ವೇದದಲ್ಲಿ ಎಲ್ಲವೂ ಇದೆ, ಅದರಲ್ಲಿ ಇಲ್ಲದ ಸಂಗತಿಗಳೇ ಇಲ್ಲ ... ಕರಣo ಪವನ್ ಪ್ರಸಾದ್
ವೇದದಲ್ಲಿ ಎಲ್ಲವೂ ಇದೆ, ಅದರಲ್ಲಿ ಇಲ್ಲದ ಸಂಗತಿಗಳೇ ಇಲ್ಲ, ಅನಂತವಾದುದು ವೇದ ಎಂಬ ಉತ್ಪ್ರೇಕ್ಷೆಗಳ ಹೊರತಾಗಿ.ಅವುಗಳ ಬಗ್ಗೆ ಪ್ರಾಥಮಿಕ ಅಂಶಗಳಾದರು ನಮಗೆ ಗೊತ್ತಿರಬೇಕು, ತಿಳಿದವರು ... ಎಲ್ಲರಿಗೂ ತಿಳಿಸುವ ಕಾರ್ಯ ಮಾಡಬೇಕು ಎಂದು ಈ ನಡುವಿನಲ್ಲಿ ನನಗನ್ನಿಸಿತು. ಒಬ್ಬ ಮಹನೀಯ ನಾಲ್ಕು ವೇದಗಳಲ್ಲಿ ಒಂದಾದ ಆಯುರ್ವೇದವನ್ನು ಜಗತ್ತಿಗೆ ಕೊಟ್ಟ ವಿಶ್ವ ಗುರು ಭಾರತ ಎಂದುಬಿಟ್ಟ. ನನಗೆ ನನ್ನ ಗ್ರಹಿಕೆಯ ಬಗೆಗೇ ಅನುಮಾನ ಹಾದುಬಿಟ್ಟಿತು. ನನ್ನ ಅಧ್ಯಯನವೇ ತಪ್ಪೇನೋ ಎನ್ನಿಸಿ ಬಿಟ್ಟಿತು. ಇಂದಿನ ಒಂದಷ್ಟು ಯುವ ಪೀಳಿಗೆಯ ಕೆಲ ಉದ್ವೇಗಿಗಳು ವೇದಗಳ ಬಗ್ಗೆ ಇಲ್ಲದ್ದನ್ನೆಲ್ಲ ಸೇರಿಸಿ ಗುಲ್ಲು ಮಾಡಿ, ಸಾಮಾಜಿಕ ತಾಣದಲ್ಲೋ ಇನ್ನೆಲ್ಲೋ ಏನೂ ತಿಳಿಯದೆ, ಕುಚೋದ್ಯರ ಕುಹಕಕ್ಕೆ ಒಳಗಾದದ್ದನ್ನು ಕಂಡಿದ್ದೇನೆ. ಸ್ನೇಹಿತರಾದ ನವೀನ್ ಭಟ್ ಹೇಳಿದ್ದರು "ಸಂಸ್ಕೃತ ಗೊತ್ತಿರುವವರು ಅತಿ ಮಾಡುವುದಿಲ್ಲ, ಸಂಸ್ಕೃತದ ಬಗ್ಗೆ ಮಾತನಾಡುವವರು ಅತಿ ಮಾಡುತ್ತಾರೆ" ಎಂದು. ವೇದದ ಪ್ರಾಥಮಿಕ ವಿಚಾರಗಳಿಗೂ ಇದು ಅನ್ವಯ ಎಂದು ಭಾವಿಸುತ್ತೇನೆ. ಈ ಸಂದರ್ಭದಲ್ಲಿ ವೇದಗಳ ಕಿರು ಪರಿಚಯದ ಈ ಚಾರ್ಟ್ ಮಾಡಿ ಹಾಕುವುದು ಸೂಕ್ತ ಎನ್ನಿಸಿತು,ಇಲ್ಲಿ ಇನ್ನೇನಾದರೂ ಸೇರಿಸುವ ಹಾಗೂ ತಿದ್ದುವ ಸಂಗತಿ ಇದ್ದರೆ ಪ್ರಾಜ್ಞರು ತಿದ್ದಿ ಇತರರಿಗೆ ಹಂಚಿ. ಇದು ಅವಶ್ಯವಾದದು ಏಕೆಂದರೆ ಮೂರ್ಖರ ಮಾತಿಗಿಂತ, ತಿಳಿದವರ ಮೌನ ಅಪಾಯಕಾರಿ.
ಪದ ತಿದ್ದುಪಡಿಗಳು : ಅರಣ್ಯಕ= ಆರಣ್ಯಕ ; ಮಾದ್ವನಾದೀನ= ಮಾಧ್ಯಂದಿನ
ಕಣ್ವ= ಕಾಣ್ವ ; ಮೈತ್ತಿರಾಯಣ =ಮೈತ್ರಾಯಣ ; ಕೌತುಮ = ಕೌಥುಮ
ಕರಣo ಪವನ್ ಪ್ರಸಾದ್ |
ಈ ಬರಹ ಕರಣo ಪವನ್ ಪ್ರಸಾದ್ ಅವರದೇ ಅಥವ ಚಾರ್ಟೋ ಗೆಳೆಯ?
ReplyDeleteವೇದಗಳ ಕಿರು ಪರಿಚಯದ ಈ ಚಾರ್ಟ್ ನನಗಂತೂ ಬಹು ಉಪಯುಕ್ತ ಅನಿಸತು.
ತಮಗೆ ಫೇಸ್ ಬುಕ್ಕಿನ ೩ಕೆ ಗುಂಪಿಗೆ ಸ್ವಾಗತಿಸಿತ್ತಿದ್ದೇವೆ.
Shared at:
ಕಥನ:
https://www.facebook.com/photo.php?fbid=946097885434661&set=gm.1563336117259204&type=1&theater