವಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ ಕಾನನದಿ ಮಲ್ಲಿಗೆಯುಮೌನದಿಂ ಬಿರಿದು ನಿಜ ಸೌರಭವ ಸೂಸಿ ನಲವಿಂತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ ಉಪಕಾರಿ ನಾನು ಎನ್ನುಪಕೃತಿಯು ಜಗಕೆಂಬ ವಿಪರೀತ ಮತಿಯನುಳಿದು ವಿಪುಲಾಶ್ರಯವೀವ ಸುಫಲ ಸುಮಭರಿತ ಪಾ- ದಪದಂತೆ ನೈಜಮಾದೊಳ್ವಿನಿಂ ಬಾಳ್ವವೊಲು - ಡಿ ವಿ ಜಿ
ಓದಿ ಬ್ರಾಹ್ಮಣನಾಗು - ಸಿದ್ಧಯ್ಯ ಪುರಾಣಿಕ
- Get link
- X
- Other Apps
ಓದಿ ಬ್ರಾಹ್ಮಣನಾಗು ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಹಿಂದು ಮುಸ್ಲಿಮನಾಗು ಬೌದ್ಧ ಕ್ರೈಸ್ತನೆ ಆಗು ಚಾರ್ವಾಕನೇ ಆಗು ಭೋಗ ಬಯಸಿ ಏನಾದರೂ ಆಗು ಹಾರೈಸಿದಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ರಾಜಕಾರಣಿಯಾಗು ರಾಷ್ಟ್ರಭಕ್ತನೆ ಆಗು ಕಲೆಗಾರ ವಿಜ್ಞಾನಿ ವ್ಯಾಪಾರಿಯಾಗು ಏನಾದರೂ ಆಗು ನೀ ಬಯಸಿದಂತಾಗು ಏನಾದರೂ ಸರಿಯೇ – ಮೊದಲು ಮಾನವನಾಗು ಸಿದ್ಧಯ್ಯ ಪುರಾಣಿಕ ( 1918-1994)