Posts

Showing posts from March, 2016

ಚುಟುಕ - ರಘು ವಿ,

Image
ವರುಷವಿಡೀ ನಡೆವಂಗೆ ಎಡವುದೇಂ ಹೊಸದೆ? ರಘು ವಿ ಉರಿವ ದೀಪಕ್ಕೆ ಕಿಟ್ಟ ಕಟ್ಟುವುದೇಂ ಹೊಸದೆ? ಜನುಮವಿಡೀ ಉರಿವ ನಿರಂತರದ ದಿನಕರಗೆ  ಗ್ರಹಣವಿದು ಹೊಸದೆ? ನೆರಳಾಟಕ್ಕೆ ಅಂಜುವೊಡೆ ಬಾಳನಂಜುಗಳ ಹೇಗೆ ಅರಗಿಪೆಯೊ ಮನುಜ? ಮನದ ಗ್ರಹಣವ ಕಳೆದು ನಡೆ ಬೆಳಕಿನೆಡೆಗೆ! [ ಕಿಟ್ಟ ಕಟ್ಟುವುದು = ಬತ್ತಿ ಉರಿದು ಕಪ್ಪಾಗುವುದು. Carbonization]

ಡಿ ವಿ ಜಿಯವರ 129ನೆಯ ಜನ್ಮದಿನಾಚರಣೆ - ಅಮಂತ್ರಣ ಪತ್ರಿಕೆ

Image

ಆರೈಕೆಯ ಅವಧಾನ - ಮಾಲತಿ ಹೆಗ್ಗಡೆ ( ವಿಜಯವಾಣಿ - ೨೨ ಫೆಬ್ರವರಿ ೨೦೧೬)

ಅಮ್ಮಾ, ನೀನು ನಿನ್ನ ಎಲ್ಲಾ ಒಡವೆನೂ ಮನೆಗೆ ಅ೦ತ ಕೊಟ್ಟುಬಿಟ್ಟೆಯೇನಮ್ಮಾ? ಒ೦ದಾದರೂ ಇಟ್ಟುಕೊಳ್ಳಬೇಕಿತ್ತು. ನೀನು ಅವನ್ನೆಲ್ಲ ಧರಿಸಿದರೆ ಎಷ್ಟು ಸು೦ದರವಾಗಿ ಕಾಣುತ್ತಿದ್ದೆ' ಎ೦ದು ಅಳುತ್ತ ಕೇಳಿದ ಬಾಲಕನ ವಯಸ್ಸು ಏಳು ವಷ೯ವಷ್ಟೇ. "ಹೂ೦ ಕಣಪ್ಪಾ. ನಿಮ್ಮಪ್ಪ ಮನೆ ಕಟ್ಟಿಸಬೇಕು ಅ೦ತ ಅ೦ದುಕೊ೦ಡಿದ್ದಾರೆ. ಒಡವೆ ಆದ್ರೆ ನಾನು ಒಬ್ಬಳೇ ಧರಿಸಬೇಕು. ಒಡವೆನೆಲ್ಲಾ ಮಾರಿ ಮನೆ ಕಟ್ಟಿಸಿದರೆ ಎಲ್ಲಾರಿಗೂ ಅನುಕೂಲ' ಎ೦ದು ಮಗನನ್ನು ತಬ್ಬಿ ಸ೦ತೈಸಿದಳು ಆಕೆ. ಅವಧಾನ ಕಲೆಯೊ೦ದಿಗೆ ಅವಿನಾಭಾವವಾಗಿ ಬೆರೆತ ಆ ಮಗನ ಹೆಸರು ಗಣೀಶ. ಅಮ್ಮನ ಹೆಸರು ಅಲಮೇಲು. ಶ್ರೀಮ೦ತ ಕುಟು೦ಬದಲ್ಲಿ ಜನಿಸಿದ ಅವಳು ಕಲೆ, ಸಾಹಿತ್ಯ, ಸ೦ಗೀತ ಎಲ್ಲವುಗಳಲ್ಲಿ ಅಭೀರುಚಿ ಇದ್ದವಳು. ದೇಶಕ್ಕೆ ಸ್ವಾತ೦ತ್ರ್ಯ ಬ೦ದ ಹೊಸದರಲ್ಲೇ ಬಿ.ಎ. ಪದವಿ ಓದಿದ, ತು೦ಬ ಪ್ರಾಮಾಣಿಕನಾದ ಸಕಾ೯ರಿ ಉದ್ಯೋಗಿಯೊ೦ದಿಗೆ ಅವಳ ವಿವಾಹವಾಯಿತು. ಆ ಕಾಲದಲ್ಲಿ ಸಕಾ೯ರಿ ಉದ್ಯೋಗಿಗಳಿಗೆ, ಪ್ರಾಮಾಣಿಕವಾಗಿ ಬದುಕುವವರಿಗೆ ಜೀವನ ನಿವ೯ಹಣೆ ಬಲು ಕಷ್ಟವೆನ್ನುವ ಸ್ಥಿತಿ ಇರುತ್ತಿತ್ತು. ತವರೂರಿನ ಅನುಕೂಲವನ್ನು ನೆನೆದು ಸೇರಿದ ಕುಟು೦ಬವನ್ನು ಹಳಿದವಳಲ್ಲ ಆಕೆ. ಅಭ್ಯಾಸವಿಲ್ಲದ ಕೆಲಸಗಳನ್ನೆಲ್ಲ ಒ೦ದೊ೦ದಾಗಿ ಕಲಿತಳು. ಸುತ್ತಮುತ್ತಲಿನವರೆಲ್ಲರೊ೦ದಿಗೆ ಬೆರೆತಳು. ಶಿಸ್ತಿನ ಸರದಾರ ಎನಿಸುವ ಪತಿಗೆ ಶೀಘ್ರವಾಗಿ ಸಿಟ್ಟು ಬರುತ್ತಿತ್ತು. ತಾಳ್ಮೆಯ ಪ್ರತಿರೂಪದ೦ತಿರುವ ಅಲಮೇಲು ನಗುನಗುತ್ತಲೇ ಬದುಕಿನ ಹೊಣ...

ಕಸಾಪಗೆ ನೂತನ ಸಾರಥಿ ಶ್ರೀ ಮನು ಬಳಿಗಾರ್‌ ಅಭಿನಂದನೆಗಳು ಸಾರ್.

Image
 ಶ್ರೀ ಮನು ಬಳಿಗಾರ್‌   ಕಸಾಪ ನೂತನ ಸಾರಥಿ  ಶ್ರೀ ಮನು ಬಳಿಗಾರ್‌   ಅಭಿನಂದನೆಗಳು

ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ - ಚಿತ್ರ: ದೂರದ ಬೆಟ್ಟ

Image
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ ನನ್ನ ನಿನ್ನ ಪಾಲಿಗೆ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ ನನ್ನ ನಿಮ್ಮ ಪಾಲಿಗೆ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ನೀ ಪಕ್ಕ ಇದ್ರೇ ಹಿಂಗೆ, ಬೆಟ್ಟಾನ್ ಎತ್ತಿ ಬೆಳ್ನಾಗೆ ನೀ ಪಕ್ಕ ಇದ್ರೇ ಹಿಂಗೆ, ಬೆಟ್ಟಾನ್ ಎತ್ತಿ ಬೆಳ್ನಾಗೆ ಏಸೇ ಕಷ್ಟ ಬಂದ್ರು ನಮ್ಗೆ, ಗೌರ ಏಸೇ ಕಷ್ಟ ಬಂದ್ರು ನಮ್ಗೆ, ಮೀಸೆ ಬುಡ್ತೀನ್ ಸುಮ್ಗೆ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗ್ ಹೂವು ನಾನೆ ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗ್ ಹೂವು ನಾನೆ ಈ ನಿಮ್ಮ ಪಾದದಾಣೆ ಈ ನಿಮ್ಮ ಪಾದದಾಣೆ, ನಿಮಗಿಂತ ದ್ಯಾವ್ರೆ ಕಾಣೆ ಪ್ರೀತಿನೇ ಆ ದ್ಯಾವ್ರು ತಂದ, ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ ನನ್ನ ನಿಮ್ಮ ಪಾಲಿಗೆ, ನನ್ನ ನಿನ್ನ ಪಾಲಿಗೆ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಚಿತ್ರ: ದೂರದ ಬೆಟ್ಟ (೧೯೭೩/1973) ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ

ನೀ ಹೀಂಗ ನೋಡಬ್ಯಾಡ ನನ್ನ - ದ ರಾ ಬೇಂದ್ರೆ

ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ? ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರು ಎಲ್ಲಿ ಆಚೆಯಾ ದಂಡಿ ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ? ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ. ದಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ? ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು? ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ! ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ? ...

ಪರ್ವ-ಭಾರತ" ಒಂದು ತೌಲನಿಕ ಅಧ್ಯಯನ - ಅಮಂತ್ರಣ ಪತ್ರಿಕೆ,

Image
"ಪರ್ವ-ಭಾರತ" ಒಂದು ತೌಲನಿಕ ಅಧ್ಯಯನ. ಮಾರ್ಚ್ 6, 2016 .. ರವಿವಾರ. ಸಮಯ - ಮುಂಜಾನೆ -10 ಗಂಟೆಗೆ .  ಸ್ಥಳ- ವಿಜಯಾ ಕಾಲೇಜು ಒಳಾಂಗಣ ಸಭಾಂಗಣ, ಬಸವನಗುಡಿ, ಆರ್.ವಿ ರಸ್ತೆ, ಬೆಂಗಳೂರು

ಸುಭಾಷಿತ - ಆರ್ ಗಣೇಶ್

Image