ಕನ್ನಡ ಗಾದೆಗಳು -kn.wikipedia.org

1 ಅಡವಿಯ ದೊಣ್ಣೆ ಪರದೇಸಿಯ ತಲೆ (ಕನ್ನಡ)
2 ಅಳಿವುದೇ ಕಾಯ ಉಳಿವುದೇ ಕೀರ್ತಿ (ಕನ್ನಡ)
3 ಅಂದು ಬಾ ಅಂದ್ರೆ ಮಿಂದು ಬಂದ (ಕನ್ನಡ)
4 ಅಂಗೈ ಹುಣ್ಣಿಗೆ ಕನ್ನಡಿ ಯಾಕೆ (ಕನ್ನಡ)
5 ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ (ಕನ್ನಡ)
6 ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು (ಕನ್ನಡ)
7 ಆಡೋದು ಮಡಿ ಉಂಬೋದು ಮೈಲಿಗೆ (ಕನ್ನಡ)
8 ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ (ಕನ್ನಡ)
9 ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ (ಕನ್ನಡ)
10 ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು (ಕನ್ನಡ)
11 ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ (ಕನ್ನಡ)
12 ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ (ಕನ್ನಡ)
13 ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ (ಕನ್ನಡ)
14 ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ (ಕನ್ನಡ)
15 ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ (ಕನ್ನಡ)
16 ಆಲಸಿ-ಮುಂಡೇದಕ್ಕೆ ಎರಡು ಖರ್ಚು, ಲೋಭಿ-ಮುಂಡೇದಕ್ಕೆ ಮೂರು ಖರ್ಚು (ಕನ್ನಡ)
17 ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ (ಕನ್ನಡ)
18 ಆನೆಯಂಥದೂ ಮುಗ್ಗರಿಸ್ತದೆ (ಕನ್ನಡ)
19 ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು (ಕನ್ನಡ)
20 ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ (ಕನ್ನಡ)
21 ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು (ಕನ್ನಡ)
22 ಆಸೆಗೆ ಕೊನೆಯಿಲ್ಲ (ಕನ್ನಡ)
23 ಆಕಳು ಕಪ್ಪಾದ್ರೆ ಹಾಲು ಕಪ್ಪೇನು (ಕನ್ನಡ)
24 ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು (ಕನ್ನಡ)
25 ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ (ಕನ್ನಡ)
26 ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ (ಕನ್ನಡ)
27 ಅಜ್ಜ! ಮದುವೆ ಅಂದ್ರೆ ನನಗೋ ಅಂದ (ಕನ್ನಡ)
28 ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು (ಕನ್ನಡ)
29 ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ (ಕನ್ನಡ)
30 ಅಕ್ಕ ಬರಬೇಕು ಅಕ್ಕಿ ಮುಗೀಬಾರದು (ಕನ್ನಡ)
31 ಅಕ್ಕ ನನ್ನವಳಾದ್ರೆ ಬಾವ ನನ್ನವನೇನು (ಕನ್ನಡ)
32 ಅಕ್ಕ ಸತ್ತರೆ ಅಮಾಸೆ ನಿಲ್ಲದು, ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದು (ಕನ್ನಡ)
33 ಅಕ್ಕನ ಚಿನ್ನವಾದ್ರೂ ಅಕ್ಕಸಾಲಿ ಟೊಣೆಯದೆ(=ಕದಿಯದೆ) ಬಿಡ (ಕನ್ನಡ)
34 ಅಕ್ಕನ ಹಗೆ ಬಾವನ ನಂಟು (ಕನ್ನಡ)
35 ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು (ಕನ್ನಡ)
36 ಅಕ್ಕರೆಯಿದ್ದಲ್ಲಿ ದುಃಖವುಂಟು (ಕನ್ನಡ)
37 ಅಕ್ಕಿ ಅಂದ್ರೆ ಪ್ರಾಣ, ನೆಂಟ್ರು ಅಂದ್ರೆ ಜೀವ (ಕನ್ನಡ)
38 ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು (ಕನ್ನಡ)
39 ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ (ಕನ್ನಡ)
40 ಅಲ್ಪ ವಿದ್ಯೆ ಬಲು ಗರ್ವ (ಕನ್ನಡ)
41 ಅಲ್ಪರ ಸಂಗ ಅಭಿಮಾನ ಭಂಗ (ಕನ್ನಡ)
42 ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ (ಕನ್ನಡ)
43 ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ (ಕನ್ನಡ)
44 ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು (ಕನ್ನಡ)
45 ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ (ಕನ್ನಡ)
46 ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು, ಅತ್ತೆ ಮನೇಲೂ ಸೈ ಅನ್ನಿಸಿಕೊಣ್ತಾಳೆ (ಕನ್ನಡ)
47 ಅರಗಿನಂತೆ ತಾಯಿ, ಮರದಂತೆ ಮಕ್ಕಳು (ಕನ್ನಡ)
48 ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ (ಕನ್ನಡ)
49 ಅರಸನ ಕುದರೆ ಲಾಯದಲ್ಲೆ ಮುಪ್ಪಾಯಿತು (ಕನ್ನಡ)
50 ಅರಸು ಆದೀಕ (=ಆದಾಯ) ತಿಂದ, ಪರದಾನಿ ಹೂಸು ಕುಡಿದ (ಕನ್ನಡ)
51 ಅರೆಪಾವಿನವರ ಅಬ್ಬರ ಬಹಳ (ಕನ್ನಡ)
52 ಅರಿಯದೆ ಮಾಡಿದ ಪಾಪ ಅರಿತಂದು ಪರಿಹಾರ (ಕನ್ನಡ)
53 ಅರ್ತಿಗೆ (=ಪ್ರೀತಿಗೆ) ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ (ಕನ್ನಡ)
54 ಅತಿ ಆಸೆ ಗತಿಗೇಡು (ಕನ್ನಡ)
55 ಅತಿ ಸ್ನೇಹ ಗತಿ ಕೇಡು (ಕನ್ನಡ)
56 ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ (ಕನ್ನಡ)
57 ಅವರವರ ತಲೆಗೆ ಅವರವರದೇ ಕೈ (ಕನ್ನಡ)
58 ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ (ಕನ್ನಡ)
59 ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ
60 ಬೆಕ್ಕಿಗೆ ಚೆಲ್ಲತ ಇಲಿಗೆ ಪ್ರನ ಸನ್ಕತ (ಕನ್ನಡ)
61 ಬೆಲ್ಲಗಿರುವುದೆಲ್ಲ ಹಾಲಲ್ಲ (ಕನ್ನಡ)
62 ಬಿರಿಯ ಉನ್ದ ಬ್ರಹ್ಮನ ಬಿಕ್ಶೆ ಬೆದಿದನನ್ಥೆ (ಕನ್ನಡ)
63 ಬೇಲಿನೆ ಎದ್ದು ಹೊಲ ಮೇಯಿತಂತೆ (ಕನ್ನಡ)
64 ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು (ಕನ್ನಡ)
65 ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು (ಕನ್ನಡ)
66 ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ (ಕನ್ನಡ)
67 ಬಾಯಲ್ಲಿ ಬೆಲ್ಲ ಕರುಳು ಕತ್ತರಿ (ಕನ್ನಡ)
68 ಬಯಕೆಗೆ ಬಡವರಿಲ್ಲ (ಕನ್ನಡ)
69 ಬೆಳ್ಳಯ್ಯ ಕಾಕಾ ಅರಿವಯ್ಯ ಮೂಕ (ಕನ್ನಡ)
70 ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ (ಕನ್ನಡ)
71 ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು (ಕನ್ನಡ)
72 ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ (ಕನ್ನಡ)
73 ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ (ಕನ್ನಡ)
74 ಡಂಬು (=ಬೂಟಾಟಿಕೆ) ನನ್ನ ಕೇಳು, ಡಬ್ಬು (=ದುಡ್ಡು) ನನ್ನ ಹೆಂಡ್ರನ್ನ ಕೇಳು (ಕನ್ನಡ)
75 ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ (ಕನ್ನಡ)
76 ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ (ಕನ್ನಡ)
77 ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ? (ಕನ್ನಡ)
78 ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ (ಕನ್ನಡ)
79 ಹೇಳೊದು ವೇದ ಹಾಕೊದು ಗಾಳ (ಕನ್ನಡ)
80 ಹೋದ ಬದುಕಿಗೆ ಹನ್ನೆರಡು ದೇವರು (ಕನ್ನಡ)
81 ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ (ಕನ್ನಡ)
82 ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು (ಕನ್ನಡ)
83 ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ (ಕನ್ನಡ)
84 ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ (ಕನ್ನಡ)
85 ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊಣ್ತು (ಕನ್ನಡ)
86 ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು (ಕನ್ನಡ)
87 ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ (ಕನ್ನಡ)
88 ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ (ಕನ್ನಡ)
89 ಹಣ ಎರವಲು ತಂದು ಮಣ ಉರುವಲು ಕೊಂಡ (ಕನ್ನಡ)
90 ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ (ಕನ್ನಡ)
91 ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ (ಕನ್ನಡ)
92 ಹಣ ಇಲ್ಲದವ ಹೆಣಕ್ಕಿಂತ ಕಡೆ (ಕನ್ನಡ)
93 ಹಾಳೂರಿಗೆ ಉಳಿದೋನೇ ಗೌಡ, ಬೆಂಗಳೂರಿಗೆ ಬಂದೋನೇ ಬಹದ್ದೂರ (ಕನ್ನಡ)
94 ಹಾಳೂರಿಗೆ ಉಳಿದವನೇ ಗೌಡ (ಕನ್ನಡ)
95 ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ (ಕನ್ನಡ)
96 ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ (ಕನ್ನಡ)
97 ಹಾಕ್ಮಣೆ, ನೂಕ್ಮಣೆ, ಯಾಕ್ಮಣೆ (ಕನ್ನಡ)
98 ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ (ಕನ್ನಡ)
99 ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು (ಕನ್ನಡ)
100 ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ (ಕನ್ನಡ)
101 ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ (ಕನ್ನಡ)
102 ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ (ಕನ್ನಡ)
103 ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ (ಕನ್ನಡ)
104 ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ (ಕನ್ನಡ)
105 ಹಬ್ಬ ಹಸನಾಗಲಿ, ಗೋದಿ ಜತನಾಗಲಿ, ಬಂದ ಬೀಗರು ಉಂಡು ಹೋಗಲಿ (ಕನ್ನಡ)
106 ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು (ಕನ್ನಡ)
107 ಹಗಲು ಅರಸನ ಕಾಟ ಇರುಳು ದೆವ್ವದ ಕಾಟ (ಕನ್ನಡ)
108 ಹಗೆ ಮಾತು ಆತುಕೊಂಡ, ತುಟಿ ಬಿಚ್ಚದೆ ಕೂತುಕೊಂಡ (ಕನ್ನಡ)
109 ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು (ಕನ್ನಡ)
110 ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ (ಕನ್ನಡ)
111 ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ (ಕನ್ನಡ)
112 ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ (ಕನ್ನಡ)
113 ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು (ಕನ್ನಡ)
114 ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ (ಕನ್ನಡ)
115 ಹರೆಯಕ್ಕೆ ಬಂದಾಗ ಹಂದಿನೂ ಚಂದ (ಕನ್ನಡ)
116 ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ (ಕನ್ನಡ)
117 ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ (ಕನ್ನಡ)
118 ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು (ಕನ್ನಡ)
119 ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು (ಕನ್ನಡ)
120 ಹತ್ತರೊಟ್ಟಿಗೆ ಹನ್ನೊಂದು ಜಾತ್ರೆಯೊಟ್ಟಿಗೆ ಗೋವಿಂದು (ಕನ್ನಡ)
121 ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ (ಕನ್ನಡ)
122 ಹೂವಿನಿಂದ ನಾರು ಸ್ವರ್ಗ ಸೇರಿತು
123 ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು (ಕನ್ನಡ)
124 ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ (ಕನ್ನಡ)
125 ಹತ್ತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ (ಕನ್ನಡ)
126 ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ (ಕನ್ನಡ)
127 ಹೆಡ್ಡಾಳಾದ್ರೂ ದೊಡ್ಡಾಳು ಮೇಲು (ಕನ್ನಡ)
128 ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ (ಕನ್ನಡ)
129 ಹೆಂಡ್ರನ್ನ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ (ಕನ್ನಡ)
130 ಹೆಣ್ಣು ಚಂದ ಕಣ್ಣು ಕುಲ್ಡು ಅಂದಂಗೆ (ಕನ್ನಡ)
131 ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ (ಕನ್ನಡ)
132 ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ (ಕನ್ನಡ)
133 ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ (ಕನ್ನಡ)
134 ಹೆತ್ತ ಅಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳ (ಕನ್ನಡ)
135 ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು (ಕನ್ನಡ)
136 ಹೆತ್ತವರು ಹೆಸರಿಕ್ಕ ಬೇಕು (ಕನ್ನಡ)
137 ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ (ಕನ್ನಡ)
138 ಹಿಟ್ಟು ಹಳಸಿತ್ತು ನಾಯೂ ಹಸಿದಿತ್ತು (ಕನ್ನಡ)
139 ಹಿರೀಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ (ಕನ್ನಡ)
140 ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ (ಕನ್ನಡ)
141 ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು (ಕನ್ನಡ)
142 ಹಿತ್ತಲ ಗಿಡ ಮದ್ದಲ್ಲ ಹತ್ತರ ಮಾತು ರುಚಿಯಲ್ಲ (ಕನ್ನಡ)
143 ಹೊಳೆಗೆ ಸುರಿದರೂ ಅಳೆದು ಸುರಿ (ಕನ್ನಡ)
144 ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ (ಕನ್ನಡ)
145 ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು (ಕನ್ನಡ)
146 ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ (ಕನ್ನಡ)
147 ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು (ಕನ್ನಡ)
148 ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ (ಕನ್ನಡ)
149 ಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ‍್ಣ ಕೇಳಿದಂಗೆ (ಕನ್ನಡ)
150 ಹುಣ್ಣಿಮೆ ಬರುವನಕ ಅಮಾಸೆ ನಿಲ್ಲದು, ಅಮಾಸೆ ಬರುವನಕ ಹುಣ್ಣಿಮೆ ನಿಲ್ಲದು (ಕನ್ನಡ)
151 ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ (ಕನ್ನಡ)
152 ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ (ಕನ್ನಡ)
153 ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು (ಕನ್ನಡ)
154 ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ (ಕನ್ನಡ)
155 ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ (ಕನ್ನಡ)
156 ಹುತ್ತ ಬಡಿದರೆ ಹಾವು ಸಾಯುವುದೇ (ಕನ್ನಡ)
157 ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ (ಕನ್ನಡ)
158 ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ (ಕನ್ನಡ)
159 ಓದಿ ಓದಿ ಮರುಳಾದ ಕೋಚು ಭಟ್ಟ (ಕನ್ನಡ)
160 ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ (ಕನ್ನಡ)
161 ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನ್ನ ಹೊತ್ತುಕೊಂಡು ಹೋಗಿ (ಕನ್ನಡ)
162 ಒಂದು ಕಣ್ಣೀಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ (ಕನ್ನಡ)
163 ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು (ಕನ್ನಡ)
164 ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು (ಕನ್ನಡ)
165 ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು (ಕನ್ನಡ)
166 ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು (ಕನ್ನಡ)
167 ಪಾಪ ಅಂದ್ರೆ ಕರ್ಮ ಬರ್ತದೆ (ಕನ್ನಡ)
168 ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು (ಕನ್ನಡ)
169 ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು (ಕನ್ನಡ)
170 ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ (ಕನ್ನಡ)
171 ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ (ಕನ್ನಡ)
172 ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು (ಕನ್ನಡ)
173 ರಾಜ ಇರೋತನಕ ರಾಣಿ ಭೋಗ (ಕನ್ನಡ)
174 ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ (ಕನ್ನಡ)
175 ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ (ಕನ್ನಡ)
176 ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ (ಕನ್ನಡ)
177 ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ (ಕನ್ನಡ)
178 ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ (ಕನ್ನಡ)
179 ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು (ಕನ್ನಡ)
180 ಸ್ತ್ರೀ ರೂಪವೇ ರೂಪ, ಶೃಂಗಾರವೇ ರಸ (ಕನ್ನಡ)
181 ಸಾವಿರ ಸುಳ್ಳು ಹೇಳಿ ಒಂಡು ಮಡುವೆ ಮಾಡು (ಕನ್ನಡ)
182 ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ (ಕನ್ನಡ)
183 ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ (ಕನ್ನಡ)
184 ಸಂದೀಲಿ ಸಮಾರಾಧನೆ ಮಾಡ್ದಂಗೆ (ಕನ್ನಡ)
185 ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ (ಕನ್ನಡ)
186 ಸಂತೇಲಿ ಮಂತ್ರ ಹೇಳಿದಂಗೆ (ಕನ್ನಡ)
187 ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು (ಕನ್ನಡ)
188 ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು (ಕನ್ನಡ)
189 ಸಾದೆತ್ತಿಗೆ ಎರಡು ಹೇರು (ಹೊರೆ) (ಕನ್ನಡ)
190 ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮ (ಕನ್ನಡ)
191 ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ (ಕನ್ನಡ)
192 ಸಾಲಗಾರನ ಮನೆಗೆ ಸವುದೆ ಹೊತ್ತರೆ ಮೇಲಣ ಬಡ್ಡಿಗೆ ಸಮವಾಯಿತು (ಕನ್ನಡ)
193 ಸಾವಿರ ಕೊಟ್ಟರೂ ಸವತಿ ಮನೆ ಬೇಡ (ಕನ್ನಡ)
194 ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ (ಕನ್ನಡ)
195 ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ (ಕನ್ನಡ)
196 ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು (ಕನ್ನಡ)
197 ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ (ಕನ್ನಡ)
198 ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ (ಕನ್ನಡ)
199 ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ (ಕನ್ನಡ)
200 ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ (ಕನ್ನಡ)
201 ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು (ಕನ್ನಡ)
202 ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ (ಕನ್ನಡ)
203 ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ (ಕನ್ನಡ)
204 ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ) (ಕನ್ನಡ)
205 ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ (ಕನ್ನಡ)
206 ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ (ಕನ್ನಡ)
207 ಸತ್ತ ಮೇಲಿನ ಸೊರ‍್ಗಕ್ಕಿಂತ ಇದ್ದ ನರಲೋಕ ವಾಸಿ (ಕನ್ನಡ)
208 ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ (ಕನ್ನಡ)
209 ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ (ಕನ್ನಡ)
210 ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು (ಕನ್ನಡ)
211 ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ‍್ತದೆ (ಕನ್ನಡ)
212 ಸೊಪ್ಪುಸೆದೆ ತಿನ್ನೋರ ಒಪ್ಪ ನೋಡು, ತುಪ್ಪತೊಗೆ ತಿನ್ನೋರ ರಂಪ ನೋಡು (ಕನ್ನಡ)
213 ಸುಳ್ಳು ದೇವರಿಗೆ ಕಳ್ಳ ಪೂಜಾರಿ (ಕನ್ನಡ)
214 ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ (ಕನ್ನಡ)
215 ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ (ಕನ್ನಡ)
216 ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು (ಕನ್ನಡ)
217 ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ (ಕನ್ನಡ)
218 ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ (ಕನ್ನಡ)
219 ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು (ಕನ್ನಡ)
220 ತೇಗಿ ತೇಗಿ ಬೀಗಿ ಬಿದ್ದ (ಕನ್ನಡ)
221 ತೂತು ಗತ್ತಲೇಲಿ ತಾತನ ಮದುವೆ (ಕನ್ನಡ)
222 ತಾಳ ತಪ್ಪಿದ ಬಾಳು, ತಾಳಲಾರದ ಗೋಳು (ಕನ್ನಡ)
223 ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು (ಕನ್ನಡ)
224 ತನ್ನೂರಲ್ಲಿ ರಂಗ, ಪರೂರಲ್ಲಿ ಮಂಗ (ಕನ್ನಡ)
225 ತುಂಬಿದ ಕೊಡ, ತುಳುಕೋದಿಲ್ಲ (ಕನ್ನಡ)
226 ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು (ಕನ್ನಡ)
227 ಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರು (ಕನ್ನಡ)
228 ಊರಿಗಾಗದ ಗೌಡ, ಮೇಲೆರಗುವ ಗಿಡುಗ (ಕನ್ನಡ)
229 ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು (ಕನ್ನಡ)
230 ಊರು ದೂರಾಯಿತು ಕಾಡು ಹತ್ತರಾಯಿತು (ಕನ್ನಡ)
231 ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ (ಕನ್ನಡ)
232 ಉಂಡ ಮನೆ ಜಂತೆ ಎಣಿಸಬಾರದು (ಕನ್ನಡ)
233 ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ (ಕನ್ನಡ)
234 ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ (ಕನ್ನಡ)
235 ಉಂಬಾಗ ಉಡುವಾಗ ಊರೆಲ್ಲ ನೆಂಟರು (ಕನ್ನಡ)
236 ಉದ್ಯೋಗವೇ ಗಂಡಸಿಗೆ ಲಕ್ಷಣ (ಕನ್ನಡ)
237 ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ (ಕನ್ನಡ)
238 ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ (ಕನ್ನಡ)
239 ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ (ಕನ್ನಡ)
240 ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ (ಕನ್ನಡ)
241 ಉತ್ತಮನು ಎತ್ತ ಹೋದರೂ ಶುಭವೇ (ಕನ್ನಡ)
242 ವಶಗೆಡದೆ ಹಸಗೆಡಲ್ಲ (ಕನ್ನಡ)
243 ವಿನಾಶ ಕಾಲಕ್ಕೆ ವಿಪರೀತ ಬುದ್ಧಿ (ಕನ್ನಡ)
244 ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ (ಕನ್ನಡ)
245 ಯಾವ ಚಿಂತೇನೂ ಮಾಡದೋನ ಹೆಂಡ್ತಿ ಗಂಡಿದ್ದೂ ಮುಂಡೆ (ಕನ್ನಡ)
246 ಯೋಗ ಇದ್ದಷ್ಟೇ ಭೋಗ (ಕನ್ನಡ)
247 ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ (ಕನ್ನಡ)
248 ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ (ಕನ್ನಡ)
249 ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ (ಕನ್ನಡ)
250 ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ (ಕನ್ನಡ)
251 ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ (ಕನ್ನಡ)
252 ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು (ಕನ್ನಡ)
253 ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ (ಕನ್ನಡ)
254 ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು (ಕನ್ನಡ)
255 ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮುದ್ದೆ ಉಣ್ತಾ ಮಜ್ಜಿಗೆ ಓಡಾಟ (ಕನ್ನಡ)
256 ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ (ಕನ್ನಡ)
257 ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.
258 ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
259 ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ.
260 ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ.
261 ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು.
262 ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.
263 ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.
264 ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ.
265 ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
266 ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು.
267 ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ.
268 ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ.
269 ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.
270 ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದು, ಮರ ಆದ ನಂತರ ಹಾಕಬಹುದೇ?
271 ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
272 ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
273 ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
274 ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
275 ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
276 ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.
277 ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
278 ಮೃತ್ಯು ಬಂದ ಮೇಲೆ ವೈದ್ಯ ಬಂದ.
279 ಶಸ್ತ್ರದಿಂದಾದ ಗಾಯ ಮಾಯುತ್ತದೆ, ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ.
280 ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.
281 ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.
282 ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?
283 ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
284 ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು.
285 ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
286 ನಿನ್ನಲ್ಲಿ ನೀ ಹುಡುಕು, ಅರಿಷಡ್ವರ್ಗಗಳ ಹೊರ ಹಾಕು.
287 ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ.
288 ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ.
289 ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
290 ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
291 ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ.
292 ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
293 ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
294 ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.
295 ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
296 ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
297 ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ.
298 ಮಾಡಿ ಉಣ್ಣು ಬೇಡಿದಷ್ಟು, ತಗಾದೆ ಮಾಡದೇ ಉಣ್ಣು ನೀಡಿದಷ್ಟು.
299 ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು.
300 ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು.
301 ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
302 ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರ, ಅದು ಮಾಡುವುದೇ ಉಪಕಾರ?
303 ಹೋಗುವುದು ಮೂಡಿದ ಹೊತ್ತು, ಹೋಗೋದಿಲ್ಲ ಆಡಿದ ಮಾತು.
304 ದೈವ ಕಾಡುವುದು ವಿಧಿಗಾಗಿ, ನೀರು ಸಮುದ್ರ ಸೇರುವುದು ನದಿಗಾಗಿ.
305 ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ?
306 ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ.
307 ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.
308 ಸ್ವಾರ್ಥ ಉಳಿಸಿದವ ಪಾಪಾತ್ಮ, ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ.
309 ಬೇಸರವಿರಬಾರದು, ಅವಸರ ಮಾಡಬಾರದು. ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು.
310 ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.
311 ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು.
312 ಗದ್ದೆ ಸುಟ್ಟರೂ ಹಾಳಾಗದು ಗಾದೆ.
313 ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
314 ಮಾಟ ಮಾಡಿದೋನ ಮನೆ ಹಾಳು.
315 ಒಬ್ಬರ ಕೂಳು ಇನ್ನೊಬ್ಬರ ಕುತ್ತು.
316 ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ.
317 ಹೊಳೆಯುವುದೆಲ್ಲಾ ಚಿನ್ನವಲ್ಲ.
318 ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.
319 ಬರಿಗೈಯವರ ಬಡಿವಾರ ಬಹಳ.
320 ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
321 ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
322 ಅರೆಗೊಡದ ಅಬ್ಬರವೇ ಬಹಳ.
323 ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.
324 ಆಪತ್ತಿಗಾದವನೇ ನಿಜವಾದ ಗೆಳೆಯ.
325 ಇಂದಿನ ಸೋಲು ನಾಳಿನ ಗೆಲುವು.
326 ಧೈರ್ಯವಿದ್ದವನಿಗೆ ದೈವವೂ ಅನುಕೂಲ.
327 ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.
328 ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.
329 ಉತ್ತಮವಾದ ನಗು ನೇಸರನ ಮಗು.
330 ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
331 ಪ್ರಾಮಾಣಿಕತೆಯಿಂದಲೇ ಪಾರಮಾರ್ಥ.
332 ಕರೆದುಣ್ಣುವ ಕೆಚ್ಚಲನ್ನು ಕೊರೆದುಂಡ ಹಾಗೆ.
333 ಉದ್ದುದ್ದ ಮಾತಿನವರ ಮೊಳಕೈ ಮೊಂಡ.
334 ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.
335 ನೋಡಿ ನಡೆದವರಿಗೆ ಕೇಡಿಲ್ಲ.
336 ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.
337 ಚಿಂತೆ ಮಾಡಿದರೆ ಸಂತೆ ಸಾಗೀತೆ?
338 ದುಡ್ಡನ್ನು ಕಾದಿಟ್ಟುಕೊಳ್ಳದವನು ಹಣವಂತನು ಹೇಗೆ ಆದಾನು?
339 ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು.
340 ತಾಯಿ ಬೇಕು ಇಲ್ಲವೇ ಬಾಯಿ ಬೇಕು.
341 ಸೀರಿಗೇಡಿಗೆ ಸೀರೆ ಉಡಿಸಿದರೆ ಕೆರಿ ದಂಡಿ ಮ್ಯಾಗ ನಿಂತು ಕೇಕೆ ಹಾಕಿದಳು.
342 ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.
343 ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.
344 ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ.
345 ಮಂತ್ರಕ್ಕಿಂತ ಉಗುಳೇ ಹೆಚ್ಚು.
346 ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು.
347 ಎಡಗಣ್ಣು ಹೊಡೆದರೆ ನಾರಿಗೆ ಶುಭ.
348 ಊಟವೆಂದರೆ ಊರು ಬಿಟ್ಟುಹೋದಂತೆ.
349 ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ.
350 ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.
351 ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.
352 ಕಣ್ಣಿಗೂ ಮೂಗಿಗೂ ಮೂರು ಗಾವುದ.
353 ಕಲಹವೇ ಕೇಡಿಗೆ ಮೂಲ.
354 ಮಾತಿಗೆ ಸಿಕ್ಕಿದರೆ ಮಳೆಗೆ ಸಿಕ್ಕಂತೆ.
355 ನಾಲಿಗೆಯಿಂದ ಕೆಳಗೆ ಬಿದ್ದರೆ ನರಕ.
356 ವೇದ ಸುಳ್ಳಾದರು ಗಾದೆ ಸುಳ್ಳಾಗದು.
357 ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
358 ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
359 ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
360 ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
361 ಕೈ ಕೆಸರಾದರೆ ಬಾಯಿ ಮೊಸರು.
362 ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
363 ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
364 ಮಾತು ಬೆಳ್ಳಿ, ಮೌನ ಬಂಗಾರ.
365 ಮಾತು ಮನೆ ಮುರಿತು, ತೂತು ಓಲೆ ಕೆಡಿಸಿತು.
366 ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
367 ಮನೆಗೆ ಮಾರಿ, ಊರಿಗೆ ಉಪಕಾರಿ.
368 ಆಳಾಗಬಲ್ಲವನು ಅರಸನಾಗಬಲ್ಲ.
369 ಊರಿಗೆ ದೊರೆ ಆದರೂ ತಾಯಿಗೆ ಮಗನೆ.
370 ಹೆತ್ತವರಿಗೆ ಹೆಗ್ಗಣ ಮುದ್ದು.
371 ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ.
372 ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?
373 ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
374 ಮನಸಿದ್ದರೆ ಮಾರ್ಗ.
375 ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
376 ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ.
377 ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
378 ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
379 ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
380 ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
381 ಬೆಕ್ಕು ಕಣ್ಮುಚ್ಚಿ ಹಾಳು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
382 ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
383 ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
384 ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು.
385 ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.
386 ಚಿಂತೆ ಇಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ.
387 ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ.
388 ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
389 ತುಂಬಿದ ಕೊಡ ತುಳುಕುವುದಿಲ್ಲ.
390 ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
391 ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
392 ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
393 ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ.
394 ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
395 ಹಾಸಿಗೆ ಇದ್ದಷ್ಟು ಕಾಲು ಚಾಚು
396 ಬೀದೀಲಿ ಹೊಗೊ ಮಾರೀನ ಮನೆಗೆ ಕರೆದಂಗೆ
397 ಮಾಡಿದುಣ್ಣೊ ಮಾರಾಯ
398 ಉಪ್ಪ ತಿಂದ ಮೇಲೆ ನೀರು ಕುಡಿಯಲೇ ಬೆಕು
399 ಯಾರದೊ ದುಡ್ಡಿನಲ್ಲಿ ಯೆಲ್ಲಮನ್ನ ಜಾತ್ರೆ
400 ಆಗೊದೆಲ್ಲ ವೊಳ್ಳೆದಕ್ಕೆ
401 ಗಂಡ-ಹೆಂಡಿರ ಜಗಳ ತಿಂದು ಮಲುಗೊ ವರೆಗೆ
402 ಕಾಲಕ್ಕೆ ತಕ್ಕಂತೆ ನಡಿಯಬೇಕು,ತಾಳಕ್ಕೆ ತಕ್ಕಂತೆ ಕುಣಿಯಬೇಕು
403 ಅನ್ನ ಹಾಕಿದ ಮನೆಗೆ ಕನ್ನ ಹಕಬೇಡ
404 ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ್ ಕಣ್ಣು ಕುರಿ ಮ್ಯಾಲೆ.
405 ಪಾಲಿಗೆ ಬಂದದ್ದೆ ಪರಮಾನ್ನ.
406 ಸಾವಿರ ಸುಳ್ಳು ಹೇಲಿ ಒಂದು ಮದುವೆ ಮಾಡು
407 ಕಳ್ಳನ ನಂಬಿದ್ರು ಕುಳ್ಳನ ನಂಬಬೇಡ
408 ನೆಲಕ್ಕೆ ಬಿದ್‍ದ್ರೂ ಮೀಸೆ ಮಣ್ಣಾಗಿಲ್ಲ
409 ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೊ
410 ದೇವರು ಒಲಿದರೂ ಪೂಜಾರಿ ಒಲಿಯೊಲ್ಲ.
411 ನಮ್ಮ ದೇವರ ಸತ್ಯ ನಮಗೆ ಗೊತ್ತು.
412 ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
413 ಕೈ ಕೆಸರಾದರೆ ಬಾಯಿ ಮೊಸರು.
414 ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.
415 ರೋಗಿ ಬಯಸಿದ್ದು ಹಾಲು-ಅನ್ನ ವೈದ್ಯ ಹೇಳಿದ್ದು ಹಾಲು-ಅನ್ನ
416 ಕಳ್ಳನಿಗೊಂದು ಪಿಳ್ಳೆ ನೆವ
417 ಕುಣಿಯಲಾರದವಳು ನೆಲ ಡೊಂಕು ಅಂದಳಂತೆ
418 ಹೋದೆಯಾ ಪಿಶಾಚಿ ಅಂದ್ರೆ ಬಂದೆಯಾ ಗವಾಕ್ಷೀಲಿ
419 ಹೋದ ಪುಟ್ಟ ಬಂದ ಪುಟ್ಟ
420 ಶಿವ ಪೂಜೇಲಿ ಕರಡಿ ಬಿಟ್ಟಂಗೆ
421 ಸೋದರ ಮಾವನ ಚಾಳು ತುಂಡಪುಂಡರ ಪಾಲು
422 ನೆಂಟರೆಲ್ಲ ಖರೆ, ಕಂಟಲೆ ಚೀಲಕ್ಕೆ ಕೈ ಹಾಕಬೇಡ
423 ಅಂಗೈ ಹುಣ್ಣಿಗೆ ಕನ್ನಡಿ ಯಾಕೆ
424 ಅಕ್ಕ ಸತ್ತರೆ ಅಮಾಸೆ ನಿಲ್ಲದು,
425 ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದು
426 ಹುಣ್ಣಿಮೆ ಬರುವ ತನಕ ಅಮಾಸೆ ನಿಲ್ಲದು, ಅಮಾಸೆ ಬರುವನಕ ಹುಣ್ಣಿಮೆ ನಿಲ್ಲದು
427 ಎತ್ತೂ ಕೋಣಕ್ಕೆ ಎರಡು ಕೋಡು, ನಮ್ಮ ಅಯ್ಯಂಗಾರ್ಗೆ ಮೂರು ಕೋಡು
428 ಹಗೆ ಮಾತು ಆತುಕೊಂಡ, ತುಟಿ ಬಿಚ್ಚದೆ ಕೂತುಕೊಂಡ
429 ಮಕ ನೋಡಿ ಮಾರು ಹೋದ, ಗುಣ ನೋಡಿ ದೂರ ಹೋದ
430 ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ
431 ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು
432 ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ
433 ಪಾಪ ಅಂದ್ರೆ ಕರ್ಮ ಬರ್ತದೆ
434 ಅರಸು ಆದೀಕ (=ಆದಾಯ) ತಿಂದ,
435 ಪರದಾನಿ ಹೂಸು ಕುಡಿದ
436 ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
437 ಇಟ್ಟುಕೊಂಡಾಕಿ ಇರೂತನ ಕಟ್ಟಿಕೊಂಡಾಕಿ ಕಡೀತನ
438 ಇತ್ತಿತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ತುಕೊಂಡ
439 ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ
440 ಗವುಜಿ ಗದ್ದಲ ಏನೂ ಇಲ್ಲ, ಗೋವಿಂದ ಭಟ್ಟ ಬಾವೀಲಿ ಬಿದ್ದ
441 ಇದ್ದವರು ಇದ್ದಹಾಗೆ ಸಿದ್ಧಾ ದೇವಿಗೆ ಸಿಡಿಲು ಬಡೀತು
442 ಅಂದು ಬಾ ಅಂದ್ರೆ ಮಿಂದು ಬಂದ
443 ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ:
444 ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ
445 ಅಜ್ಜ! ಮದುವೆ ಅಂದ್ರೆ ನನಗೋ ಅಂದ
446 ಅಕ್ಕ ನನ್ನವಳಾದ್ರೆ ಬಾವ ನನ್ನವನೇನು
447 ಅಕ್ಕನ ಹಗೆ ಬಾವನ ನೆಂಟು
448 ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು
449 ಅಕ್ಕ ಬರಬೇಕು ಅಕ್ಕಿ ಮುಗೀಬಾರದು
450 ನೀರೆ ನಿನ್ನ ಮಾತು ನಿಜವೇನೆ
451 ನೀರ ಕಡಿದರೆ ಬೆಣ್ಣೆ ಬಂದಾದೇನೆ
452 ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
453 ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು
454 ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ
455 ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ
456 ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
457 ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ
458 ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು
459 ಅಡವಿಯ ದೊಣ್ಣೆ ಪರದೇಸಿಯ ತಲೆ
460 ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ
461 ಅತಿ ಆಸೆ ಗತಿಗೇಡು
462 ಅತಿ ಸ್ನೇಹ ಗತಿ ಕೇಡು
463 ಅರ್ತಿಗೆ ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ
464 ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ
465 ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು
466 ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು ಅರಗಿನಂತೆ ತಾಯಿ,
467 ಮರದಂತೆ ಮಕ್ಕಳು
468 ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ
469 ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ
470 ಅರಸನ ಕುದರೆ ಲಾಯದಲ್ಲೆ ಮುಪ್ಪಾಯಿತು
471 ಅರೆಪಾವಿನವರ ಅಬ್ಬರ ಬಹಳ
472 ಅಲ್ಪರ ಸಂಗ ಅಭಿಮಾನ ಭಂಗ
473 ಅಳಿವುದೇ ಕಾಯ ಉಳಿವುದೇ ಕೀರ್ತಿ
474 ಆವು ಕಪ್ಪಾದ್ರೆ ಹಾಲು ಕಪ್ಪೇನು
475 ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ
476 ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
477 ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
478 ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
479 ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
480 ಆಡೋದು ಮಡಿ ಉಂಬೋದು ಮೈಲಿಗೆ
481 ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ
482 ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ
483 ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
484 ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ
485 ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ
486 ಆಲಸ್ಯಂ ಅಮೃತಂ ವಿಷಂ
487 ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು
488 ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
489 ಆಸೆಗೆ ಕೊನೆಯಿಲ್ಲ
490 ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
491 ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು
492 ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ
493 ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ
494 ಸಾದೆತ್ತಿಗೆ ಎರಡು ಹೇರು (ಹೊರೆ)
495 ಹೆತ್ತವರು ಹೆಸರಿಕ್ಕ ಬೇಕು
496 ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ
497 ಕಣ ಕಾಯಬಹುದು, ಹೆಣ ಕಾಯಾಕೆ (ಬೇಸರದಿಂದ ಹೊತ್ತು ಕಳೆಯಲಿಕ್ಕೆ) ಆಗೊದಿಲ್ಲ
498 ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟಗೆ ಬಾಳೋಕೆ ಛೀ-ಗುಟ್ಟೋರಿರಬೇಕು
499 ಕಳ್ಳನ ಮನಸ್ಸು ಹುಳ್ಳಗೆ
500 ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು
501 ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು, ಅತ್ತೆ ಮನೇಲೂ ಸೈ ಅನ್ನಿಸಿ ಕೊಳ್ತಾಳೆ
502 ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ
503 ಹೆಂಡ್ರನ್ನ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ
504 ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ
505 ಕೊಡೋದು ಕೊಳ್ಳೋದು ಗಂಡಂದು, ಮಜ ಮಾಡೋದು ಹೆಂಡ್ರುದ್ದು
506 ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ
507 ಊರಿಗಾಗದ ಗೌಡ, ಮೇಲೆರಗುವ ಗಿಡುಗ
508 ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು
509 ಯೋಗ ಇದ್ದಷ್ಟೇ ಭೋಗ ಹಾಕ್ಮಣೆ,
510 ನೂಕ್ಮಣೆ, ಯಾಕ್ಮಣೆ ತೇಗಿ ತೇಗಿ ಬೀಗಿ ಬಿದ್ದ
511 ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು
512 ಮುದ್ದು ಮುದ್ದು ತೊಗಲೆ ಬಿದ್ದು ಬಿದ್ದು ನಗಲೆ
513 ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ
514 ಹೋದ ಬದುಕಿಗೆ ಹನ್ನೆರಡು ದೇವರು
515 ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು
516 ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
517 ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ
518 ಇಕ್ಕಲಾರದ ಕೈ ಎಂಜಲು ಇಕ್ಕುವಳು
519 ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಕ್ಕು
520 ಇಕ್ಕೇರಿ ತನಕ ಬಳಗ, ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ
521 ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ
522 ಇಡೀ ಮುಳುಗಿದರೂ ಮೂಗು ಮೇಲೆ
523 ಇದ್ದ ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು
524 ಇದ್ದದ್ದು ಹೇಳಿದರೆ ಹದ್ದಿನಂತ ಮೋರೆ ಆಯಿತು
525 ನಿಜ ಆಡಿದರೆ ನಿಷ್ಠೂರ
526 ಇದ್ದದ್ದು ಹೋಯಿತು ಮದ್ದಿನ ಗುಣದಿಂದ
527 ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ
528 ತನ್ನೂರಲಿ ರಂಗ, ಪರೂರಲಿ ಮಂಗ
529 ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ
530 ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು
531 ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ
532 ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡ ಬಾರದು
533 ಎಡದ ನೆತ್ತಿಗೆ ಬಡಿದರೆ ಬಲದ ನೆತ್ತಿಗೆ ತಾಕಿತು
534 ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ
535 ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು
536 ಮದುವೆ ಮಡಿನೋಡು ಮನೆ ಕಟ್ಟಿ ನೋಡು
537 ಇಲಿಯಾಗಿ ನೂರುದಿನ ಬಾಳೋದಕ್ಕಿಂತ ಹುಲಿಯಾಗಿ ಮೂರು ದಿನ ಬಾಳೋದು ಲೇಸು
538 ಮಾತು ಬೆಳ್ಳಿ, ಮೌನ ಬಂಗಾರ
539 ಕೈ ಕೆಸರಾದ್ರೆ ಬಾಯಿ ಮೊಸರು
540 ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ
541 ಮಾತು ಮನೆ ಮುರೀತು, ತೂತು ಒಲೆ ಕೆಡಿಸ್ತು
542 ಕುಂತು ತಿಂದರೆ, ಕುಡಿಕೆ ಹೊನ್ನೂ ಸಾಲದು
543 ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು
544 ತುಂಬಿದ ಕೊಡ, ತುಳುಕೋದಿಲ್ಲ
545 ಕಾಮಾಲೆ ಕಣ್ಣೊನಿಗೆ ಕಂಡಿದ್ದೆಲ್ಲ ಹಳದಿನೇ
546 ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಅಂದ
547 ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ
548 ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
549 ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ
550 ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು
551 ಹಾಳೂರಿಗೆ ಉಳಿದವನೇ ಗೌಡ
552 ಹಿರೀಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ
553 ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
554 ಜನ ಮರುಳೋ ಜಾತ್ರೆ ಮರುಳೋ
555 ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
556 ಕಾರ್ಯವಾಸಿ ಕತ್ತೆ ಕಾಲು ಕಟ್ಟು
557 ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು
558 ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ
559 ಕೋಪದಲ್ಲಿ ಕುಯ್ದ ಮೂಗು ಶಾಂತಿಯಲ್ಲಿ ಬಂದೀತೇ
560 ಕೋತಿ ತಾನೂ ಕೆಡೋದಲ್ದೆ ವನಾನೂ ಕೆಡಿಸ್ತು
561 ಕೊಟ್ಟದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ
562 ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ
563 ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ
564 ಕುಂಬಾರಂಗೆ ವರುಷ; ದೊಣ್ಣೆಗೆ ನಿಮಿಷ
565 ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದರು
566 ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
567 ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ
568 ನಾಯಿ ಬೊಗಳಿದರೆ ದೇವಲೋಕ ಹಾಳೇನು
569 ನಾಯಿ ಬಾಲ ಡೊಂಕು
570 ಓದಿ ಓದಿ ಮರುಳಾದ ಕೂಚು ಭಟ್ಟ
571 ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
572 ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು
573 ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ
574 ಬೇಲಿನೆ ಎದ್ದು ಹೊಲ ಮೇಯಿತಂತೆ
575 ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ
576 ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ
577 ಎತ್ತು ಈಯಿತು ಅನ್ದರೆ ಕೊಟ್ಟಿಗೆಗೆ ಕಟ್ಟು ಎನ್ದರಂತೆ
578 ಗಂಡ ಹೆಂಡಿರ ಜಗಳ ಉನ್ಡು ಮಲಗೊ ತನಕ
579 ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
580 ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ
581 ಮೂರೂ ಬಿಟ್ಟೋಳು ಊರಿಗೆ ದೊಡ್ಡೋಳು
582 ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು ತಿಣಕಿದ
583 ಮುಳ್ಳಿನಿಂದ ಮುಳ್ಳು ತೆಗೆ, ಹಗೆಯಿಂದ ಹಗೆ ತೆಗೆ
584 ಆನೆಯಂಥದೂ ಮುಗ್ಗರಿಸ್ತದೆ
585 ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ
586 ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ
587 ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ
588 ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ
589 ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ?
590 ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು
591 ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು
592 ವಶಗೆಡದೆ ಹಸಗೆಡಲ್ಲ
593 ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ
594 ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ
595 ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ
596 ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ
597 ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು
598 ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು
599 ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ
600 ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ
601 ಮುದ್ದೆ ಉಣ್ತಾ ಮಜ್ಜಿಗೆ ಓಡಾಟ
602 ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ
603 ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು
604 ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ
605 ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ
606 ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
607 ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು
608 ರಾಜ ಇರೋತನಕ ರಾಣಿ ಭೋಗ
609 ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ
610 ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ
611 ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
612 ಲಕ್ಕಿ ಸೊಪ್ಪಾದರೂ ಲೆಕ್ಕದ ಮುದ್ದೆ ಉಣಬೇಕು
613 ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು
614 ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ
615 ಲಿಂಗ ಹರಿದ ಮೇಲೆ ಜಂಗಮನ ಹಂಗೇನು
616 ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು
617 ವಿನಾಶ ಕಾಲಕ್ಕೆ ವಿಪರೀತ ಬುದ್ಧಿ
618 ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
619 ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ
620 ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ
621 ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ
622 ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು
623 ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ
624 ಅತ್ತೆ ಸತ್ತ ಮೇಲಿನ ಸೊರ್ಗಕ್ಕಿಂತ ಇದ್ದ ನರಲೋಕ ವಾಸಿ
625 ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ
626 ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ
627 ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು
628 ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ
629 ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ
630 ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ
631 ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ
632 ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು
633 ಸಂತೇಲಿ ಮಂತ್ರ ಹೇಳಿದಂಗೆ ಸಂದೀಲಿ ಸಮಾರಾಧನೆ ಮಾಡ್ದಂಗೆ
634 ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ
635 ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
636 ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ
637 ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮ
638 ಸಾಲಗಾರನ ಮನೆಗೆ ಸವುದೆ ಹೊತ್ತರೆ ಮೇಲಣ ಬಡ್ಡಿಗೆ ಸಮವಾಯಿತು
639 ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ
640 ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ
641 ಸಾವಿರ ಕೊಟ್ಟರೂ ಸವತಿ ಮನೆ ಬೇಡ
642 ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ
643 ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ
644 ಸುಳ್ಳು ದೇವರಿಗೆ ಕಳ್ಳ ಪೂಜಾರಿ
645 ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ
646 ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ
647 ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು
648 ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ
649 ಹಗಲು ಅರಸನ ಕಾಟ ಇರುಳು ದೆವ್ವದ ಕಾಟ
650 ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ
651 ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ
652 ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು
653 ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ
654 ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ
655 ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು
656 ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು
657 ಹತ್ತರೊಟ್ಟಿಗೆ ಹನ್ನೊಂದು
658 ಜಾತ್ರೆಯೊಟ್ಟಿಗೆ ಗೋವಿಂದು
659 ಹತ್ತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ
660 ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ
661 ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ
662 ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು
663 ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ
664 ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ
665 ಹರೆಯಕ್ಕೆ ಬಂದಾಗ ಹಂದಿನೂ ಚಂದ
666 ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
667 ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು
668 ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು
669 ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು
670 ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ
671 ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊಣ್ತು
672 ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ
673 ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ
674 ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ
675 ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು
676 ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ
677 ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ
678 ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ
679 ಹಾಳೂರಿಗೆ ಉಳಿದೋನೇ ಗೌಡ,
680 ಬೆಂಗಳೂರಿಗೆ ಬಂದೋನೇ ಬಹದ್ದೂರ
681 ಹಿಟ್ಟು ಹಳಸಿತ್ತು ನಾಯೂ ಹಸಿದಿತ್ತು
682 ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು
683 ಹಿತ್ತಲ ಗಿಡ ಮದ್ದಲ್ಲ
684 ಹತ್ತರ ಮಾತು ರುಚಿಯಲ್ಲ
685 ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ
686 ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ
687 ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
688 ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ
689 ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ
690 ಹುತ್ತ ಬಡಿದರೆ ಹಾವು ಸಾಯುವುದೇ
691 ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ
692 ಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ್ಣ ಕೇಳಿದಂಗೆ
693 ಹೆಡ್ಡಾಳಾದ್ರೂ ದೊಡ್ಡಾಳು ಮೇಲು
694 ಹೆಣ್ಣು ಚಂದ ಕಣ್ಣು ಕುಲ್ಡು ಅಂದಂಗೆ
695 ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ
696 ಹೆತ್ತ ಅಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳ
697 ಹೇಳೊದು ವೇದ ಹಾಕೊದು ಗಾಳ
698 ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
699 ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
700 ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ
701 ಕಂಗಾಲಾದರೂ ಹಂಗಾಳಾಗಬಾರದು
702 ಕೊಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ
703 ನಿಯತ್ತಿಲ್ಲದೋರಿಗೆ ಬರಕತ್ತಿಲ್ಲ
704 ನಾಯಿಗೆ ಕೆಲಸಿಲ್ಲ, ನಿಲ್ಲೋಕೆ ಹೊತ್ತಿಲ್ಲ
705 ನಡತೆ ಕಲಿಯೋದು ಏರುಬಂಡೆ ನಡತೆ ಕೆಡೋದು ಜಾರುಬಂಡೆ
706 ಎಂಟು ವರ್ಷಕ್ಕೆ ನನ್ನ ಮಗ ದಂಟಾದ
707 ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ
708 ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
709 ಮುಲಾಜಿಗೆ ಬಸುರಾಗಿ ಹೇರೋಕೆ ತಾವಿಲ್ಲ
710 ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು
711 ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು
712 ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು
713 ತೂತು ಗತ್ತಲೇಲಿ ತಾತನ ಮದುವೆ
714 ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
715 ತಾಳ ತಪ್ಪಿದ ಬಾಳು, ತಾಳಲಾರದ ಗೋಳು
716 ಅವರವರ ತಲೆಗೆ ಅವರವರದೇ ಕೈ
717 ಡಂಬು (=ಬೂಟಾಟಿಕೆ) ನನ್ನ ಕೇಳು, ಡಬ್ಬು ನನ್ನ ಹೆಂಡ್ರನ್ನ ಕೇಳು
718 ಉಂಡ ಮನೆ ಜಂತೆ ಎಣಿಸಬಾರದು
719 ಬೆಳ್ಳಯ್ಯ ಕಾಕಾ ಅರಿವಯ್ಯ ಮೂಕ
720 ಕ್ರಮ ಕಾಣದ ನಾಯಿ ಕಪಾಳೆ ನೆಕ್ತು
721 ಸೊಪ್ಪುಸೆದೆ ತಿನ್ನೋರ ಒಪ್ಪ ನೋಡು, ತುಪ್ಪತೊಗೆ ತಿನ್ನೋರ ರಂಪ ನೋಡು
722 ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
723 ಹಣ ಎರವಲು ತಂದು ಮಣ ಉರುವಲು ಕೊಂಡ
724 ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ)
725 ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ
726 ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ
727 ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ
728 ಕಾಲ್ಮುರುಕ ದೇವರಿಗೆ ಕೈಲಾಸವೇ
729 ಹೊಳೆಗೆ ಸುರಿದರೂ ಅಳೆದು ಸುರಿ
730 ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ
731 ಉಂಬಾಗ ಉಡುವಾಗ ಊರೆಲ್ಲ ನೆಂಟರು
732 ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ
733 ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
734 ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
735 ಉತ್ತಮನು ಎತ್ತ ಹೋದರೂ ಶುಭವೇ
736 ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ
737 ಕೃಷಿತೋನಾಸ್ತಿ ದುರ್ಭಿಕ್ಷಂ
738 ಉದ್ಯೋಗವೇ ಗಂಡಸಿಗೆ ಲಕ್ಷಣ
739 ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
740 ಊರು ದೂರಾಯಿತು ಕಾಡು ಹತ್ತರಾಯಿತು
741 ಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರು
742 ಎಡವಿದ ಕಾಲು ಎಡವುದು ಹೆಚ್ಚು
743 ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ
744 ಎರಡೂ ಕೈ ತಟ್ಟಿದರೆ ಸದ್ದು
745 ಎಲ್ಲರೂ ಪಾಲಕೀಲಿ ಕೂತರೆ ಹೊರೋರು ಯಾರು
746 ಎಲ್ಲಾ ಬಣ್ಣ ಮಸಿ ನುಂಗಿತು
747 ಏರಿದವ ಇಳಿದಾನು ಏಳರಲ್ಲಿ ಬರಲೋ? ಎಪ್ಪತ್ತರಲ್ಲಿ ಬರಲೋ?
748 ಒಂದು ಕಣ್ಣೀಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ
749 ಕಂಡದ್ದು ಕಾಣೆ ಉತ್ತಮ ಕಂಡದ್ದು ಕಂಡೆ ಮಧ್ಯಮ, ಕಾಣದ್ದು ಕಂಡೆ ಅಧಮ
750 ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು
751 ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ
752 ನಯಶಾಲಿ ಆದವನು ಜಯಶಾಲಿ ಆದಾನು
753 ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು
754 ಬಾಯಲ್ಲಿ ಬೆಲ್ಲ ಕರುಳು ಕತ್ತರಿ
755 ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ
756 ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ
757 ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು
758 ಕಚ್ಚುವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚದು
759 ಕಡು ಕೋಪ ಬಂದಾಗ ತಡಕೊಂಡವನೇ ಜಾಣ
760 ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
761 ಕಪ್ಪರ ತಿಪ್ಪೇಲಿಟ್ಟರೆ ತನ್ನ ವಾಸನೆ ಬಿಟ್ಟೀತೇ
762 ಕಬ್ಬು ಡೊಂಕಾದ್ರೆ ಸವಿ ಡೊಂಕೇ
763 ಕಲ್ಲು ಇದ್ದಾಗ ನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ
764 ಕಳ್ಳನ ಹೆಜ್ಜೆ ಕಳ್ಳನೇ ಬಲ್ಲ
765 ಹಣ ಇಲ್ಲದವ ಹೆಣಕ್ಕಿಂತ ಕಡೆ
766 ಕಿಡಿಯಿಂದ ಕಾಡ ಸುಡ ಬಹುದು
767 ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ
768 ಕೀಲು ಸಣ್ಣದಾದರೂ ಗಾಲಿ ನಡೆಸುತ್ತದೆ
769 ಕುರುಡು ಕಣ್ಣಿಗಿಂತ ಮೆಳ್ಳೆ ಗಣ್ಣು ವಾಸಿ
770 ಕೂತು ಉಣ್ಣೋನಿಗೆ ಕುಡಿಕೆ ಹೊನ್ನು ಸಾಲದು
771 ಕೆಡುವ ಕಾಲಕ್ಕೆ ಬುದ್ಧಿ ಇಲ್ಲ ಮರಣ ಕಾಲಕ್ಕೆ ಮದ್ದಿಲ್ಲ
772 ಕೈಗೆ ಬಂದ ತುತ್ತು ಬಾಯಿಗೆ ಇಲ್ಲ
773 ಕೊಡಲಿ ಕಾವು ಕುಲಕ್ಕೆ ಸಾವು
774 ಬಿದ್ದರೂ ಮೀಸೆ ಮಣ್ಣಾಗಲಿಲ್ಲ
775 ಅಡಿಗೆ ಬಿದ್ಫರೂ ಮೀಸೆ ಮೇಲೆ
776 ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ
777 ಬಂಟರ ಅಬ್ಬರ ಸೇವಿನ ಗೊಬ್ಬರ
778 ಊರಿಗೆ ಬಂದ ನೀರೆ ನೀರಿಗೆ ಬಾರದಿರುತ್ತಾಳೆಯೇ?
779 ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರು
780 ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು
781 ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ.
782 ಮಳೆ ಹುಯ್ದರೆ ಕೇಡಲ್ಲ; ಮಗ ಉಂಡರೆ ಕೇಡಲ್ಲ
783 ಮಘೆ ಮಳೆ ಬಂದಷ್ಟೂ ಒಳ್ಳೇದು,
784 ಮನೆ ಮಗ ಉಂಡಷ್ಟೂ ಒಳ್ಳೇದು
785 ಓದಿ ಓದಿ ಮರುಳಾದ ಕೂಚು ಭಟ್ಟ; ಓದದೆ ಅನ್ನ ಕೊಟ್ಟ ನಮ್ಮ ರೈತ
786 ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು
787 ಕಾಸಿಗೆ ತಕ್ಕ ಕಜ್ಜಾಯ.
788 ಕಂತೆಗೆ ತಕ್ಕ ಬೊಂತೆ
789 ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ
790 ಅಗ್ಗದ ಮಾಲು;ಮುಗ್ಗಿದ ಜೋಳ
791 ಹರಯದಲ್ಲಿ ಹಂದಿ ಕೂಡ ಚೆನ್ನಾಗಿರುತ್ತೆ.
792 ಹೆತ್ತೋರ್ಗೆ ಹೆಗ್ಗಣ ಮುದ್ದು, ಕಟ್ಗೊಂಡೋರ್ಗೆ ಕೋಡಂಗಿ ಮುದ್ದು.
793 ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು
794 ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ
795 ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು
796 ಊರು ಸುಟ್ಟರೂ ಹನುಮಂತರಾಯ ಹೊರಗೆ
797 ನಮಾಜು ಮಾಡಲು ಹೋಗಿ ಮಸೀದಿ ಕೆಡವಿಕೊಂಡ ಹಾಗೆ
798 ಮಾಡಿದ್ದುಣ್ಣೋ ಮಹರಾಯ
799 ಉಪ್ಪು ತಿಂದವನು ನೀರು ಕುಡಿಯಲೇ ಬೇಕು
800 ತಾ ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು
801 ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ
802 ಹಾವು ಸಾಯಬಾರದು , ಕೋಲು ಮುರೀಬಾರದು
803 ಅಕ್ಕಿ ಮೇಲೆ ಆಸೆ, ನೆಂಟರ ಮೆಲೆ ಪ್ರೀತಿ
804 ಬಲ್ಲವನೇ ಬಲ್ಲ ಬೆಲ್ಲದ ರುಚಿಯ
805 ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ
806 ತೋಟ ಶೃಂಗಾರ, ಒಳಗೆ ಗೋಣಿ ಸೊಪ್ಪು
807 ಹೊರಗೆ ಥಳುಕು, ಒಳಗೆ ಹುಳುಕು
808 ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡನಂತೆ
809 ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ
810 ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೆ ?
811 ಆಕಳು ಕಪ್ಪಾದರೂ ಹಾಲು ಕಪ್ಪೆ ?
812 ಕಬ್ಬು ಡೊಂಕಾದರೆ ಸಿಹಿ ಡೊಂಕೆ ?
813 ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ
814 ಗೋರ್ಕಲ್ಲ ಮೇಲೆ ಮಳೆಗರೆದಂತೆ
815 ಸುಂಕದವನ ಮುಂದೆ ಸುಖದುಃಖವೇ
816 ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ
817 ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ
818 ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ
819 ಊರಿಗೆಲ್ಲಾ ಒಬ್ಬಳೇ ಪದ್ಮಾವತಿ
820 ಹಾಳೂರಿಗೆ ಉಳಿದವನೇ ಗೌಡ
821 ಅಳಿದೂರಿಗೆ ಉಳಿದವನೇ ಗೌಡ
822 ತನ್ನ ಓಣೀಲಿ ನಾಯಿಯೇ ಸಿಂಹ
823 ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ
824 ಗಾಳಿ ಬಂದಾಗ ತೂರಿಕೋ
825 ಹುಚ್ಚುಮುಂಡೆ ಮದುವೇಲಿ ಉಂಡವನೇ ಜಾಣ
826 ಕೊಟ್ಟವನು ಕೋಡಂಗಿ; ಇಸ್ಕೊಂಡೋನು ಈರಭದ್ರ
827 ಕಾಸಿದ್ರೆ ಕೈಲಾಸ
828 ದುಡ್ಡೇ ದೊಡ್ಡಪ್ಪ,ಬುದ್ಧಿ ಅದರಪ್ಪ
829 ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ
830 ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ
831 ಪುರಾಣ ಹೇಳೊಕೆ; ಬದನೆಕಾಯಿ ತಿನ್ನೋಕೆ
832 ಹೇಳೋದು ಶಾಸ್ತ್ರ, ಹಾಕೋದು ಗಾಣ
833 ಹೇಳೋದು ಶಾಸ್ತ್ರ,ತಿನ್ನೋದು ಬದನೆಕಾಯಿ
834 ನೂರು ಜನಿವಾರ ಒಟ್ಟಿಗಿರಬಹುದು; ಮೂರು ಜಡೆ ಒಟ್ಟಿಗಿರುವುದಿಲ್ಲ
835 ಹೆಣ್ಣಿಗೆ ಹೆಣ್ಣೇ ವೈರಿ
836 ಗಾಯದ ಮೇಲೆ ಬರೆ ಎಳೆದಂತೆ
837 ಹುಣ್ಣಿನ ಮೇಲೆ ಉಪ್ಪು ಸವರಿದಂತೆ
838 ಅತಿ ಆಸೆ ಗತಿ ಕೇಡು
839 ವಿನಾಶ ಕಾಲೇ ವಿಪರೀತ ಬುದ್ಧಿ
840 ಆಸೆಯೇ ದು:ಖಕ್ಕೆ ಮೂಲ
841 ಅತಿಯಾದರೆ ಅಮೃತವೂ ವಿಷ
842 ಓಲೆ ಆಸೆಗೆ ಬೆಕ್ಕು ಮೂಗುತಿ ಕಳಕೊಂಡಿತು
843 ಅತಿ ಸ್ನೇಹ ಗತಿ ಕೆಡಿಸಿತು
844 ಹೊಳೆಯಲ್ಲಿ ಹುಣಿಸೇ ಹಣ್ಣು ಕಿವಿಚಿದಂತೆ
845 ನೀರಿನಲ್ಲಿ ಹೋಮ ಮಾಡಿದಂತೆ
846 ಅಟ್ಟದ ಮೇಲಿಂದ ಬಿದ್ದವನಿಗೆ ದಡಿಗೆ ತಗೊಂಡು ಹೇರಿದರಂತೆ
847 ತೋಳ ಬಿದ್ದರೆ ಆಳಿಗೊಂದು ಕಲ್ಲು
848 ಮೆತ್ತಗಿದ್ದಲ್ಲಿ ಮತ್ತೊಂದು ಗುದ್ದಲಿ
849 ನಿಸ್ಸಹಾಯಕರ ಮೇಲೆ ಹುಲ್ಲುಕಡ್ಡಿ ಸಹ ಭುಸುಗುಡುತ್ತದೆ
850 ಮೆತ್ತಗಿದ್ದವರನ್ನು ಮೊಣಕೈಯಲ್ಲಿ ಗುದ್ದಿದರು
851 ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡರಂತೆ
852 ಅಂಗೈ ತೋರಿಸಿ ಅವಲಕ್ಷಣ ಅಂತ ಅನ್ನಿಸಿಕೊಂಡರಂತೆ
853 ಇರಲಾರದೆ ಇರುವೆ ಬಿಟ್ಟುಕೊಂಡು
854 ಕಿರುಗೂರಿಗೆ ಹೋದರಂತೆ ಕಣಿ ಕೇಳುವುದಕ್ಕೆ
855 ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ
856 ಬೀದೀಲಿ ಹೋಗೋ ಮಾರೀನ ಮನೆ ಹೊಕ್ಕು ಹೋಗು ಅಂದಂತಾಯ್ತು
857 ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ
858 ಸಲಿಗೆ ಕೊಟ್ಟ ಸೊಣಗ ಸಟ್ಟುಗ ನೆಕ್ಕಿತಂತೆ
859 ಇತ್ತತ್ತ ಬಾ ಅಂದ್ರೆ ಇದ್ದ ಮನೆ ಕಿತ್ಕೊಂಡರು
860 ಅಯ್ಯೋ ಪಾಪ ಅಂದ್ರೆ ಅರ್ಧ ಆಯುಸ್ಸು
861 ಬಡವನ ಸಿಟ್ಟು ದವಡೆಗೆ ಮೂಲ
862 ಬಡವನ ಕೋಪ ದವಡೆಗೆ ಮೂಲ
863 ಬಡವ ನೀ ಮಡಗಿದ ಹಾಗಿರು
864 ಕುದಿಯುವ ಎಣ್ಣೆಯಿಂದ ಕಾದ ತವದ ಮೇಲೆ ಬಿದ್ದ ಹಾಗೆ
865 ಬಾಣಲೆಯಿಂದ ಬೆಂಕಿಗೆ
866 ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರಂತೆ
867 ಬೇಲಿಯೇ ಎದ್ದು ಹೊಲ ಮೇಯ್ದಂತೆ
868 ಕಾಡಿಗೆ ಹೋಗೋ ವಯಸ್ಸಿನಲ್ಲಿ ಬ್ರಾಹ್ಮಣ ಓಂ ಕಲಿತ
869 ನನ್ನ ಮಗ ಎಂಟು ವರ್ಷಕ್ಕೆ ದಂಟು ಎಂದ
870 ಬೆಳೆಯುವ ಪೈರು ಮೊಳಕೆಯಲ್ಲಿ
871 ಮೂರು ವರ್ಷಕ್ಕೆ ಬಂದಿದ್ದು ಮೂವತ್ತು ವರ್ಷಕ್ಕೆ ಬಂತು
872 ಯಥಾ ರಾಜಾ ತಥಾ ಪ್ರಜಾ
873 ನೂಲಿನಂತೆ ಸೀರೆ; ತಾಯಿಯಂತೆ ಮಗಳು
874 ಸಂಕಟ ಬಂದಾಗ ವೆಂಕಟರಮಣ
875 ಕಾರ್ಯವಾಸಿ ಕತ್ತೆ ಕಾಲು ಕಟ್ಟು
876 ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
877 ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ
878 ಆಕಾಶ ನೋಡೊದಕ್ಕೆ ನೂಕುನುಗ್ಗಲೆ ?
879 ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
880 ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು
881 ಬೆಳ್ಳಗಿರೋದೆಲ್ಲ ಹಾಲಲ್ಲ
882 ಅಲ್ಪರ ಸಂಗ ಅಭಿಮಾನ ಭಂಗ
883 ಸಗಣಿಯವನೊಡನೆ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು
884 ಸಗಣಿಯವನ ಸರಸಕ್ಕಿಂತ, ಗಂಧದವನ ಗುದ್ದಾಟ ಮೇಲು
885 ಅಲ್ಪ ವಿದ್ಯಾ ಮಹಾಗರ್ವಿ
886 ಅಂಬಲಿ ಕುಡಿಯುವವನಿಗೆ, ಮೀಸೆ ಹಿಡಿಯುವವನೊಬ್ಬ
887 ಗಂಜಿ ಕುಡಿಯೋನಿಗೆ,ಮೀಸೆ ಹಿಡಿಯುವವನೊಬ್ಬ
888 ತುಂಬಿದ ಕೊಡ ತುಳುಕುವುದಿಲ್ಲ
889 ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೆ ?
890 ನರಿ ಕೂಗು ಗಿರಿ ಮುಟ್ಟುತ್ತದೆಯೆ ?
891 ಕೈ ಕೆಸರಾದರೆ ಬಾಯಿ ಮೊಸರು
892 ದುಡಿಮೆಯೇ ದುಡ್ಡಿನ ತಾಯಿ
893 ಕಾಯಕವೇ ಕೈಲಾಸ
894 ಆಳಾಗಬಲ್ಲವನು ಅರಸಾಗಬಲ್ಲ
895 ಕಷ್ಟ ಪಟ್ಟರೆ ಫಲವುಂಟು
896 ದುಡಿಮೆಯೇ ದೇವರು
897 ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ
898 ಗಿಣಿ ಸಾಕಿ ಗಿಡುಗದ ಕೈಗೆ ಕೊಟ್ಟರು
899 ಚಿತ್ತಾರದ ಅಂದವನ್ನು ಮಸಿ ನುಂಗಿತು
900 ಸಾವಿರ ಚಿತ್ತಾರ ಮಸಿ ನುಂಗಿತು
901 ಕದ ತಿನ್ನೋವನಿಗೆ ಹಪ್ಪಳ ಈಡಲ್ಲ
902 ರಾವಣಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ
903 ಸಮುದ್ರ ದಾಟಿದವನಿಗೆ ಹಸುವಿನ ಹೆಜ್ಜೆ ದೊಡ್ಡದೆ
904 ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು
905 ಮಾತು ಬೆಳ್ಳಿ; ಮೌನ ಬಂಗಾರ
906 ಮಾತು ಮನೆ ಕೆಡಿಸಿತು; ತೂತು ಒಲೆ ಕೆಡಿಸಿತು
907 ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ
908 ಹೊತ್ತಿಗಿಲ್ಲದ ಗಾದೆ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ.
909 ಆದ ಕೆಲಸಕ್ಕೆ ಅತ್ತೆಗಳು ಬಂದಂತೆ
910 ಊಟಕ್ಕಿಲ್ಲದ ಉಪ್ಪಿನಕಾಯಿಕ್ಕೆ ಸಮಾನ
911 ಹಲ್ಲಿದ್ದಾಗ ಕಡ್ಲೆ ಇಲ್ಲ; ಕಡ್ಲೆ ಇದ್ದಾಗ ಹಲ್ಲಿಲ್ಲ
912 ಚೆಲ್ಲಿದ ಹಾಲಿಗೆ ಅತ್ತು ಪ್ರಯೋಜನವಿಲ್ಲ
913 ಬಂದ ದಾರಿಗೆ ಸುಂಕವಿಲ್ಲ
914 ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ
915 ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲುದು
916 ಕಣ್ಣರಿಯದಿದ್ದರೂ ಕರುಳರಿಯುತ್ತದೆ
917 ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ
918 ಉಸ್ ಎಂದರೆ ಉಸಳಿ ಬೇಡಿದ್ದನಂತೆ
919 ಮನೆ ತುಂಬ ಮುತ್ತಿದ್ದರೆ ...ಗೂ ಪೋಣಿಸಿಕೊಂಡರಂತೆ
920 ಮುತ್ತು ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ತೊಟ್ರಂತೆ.
921 ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೂ ಬಳಿದುಕೊಂಡರಂತೆ
922 ಅತ್ತ ದರಿ; ಇತ್ತ ಪುಲಿ
923 ಬಿಸಿ ತುಪ್ಪ; ನುಂಗೋದಕ್ಕೂ ಆಗೊಲ್ಲ; ಉಗುಳೋದಕ್ಕೂ ಆಗೊಲ್ಲ
924 ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ
925 ಮನೇಗೆ ಬೆಂಕಿ ಬಿದ್ದಾಗ ಭಾವಿ ತೋಡಕ್ಕೆ ಶುರು ಮಾಡಿದರಂತೆ
926 ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ
927 ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಅಂದರಂತೆ
928 ಆತುರಗಾರನಿಗೆ ಬುದ್ಧಿ ಮಟ್ಟ
929 ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
930 ತನಗೇ ಜಾಗವಿಲ್ಲ; ಕೊರಳಲ್ಲಿ ಡೋಲು
931 ಬೇರೆ ಉಣ್ಣೋಕಿಲ್ಲದಿದ್ದರೂ ಸಣ್ಣಕ್ಕಿ ಅನ್ನ ತಿಂದರು ;
932 ಉಡೋಕಿಲ್ಲದಿದ್ದರೂ ಪಟ್ಟೆ ಸೀರೆ ಉಟ್ಟರು
933 ನದೀನೇ ನೋಡದೆ ಇರೋನು ಸಮುದ್ರ ವರ್ಣನೆ ಮಾಡಿದ ಹಾಗೆ
934 ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ
935 ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ
936 ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ
937 ಮಂತ್ರಕ್ಕಿಂತ ಉಗುಳೇ ಜಾಸ್ತಿ
938 ಮೂಗಿಗಿಂತ ಮೂಗುತಿ ಭಾರ
939 ಇಬ್ಬರ ಜಗಳ ಮೂರನೆಯವನಿಗೆ ಲಾಭ
940 ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು.
941 ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು (ರಾಘವಾಂಕ)
942 ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
943 ಏತಿ ಅಂದರೆ ಪ್ರೇತಿ ಅಂದಂತೆ
944 ಓದುವಾಗ ಓದು; ಆಡುವಾಗ ಆಡು
945 ಓದಿ ಬರೆಯೋ ಕಾಲದಲ್ಲಿ ಆಡಿ ಮಣ್ಣು ಹುಯ್ಕೊಂಡರು
946 ಕೈಯ್ಯಲ್ಲೆ ಬೆಣ್ಣೆ ಇಟ್ಟುಕೊಂಡು,ತುಪ್ಪಕ್ಕೆ ಊರೆಲ್ಲ ಅಲೆದರಂತೆ
947 ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ
948 ಊರಿಗೆ ಉಪಕಾರಿ, ಮನೆಗೆ ಮಾರಿ
949 ಮನೆಗೆ ಮಾರಿ, ಪರರಿಗೆ ಉಪಕಾರಿ
950 ತಮ್ಮನೇಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಬೇರೇ ಮನೇ ಸತ್ತ ನೊಣದ ಕಡೆಗೆ ಬೆಟ್ಟು ಮಾಡಿದರು
951 ತನ್ನ ಎಲೇಲಿ ಕತ್ತೆ ಸತ್ತು ಬಿದ್ದಿದ್ರೆ , ಪಕ್ಕದ ಎಲೇಲಿ ನೊಣ ಹೊಡೆಯಕ್ಕೆ ಹೋದ
952 ಕೋತಿಗೆ ಹೆಂಡ ಕುಡಿಸಿದಂತೆ
953 ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ
954 ಹೆಂಡ ಕುಡಿದ ಕಪಿಗೆ ಚೇಳು ಕಡಿದ ಹಾಗೆ
955 ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು
956 ಅಮ್ಮನವರು ಪಟ್ಟಕ್ಕೆ ಬಂದಾಗ,ಅಯ್ಯನವರು ಚಟ್ಟಕ್ಕೇರಿದರು
957 ಕೆಲಸವಿಲ್ಲದ ಬಡಗಿ ಮಗುವಿನ ... ಕೆತ್ತಿದ
958 ಕೆಲಸವಿಲ್ಲದ ಕುಂಬಾರ ಮಕ್ಕಳ ಅಂ.. ತಟ್ಟಿದ
959 ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದನಂತೆ
960 ಆರಕ್ಕೆ ಹೆಚ್ಚಿಲ್ಲ; ಮೂರಕ್ಕೆ ಕಡಿಮೆಯಿಲ್ಲ
961 ಆರಕ್ಕೇರಲ್ಲ, ಮೂರಕ್ಕಿಳಿಯಲ್ಲ
962 ಕಳ್ಳನ ಹೆಂಡತಿ ಎಂದಿದ್ದರೂ ...ಯೆ
963 ಕಳ್ಳನ ಹೆಂಡತಿ ಎಂದಿದ್ದರೂ ಮುಂ..
964 ಶರಣರ ಬದುಕನ್ನು ಅವರ ಮರಣದಲ್ಲಿ ನೋಡು
965 ಅಯ್ಯಾ ಎಂದರೆ ಸ್ವರ್ಗ; ಎಲವೋ ಎಂದರೆ ನರಕ
966 ಸಜ್ಜನರ ಸಂಗ ಹೆಜ್ಜೇನು ಸವಿದಂತೆ
967 ಈಸಿ ನೋಡು , ಇದ್ದು ಜೈಸಿ ನೋಡು
968 ಹೂವಿನ ಜೊತೆ ದಾರ ಮುಡಿಯೇರಿತು
969 ಹೂವಿನಿಂದ ನಾರಿಗೂ ಸ್ವರ್ಗ
970 ಗೆದ್ದೆತ್ತಿನ ಬಾಲ ಹಿಡಿದ ಹಾಗೆ
971 ಆರು ದೋಸೆ ಕೊಟ್ರೆ ಅತ್ತೆ ಕಡೆ, ಮೂರು ದೋಸೆ ಕೊಟ್ರೆ ಸೊಸೆ ಕಡೆ
972 ಆರು ದೋಸೆ ಕೊಟ್ರೆ ಅತ್ತೆ ಕಡೇ,ಮೂರು ದೋಸೆ ಕೊಟ್ರೆ ಮಾವನ ಕಡೆ
973 ನಾಯಿ ಬಾಲ ಡೊಂಕು
974 ನಾಯಿ ಬಾಲಕ್ಕೆ ದೆಬ್ಬೆ ಕಟ್ಟಿದ ಹಾಗೆ
975 ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
976 ಜಟ್ಟಿ ಜಾರಿದರೆ ಅದೂ ಒಂದು ಪಟ್ಟು
977 ಮುದಿ ... ಮಹಾ ಪತಿವ್ರತೆ (ವೃದ್ಧ ನಾರೀ ಪತಿವ್ರತಾ)
978 ಸೂಳೆ ಮುಪ್ಪಾಗಿ ಗೊರವಿತ್ತಿಯಾದಳು
979 ಕಂಕುಳಲ್ಲಿ ದೊಣ್ಣೆ; ಕೈಯಲ್ಲಿ ಶರಣಾರ್ಥಿ
980 ಬಾಯಲ್ಲಿ ಬೆಣ್ಣೆ;ಬಗಲಲ್ಲಿ ದೊಣ್ಣೆ.
981 ಕೂರೆಗೆ ಹೆದರಿ ಸಂತೆಯಲ್ಲಿ ಸೀರೆ ಬಿಚ್ಚಿದರಂತೆ
982 ಕೂರೆಗೆ ಹೆದರಿ ಸೀರೆ ಬಿಚ್ಚೆಸೆದರು
983 ಕಾಸು ಕೊಟ್ಟು ಬ್ರಹ್ಮೇತಿ ತಗೊಂಡರು
984 ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡ ಹಾಗೆ
985 ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ
986 ಹೆಂಗಸರ ಬುದ್ಧಿ ಸೊಂಟದಿಂದ ಕೆಳಗೆ
987 ಹಾಡ್ತಾ ಹಾಡ್ತಾ ರಾಗ; ಉಗುಳ್ತಾ ಉಗುಳ್ತಾ ರೋಗ
988 ಹಾಡ್ತಾ ಹಾಡ್ತಾ ರಾಗ , ನರಳ್ತಾ ನರಳ್ತಾ ರೋಗ
989 ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು
990 ಹೊಸ ಡಾಕ್ಟರ್‌ಗಿಂತ ಹಳೇ ಕಾಂಪೌಂಡರ್ ವಾಸಿ
991 ಉರಿಯೋ ಗಾಯಕ್ಕೆ ಉಪ್ಪು ಸವರಿದಂತೆ
992 ಕುರು ಮೇಲೆ ಬರೆ ಎಳೆದ ಹಾಗೆ
993 ಸಮುದ್ರದ ನೆಂಟಸ್ತನ ; ಉಪ್ಪಿಗೆ ಬಡತನ
994 ಸಮುದ್ರದ ಮದ್ಯೆ ಇದ್ದರೂ ಉಪ್ಪಿಗೆ ಬರವಂತೆ
995 ಇತರೆ ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿದ್ರು
996 ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು
997 ಉಪ್ಪು ತಿಂದ ಮನೆಗೆ ಎರಡು ಬಗೆಯ ಬಂದ
998 ಅಡಿಕೆ ಕದ್ದ ಮಾನ ಆನೆ ಕೊಟ್ರೂ ಬರೊಲ್ಲ
999 ಅಲ್ಲುಂಟೆ, ಇಲ್ಲುಂಟೆ, ಕಲ್ಲಲ್ಲುಂಟೆ, ಶಿವದಾನ.
1000 ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು.
1001 (ಅವರು) ಚಾಪೆ ಕೆಳಗೆ ತೂರಿದರೆ (ನೀನು) ರಂಗೋಲಿ ಕೆಳಗೆ ತೂರು.
1002 ವೇದ ಸುಳ್ಳಾದ್ರು ಗಾದೆ ಸುಳ್ಳಲ್ಲ.
1003 ಬೆಂಕಿ ಇಲ್ಲದೆ ಹೊಗೆ ಏಳಲ್ಲ
1004 ಹಿತ್ತಲ ಗಿಡ ಮದ್ದಲ್ಲ
1005 ಇರುಳು ಕಂಡ ಭಾವೀಲಿ ಹಗಲು ಬಿದ್ದರು
1006 ಒಲಿದರೆ ನಾರಿ ಮುನಿದರೆ ಮಾರಿ
1007 ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ
1008 ಕಳ್ಳನ್ನ ನಂಬಿದ್ರೂ ಕುಳ್ಳನ್ನ ನಂಬಬಾರದು
1009 ಮೋಟಾಳಿಗೊಂದು ಚೋಟಾಳು
1010 ಮಳ್ಳೀ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದ್ಲಂತೆ
1011 ಹಾಲಿನಲ್ಲಿ ಹುಳಿ ಹಿಂಡಿದಂತೆ
1012 ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು
1013 ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ
1014 ಚಂಡಾಲ ದೇವರಿಗೆ ಚಪ್ಪಲಿ ಸೇವೆ
1015 ಹೆಂಡ ಕುಡಿಯುವ ದೇವರಿಗೆ ಹೇ.. ತಿನ್ನುವ ಪೂಜಾರಿ
1016 ಹನುಮಂತರಾಯ ಹಗ್ಗ ತಿನ್ನುವಾಗ ಪೂಜಾರಿ ಶಾವಿಗೆ ಬೇಡಿದನಂತೆ
1017 ಬಡವರ ಮನೆ ಊಟ ಚೆನ್ನ, ದೊಡ್ಡವರ ಮನೆ ನೋಟ ಚೆನ್ನ
1018 ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗೆ ಬರೆ ಎಳೆದರಂತೆ
1019 ಶಂಖದಿಂದ ಬಿದ್ದರೆ ತೀರ್ಥ
1020 ಈಚಲ ಮರದ ಕೆಲಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ
1021 ಬಾಯಿ ಬಿಟ್ಟರೆ ಬಣ್ಣಗೇಡು
1022 ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು
1023 ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಮಿಂ..ನ ಚಿಂತೆ
1024 ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ
1025 ಊರಿಗೆ ಬಂದವಳು ನೀರಿಗೆ ಬಾರದೇ ಇರುವಳೇ?
1026 ಶಿವಪೂಜೇಲಿ ಕರಡಿ/ಕರಡಿಗೆ ಬಿಟ್ಟ ಹಾಗೆ
1027 ಇದ್ದದ್ದು ಇದ್ದ ಹಾಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ದನಂತೆ
1028 ಒಕ್ಕಣ್ಣನ ರಾಜ್ಯದಲ್ಲಿ ಒಂದು ಕಣ್ಣು ಮುಚ್ಚಿಕೊಂಡು ನಡಿ
1029 ಅಡುಗೆ ಮಾಡಿದವಳಿಗಿಂತ ಬಡಿಸಿದವಳೇ ಮೇಲು
1030 ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
1031 ಸೀರೆ ಗಂಟು ಬಿಚ್ಚೋವಾಗ ದಾರದ ನಂಟು ಯಾರಿಗೆ ಬೇಕು?
1032 ಕುಡಿಯೋ ನೀರಿನಲ್ಲಿ ಬೆರಳಾಡಿಸೋ ಬುದ್ಧಿ (ಕುಡಿಯೋ ನೀರಿನಲ್ಲಿ ... ಅದ್ದುವ ಬುದ್ಧಿ)
1033 ಮೀಸೆ ಬಂದಾಗ ದೇಶ ಕಾಣದು ಮೊ.. ಬಂದಾಗ ನೆಲ ಕಾಣದು
1034 ಅನುಕೂಲ ಸಿಂಧು; ಅಭಾವ ವೈರಾಗ್ಯ
1035 ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೊಲ್ಲ
1036 ಎಲ್ಲಾರ ಮನೇ ದೋಸೇನೂ ತೂತು
1037 ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ
1038 ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ
1039 ಮಾಡಿದೋರ ಪಾಪ ಆಡಿದೋರ ಬಾಯಲ್ಲಿ
1040 ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ
1041 ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಅಂದಂತೆ
1042 ಹೌದಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು ?
1043 ಹೊಳೆ ನೀರಿಗೆ ದೊಣೆನಾಯ್ಕನ ಅಪ್ಪಣೆ ಏಕೆ ?
1044 ರಂಗನ ಮುಂದೆ ಸಿಂಗನೆ ? ಸಿಂಗನ ಮುಂದೆ ಮಂಗನೆ ?
1045 ಜಾಣನಿಗೆ ಮಾತಿನ ಪೆಟ್ಟು; ದಡ್ಡನಿಗೆ ದೊಣ್ಣೆಯ ಪೆಟ್ಟು
1046 ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ
1047 ಬಿರಿಯಾ ಉಂಡ ಬ್ರಾಹ್ಮಣ ಭಿಕ್ಷೆ ಬೇಡಿದ
1048 ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
1049 ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು
1050 ಬೆಟ್ಟ ಅಗೆದು ಇಲಿ ಹಿಡಿದಂತೆ
1051 ಇಲಿ ಬಂತು ಎಂದರೆ ಹುಲಿ ಬಂತು ಎಂದರು
1052 ಇಡಿಯ ಮುಳುಗಿದವನಿಗೆ ಚಳಿಯೇನು?ಮಳೆಯೇನು?
1053 ಬೆಕ್ಕಿಗೆ ಚೆಲ್ಲಾಟ: ಇಲಿಗೆ ಪ್ರಾಣಸಂಕಟ
1054 ಕೋಣೆಯ ಕೂಸು ಕೊಳೆಯಿತು; ಓಣಿಯ ಕೂಸು ಬೆಳೆಯಿತು
1055 ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ
1056 ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ
1057 ದೇವಸ್ಥಾನದಲ್ಲಿ ಊದಿನ ಕಡ್ಡಿ ಹಚ್ಚದಿದ್ದರೂ ಚಿಂತೆಯಿಲ್ಲ; ... ಬಿಡಬೇಡ
1058 ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬಂತು
1059 ಸಂಸಾರ ಗುಟ್ಟು; ವ್ಯಾಧಿ ರಟ್ಟು ಮದುವೇಲಿ ಗಂಡು,
1060 ಸ್ಮಶಾನ ಯಾತ್ರೇಲಿ ಹೆಣವಾಗೋ ಬಯಕೆ
1061 ಐದು ಬೆರಳೂ ಒಂದೇ ಸಮ ಇರೋಲ್ಲ
1062 ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುತ್ತದೆಯೆ ?
1063 ಮುಖ ನೋಡಿ ಮಣೆ ಹಾಕು
1064 ದೀಪದ ಕೆಳಗೆ ಯಾವತ್ತೂ ಕತ್ತಲೇ
1065 ಕುರಿ ಕೊಬ್ಬಿದಷ್ಟೂ ಕುರುಬನಿಗೇ ಲಾಭ
1066 ತಮ್ಮ ಕೋಳಿ ಕೂಗಿದ್ದರಿಂದಲೇ ಬೆಳಗಾಯಿತು ಎಂದುಕೊಂಡರು
1067 ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೆ ?
1068 ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ
1069 ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ ಸಾವಿರ ಕುದುರೆ ಸರದಾರ,
1070 ಮನೆ ಹೆಂಡತಿ ಕಾಸ್ತಾರ ಆಪತ್ತಿಗಾದವನೇ ನೆಂಟ
1071 ಶಂಖದಿಂದ ಬಂದರೇ ತೀರ್ಥ ಹನಿಹನಿಗೂಡಿದರೆ ಹಳ್ಳ;
1072 ತೆನೆತೆನೆಗೂಡಿದರೆ ಬಳ್ಳ ಎಲ್ಲಾ ಜಾಣ; ತುಸ ಕೋಣ
1073 ಕಟ್ಟಿಕೊಂಡವಳು ಕಡೇ ತನಕ; ಇಟ್ಟುಕೊಂಡವಳು ಇರೋ ತನಕ
1074 ಕೆಟ್ಟ ಕಾಲ ಬಂದಾಗ ಕಟ್ಟಿಕೊಂಡವಳೂ ಕೆಟ್ಟವಳು
1075 ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿತಂತೆ
1076 ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ
1077 ಅಂಕೆಯಲ್ಲಿದ್ದ ಹೆಣ್ಣು, ಮಜ್ಜಿಗೆಯಲ್ಲಿದ್ದ ಬೆಣ್ಣೆ ಕೆಡೊಲ್ಲ
1078 ಇದ್ದೋರು ಮೂರು ಜನರಲ್ಲಿ ಕದ್ದೋರು ಯಾರು ?
1079 ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ
1080 ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ ಹೆದರುವವರ ಮೇಲೆ ಕಪ್ಪೆ ಎಸೆದಂತೆ
1081 ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂದರಂತೆ
1082 ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೆ ?
1083 ಅಕ್ಕಸಾಲಿ ಅಕ್ಕನ ಚಿನ್ನಾನೂ ಬಿಡ
1084 ಅರವತ್ತಕ್ಕೆ ಅರಳು ಮರಳು
1085 ಜನ ಮರುಳೋ ಜಾತ್ರೆ ಮರುಳೋ
1086 ಕುಂಟನಿಗೆ ಎಂಟು ಚೇಷ್ಟೆ, ಕುರುಡನಿಗೆ ನಾನಾಚೇಷ್ಟೆ
1087 ಬೊಗಳುವ ನಾಯಿ ಕಚ್ಚುವುದಿಲ್ಲ
1088 ಕೈಗೆಟುಕದ ದ್ರಾಕ್ಷಿ ಹುಳಿ
1089 ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು
1090 ದುಷ್ಟರಿಂದ ದೂರವಿರು
1091 ಒಂದು ಕಣ್ಣಿಗೆ ಬೆಣ್ಣೆ; ಮತ್ತೊಂದು ಕಣ್ಣಿಗೆ ಸುಣ್ಣ
1092 ಕಂಡೋರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ
1093 ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
1094 ಹಂಗಿನ ಅರಮನೆಗಿಂತಾ ಗುಡಿಸಿಲೇ ಮೇಲು
1095 ಮುಸುಕಿನೊಳಗೆ ಗುದ್ದಿಸಿಕೊಂಡಂತೆ ಕದ್ದು ತಿಂದ ಹಣ್ಣು,
1096 ಪಕ್ಕದ ಮನೆ ಊಟ ಎಂದೂ ಹೆಚ್ಚು ರುಚಿ
1097 ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?
1098 ಹಳೆ ಚಪ್ಪಲಿ, ಹೊಸಾ ಹೆಂಡತಿ ಕಚ್ಚೊಲ್ಲ
1099 ರವಿ ಕಾಣದ್ದನ್ನು ಕವಿ ಕಂಡ
1100 ಕೆಟ್ಟು ಪಟ್ಟಣ ಸೇರು
1101 ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
1102 ಕಾಲಿನದು ಕಾಲಿಗೆ; ತಲೆಯದು ತಲೆಗೆ
1103 ವಿದ್ಯೆ ಇಲ್ಲದವನು ಹದ್ದಿಗಿಂತಲೂ ಕಡೆ
1104 ಕನ್ನಡಿ ಒಳಗಿನ ಗಂಟು ಕೈಗೆ ದಕ್ಕೀತೆ ?
1105 ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ
1106 ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪನನ್ನು ಮಾಡಿದಂತೆ
1107 ಮಾಡಬಾರದ್ದು ಮಾಡಿದರೆ ಆಗಬಾರದ್ದೇ ಆಗುತ್ತೆ
1108 ನರಿಗೆ ಹೇಳಿದರೆ ನರಿ ತನ್ನ ಬಾಲಕ್ಕೆ ಹೇಳಿತಂತೆ
1109 ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ
1110 ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೆ ?
1111 ಕೊಟ್ಟಿದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ
1112 ಮದುವೆಯಾಗೋ ಗುಂಡ ಅಂದರೆ ನೀನೇ ನನ್ನ ಹೆಂಡತಿಯಾಗು ಅಂದ ಹಾಗೆ
1113 ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
1114 ತಾನೂ ತಿನ್ನ; ಪರರಿಗೂ ಕೊಡ
1115 ಗಂಡಸಿಗೇಕೆ ಗೌರಿ ದು:ಖ ?
1116 ನಗುವ ಹೆಂಗಸು, ಅಳುವ ಗಂಡಸು ಇಬ್ಬರನ್ನೂ ನಂಬಬಾರದು
1117 ಗುಡ್ಡ ಕಡಿದು ಹಳ್ಳ ತುಂಬಿಸಿ ನೆಲ ಸಮ ಮಾಡಿದ ಹಾಗೆ
1118 ಹನುಮಂತನೇ ಹಗ್ಗ ತಿನ್ನುವಾಗ ಪೂಜಾರಿಗೆ ಶ್ಯಾವಿಗೆ ಬೇಕಂತೆ
1119 ರತ್ನ ತಗೊಂಡು ಹೋಗಿ ಗಾಜಿನ ತುಂಡಿಗೆ ಹೋಲಿಸಿದರು
1120 ಗಾಜಿನ ಮನೇಲಿರೋವ್ರು ಅಕ್ಕಪಕ್ಕದ ಮನೇ ಮೇಲೆ ಕಲ್ಲೆಸೆಯಬಾರದು
1121 ಉಂಡೂ ಹೋದ; ಕೊಂಡೂ ಹೋದ
1122 ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಮಂದಿ ಅಂದನಂತೆ
1123 ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿತಂತೆ
1124 ಹಾಡಿದ್ದೇ ಹಾಡಿದ ಕಿಸಬಾಯಿ ದಾಸ
1125 ಹಸಿ ಗೋಡೆ ಮೇಲೆ ಹರಳು ಎಸೆದಂತೆ
1126 ಊರು ಹೋಗು ಅನ್ನುತ್ತೆ; ಕಾಡು ಬಾ ಅನ್ನುತ್ತೆ
1127 ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲಾ ಹಳದಿಯಂತೆ
1128 ಕಳೆದುಕೊಂಡ ವಸ್ತುವನ್ನು ಕಳೆದುಹೋದ ಜಾಗದಲ್ಲೇ ಹುಡುಕು
1129 ಲಂಘನಮ್ ಪರಮೌಷಧಮ್
1130 ಹಾಲು ಕುಡಿದ ಮಕ್ಕಳೇ ಬದುಕೊಲ್ಲ; ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೇ ?
1131 ಗಾಳಿ ಗುದ್ದಿ ಮೈ ಕೈ ನೋಯಿಸಿಕೊಂಡಂತೆ
1132 ತಲೆ ಗಟ್ಟಿ ಇದೆ ಅಂತ ಕಲ್ಲಿಗೆ ಹಾಯಬಾರದು
1133 ಹಳೇ ಗಂಡನ ಪಾದವೇ ಗತಿ
1134 ಹಬ್ಬದ ದಿನವೂ ಹಳೇ ಗಂಡನೇ ?
1135 ಕಳ್ಳನಿಗೊಂದು ಪಿಳ್ಳೆ ನೆವ
1136 ಅಳೋ ... ಮೇಲೆ ಗಳು ಬಿತ್ತು
1137 ಸನ್ಯಾಸಿ ಬೆಕ್ಕು ಸಾಕಿದ ಹಾಗೆ ತನ್ನ ಬೆನ್ನು ತಾನೇ ತಟ್ಟಿಕೊಂಡ ಹಾಗೆ
1138 ಪಕ್ಕದ ಮನೇಗೆ ಬಿದ್ದ ಬೆಂಕಿ ಬಿಸಿ ತನ್ನ ಮನೇಗೆ ಬೀಳೋವರೆಗೂ ತಾಕಲ್ಲ
1139 ಶೆಟ್ಟಿ ಶೃಂಗಾರ ಆಗೋದ್ರಲ್ಲಿ ಪಟ್ಣ ಕೆಡ್ತು
1140 ಅತ್ತೂ ಕರೆದೂ ಔತಣ ಮಾಡಿಸಿಕೊಂಡಂತೆ
1141 ಕರೆಯದವರ ಮನೆಗೆ ಕಳಸಗಿತ್ತಿಯಾಗು
1142 ಹಂಚಿದವರಿಗೆ ಹಲ್ಲು ಬಾಯಿ
1143 ಕುಣೀಲಾರದ ಸೂಳೆ ನೆಲ ಡೊಂಕು ಅಂದ್ಳಂತೆ
1144 ದಾಕ್ಷಿಣ್ಯಕ್ಕೆ ಬಸಿರಾದರೆ ಹಡೆಯೋದು ಕಷ್ಟ
1145 ಹೊಸದರಲ್ಲಿ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದನಂತೆ
1146 ಕೋತಿ ತಾನು ಕೆಡೋದಲ್ದೆ ವನ ಎಲ್ಲ ಕೆಡಿಸಿತಂತೆ
1147 ಕೈಲಾಗದೋನು ಮೈ ಪರಚಿಕೊಂಡ
1148 ಕಜ್ಜಿ ಹೋದರೂ ಕಡಿತ ಹೋಗಲಿಲ್ಲ
1149 ಆನೆ ದಾನ ಮಾಡಿದವನು ಸರಪಣಿಗೆ ಜಗಳಾಡುವನೆ ?
1150 ಎತ್ತು ಹೊರಬಲ್ಲ ಭಾರವನ್ನು ಕರು ಹೊರಬಲ್ಲುದೆ ?
1151 ದೊಡ್ಡವರು ಹೇಳಿದ ಹಾಗೆ ಮಾಡು; ಮಾಡಿದ ಹಾಗೆ ಮಾಡಬೇಡ
1152 ಏತಿ ಅಂದರೆ ಪ್ರೇತಿ ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಇನ್ನು ನಿನ್ನ ಗಳಗಂಟೆಗೆ
1153 ಶುಭ ನುಡಿಯೋ ಸೋಮ ಅಂದರೆ ಗೂಬೆ ಕಾಣ್ತಲ್ಲೋ ಮಾಮ ಅಂದ ಹಾಗೆ
1154 ಹಲವು ಸಲ ಸಾಯುವವನು ಹೇಡಿ,ವೀರಯೋಧನಿಗೊಂದೇ ಸಲ ಸಾವು
1155 ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
1156 ಮುಟ್ಟಿದೋರ ಮೇಲೆ ಬಿಟ್ಟೆ ನನ್ನ ಪ್ರಾಣ ಮಾಡೋರನ್ನು ಕಂಡರೆ ನೋಡು ನನ್ನ ಸಿರೀನ ಮೊಲ ಎಬ್ಬಿಸಿ ...ಕ್ಕೆ ಕೂತರು
1157 ಹುಟ್ತಾ ಹುಟ್ತಾ ಅಣ್ಣ ತಮ್ಮಂದಿರು; ಬೆಳೀತಾ ಬೆಳೀತಾ ದಾಯಾದಿಗಳು
1158 ಮಗೂನ ಚಿವುಟೋದು, ತೊಟ್ಟಿಲು ತೂಗೋದು
1159 ತಾನು ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು
1160 ವೈದ್ಯರ ಹತ್ತಿರ, ವಕೀಲರ ಹತ್ತಿರ ಸುಳ್ಳು ಹೇಳಬೇಡ
1161 ಆನೆಗೆ ಚಡ್ಡಿ ಹೊಲಿಸಿದ ಹಾಗೆ ಕಪ್ಪೆ ತಕ್ಕಡೀಲಿ ಹಾಕಿದ ಹಾಗೆ
1162 ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
1163 ಕೋತಿ ಕಜ್ಜಾಯ ಹಂಚಿದ ಹಾಗೆ.
1164 ಕಬ್ಬಿಣ ಕಾದಿರುವಾಗಲೇ ಬಡಿಯಬೇಕು
1165 ಅರ್ಧ ಆದ ಕೆಲಸವನ್ನು ಅರಸನಿಗೂ ತೋರಿಸಬೇಡ
1166 ಅತ್ತೆ ಒಡೆದ ಪಾತ್ರೆಗೆ ಬೆಲೆಯಿಲ್ಲ
1167 ಬೇಲಿಯೇ ಎದ್ದು ಹೊಲ ಮೇದಂತೆ
1168 ಪಾಪಿ ಧನ ಪ್ರಾಯಶ್ಚಿತ್ತಕ್ಕೆ
1169 ಒಂದು ಒಳ್ಳೇ ಮಾತಿಗೆ ಸುಳ್ಳೇ ಪ್ರಧಾನ
1170 ಪಾಲಿಗೆ ಬಂದದ್ದು ಪಂಚಾಮೃತ
1171 ಕಂಡ ಕಳ್ಳ ಜೀವ ಸಹಿತ ಬಿಡ
1172 ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ
1173 ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತಾಯ್ತು (ಮುದ್ದಣ)
1174 ಮಕ್ಕಳಿಲ್ಲದ ಮನೆಯಲ್ಲಿ ಅಜ್ಜ ಅಂಬೆಗಾಲಿಟ್ಟ
1175 ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡಿದಾರಕ್ಕೆ.
1176 ಮಕ್ಕಳಿಸ್ಕೂಲ್ ಮನೇಲಲ್ವೇ? (ಕೈಲಾಸಂ) '
1177 ಕೋ' ಅನ್ನೋದು ಕುಲದಲ್ಲಿಲ್ಲ ,'ತಾ' ಅನ್ನೋದು ತಾತರಾಯನ ಕಾಲದ್ದು
1178 ದೇವನೊಬ್ಬ ನಾಮ ಹಲವು
1179 ಸದಾಶಿವನಿಗೆ ಅದೇ ಧ್ಯಾನ
1180 ಬಡ ದೇವರನ್ನು ಕಂಡರೆ ಬಿಲ್ಪತ್ರೇನೂ 'ಭುಸ್' ಅಂತಂತೆ
1181 ಬೆಂದ ಮನೆಗೆ ಹಿರಿದದ್ದೇ ಲಾಭ
1182 ಸಂದೀಲಿ ಸಮಾರಾಧನೆ ಎದ್ದರೆ ಆಳಲ್ಲ ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟ ಹಾಗೆ
1183 ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು
1184 ಮಾಡೋದು ಅನಾಚಾರ ; ಮನೆ ಮುಂದೆ ಬೃಂದಾವನ
1185 ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ
1186 ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾದೀತೇ?
1187 ಮೊದಲಿದ್ದವಳೇ ವಾಸಿ ಎಬ್ಬಿಸಿದರೆ ಉಣ್ಣೋಳು
1188 ಗುಂಪಿನಲ್ಲಿ ಗೋವಿಂದ
1189 ನಾಯೀನ ತಗೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದರೆ ... ಕಂಡು ಇಳಿಬಿತ್ತು
1190 ಚೇಳಿಗೊಂದೇ ಬಸಿರು ; ಬಾಳೆಗೊಂದೇ ಗೊನೆ
1191 ಹೀನ ಸುಳಿ ಬೋಳಿಸಿದರೂ ಹೋಗೋದಿಲ್ಲ
1192 ಮಾಡಿದರೆ ಮನೆ ; ಹೂಡಿದರೆ ಒಲೆ ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟ ಹಾಗೆ
1193 ಉಂಡದ್ದೇ ಉಗಾದಿ ; ಮಿಂದದ್ದೇ ದೀವಳಿಗೆ
1194 ಕಡ್ಡೀನ ಗುಡ್ಡ ಮಾಡು.
1195 ಅತ್ತು ಹೆದರಿಸೋನೊಬ್ಬ
1196 ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು
1197 ತಾನು ಕಳ್ಳ ,ಪರರ ನಂಬ
1198 ಓಡಿ ಹೋಗೋ ಬಡ್ಡಿ ಹಾಲು ಹೆಪ್ಪಿಟ್ಟಾಳೆ?
1199 ಗಡ್ಡಕ್ಕೆ ಬೇರೆ ಸೀಗೇಕಾಯಿ
1200 ನೆಂಟರಿಗೆ ದೂರ ; ನೀರಿಗೆ ಹತ್ತಿರ
1201 ಕುಲ ಸೋಸಿ ಹೆಣ್ಣು ತಗೊಂಡು ಬಾ ; ಜಲ ಸೋಸಿ ನೀರು ತಗೊಂಡು ಬಾ
1202 ಬಾಯಿದ್ದೋರು ಬರಗಾಲದಲ್ಲೂ ಬದುಕಿದರು
1203 ಹೆದರಿದವರ ಮೇಲೆ ಕಪ್ಪೆ ಎಸೆದರು
1204 ಅಳಿಯ ಮನೆ ತೊಳಿಯ
1205 ನಾಯಿ ಮೊಲೇಲಿ ಖಂಡುಗ ಹಾಲಿದ್ದರೇನು, ದೇವರಿಗಿಲ್ಲ ದಿಂಡರಿಗಿಲ್ಲ
1206 ಮಾಘ ಕಾವ್ಯ ಮಗನಿಗೆ ಬೇಡ
1207 ಮುಂದೆ ಬರೋ ಕೋಡಿಗಿಂತ ಹಿಂದೆ ಬರೋ ಬಾಲಾನೇ ವಾಸಿ
1208 ಪಾಯಸ ಮಾಡಿ ನಾಯಿ ಬಾಲದಲ್ಲಿ ತೊಳಸಿದ ಹಾಗೆ
1209 ಆತುರಕ್ಕೆ ಅಜ್ಜಿ ಮೈನೆರೆದಳು
1210 ಮಾಡಬಾರದ್ದು ಮಾಡಿದರೆ, ಆಗಬಾರದ್ದು ಆಗತ್ತೆ
1211 ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿಕೊಂಡಿತು
1212 ದನ ತಿನ್ನುವವನಿಗೆ ಗೊಬ್ಬರದ ಆಣೆ
1213 ಪಾಪಿ ಚಿರಾಯು
1214 ಕಣ್ಣು ಕುರುಡಾದರೆ ಬಾಯಿ ಕುರುಡೇ
1215 ಅಳಿಯನ ಕುರುಡು ಬೆಳಗಾದರೆ ಗೊತ್ತಾಗತ್ತೆ
1216 ಎಲ್ಲರ ಮನೆ ದೋಸೇನೂ ತೂತೇ.
1217 ಚಿನ್ನದ ಸೂಜೀಂತ ಕಣ್ಣು ಚುಚ್ಚಿಕೊಳ್ಳುವುದಕ್ಕೆ ಆಗುತ್ತದೆಯೇ?
1218 ಹಣ ಅಂದರೆ ಹೆಣಾನೂ ಬಾಯಿ ಬಿಡುತ್ತದೆ
1219 ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು
1220 ಅಹಂಕಾರಕ್ಕೆ ಉದಾಸೀನವೇ ಮದ್ದು.
1221 ಎಲ್ಲಾ ಜಾಣ, ತುಸು ಕೋಣ.
1222 ಸಂತೆಗೂ ಮುಂಚೆ ಗಂಟು ಕಳ್ಳರು ನೆರೆದರಂತೆ
1223 ಹುಚ್ಚು ಬಿಟ್ಟ ಹೊರತು ಮದುವೆ ಆಗೋಲ್ಲ; ಮದುವೆ ಆದ ಹೊರತು ಹುಚ್ಚು ಬಿಡಲ್ಲ
1224 ಬೈದು ಹೇಳಿದವರು ಬದುಕಕ್ಕೆ ಹೇಳಿದರು
1225 ನಗೋ ಗಂಡಸನ್ನೂ ಅಳೋ ಹೆಂಗಸನ್ನೂ ನಂಬಬೇಡ
1226 ವ್ರತ ಕೆಟ್ಟರೂ ಸುಖ ಪಡಬೇಕು
1227 ಕೊಂದ ಪಾಪ ತಿಂದು ಪರಿಹಾರ
1228 ಅಗ್ಗದ ಆಸೆಗೆ ಗೊಬ್ಬರ ತಗೊಂಡರು
1229 ಅತ್ತೂ ಕರೆದೂ ಔತಣ ಹೇಳಿಸಿಕೊಂಡರು
1230 ನೆಚ್ಚಿನೆಮ್ಮೆ ಕೋಣನನ್ನೀಯಿತು
1231 ಬಸವನ ಹಿಂದೆ ಬಾಲ,ಸೂಜಿ ಹಿಂದೆ ದಾರ
1232 ಕುದುರೆ ಕಂಡರೆ ಕಾಲುನೋವು
1233 ಖಂಡಿತ ವಾದಿ, ಲೋಕ ವಿರೋಧಿ
1234 ಅತ್ತೆ ಆಸ್ತೀನ ಅಳಿಯ ದಾನ ಮಾಡಿದ
1235 ರಾಮ ರಾಜ್ಯ ಬಂದರೂ ರಾಗಿ ಬೀಸೋದು ತಪ್ಪಲಿಲ್ಲ
1236 ಆಡು ಮುಟ್ಟದ ಸೊಪ್ಪಿಲ್ಲ
1237 ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ
1238 ಹಣ್ಣು ತಿಂದವನು ನುಣುಚಿಕೊಂಡ; ಸಿಪ್ಪೆ ತಿಂದವನು ಸಿಕ್ಕಿ ಹಾಕಿಕೊಂಡ
1239 ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ ಜೀನ ಗಳಿಸಿದ ;
1240 ಜಾಣ ತಿಂದ ಶೆಟ್ಟಿ ಬಿಟ್ಟಲ್ಲೆ ಪಟ್ಣ
1241 ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ
1242 ಹಾವು ಸಾಯಬಾರದು ;ಕೋಲು ಮುರಿಯಬಾರದು
1243 ಕಾಸಿಗೊಂದು,ಕೊಸರಿಗೆರಡು
1244 ಉ.. ಕುಡಿದರೂ ತನ್ನಿಚ್ಚೇಯಿಂದ ಇರಬೇಕು
1245 ಸ್ವತಂತ್ರವೋ, ಸ್ವರ್ಗಲೋಕವೋ
1246 ಊಟ ತನ್ನಿಚ್ಚೆ, ನೋಟ ಪರರಿಚ್ಚೆ
1247 ತಾಳಿದವನು ಬಾಳಿಯಾನು
1248 ಲಾಲಿಸಿದರೆ ಮಕ್ಕಳು ; ಪೂಜಿಸಿದರೆ ದೇವರು
1249 ಹುಚ್ಚಲ್ಲ, ಬೆಪ್ಪಲ್ಲ, ಶಿವಲೀಲೆ
1250 ಅಳಿಯ ಅಲ್ಲ, ಮಗಳ ಗಂಡ
1251 ಹೊಟ್ಟೇಲಿರೋ ಸಿಟ್ಟು ರಟ್ಟೇಲಿಲ್ಲ
1252 ತಲೆಗೆಲ್ಲಾ ಒಂದೇ ಮಂತ್ರವಲ್ಲ
1253 ಬಾಲ ಸುಟ್ಟ ಬೆಕ್ಕಿನ ಹಾಗೆ
1254 ಹಿತ್ತಿಲ ಗಿಡ ಮದ್ದಲ್ಲ
1255 ಸರಿ ಸರಿಯಾಗಿದ್ರೆ, ಪರಿ ಪರಿ ನೆಂಟರು
1256 ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ, ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು
1257 ಹಾಕು ಮಣೆ, ನೂಕು ಮಣೆ, ತಳ್ಳು ಮಣೆ, ಯಾಕ್ಮಣೆ
1258 (ನೀನು)ಮೊಳ ಬಿಟ್ಟರೆ,(ನಾನು) ಮಾರು ಬಿಡುತ್ತೇನೆ
1259 ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರು.
1260 ಕರೆದು ಹೆಣ್ಣು ಕೊಟ್ಟರೆ ಮಲ್ಲೋಗರ ಬಂತಂತೆ.
1261 ಚೇಳಿಗೆ ಪಾರುಪತ್ಯ ಕೊಟ್ಟರೆ ಮನೆಯವರಿಗೆಲ್ಲಾ ಮುಟ್ಟಿಸಿತಂತೆ.
1262 ದಿನಾ ಸಾಯೋರಿಗೆ ಅಳೋರ್ ‍ಯಾರು?
1263 ಊರು ಅಂದ ಮೇಲೆ ಹೊಲಗೇರಿ ಇಲ್ಲದೆ ಇರುತ್ತದೆಯೇ?
1264 ಮೇಯುವುದಕ್ಕೆ ಮುಂದೆ ;ಮೀಯುವುದಕ್ಕೆ ಹಿಂದೆ
1265 ಕಡ್ಡೀನ ಗುಡ್ಡ ಮಾಡು
1266 ನವಿಲಾಡಿತು ಅಂತ ಕೆಂಬೂತ ಪುಕ್ಕ ತೆರೆಯಿತು
1267 ಆಟಕ್ಕುಂಟು,ಲೆಕ್ಕಕ್ಕಿಲ್ಲ
1268 ಹಿರೀಮಗ ಆಗಬೇಡ, ಹಿತ್ತಿಲ ಕದ ಆಗಬೇಡ
1269 ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ
1270 ಆಡಿಕೊಳ್ಳೋರ ಮುಂದೆ ಎಡವಿ ಬಿದ್ದ ಹಾಗೆ
1271 ಹಣವಿದ್ದ ಗಂಡನನ್ನು ಮದುವೆಯಾದರೂ ಋಣವಿದ್ದಷ್ಟೇ ಬಾಳು
1272 ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ
1273 ಹಾಲಿನ ದುಡ್ಡು ಹಾಲಿಗೆ; ನೀರಿನ ದುಡ್ಡು ನೀರಿಗೆ
1274 ತಾಮ್ರದ ಕಾಸು ತಾಯಿ ಮಕ್ಕಳನ್ನು ಬೇರೆ ಮಾಡ್‌ತಂತೆ
1275 ಗಂಡ ಸರಿಯಿದ್ರೆ ಗುಂಡೂ ಪಾವನ
1276 ಬೆಳ್ಳಗಿರೋದೆಲ್ಲಾ ಹಾಲಲ್ಲ ಹೊಳೆಯುವುದೆಲ್ಲಾ ಚಿನ್ನವಲ್ಲ
1277 ಹಾಸಿಗೆ ಇದ್ದಷ್ಟು ಕಾಲು ಚಾಚು
1278 ಉಣ್ಣು ಬಾ ಅಂದ್ರೆ, ಇರಿ ಬಾ ಅಂದ್ರಂತೆ
1279 ಇರುವೆಗೆ ಇರುವೆ ಮೈ ಭಾರ, ಆನೆಗೆ ಆನೆ ಮೈ ಭಾರ
1280 ಮನಸ್ಸಿದ್ದರೆ ಮಾರ್ಗ
1281 ತಲೆಗೆ ಬಿದ್ದ ನೀರು ಕಾಲಿಗೆ ಬೀಳದೆ ಇರುತ್ತದೆಯೇ?
1282 ಅದ್ನೇ ಉಂಡೇನ್ ಅತ್ತೆಮ್ನೋರೇ, ಕದ ತೆಗೀರಿ ಮಾವ್ನೋರೇ ಅಂದ್ರಂತೆ
1283 ಬಡವೆ ಸೀರೆ ಉಡದೆ ಮಾಸಿತು
1284 ಆಕಾಶಕ್ಕೆ ಏಣಿ ಹಾಕಿದ ಹಾಗೆ
1285 ಸೇರಿಗೆ ಸವ್ವಾಸೇರು
1286 ಒಂದಕ್ಕೆರಡು ದಂಡ,
1287 ಹೆಂಡಕ್ಕೆ ರಾಗಿ ದಂಡ
1288 ಹುಟ್ಟು ಗುಣ ಸುಟ್ಟರೂ ಹೋಗಲ್ಲ
1289 ದೇವರಿಲ್ಲದ ಗುಡಿ;ಯಜಮಾನನಿಲ್ಲದ ಮನೆ ಎರಡೂ ಒಂದೇ
1290 ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
1291 ಹೆಣ್ಣು ಚಂದ, ಕಣ್ಣು ಕುರುಡು
1292 ಅಷ್ಟು ಕಂಡ್ಯ ಅಮಾಸೆ ಕಂಡ್ಯ ; ಹೊಟ್ಟೆ ನೋವಲ್ಲಿ ಕಂಡ್ಯ ಹಾಲು ಅನ್ನವ
1293 ನಾಯಿ ಹೆಸರು'ಸಂಪಿಗೆ'ಅಂತ
1294 ನಾಯಿಗೆ ವಯಸ್ಸಾದ್ರೆ ಅಜ್ಜ ಅಂತಾರಾ?
1295 ಆಕೆಗೆ ಬುದ್ಧಿ ಹೇಳಕ್ಕೆ ಆತನ್ನ ಕರೆಸಿದರೆ, ಆತ ಹೆಂಡ್ತಿನ ಬಿಟ್ಟು ಆರು ವರ್ಷ ಆಗಿತ್ತಂತೆ.
1296 ಉತ್ತರನ ಪೌರುಷ ಒಲೆ ಮುಂದೆ;ನಿನ್ನ ಪೌರುಷ ನನ್ನ ಮುಂದೆ
1297 ಕೊಟ್ಟೋನು ಕೋಡಂಗಿ;ಇಸಕೊಂಡೋನು ಈರಭದ್ರ
1298 ಹಲ್ಲಿದ್ರೆ ಕಡಲೆ ಇಲ್ಲ;ಕಡಲೆ ಇದ್ರೆ ಹಲ್ಲಿಲ್ಲ
1299 ಗಂಟೂ ಹೋಯ್ತು;ನಂಟೂ ಹೋಯ್ತು
1300 ಅಪ್ಪನ್ನೇ ಅಪ್ಪ ಅನ್ನದೋನು, ಚಿಕ್ಕಪ್ಪನ್ನ ಅಪ್ಪಾ ಅಂತ ಕರೀತಾನಾ?
1301 ಊರಿಗೊಂದು ದಾರಿಯಾದ್ರೆ, ಎಡವಟ್ಟಂಗೆ ಅವನದ್ದೇ ದಾರಿ
1302 ಹೊಟ್ಟೆ ತುಂಬಿದ ಮೇಲೆ ಹಿಟ್ಟೂ ಕಲ್ಲು
1303 ಒನಕೆ ಮುಂಡು ಚಿಗುರಿದಂತೆ
1304 ಹುಣಿಸೆ ಮರ ಮುದಿಯಾದ್ರೂ ಕಾಯಿ ಹುಳಿ ಹೋಗಲ್ಲ
1305 ಮೂರೂ ಬಿಟ್ಟೋನು, ಊರಿಗೆ ದೊಡ್ಡೋನು
1306 ಭಾವಿಗೆ ಬಿದ್ರೆ, ಸಾಲಿಗ್ರಾಮ ಸಿಗ್‌ತಂತೆ
1307 ನಾಯಿಗೆ ಹೊತ್ತಿಲ್ಲ; ನಿಲ್ಲಕ್ಕೆ ನೆಲೆಯಿಲ್ಲ
1308 ಯಂಕ, ಸೀನ, ನೊಣ ಅಂತ ಮನೇಲಿ ಮೂರೇ ಜನ ಕಂಡೋರ ಮನೆ ರೊಟ್ಟಿಗೆ ಗಿಣ್ಣು ಹಾಲು ಕಾಯಿಸಿದರಂತೆ
1309 ಬೆಣ್ಣೇಲಿ ಕೂದಲು ತೆಗೆದ ಹಾಗೆ
1310 ತುಂಬೆ ಗಿಡಕ್ಕೆ ಏಣಿ ಹಾಕಿದಂತೆ
1311 ಸಾವಿರ ಉಳಿ ಪೆಟ್ಟು, ಒಂದು ಚಿತ್ತಾರ ಕಾಣದಿರೋ
1312 ದೇವರಿಗಿಂತ ಕಾಣೋ ಭೂತಾನೇ ವಾಸಿ
1313 ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು
1314 ಹಿಟ್ಟು ಹಳಸಿತ್ತು; ನಾಯಿ ಹಸಿದಿತ್ತು
1315 ಬಡ್ಡಿ ಬಾಯಿಗಂಜ್ತೀಯೋ, ದೊಡ್ಡೆತ್ತಿನ ಕೋಡಿಗಂಜ್ತೀಯೋ
1316 ತಾಯೀನೇ ತಿಂದೋಳು, ಅತ್ತೇನ ಬಿಟ್ಟಾಳೆಯೇ?
1317 ಒಂದು ಬಿಟ್ಟು ಇನ್ನೊಂದು ಕಟ್ಕೊಂಡ್ರಂತೆ
1318 ಸನ್ಯಾಸಿ ಸಂಸಾರ ಕಟ್ಟಿಕೊಂಡ ಹಾಗೆ
1319 ಶಿಸ್ತುಗಾರ ಪುಟ್ಟಶಾಮಿ ಎದೆ ಸೀಳಿದ್ರೆ ಮೂರಕ್ಷರಾನೂ ಇಲ್ಲ
1320 ತಾಳಕ್ಕೆ ತಕ್ಕ ಮೇಳ
1321 ಕಂಡೋರ ಆಸ್ತಿಗೆ ನೀನೇ ಧಣಿ
1322 ಸೂಳೆ ಕೈಲಿ ಜೋಳ ಕುಟ್ಟಿಸಿದ ಹಾಗೆ
1323 ಕೋಮಟಿ ಕೊಡ ;ಜೈನಿಗ ಬಿಡ
1324 ನಿನ್ನ ಹಿತು(ಮುದ್ದು), ನನ್ನ ತಿಂತು
1325 ಎರಡೂ ಕೈ ಸೇರಿದರೆ ಚಪ್ಪಾಳೆ
1326 ಬೆಟ್ಟ ಮಹಮ್ಮದನ ಬಳಿ ಬರಲ್ಲ, ಮಹಮ್ಮದನೇ ಬೆಟ್ಟದ ಬಳಿ ಹೋಗಬೇಕು
1327 ಹುಲಿಗೆ ಹುಣ್ಣು ಎದ್ದ ಹಾಗೆ
1328 ಹಂಚು ಕಾಣದ ಕೈ ಕಂಚು ಕಾಣ್ತು
1329 ಬರೀ ಕೈಗಿಂತ ವಾಸಿ ಹಿತ್ತಾಳೆ ಕಡಗ
1330 ಮನೇಲಿ ಇಲಿ, ಬೀದೀಲಿ ಹುಲಿ
1331 ಸೂಳೆಗೆ ಮದುವೆ ಮಾಡಿದ ಹಾಗೆ
1332 ಗುರುವಿಗೇ ತಿರುಮಂತ್ರ
1333 ಬೆಳಗೂ ಹೆತ್ತ ಮಗೂನ ನಾಯಿ ಕೊಂಡೊಯ್ಯಿತಂತೆ
1334 ಎದ್ದೋಗೋ ಮಾತು ಬಿದ್ದೋಗಲಿ ಆಡೋಕಾಗಲ್ಲ, ಅನುಭವಿಸಕ್ಕಾಗಲ್ಲ
1335 ಹಾಲಿದ್ದಾಗ ಹಬ್ಬ ;ನೀರಿದ್ದಾಗ ನೇಮ
1336 ತಾಯಿ ಮಾಡಿದ ಹೊಟ್ಟೆ ;ಊರು ಮಾಡಿದ ಕೊಳಗ
1337 ಅಳಿಲ ಸೇವೆ, ಮಳಲ ಭಕ್ತಿ
1338 ಕೆಟ್ಟ ಅಡಿಗೆ ಅಟ್ಟವಳೇ ಜಾಣೆ
1339 ಕಿಡಿ ಇಲ್ಲದೆ ಬೆಂಕಿಯಿಲ್ಲ ;ಕಾರಣ ಇಲ್ಲದೆ ಜಗಳವಿಲ್ಲ
1340 ಗಂಡಸು ಕೂತು ಕೆಟ್ಟ ;ಹೆಂಗಸು ತಿರುಗಿ ಕೆಟ್ಟಳು
1341 ಹತ್ತಿರಕ್ಕೆ ಬಂದರೆ ಹಡಿಕ್ ನಾತ : ದೂರದಲ್ಲಿದ್ದರೆ ಘಮಘಮ
1342 ಹೂ-ದವರು ‌ಯಾರು ಅಂದರೆ ಮಾಸಿದ ಸೀರೆಯವರು.
1343 ಅಟ್ಟದಿಂದ ಬಿದ್ದವನನ್ನು ದಡಿಗೆ ತೆಗೆದುಕೊಂಡು ಚಚ್ಚಿದರು.
1344 ಬಿಟ್ಟಿ ಬಂದದ್ದಾದರೆ ನನಗೂ ಇರಲಿ,ನಮ್ಮ ತಾತಂಗೂ ಇರಲಿ.
1345 ಸಾಯ್ತೀನಿ ಸಾಯ್ತೀನಿ ಅಂದೋಳು ಸಾವಿರ ಮುದ್ದೆ ನುಂಗಿದಳಂತೆ.
1346 ಸಾಯ್ತೀನಿ ಸಾಯ್ತೀನಿ ಅಂತಾ ಸಾವಿರ ಕೋಳಿ ತಿಂದಳಂತೆ
1347 ಸಂತೆ ಸೂಳೆ ನೆಚ್ಚಿಕೊಂಡು ಮನೆ ಹೆಂಡಿರನ್ನ ಬಿಟ್ಟರಂತೆ.
1348 ಮನೆ ದೇವರನ್ನ ಮೂಲೆಗಿಟ್ಟು ಬೆಟ್ಟದ ದೇವರಿಗೆ ಬುತ್ತಿ ಹೊತ್ತಂತೆ.
1349 ಅಡಿ ಅನ್ನಕ್ಕೆ ಅವಳೇ ಇಲ್ಲೆ ; ಪಿಳ್ಳೆ ಪೇರು ರಾಮಕೃಷ್ನ !( ಇದು ತಮಿಳು ಭಾಷೆಯ ಗಾದೆಯಾದರೂ ಕನ್ನಡಿಗರಲ್ಲಿ ಹೆಚ್ಚು ಪ್ರಚಲಿತವಿದೆ)
1350 ದೇಶ ಸುತ್ತು ; ಕೋಶ ಓದು.
1351 ಹೇಳೋರು ಹೆಡ್ಡರಾದರೆ ,ಕೇಳೋರು ಕಿವುಡರೇ?
1352 ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ
1353 ಇದ್ದದ್ದನ್ನು ಇದ್ದಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ
1354 ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು
1355 ತುಂಬಿದ ಕೊಡ ತುಳುಕುವುದಿಲ್ಲ
1356 ಎಲ್ಲರ ಮನೆಯ ದೋಸೆಯೂ ತೂತೆ !
1357 ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರಂತೆ
1358 ಊರಿಗೆ ಊರ ಚಿಂತೆಯಾದರೆ ಅಜ್ಜಿಗೆ ಅರಿವೆ ಚಿಂತೆಯತೆ
1359 ಆಳ್ ಮೇಲ್ ಆಳ್ ಬಿದ್ದು ಗೋಣು ಬರಿದಾಯ್ತು
1360 ಉತ್ತು ಬಿತ್ತಿದ ಭತ್ತವಾದರೂ ಮಳೆಯಿಲ್ಲದೆ ಮೊಳೆಯದು
1361 ಮನೇ ಯಜಮಾನ (ಮನೆಯೊಡೆಯ) ಕುಂತು ಹಾಳು
1362 ಅರಣೆ (= ಹಾವು ರಾಣಿ) ಕಡಿದರೆ ಭರಣಿ
1363 (=ಪಿಂಗಾಣಿ ಮಡಿಕೆ) ಮದ್ದು ಸಾಲದು
1364 ಅಪ್ಪಂಥೋನಿಗೆ ಇಪ್ಪಂತ್ತೊಂದು ಕಾಯಿಲೆ
1365 ಸಾಲ ಕೊಳ್ಳುವಾಗ ಒಂದು ರಾಗ, ಸಾಲ ಹೊಳ್ಳಿ ಕೊಡುವಾಗ ನಾನಾ ರಾಗ
1366 ಬಾಳಿ ಬದುಕಿದವ ಕಲಿ,
1367 ಬಾಳಲಾರದವ ಪಾಠ ಕಲಿತ
1368 ತಳಮಳ ತೀರಲಿಲ್ಲ, ಕಳವಳ ಕಳಿಯಲಿಲ್ಲ
1369 ಮೋಕ್ಷಮಂತ್ರ ತಿಳಿದವನಿಗೆ ವೇದಮಂತ್ರದ ಗೊಡವೆಯೆ?
1370 ಕನಿಗೇಡಿಗೆ(ಸ್ವಾರ್ಥಿಗೆ) ಗತಿ ಇಲ್ಲ
1371 ಅರವಲ್ಲದ್ದು (ಧರ್ಮವಲ್ಲದ್ದು) ಮಾಡಿದರೂ
1372 ತರವಲ್ಲದ್ದು ಮಾಡಬಾರದು ಹಗೆ ಬಿತ್ತಿ ಬೆಂಕಿ(ಹೊಗೆ) ಬೆಳೆದ
1373 ಬರೀ ಮಾತಾಡಿ ಬೈಯ್ಯಿಸಿಕೊಂಡ
1374 ಒಪ್ಪದಾ ಮಾತಾಡಿ ಕೋಪಕ್ಕೆ ತುತ್ತಾದ
1375 ಹಸನಾದ ಮಾತಿಗೆ ಜೀವ ಬೆಸನಾಯ್ತು
1376 ಬಿಟ್ಟವರ ಕಂಡು ಬಿಟ್ಟು ಬಾಳುಗೆಟ್ಟ
1377 ಚಿತ್ತದ ಕಳವಳ ನಿಲ್ಲಿಸಿದವರೇ
1378 ಉತ್ತಮರು ಸಿರಿ ಬಂದ ಕಾಲದಲಿ ಕರದಲಿ ಧರ್ಮ ಬೇಕು
1379 ಎತ್ತ ಹೋದರೂ ಬಿಡದು ಒತ್ತಿ ಕಾಡುವ ವಿಧಿ
1380 ಬರೋಳನ್ನು ನೆಚ್ಚಿ ಇರೋಳನ್ನು ಬಿಟ್ಟ
1381 ಬುದ್ಧಿ ಉಳ್ಳವನಿಗೆ ಕರ್ಮ ತಿದ್ದಿ ಕೊಡುತಿತ್ತು
1382 ಬೆನ್ನಹಿಂದೆ ಬಿದ್ದು (ಓಡಿ)ಬನ್ನ
1383 ಪಟ್ಟ ತಕ್ಕುದನ್ನು ಅರಿಯದ ಓದು ಲಕ್ಷ ಓದಿದರೇನು
1384 ಬಡವನಿಗೆ ಉಳಿದಷ್ಟೆ ಅಭಿಮಾನ
1385 ಬಂದ ಅಥಿತಿಗೆ ಅನ್ನ ಇಕ್ಕದ ಬದುಕು ಯಾತಕ್ಕು ಬೇಡ
1386 ಬಡವ ನೀ ಸೆಣಸಿ ಕೆಡಬೇಡ
1387 ಸರಿಯಾದ ಎಚ್ಚರಿಕೆ ಇಲ್ಲದೆ ಹರಕೆಯ ಕುರಿಯಾದ ಬಂಧುಗಳಿಲ್ಲದಿರೊ ಬಡತನ ಎಂದಿಗೂ ಬೇಡ
1388 ರಸಿಕನ ನುಡಿ ತಿಂಗಳ ಬೆಳಕಿನಂತೆ
1389 ಎಂಜಲ ತಿಂದರೂ ಅಂಜದೆ ತಿನ್ನು
1390 ಅಂಜುತ್ತಾ ಅಳುಕುತ್ತಾ ತಿಂದ ಅಮೃತ ನಂಜು
1391 ಒಳ್ಳಿಹ ಬಳ್ಳಿ ಕಳ್ಳಿಯ ಹಬ್ಬಿತು
1392 ಗಂಧದ ಮರವನ್ನು ಸುಟ್ಟು ಬೂದಿಯ ತಂದು ಪೂಸಿದ
1393 ಮಾಡಿದ ಕರ್ಮ ಹಿಡಿದೊಯ್ಯದೆ ಬಿಡದು
1394 ಜೀವ ಜೀವವ ತಿಂದು ಜೀವಿಸುತಿದೆ
1395 ಜಗವೆಲ್ಲ ನಾ ಬಲ್ಲೆ ಅನ್ನೊ ಮಾತು ಎಲ್ಲರಿಗು ಸಲ್ಲದು
1396 ತನ್ನ ತಾ ಬಲ್ಲವನೆ ಬಲ್ಲವ
1397 ನಕ್ಕು ನುಡಿದವರು ಕಡೆಗೆ ಅಡವಿಯಲಿಕ್ಕಿ ಬರುವರು
1398 ಇಟ್ಟ ವಿಭೂತಿ ಪಟ್ಟದಂತೆ
1399 ಇಟ್ಟ ವಿಭೂತಿ ಅಳಿದರೆ ಚಟ್ಟ ಹತ್ತಿದಂತೆ
1400 ಬಾಲೇರ ಮನಸ್ಸು ನೆಲೆಯಿಲ್ಲ
1401 ಹಬ್ಬಕ್ಕೆ ಹೋಗಿ ತಬ್ಬಿಬ್ಬನಾದ
1402 ಕೆರೆಗೆ ತೊರೆ ಕೂಡಿ ಸರೋವರವಾಯ್ತು
1403 ಅರಿತು ಮಾಡಿದ ಪಾಪ ವಜ್ರದ ಸೆರೆಯಂತೆ
1404 ತನ್ನ ತಾ ತನ್ನಿಂದಲೇ ಅರಿಯಬೇಕು
1405 ಕಡಲಲ್ಲಿ ಪುಟಿದ ತೆರೆ ಕಡಲಲ್ಲೇ ಕರಗಿ ಹೋಯ್ತು
1406 ಬಣ ಬಣ ಬೆಳಕು ಹರಿದಾಗ ಕತ್ತಲು
1407 ಎತ್ತಲೊ ಸಮತೆ ತೊಟ್ಟು(=ಧರಿಸಿ) ಪದವಿ ಮುಟ್ಟು ಇದ್ದೂ
1408 ಉಣ್ಣದವನ ಬಾಯಲ್ಲಿ ಕಡೆಗೆ ಮಣ್ಣು ಬಿತ್ತು
1409 ಇದ್ದ ಕಾಲದಲ್ಲಿ ಅಟ್ಟುಣ್ಣ ಬೇಕು
1410 ದೀನನ ಬೇಡಿ ಬಳಲಿದರೆ ಆತ ಏನು ಕೊಟ್ಟಾನು?
1411 ಅಲ್ಲದವನ ಒಡನಾಟ ಮೊಳಕೈಗೆ ಕಲ್ಲು ಬಡಿದಂತೆ
1412 ಸುಳ್ಳನ ಮಾತು ಕೆಸರೊಳಗೆ ಮುಳ್ಳು ತುಳಿದಂತೆ
1413 ಹೇಮಗೇಡಿ ನೇಮ ಬೆಳಗಿದ ಭಂಗಿ
1414 ರಸ ನೆತ್ತಿಗೇರಿ ಬಿಂಗಿಯಂತೆ ಆಡಿದ
1415 ಊಡದ ಆವಿಗೆ ಉಣ್ಣದ ಕರುವ ಬಿಟ್ಟಂತೆ
1416 ದೈವದ ಸೊಲ್ಲು ಹರಟುವಾತ ಭವದೊಳಗೆ ತೇಲಾಡುತಿದ್ದ
1417 ಉರವಣಿಸಿ ಬರೋ ದುಃಖಕ್ಕೆ ಪರಿಣಾಮ ವೈರಿ
1418 ಗುಣಗೇಡಿ ಒಡನಾಟ ಯಾವಾಲು ದುಃಖದೇಲ್ ಇದ್ದಂತೆ
1419 ಮಾತಿಗೊಂದು ಮಾತು ಬಂತು
1420 ವಿಧಿ ಬಂದು ಆತುಕೊಣ್ತು ಮೆಲ್ಲಗೆ ಹರಿಯೋ ನೀರು ಕಲ್ಲ ಕೊರೆದಿತ್ತು
1421 ಮಾತಿಂದಲೇ ನಗೆನುಡಿ ಮಾತಿಂದಲೇ ಹಗೆ
1422 ಮಾತಿಂದಲೇ ಉಪಚಾರ ಮಾತಿಂದಲೇ ಅಪಚಾರ
1423 ಬನ್ನ ಪಟ್ಟುಣ್ಣೋ ಬಿಸಿ ಅನ್ನಕ್ಕಿಂತ ತಂಗುಳೇ ಲೇಸು
1424 ತನ್ನ ತಾ ತಿಳಿದು ತಾನು ತಾನಾದುದೆ ಉನ್ನತಿ
1425 ಬಸುರಲ್ಲಿ ಬಂದ ಕೂಸು ಮುದ್ದು
1426 ಕೊಂಡು ಕೊಟ್ಟದ್ದೂ ಇಲ್ಲ ಹಂಚಿ ಉಂಡದ್ದೂ ಇಲ್ಲ
1427 ಸ್ವರ್ಗ ಬೇಕು ಅಂದ
1428 ಬಚ್ಚಿಟ್ಟ ಆಸ್ತಿ ಹೊಂಚುತ್ತಿದ್ದವರ ಪಾಲಾಯ್ತು
1429 ನಿದ್ದೆ ಗೈಯೋನ ಹೊತ್ತು
1430 ನುಂಗ್ತು ಹಕ್ಕಿ ತೆನೆ ತಿಂದು ಹಿಕ್ಕೆ ಇಕ್ಕಿ ಹೋಯ್ತು
1431 ಬಡವರ ಮಾತು ನುಡಿ ನುಡಿಗೂ ಬೇಸರ
1432 ಅಂಬಲಿಗೆ ಗತಿ ಇಲ್ಲದವ
1433 ಕಟ್ಟಾಣಿ ರಂಬೆಯ ಬಯಸಿದ
1434 ಒಪ್ಪೊತ್ತು ಕೂಳು ತಪ್ಪಿ ಕಣ್ಣು ಕಾಣಾಕ್ಕಿಲ್ಲ ಕಿವಿ ಕೇಳಾಕ್ಕಿಲ್ಲ
1435 ಸೊಕ್ಕುವುದು ಕೆಕ್ಕರಿಸಿ ನೋಡುವುದು
1436 ಸೇರಕ್ಕಿಯ ಗುಣ
1437 ಭಂಗಿ ರಸ ನೆತ್ತಿಗೇರಿ ಬಿಂಗಿಯಂತಾದ ರಸವಳ್ಳಿ
1438 ಹೆಣ್ಣಿಗೆ ರಸಪೂರಿ ಹಣ್ಣಿಗೆ ಮನ ಸೋಲದವರಿಲ್ಲ
1439 ಕುಲಗೇಡಿ ಮಗ ಹುಟ್ಟಿ ಕುಲಕ್ಕೇ ಮಸಿ ಬಳಿದ
1440 ಹೊತ್ತು ಮೀರಿದ ಮಾತು ತನಗೇ ಕುತ್ತು ತಂತು
1441 ಇದ್ದುದ ಉಣ್ಣದವನ ಬಾಯಾಗೆ ಕಡೆಗೆ ಮಣ್ಣು ಬಿತ್ತು
1442 ಪರರ ಹಂಗಿಸಿ ಮಂಗ ಅನಿಸಿಕೊಂಡ
1443 ಹೆಣ್ಣಿಂದ ರಾವಣ ಕೆಟ್ಟ ಮಣ್ಣಿಂದ ಕೌರವ ಕೆಟ್ಟ
1444 ಬೋನದ ಬುತ್ತಿ ತಪ್ಪಿ ಚಿತ್ತವಲ್ಲಭೆಯನ್ನು ಮರೆಸಿತ್ತು
1445 ಕಲ್ಲಿನಲ್ಲಿ ಕಳೆಯ ನಿಲ್ಲಿಸಿದ ಗುರುವಿನ ಸೊಲ್ಲಿನಲ್ಲೇ ದೈವ
1446 ಭೋಗಿ ಭೋಗದಲ್ಲಿ ನೆರೆದು ರೋಗಿಯಾದ, ಯೋಗಿ ಯೋಗದಲ್ಲಿ ನೆರೆದು ಯೋಗವಾದ
1447 ಅರಿತೂ ಮಾಡಿದ ಪಾಪ ವಜ್ರದ ಸೆರೆಯಂತೆ
1448 ತಾ ನೊಂದಂತೆ ಬೇರೇರ ನೋವನ್ನೂ ಅರಿಯಬೇಕು
1449 ಹೊಲಬನರಿಯದ (ರೀತಿಯಲ್ಲದ) ಮಾತು ತಲೆ ಬೇನೆ: ಹೊಲಬನರಿತು ನುಡಿದ ಮಾತು ಫಲ ಪಕ್ವವಾದಂತೆ
1450 ಪ್ರಸ್ತಕ್ಕಿಲ್ಲದ ಮಾತು ಹತ್ತು ಸಾವಿರವಿದ್ದೇನು
1451 ಸಾಲ ಕೊಳ್ಳುವಾಗ ಹಾಲು ಕುಡಿದಂತೆ, ಸಾಲ ತಿರುಗಿ ಕೊಡುವಾಗ ಕಿಬ್ಬದಿ ಕೀಲು ಮುರಿದಂತೆ
1452 ಇಲ್ಲದ ಕಾಲಕ್ಕೆ ಕಲ್ಲೆದೆ ಬೇಕು
1453 ಅಕ್ಕಸಾಲಿಗನ ಮಗ ಚಿಮ್ಮಟ ಹಿಡಿಯುತ್ತಲೇ ಹೊನ್ನ ಕದ್ದ
1454 ಸಿದ್ದಿಗಿಂತ ಬಲವಿಲ್ಲ ಬುದ್ಧಿಗಿಂತ ಹಿರಿದಿಲ್ಲ
1455 ಅಂಗಾಂಗದಲ್ಲಿ ಪಾಪ ಮಡಗಿಕೊಂಡು ಗಂಗೇಲಿ ಮಿಂದು ಬಂದ
1456 ಮೋಕ್ಷಕ್ಕೆ ಗ್ನಾನ ಬೇಕು ಯೋಗಕ್ಕೆ ಧ್ಯಾನ ಬೇಕು
1457 ಅರುಗೆಟ್ಟ ನಿದ್ದೆ (=ಅರಿವಿಲ್ಲದೆ ಮಲಗಿರುವುದು) ಇರಗೆಟ್ಟು (=ಇರವು ಗೆಟ್ಟು) ಸತ್ತಂತೆ
1458 ಮದ್ದು ಬುದ್ಧಿ ದೈವ ಒಲ್ಲದೆ ತಿದ್ದವು
1459 ಮಂತ್ರ ತಂತ್ರ ದೈವ ಒಲ್ಲದೆ ತನಗೆ ಸ್ವಂತವಲ್ಲ
1460 ದೈವ ಒಲ್ಲದೆ ಆಗೋದಿಲ್ಲ ದೈವ ಒಲಿದರೆ ಹೋಗೋದಿಲ್ಲ
1461 ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ,
1462 ಓದಿದರ ಅರಿವು ಮೇದ ಕಬ್ಬಿನ ರಸ
1463 ವಿದ್ಯೆ ಇಲ್ಲದವನ ಮೊರೆ ಹಾಳೂರ ಹದ್ದಿನಂತೆ
1464 ವಿದ್ಯೆ ಬಲ್ಲವ ಇದ್ದಲ್ಲು ಸಲ್ಲುವ ಹೋಗಿದ್ದಲ್ಲು ಸಲ್ಲುವ ವಿದ್ಯೆ ಬಲ್ಲವ ಎಲ್ಲಿದ್ದರು ಸಲ್ಲುವ
1465 ಕುಚುಕು ಬುದ್ಧಿ ಹೊಕ್ಕವನು ಕೆಟ್ಟ ಒಪ್ಪವಿಲ್ಲದವಳ ನಗೆ ನುಡಿ ನೋಟ ಎಂದೂ ಸಪ್ಪಗೆ
1466 ಒಂದೊಂದು ಕಾಲಕ್ಕೆ ಒಂದೊಂದು ಪರಿ ಸಿರಿತನ
1467 ಇರೂತನ ಹಿರಿತನ ಸಿರಿಹೋದ ಮರುದಿನ ಕಿರಿತನ
1468 ಸಿರಿತನ ಇರೂತನ ಪಿರಿಪಿರಿ ಸಿರಿಹೋದ ಮರುದಿನ ಕಿರಿಕಿರಿ
1469 ಸಿರಿತನ ಇರೂತನ ಹಿರಿತನ ಘನ ಸಿರಿಯಣ್ಣ
1470 ಉಳ್ಳನಕ ಹಿರಿಯಣ್ಣ ಇಲ್ಲಾದಗ ನಡಿಯಣ್ಣ
1471 ಎಂಟು ಹೊನ್ನು ಘನವಾದ ನಂಟು
1472 ತಂತು ಕೂಟಸ್ಥ ಇಲ್ದೋನ ಓದು ಗಿಳಿ ಕಲ್ತ ಪಾಠದಂತೆ
1473 ಒಳ್ಳೇ ರಸವಳ್ಳಿ ಕಳ್ಳೀಗಿಡವನ್ನ ಹಬ್ಬಿತು
1474 ರಸವಳ್ಳಿ ಹೆಣ್ಣು ಒಲಿವಂತೆ ಮಾಡುವುದು
1475 ಎಳ್ಳ ತಿಂದ ಋಣ ತೋಟದ ಕಬ್ಬಿಗಿಂತ, ಪೋಟೆಯ ಜೇನಿಗಿಂತ, ಬಲ್ಲವಳ ಕೂಟ ಲೇಸು
1476 ಕಾಡಿಗೆ ಗಣ್ಣ ಚೆಲುವೆ ಮನೆಗೆ ಕೇಡು ತಂದಳು
1477 ತೋಟದ ಬೇಲಿಯನ್ನು ದಾಟಿ ನೋಡದವರಾರು
1478 ರಂಭೆಯಂಥ ಹೆಣ್ತೀನ ಬಿಟ್ಟು ದೊಂಬಿತಿಯ ಹಿಂದೆ ಹೋದ
1479 ಕಣ್ಣಿಗೆ ಒಪ್ಪವಿಲ್ಲದ ಹೆಣ್ಣು ಸಪ್ಪಗೆ ಕಂಡಳು
1480 ತಿಂಗಳ ಬೆಳಕಾಗಿ ಬಾಳಿನಲ್ಲಿ ತಂಗಾಳಿ ಹಿಂಗದಿರಲಿ
1481 ಮಲ್ಲಿಗೆ ವನದಲ್ಲಿ ತುರುಬಿಲ್ಲದಾಕೆ ಸುಳಿದಂತೆ
1482 ಬಂಡಾಟದ ನಡೆ ಚೆಂದ ಮಿಂಡಾಟದ ನುಡಿ ಚೆಂದ
1483 ಆರಿದೋಗರಕ್ಕೆ ಮೊಸರಿಕ್ಕಿ ಕಾಗೆಗೆ ಸೂರೆಕೊಟ್ಟರು
1484 ದೀಪಕ್ಕೆ ಎಣ್ಣೆಯ ಹುಯ್ಯ್ ಅಂತ ಸುರಿಯುತ್ತಾರೇ
1485 ಹುಯ್ಯಂತ ಕೊಡ ಬೇಡ ಸುಮ್ಮನೆ ಕೂರಲು ಬೇಡ
1486 ಬಂದರು ಬಾ ಅನ್ನದ ದರ್ಪಕುರುಡರ ಸಾವಸವೇ ಬೇಡ
1487 ಮುತ್ತು ಚಿಪ್ಪಲ್ಲಿ ಹುಟ್ಟಿ ಮುಕುಟದ ಮಣಿಯಾಯ್ತು
1488 ನೆರೆದ ಸಿರಿ ಜಾವಕ್ಕೆ ಹರಿದು ಹೋಯಿತು
1489 ಹೊನ್ನಿನ ಶೃತಿ ಕೇಳಿ ಎಂಥೆಂಥಾವರೆಲ್ಲ ಭ್ರಮೆಗೆ ಬಿದ್ದರು
1490 ಬರಿಗೆಟ್ಟ ಬದುಕಿಗಿಂತ ಕೊಂದು ತಿನ್ನೊ ಮಾರಿ ಲೇಸು
1491 ಲಕುಮಿ ತೊಲಗಿದ ಬಳಿಕ ಕುಲ ವೀರವಿದ್ದು ಫಲವಿಲ್ಲ
1492 ಯೋಗಿಗೆ ರಾಗ ಇರಬಾರದು ಭೋಗಿಗೆ ರೋಗ ಇರಬಾರದು
1493 ಮನಸ್ಸಿಲ್ಲದವಳ ಒಡನಾಟ ಮಾತುಮಾತಿಗು ಬೇಸರ
1494 ಲಲನೆಯರ ಒಲುಮೆ ತೊಲಗಿದರೆ ಇಲ್ಲ
1495 ಇಂಬರಿತು ಕೊಡುವಳೆ ರಂಭೆ
1496 ಒಲುಮೆಗೆ ನೋಟ ಬೇಟವೇ ಮೊದಲು
1497 ನೀರೆಯ ಓರೆಗಣ್ಣ ನೋಟಕ್ಕೆ ನಾಡೆಲ್ಲ ಕಾದಡಿತು
1498 ಸಿರಿಯವ್ವನದ ಹೆಣ್ಣು ಸಕ್ಕರೆ ಬೊಂಬೆಯಂತೆ
1499 ಹಾದರ ಹಾಲು ಸಕ್ಕರೆಯಂತೆ, ಬಯಲಾದರೆ, ಬೇವಿನ ಸಾರದಂತೆ
1500 ಚಿತ್ತವಿಲ್ಲದವಳ ಒಡಗೂಟ
1501 ನಾಯ್ ಹೆಣಾನ ಹತ್ತಿ ತಿನ್ನುವಂತೆ
1502 ಕೋರಿ (=ಚೆಂದುಳ್ಳಿ ಚೆಲುವೆ) ಒಲುಮೆ ತನಗೆ ಅನ್ನೋ ಮಾರನಿಗೆ (=ಚೆಲುವಾಂತನಿಗೆ) ಮಾರಿ ಹಿಡಿಯಿತು.
1503 ನಚ್ಚುವುದು ಬೇರೆ ಹೆಣ್ಣು ಒಬ್ಬನ ಮೆಚ್ಚುವುದು ಬೇರೆ
1504 ಹೆಣ್ಣಿನ ಬಗೆ/ಮನಸ್ಸ ಬಲ್ಲೋರಿಲ್ಲ
1505 ಏರಿ ಮ್ಯಾಗಿನ ಪಂಜು ನೀರೊಳಗೆ ಉರಿಯಿತು
1506 ದಾನ ಮಾಡೋಕೆ ಕನಲುವ ಮಾನವ ದಂಡ ಚಕಾರ ಎತ್ತದೆ ತೆರುವ ಕೊಟ್ಟೆ ಅಂತ ಹೇಳಿ ಕೊಡದವನ ಮಾತು ಬೆನ್ನಿಗೆ ಚೂರಿ ಇರಿದಂತೆ
1507 ಹೊತ್ತನ್ನು ಕೊಲ್ಲುವ ಮೈಗಳ್ಳಗಿಂತ ಸತ್ತ ಹೆಣ ಲೇಸು
1508 ಕೊಡದ ಲೋಭಿ ಮಾತು ಕೊಡಲಿ ಪೆಟ್ಟು
1509 ಮಾಡುವವ ಉತ್ತಮ ಆಡಿ ಮಾಡದವ ಅಧಮ ನೀಡುವವ ಉತ್ತಮ ಬೇಡಿದರೂ ನೀಡದವ ಅಧಮ
1510 ಆಗ ಬಾ ಈಗ ಬಾ ಹೋಗಿ ಬಾ ಅನ್ನದೆ ಕೊಡುವ ತ್ಯಾಗವಾಗು
1511 ಇಚ್ಚೆಯ ಅರಿತು ಕೊಟ್ಟ ನುಚ್ಚೊಂದು
1512 ಮಾಣಿಕ್ಯ ಬೇಡಿದರೆ ಇಲ್ಲ ಅನ್ನೋದ್ ಕಷ್ಟ
1513 ನೀಡುವರ ಬೇಡ ಅನ್ನೋದ್ ಕಷ್ಟ
1514 ಕೈಯೆತ್ತಿ ಕೊಡಲಿಲ್ಲ ಮೈಯ್ಯ ದಂಡಿಸಲಿಲ್ಲ
1515 ಪುಣ್ಯದ ಪಾಲು ನನಗಿರಲಿ ಅಂದ
1516 ಕೇಡು ಬರೋ ಕಾಲಕ್ಕೆ ಬುದ್ಧಿಗೇಡು
1517 ಪ್ರಾರಬ್ಧ ಬಂದ ಕಾಲಕ್ಕೆ ಒಂದಲ್ಲ ಒಂದು ಕೇಡು
1518 ಕೋಡಗ ಲಂಕೆಯ ಸುಡುವಾಗ ರಾವಣ ನಾಡ ಕಾಯ್ದಿದ್ದ
1519 ನಾಡೆಂದ್ರ ಕಾಡನ್ನ ಸುಡುವಾಗ ದೇವೇಂದ್ರ ಗಾಳೀನ್ನ ನೋಡೊಕೆ ಕಳಿಸಿದ
1520 ಬಿದ್ದಲ್ಲಿ ಸೋತಲ್ಲಿ ಹೊದಿದ್ದ ಬುದ್ಧಿ ತಪ್ಪಿತು
1521 ಸಾಮವೇದದ ಗಾನ
1522 ಭೂಮಿ ದಾನದ ಫಲವ ಜಂಬೂದ್ವೀಪದವರೇ ಬಲ್ಲರು
1523 ಜಪ-ತಪ ಉಪವಾಸ ಇದ್ದರೆ ಅಂತಕನ ವಿಪರೀತ ತಪ್ಪೀತೆ ]
1524 ಪುಣ್ಯ ಉಂಡು (=ಸುಖ ಅನುಭೋಗಿಸಿ) ತೀರಿತು, ಪಾಪ ತಿಂದು (=ಕಷ್ಟ ಅನುಭವಿಸಿ) ತೀರಿತು
1525 ಮಾಡಿದ ಕರ್ಮ ಬೆನ್ನಾಡಿ ಬಂತು
1526 ಕೇಡು ಬರೋ ಕಾಲಕ್ಕೆ ನಂಟೆಲ್ಲ ಹಗೆಯಾಯ್ತು
1527 ಏನಾದರೇನು ತಾನು ತಾನಾಗದವರೆಗೆ
1528 ದಾನಿಗೆ ದೀನತನ ಸಲ್ಲ, ಗ್ನಾನಿಗೆ ಮೌನ ಸಲ್ಲ
1529 ಸೊಲ್ಲಿನ ಬೇದ ತಿಳಿದ ಕಿರಿಯ ಎಲ್ಲರಿಗೂ ಹಿರಿಯ
1530 ಮೊಸರ ಕಡೆದರೆ ಬೆಣ್ಣೆ ಒಸೆದು ಬಂತು
1531 ತನ್ನ ತಾನರಿತವಗೇ ತ್ರಿಭುವನ ತನ್ನೊಳಗೆ ಕಂಡಿತ್ತು
1532 ದೈವ ಅನ್ನೋದ ಮತ್ತೆಲ್ಲೂ ನೊಡದೆ ತಾನಿದ್ದ ಒತ್ತಿಲೇ ನೋಡು
1533 ಪೆದ್ದ ಮರದ ತುದಿಯೇರಿ ಅಣಿತಪ್ಪಿ ಬಿದ್ದು ಸತ್ತ
1534 ಸಿರಿ ಸೋಂಕಿದವರ ಪರಿ ಬೇರೆ
1535 ಮಾತಿನ ಬೊಮ್ಮ ತೂತಾದ ಮಡಕೆಯ ಪರಿ
1536 ಅರಿವಿನ ಹಾದಿ ಬೇರೆ
1537 ಅನುಭವಿಗೆ ಬೇರೆ ಮತವಿಲ್ಲ
1538 ಕೋಪ ಬೀವುದೇ ಸಮತೆ ಪಾಪ ಅನ್ನೋದಕ್ಕೆ ಕೋಪವೇ ನೆಲೆಗಟ್ಟು
1539 ಕೋಟಿ ಕೊಟ್ಟರೂ ಕೂಟ ಕರ್ಮಿಯ ದುಂದುಗವೇ ಬೇಡ
1540 ಕೊಲ್ಲದಿರುವುದೇ ಧರ್ಮ
1541 ಬಲ್ಲವರಿಗೆ ಅದೇ ಸಮ್ಮತ
1542 ಎಲ್ಲರು ಆಸೆ ಬಿಟ್ಟರೆ ಇಲ್ಲಿಯೇ ಕೈಲಾಸ, ಎಲ್ಲವ ಬಯಸಿ ಭ್ರಮಿಸಿದರೆ ಇಲ್ಲಿಯೇ ನರಕ
1543 ಒಳ್ಳೇರ ಒಡನಿದ್ದು ಕಳ್ಳ
1544 ಒಳ್ಳೇನಾದ ನಲ್ಲೆ ಮುಂದೆ ಸುಳಿದರೆ ಲೋಕದೊಳಗೆ ಒಲ್ಲದವರಾರು
1545 ಹೆಣ್ಣಿನ ಸೊಬಗನು ಕಣ್ಣಾರೆ ಕಂಡು ಬಯಸದ ಅಣ್ಣಗಳು ಅದಾರು
1546 ಕುಚ ಹೇಮ ಶಸ್ತ್ರ ಸೋಂಕಿದಾಗ ಶುಚಿ ವೀರ ಧೀರರು ಅಚಲಿತರಾದರು
1547 ಸಜ್ಜನರ ಸಂಗ ಹೆಜ್ಜೇನು ಸವಿದಂತೆ
1548 ಹೃದಯಶೂನ್ಯರ ಒಲವಿಗಿಂತ ಬಲ್ಲವರ ಕದನವೇ ಲೇಸು
1549 ಕರಣಗಳ ತಡೆದು ನಿಲಬಾರದು
1550 ಒಂದರ ಮೊದಲೊಳಗೆ ಬಂದಿದೆ ಜಗವೆಲ್ಲ
1551 ಬಹುಮನದ ಹಾದಿ ಕೈಗೊಂಡರೆ ಸುಖವಿಲ್ಲ
1552 ನೆತ್ತಿಯಲ್ಲಿ ಅಮೃತ ಹೊತ್ತು ಸಾವಿಗಂಜಿ ಜಗವೆಲ್ಲ ಸುತ್ತಾಡಿದ
1553 ಹೆಣ್ಣಿದ್ದ ಮನೆಗೆ ಎಡತಾಕಿ ಅಣ್ಣಯ್ಯ ಮಣ್ಣಾಗಿ ಹೋದ
1554 ಎಲ್ಲವೂ ತಾನಗ ಬಲ್ಲರೆ ಅದುವೇ ಯೋಗ
1555 ಕಯ್ಯಾರೆ ಮಾಡುವ ಧರ್ಮ ಲೇಸು
1556 ಪಾತ್ರವರಿತು ಜಗದ ಜಾತ್ರೆಗೆ ಸಲ್ಲಬೇಕು
1557 ಉಣವಲ್ಲ ಉಡವಲ್ಲದವನ ಒಡವೆ ಕಂಡವರ ಪಾಲಾಯ್ತು
1558 ಉಟ್ಟು ಉಡಲಾರ ಕೊಟ್ಟು ಸೈರಿಸಲಾರ
1559 ಕೊಟ್ಟುಣ್ಣದ ಗಂಟು ಪರರಿಗೆ ಬಿಟ್ಟು ಹೋದಂತೆ
1560 ಕೊಂದ ಪಾಪ ತಿಂದು ಪರಿಹಾರ (=ಕೊಂದ ಪಾಪ/ಕರ್ಮ ತನಗೆ ಅಂಟಿಕೊಂಡು ಅದನ್ನು ತೊಡೆಯುವುದಕ್ಕೆ ಕಷ್ಟ ಅನುಭವಿಸಬೇಕಾಗುತ್ತದೆ)
1561 ಒಂದೊಂದು ಹನಿ ಬಿದ್ದು ನಿಂತಲ್ಲಿ ಮಡುವಾಯ್ತು
1562 ಊರಿಗೆ ದಾರೀಯ ಯಾರು ತೋರಿದರೇನು
1563 ಯಾರಿಗೂ ತೋರದಂತೆ ದೈವ ತನ್ನೊಳಗೆ ಸಾರಿಹುದು ನಿಜವ
1564 ಹಿಡಿ ಘಟವ ನೆಚ್ಚದಿರು ದಿಟವೇ ಪುಣ್ಯದ ಪುಂಜ ಸಟೆಯೇ ಪಾಪದ ಬೀಜ
1565 ಇಮ್ಮನದಿಂದ ಸುಮ್ಮನೆ ಕೆಟ್ಟೆ (ಕೇಡು)
1566 ಧರ್ಮದ ಹಾದಿ ತಿಳಿದವನಿಗೆ ಓದು ವಾದಗಳೇಕೆ
1567 ಏನೂ ಇಲ್ಲದವಗೆ ಭಯವಿಲ್ಲ
1568 ಬೆರಳು ತೋರುದ್ರೆ ಅಂಗೈನೇ ನುಂಗಿದಂತೆ
1569 ಅಕ್ಕಿ ಉಂಡವ ಹಕ್ಕಿ, ಜೋಳ ಉಂಡವ ತೋಳ
1570 ಅಕ್ಕಿಲ್ಲ ಬ್ಯಾಳಿಲ್ಲ ಅಕ್ಕನ್ನ ಕರತರಬೇಕು
1571 ಅಡೆ ಮಡಕೆಯಲ್ಲ ಇಡೆ ಸಟ್ಟುಗವಲ್ಲ
1572 ಅಣ್ಣಿಗೇರ್‍ಯಾಗ ಎಣ್ಣೆ ಮೊಣಕಾಲ ಮಟ್ಟ
1573 ನೆರಲೆ ಹಣ್ಣು ಬಲು ಕಪ್ಪು ತಿಂದು ನೋಡಿದರೆ ಬಲು ಸವಿ
1574 ಅತ್ತೆ ಮಾಡಿದ್ದು ಅಡಕಲಗೂಡಿಗೆ ಸೊಸೆ ಮಾಡಿದ್ದು ಬೆಳಕಿಗೆ
1575 ಅತ್ತೆಯ ಮನಿಯಾಗ ಮುತ್ತಾಗಿ ಇರಬೇಕು
1576 ಅಧರಕ್ಕೆ ಕಹಿ ಉದರಕ್ಕೆ ಸಿಹಿ
1577 ಅನ್ನ ಹಾಕಿದ ಮನೆಗೆ ಕನ್ನ ಹಾಕಿದಂತೆ
1578 ಅಪ್ಪನ ಬಟ್ಟೆಯಾದರು ಚಿಪ್ಪಿಗ ಬಿಡ
1579 ಅಯ್ಯೋ ಅಂದರೆ ಅರೆ ವಯಸ್ಸು
1580 ಅರಿತೂ ಮಾಡಿದ ಪಾಪ ವಜ್ರಲೇಪ
1581 ಅಲಗಿನ ಗಾಯಕ್ಕಿಂತ ಗಲಗಿನ ಗಾಯ ಹೆಚ್ಚು
1582 ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು
1583 ಅಲಾ ಬಲಾ ಪಾಪಿ ತಲೀ ಮ್ಯಾಲೆ ಸಿಡಿಲು ಬಡಿದರೆ ಅಂಗೈಲಿ ಹಿಡಿದ ಕೊಡೆ ಕಾಪಾಡಿತೇ
1584 ಆಗುವ (ಅಡುವ) ವರೆಗಿದ್ದು ಆರುವವರೆಗೆ ಇರಲಾರರೇ
1585 ಆಟ ಕೆಟ್ಟರೆ ದೀವಟಿಗೆಯವನ ಸುತ್ತ
1586 ಆಡಿ ಉಂಡ ಮೈ ಅಟ್ಟು ಉಂಡೀತೇ?
1587 ಆಡೋಣ ಬಾ ಕೆಡಿಸೋಣ ಬಾ
1588 ಹೊತ್ತು ಕಳೆದರೆ ಮತ್ತೆ ಬಾರದು
1589 ಹೊತ್ತಿರುವಾಗಲೇ ಗೊತ್ತು ಸೇರಬೇಕು
1590 ಹೊಕ್ಕು ಬಳಸಿದರೆ ನಂಟು
1591 ಹೆಣ್ಣು ಹುಟ್ಟಿದರೊಂದು ಹುಣ್ಣು ಹುಟ್ಟಿದ ಹಾಗೆ
1592 ಹೆಣ್ಣು ಹಡೆದವರ ಮನೆ ನುಣ್ಣಗೆ ಗಂಡು ಹಡೆದವರ ಮನೆ ತಣ್ಣಗೆ
1593 ಹೆಣ್ಣು ಜಲ್ಮಕ್ಕೆ ಹೆಜ್ಜೆಗೊಂದು ಮುಳ್ಳು
1594 ಹೆಣ್ಣಿನ ಬಾಳು ಕಣ್ಣೀರಿನ ಗೋಳು
1595 ಹೆಣ್ಣು ಉರಿಸಿದ ಮನೆಯ ಹೆಗ್ಗಂಬ ಉರಿಯಿತು
1596 ಹೆಂಡತಿಯಿಲ್ಲದ ಮನೆ ತಂತಿಯಿಲ್ಲದ ವೀಣೆ
1597 ಹೆಂಡತಿಯಿಲ್ಲದ ಮನೆ ದೇವರಿಲ್ಲದ ಗುಡಿ
1598 ಹೂವ ತರುವ ಮನೆಗೆ ದೇವ ಹುಲ್ಲು ಹೊರುವ
1599 ಹುಣ್ಣು ಮಾದರೂ ಕಲೆ ಮಾದೀತೇ
1600 ಹುಚ್ಚು ಹೊಳೇ ಬರುವಾಗ ಹೂವಿನ ತೋಟ ಇದಿರೇ
1601 ಹಾಲಿಗಿಂತ ಕೆನೆ ರುಚಿ
1602 ಹಾರೋ ಹಕ್ಕಿ ಪುಕ್ಕ ಎಣಿಸಿದಂತೆ
1603 ಹಿಂದಲ ಮಾತು ಮರಿ ಮುಂದಲ ಬಾಳು ಅರಿ
1604 ಹಾಯೋ ಎತ್ತು ಹಾಯ್ದರೂ ಬಂತು ಬಿಟ್ಟರೂ ಬಂತು
1605 ಹಾದಿ ತಪ್ಪಿದವನಿಗೆ ಹದಿನೆಂಟು ಹಾದಿ
1606 ಮರ ಕಡಿದು ಮೈಮೇಲೆ ಹಾಕಿಕೊಂಡ್ರಂತ
1607 ಹರ ಮುನಿದರೆ ಗುರು ಕಾಯ್ವ
1608 ಹರಕಿನಲ್ಲಿ ಇಲಿ ಕಡಿಯಿತು
1609 ಹತ್ತು ಮಂದಿ ಹುಲ್ಲು ಕಡ್ಡಿ ಒಬ್ಬನ ತಲೆ ಭಾರ
1610 ಹಂಪ್ಯಾಗ ಇರೂದಕ್ಕಿಂತ ತನ್ನ ಕೊಂಪ್ಯಾಗ ಇರೂದ್ ಲೇಸು
1611 ಹಂಗು ತೊರೆದ ಮೇಲೆ ಲಿಂಗದ ಪರಿವೆ ಏನು
1612 ಸೇರಿಗೆ ಸವ್ವಾ ಸೇರು
1613 ಸನ್ಯಾಸಿಗೆ ಸುಳ್ಳು ಹೇಳಿದರೂ ನಿಜದ ತಲೆಯ ಮೇಲೆ ಹೊಡೆದಂಗೆ ಹೇಳಬೇಕು
1614 ಮೊಂಡ ಮಾವನಿಗೊಬ್ಬ ಭಂಡ ಅಳಿಯ
1615 ಸಿಟ್ಟು ಬಂದರೆ ಪಡಿ ಹಿಟ್ಟು
1616 ಮುಕ್ಕು ಸರಿದರೆ ಒತ್ತಣ್ಣ ಒತ್ತಿದರೆ ಸರಿಯಣ್ಣ
1617 ಸತ್ತು ಕೊಳ್ಳೋ ಸೊರ್‍ಗಕ್ಕಿಂತ ಬದುಕಿ ಕೊಳ್ಳೋ ನರಕ ಲೇಸು
1618 ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು
1619 ಬಂಗಾರಕ್ಕೆ ಕುಂದಣವಿಟ್ಟಂತೆ ವಜ್ರಕ್ಕೆ ಸಾಣಿ ಹಿಡಿದಂತೆ
1620 ಲಕ್ಷ್ಮಿ ಚಂಚಲೆ
1621 ಮೊಂಡ ಕೊಡಲಿ ರಟ್ಟೆಗೆ ಮೂಲ
1622 ಮೂಗು ಹಿಡಿದರೆ ಬಾಯಿ ತಾನೇ ತೆರೆಯುವುದು
1623 ಮುದುಕೀ ನಿನ್ನಾಟ ಮುಂದೈತಿ
1624 ಮುಚ್ಚಿ ಹೇಳಿದರೆ ಒಗಟು ಬಿಚ್ಚಿ ಹೇಳಿದರೆ ಒರಟು
1625 ಮಾಳಿಗೆ ಮನೆ ಬೇಕು ಜೋಳಿಗೆ ಹಣ ಬೇಕು ಮಾದೇವನಂಥಾ ಮಗ ಬೇಕು ಗೌರಿಯಂಥಾ ಸೊಸೆ ಬೇಕು
1626 ಮಾರಿಯ ಹೋತ ತೋರಣದ ಚಿಗುರು ಬಯಸಿತಂತೆ
1627 ಮಾತಿಗೆ ಮಾತುಗಳ ಓತು ಸಾಸಿರ ಉಂಟು
1628 ಮಳೇ ನೀರ ಬಿಟ್ಟು ಮಂಜಿನ ನೀರಿಗೆ ಕೈ ಒಡ್ಡಿದಂತೆ
1629 ಮರಗಿಣಿಯ ಕೂಡೆ ಆಡಿ ಅರಗಿಣಿ ಕೇಟ್ಟಿತು
1630 ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಹಿಡಿದರು
1631 ಮಂಡಕ್ಕಿ ತಿಂದ ಮಗ ಮದ್ದಾನೆ ತರುಬಿದ ಮೃಷ್ಟಾನ್ನ ತಿಂದ
1632 ಮಗ ನೊಣ ಝಾಡಿಸಿದ
1633 ಮಂದಾಳಿಗೊಂದು ಮುಂದಾಳು ಭಲೆ ಜಟ್ಟಿ ಅಂದ್ರೆ ಕೆಮ್ಮಣ್ಣು ಮುಕ್ಕಿದ
1634 ಬೇಕೆಂಬುದು ಬಾಳು ಸಾಕೆಂಬುದು ಸಾವು
1635 ಬೇವು ಕಾಗೆಗೆ ಇಂಪು ಮಾವು ಕೋಗಿಲೆಗೆ ಇಂಪು
1636 ಬೆಲ್ಲದ ಸಿಪಾಯಿ ಮಾಡಿ ಇರುವೆ ಹತ್ತರ ಕಳಿಸಿದ
1637 ಬೆಣ್ಣೆಯೊಳಗಿನ ಕೂದಲು ತೆಗೆದಂತೆ
1638 ಬೆಕ್ಕಿಗೆ ಬೆಣ್ಣೆ ಕಂಡಿತು ಬಡಿಗೆ ಕಾಣಲಿಲ್ಲ
1639 ಬೆಕ್ಕಿನ ಕನಸಿನಲ್ಲಿ ಬರೀ ಇಲಿಗಳೇ
1640 ಬೆಂದ ಮನೇಲಿ ಹಿರಿದದ್ದೇ ಲಾಭ
1641 ಸುಡುವ ಮನೆಯ ಗಳ ಹಿರಿದಂತೆ
1642 ಬೆಂಕಿಗೆ ಕರಗದ್ದು ಬಿಸಿಲಿಗೆ ಕರಗೀತೇ
1643 ಬೀಳು ಭೂಮಿಗೆ ಬೀಜ ದಂಡ
1644 ಬೀಜ ಸಣ್ಣದಾದರೆ ಮರ ಸಣ್ಣದೋ
1645 ಆನೆಗೂ ಅಡಿ ತಪ್ಪೀತು
1646 ಆನೆಯ ಹೊಟ್ಟೆಗೆ ಅಂಬಲಿ ಬಿಟ್ಟ ಹಾಗೆ
1647 ಆನೆ ಬರುವುದಕ್ಕು ಮುನ್ನ ಗಂಟೆ ಸದ್ದು
1648 ಆನೆ ಹೋದದ್ದು ದಾರಿ ಹಾವು ಹರಿದದ್ದು ಅಡ್ಡದಾರಿ
1649 ಮಳೆಗಾಲದೇಲಿ ಚಿಗಿಯೂದಿಲ್ಲ ಬೇಸಿಗೇಲಿ ಒಣಗೂದಿಲ್ಲ
1650 ಹುಟ್ಟುವವನ ಅಣ್ಣ ಬೆಳೆಯುವವನ ತಮ್ಮ
1651 ಆಸೆ ಮಾತು ಕೊಟ್ಟು ಬಾಸೆ ತಪ್ಪಬಾರ್‍ದು
1652 ಇಕ್ಕಟ್ಟಾದರೂ ತನ್ನ ಗುಡಿಲೇ ಚಂದ
1653 ಇಕ್ಕಲಾರದ ಕೈ ಎಂಜಲು ಇಟ್ಟ ಶಾಪ ಕೊಟ್ಟವನಿಗೆ ತಟ್ಟೀತು ಇಲ್ಲು ಪೋಗಂಡ ಅಲ್ಲು ಪೋಗಂಡ
1654 ಇದ್ದ ಮಕ್ಕಳೇ ಎಣ್ಣೆ ಬೆಣ್ಣೆ ಕಾಣದಿರುವಾಗ ಮತ್ತೊಂದು ಕೊಡೋ ದೇವರೇ ಅಂದಂತೆ
1655 ಈರಣ್ಣನ ಮುಂದೆ ಬಸ್ಸಣ್ಣ ಕುಂತಂತೆ
1656 ಉಪಾಸ ಇದ್ರೂ ಉಪದ್ರ ಇರಬಾರ್‍ದು
1657 ಕಲ್ಲ ನಾಗರ ಕಂಡರೆ ಹಾಲೆರೆವರು ದಿಟ ನಾಗರ ಕಂಡರೆ ಕೊಲ್ಲೆಂಬರು ಉಂಬುವ ಜಂಗಮ ಬಂದರೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನ ಹಿಡಿಯೆಂಬರು
1658 ಉಪಕಾರಕ್ಕೋಗಿ ಉಪದ್ರ ಬಂತು
1659 ಉರಗಕ್ಕೆ ಹಾಲೆರೆದರೆ ಅದು ತನ್ನ ಗರಳ್ವ ಬಿಡಬಲ್ಲುದೇ
1660 ಹಾವಿಗೆ ಹಾಲೆರೆದರೇನು ಫಲ
1661 ಗಾಯದ ಮೇಲೆ ಬರೆ ಕೊಟ್ಟಂತೆ
1662 ಎಟ್ಟ್ (ಹಟಮಾರಿ) ಗಂಡಗೆ ಖೊಟ್ಟಿ ಹೆಂಡತಿ
1663 ಎತ್ತು ಮಾರಿದವಗೆ ಹಗ್ಗದ ಆಸೆಯೇ
1664 ಎದ್ದವನು ಗೆದ್ದಾನು
1665 ತಲೆ ಸೀಳಿದರೆ ಎರಡಕ್ಷರ ಇಲ್ಲ
1666 ಎರವಿನವರು ಎರವು ಕಸಗೊಂಡರೆ ಕೆರವಿನಂತಾಯಿತು
1667 ಮೋರೆ ಎಲ್ಲಮ್ಮನ ಗುಡ್ಡದಾಗ ಮುಲ್ಲಾಂದೇನು
1668 ಎಲ್ಲಾ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
1669 ಒಂದು ದುಡ್ಡು ಕೊಡುವೆ ಹಾಡು ದಾಸಯ್ಯ ಎರಡು ದುಡ್ಡು ಕೊಡುವೆ ಬಿಡು ದಾಸಯ್ಯ
1670 ಒಡೆದ ಹಾಲು ಹೆಪ್ಪಿಗೆ ಬಂದೀತೇ
1671 ಕೆತ್ತೆಂದರೆ ಕೆತ್ತು ಮೆತ್ತೆಂದರೆ ಮೆತ್ತು
1672 ಒಳ್ಳೊಳ್ಳೆಯವರು ಉಳ್ಳಾಡುವಾಗ ಗುಳ್ಳವ್ವ ಪಲ್ಲಕ್ಕಿ ಬೇಡಿದಳಂತೆ
1673 ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂತಂತೆ
1674 ಕಣ್ಣೆರಡಾದರೂ ನೋಟ ಒಂದೇ
1675 ಕರ್ಮ ಕಳೆಯುವವರೆಗೆ ಮರ್ಮದಲ್ಲಿರು
1676 ಕೆಲಸಿಲ್ಲದ ಗಂಡು ಕರೀ ಒನಕೆ ತುಂಡು
1677 ಕರುಬಿದವರ ಮನೆ ಬರಿಮನೆ
1678 ಕಲ್ತ ಕೈ ಕದ್ದಲ್ಲದೆ ಬಿಡದು
1679 ಕೂಡಿದ ಗಂಡನನ್ನಾದರೂ ಬಿಟ್ತೇನು ಕಲ್ತದ್ದ ಬಿಡಲಾರೆ
1680 ಕಲ್ತದ್ ಬಿಟ್ಟೆಯಾ ಕಲಕೇತಿ ಅಂದ್ರೆ ಊರು ಬಿಟ್ರು ನಾ ಕಲ್ತದ್ ಬಿಡಲ್ಲ ಅಂದ್ಲಂತೆ
1681 ಕಳ್ಳನ ಕೈಯಲ್ಲಿ ಕೀಲಿಕೈ ಕೊಟ್ಟಂತೆ
1682 ಕಳ್ಳನ ಕಾವಲಿಟ್ಟ ಹಾಗೆ
1683 ಕಾಲಿಗೆ ಬಿದ್ದು ಕಾಲುಂಗರ ಬಿಚ್ಚಿಕೊಂಡರಂತೆ
1684 ಕಾವಿ ಉಟ್ಟವರೆಲ್ಲಾ ಸನ್ಯಾಸಿಗಳಲ್ಲ ಬೂದಿ ಬಳಿದವರೆಲ್ಲ ಬೈರಾಗಿಗಳಲ್ಲ
1685 ಕುದಿಯುವುದರೊಳಗಾಗಿ ಮೂರು ಸಾರಿ ಹಳಸಿದಂತೆ
1686 ಕೂತುಕೊಂಡು ಹೇಳುವವನ ಕೆಲಸ ಊರು ಮಾಡಿದರೂ ಸಾಲದು
1687 ಕೂಳಿಗೆ ಕೇಡು ಭೂಮಿಗೆ ಭಾರ
1688 ಕೆಟ್ಟು ಪಟ್ಟಣ ಸೇರು ಇಟ್ಟು ಹಳ್ಳಿ ಸೇರು
1689 ಕೆಟ್ಟು ಬದುಕಬಹುದು ಬದುಕಿ ಕೆಡಬಾರದು
1690 ಕೆಟ್ಟು ಸೈರಿಸಬಲ್ಲೆ ಕೊಟ್ಟು ಸೈರಿಸಲಾರೆ
1691 ಕೆರೆಯ ನೀರ ಕೆರೆಗೆ ಚೆಲ್ಲಿ
1692 ವರ ಪಡೆದುಕೊಂಡಂತೆ ಕೈಲಾದವರು ಮಾಡುತ್ತಾರೆ ಕೈಲಾಗದವರು ಆಡುತ್ತಾರೆ
1693 ಕೊಂಕಿಗೆ ಕೊಂಕೇ ಮದ್ದು
1694 ಕೊಡಲಾರದ ಹೆಣ್ಣಿಗೆ ತೆರವ ಕೇಳಿದರಂತೆ
1695 ಕೊಡುವ ದೇವರು ಬಡವನೇ?
1696 ಕೊಡುವವನ ಕೈ ಯಾವಾಲು ಮೇಲೆ
1697 ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ
1698 ಕೋಪ ಪಾಪ ತಂತು ಪಾಪ ತಾಪ ತಂತು
1699 ಗಂಡ ಹೆಂಡಿರ ಜಗಳದಲ್ಲಿ ಮಕ್ಕಳು ಜಗಳ ಕಲಿತವು
1700 ಗಳಕ್ಕನೇ ಉಂಡವ ರೋಗಿ, ಗಳಿಗೆ ಉಂಡವ ಭೋಗಿ
1701 ಗಾಣವಾಡದೆ ಎಣ್ಣೆ ಬಂದೀತೇ
1702 ಗುಡಿಸಿದ ಮೇಲೆ ಕಸವಿರಬಾರದು ಬಡಿಸಿದ ಮೇಲೆ ಹಸಿವಿರಬಾರದು
1703 ಗುರುವಿಗೆ ತಿರುಮಂತ್ರ
1704 ಸಂತೇಲಿ ಮನೇ ಮಾಡಿ ಸದ್ದಿಗಂಜೂದೇ
1705 ಗೆದ್ದವ ಸತ್ತ ಸೋತವ ಸತ್ತ
1706 ಚೌಲದಾಗ ದೌಲು ಮಾಡು
1707 ಜನಕ್ಕಂಜದಿದ್ದರೂ ಮನಕ್ಕಂಜಬೇಕು
1708 ಹುಟ್ಟಿದವಗೆ ಸಾವು ತಪ್ಪದು
1709 ತನಗಿಲ್ಲದ್ದು ಎಲ್ಲಿದ್ದರೇನು
1710 ತನ್ನ ತಾನರಿತರೆ ತನ್ನರಿವೆ ಗುರು
1711 ತನ್ನ ನೆರಳಿಗೆ ತಾನಂಜಿ ನಡೆಯಬೇಕು
1712 ತಬ್ಬಳಿ ದೇವರಿಗೆ ತಂಗಳ ನೈವೇದ್ಯ
1713 ತಲೆ ಬಲಿಯಿತು ಅಂತ ಕಲ್ಲಿಗೆ ಹಾಯಬಾರದು
1714 ತವರೂರಿನ ದಾರೀಲಿ ಕಲಿಲ್ಲ ಮುಳ್ಳಿಲ್ಲ
1715 ತಾ ಅನ್ನೋದು ನಮ್ಮ ತಲತಲಾಂತರಕ್ಕೂ ಇರಲಿ, ಕೊ ಅನ್ನೋದು ನಮ್ಮ ಕುಲಕೋಟಿಗೂ ಬೇಡ
1716 ತಾನು ತಿಂದದ್ದು ಮಣ್ಣು ಹೆರರಿಗೆ ಕೊಟ್ಟದ್ದು ಹೊನ್ನು
1717 ತಾ ಬಲವೋ ಜಗ ಬಲವೋ
1718 ತುಟ್ಟಿಯಾದರೂ ಹೊಟ್ಟೆ ಕೇಳದು
1719 ತುಟಿ ಸುಮ್ಮನಿದ್ದರೂ ಹೊಟ್ಟೆ ಸುಮ್ಮನಿರದು
1720 ತೊಳೀಲಿಲ್ಲ ಬಳೀಲಿಲ್ಲ ಮೂಗೇಕೆ ಮಸಿಯಾಯ್ತು
1721 ದನಿಯಿದ್ದವರೂ ಅತ್ತರೂ ಚಂದ ನಕ್ಕರೂ ಚಂದ
1722 ದುಡಿದದ್ದು ಉಂಡೆಯೋ ಪಡೆದದ್ದು ಉಂಡೆಯೋ
1723 ದೂಫ ಹಾಕಿದರೆ ಪಾಪ ಹೋದೀತೇ
1724 ನಡೆವರು ಎಡವದೇ ಕುಳಿತವರು ಎಡವುವರೇ
1725 ನಾ ಬಡವ ವಾಲಗ ಸಾವಕಾಶ ಊದು ಅಂದಂತೆ
1726 ನೇಮ ಉಳ್ಳವನ ಕಂಡರೆ ಯಮನಿಗೂ ಭಯ
1727 ನೆಂಟ ನೆರವಲ್ಲ ಕುಂಟ ಜೊತೆಯಲ್ಲ
1728 ಪಡುವಣ ಮನೆಗೆ ಮೂಡಣ ದೀಪ
1729 ಪಿಶಾಚಿ ಬಿಟ್ಟರೂ ನಿಶಾಚರ ಬಿಡ
1730 ಹೆಣ್ಣು ಹೊನ್ನು ಮಣ್ಣು ಇನ್ನೊಬರ ಕೈ ಸೇರಿದರೆ ಹೋದಂತೆ
1731 ಬಳ್ಳಿಗೆ ಕಾಯಿ ಭಾರವೇ
1732 ಬಾಡಿಗೆ ಎತ್ತೆಂದು ಬಡಿದು ಬಡಿದು ಹೂಡಬೇಕೆ
1733 ಬಾಳಿ ಬದುಕುವರಿಗೆ ಹಾಳೂರ ಸುದ್ದಿ ಯಾಕೆ
1734 ಬಿಳಿ ಆನೆ ಸಾಕಿದ ಹಾಗೆ
1735 ನಿಷ್ಠೆ ಇಲ್ಲದೆ ಎಷ್ಟು ಪೂಜೆ ಮಾಡಿದರೂ ನಷ್ಟ
1736 ನಿಷ್ಠೆ ಇಲ್ಲದವನಿಗೆ ದೈವ ಬಟ್ಟ ಬಯಲು
1737 ಕಂಡವರ ಕಂಡು ಕೈಕೊಂಡ ಧರ್ಮ ದಂಗು ಬಡಿಸಿತು
1738 ಕಂಡವರ ಕಂಡು ಕೈಕೊಂಡ ಕೆಲಸ ಕೆಂಡವಾಯ್ತು
1739 ನಿಷ್ಠೆ ಇದ್ದಲ್ಲಿ ದೈವ ಕಲ್ಲುಗುಂಡೊಳಗೆ ಅಡಗಿತ್ತು
1740 ಭಕ್ತಿ ಉಳ್ಳಾತಗೆ ಮುಕ್ತಿ ,ಶಕ್ತಿ ಉಳ್ಳಾತಗೆ ಭುಕ್ತಿ
1741 ಅರಿತು ಮಾಡದ ದಾನ ತೆರೆದು ನೋಡದ ಕಣ್ಣಂತೆ
1742 ಕಾಯ ಕಮಲವೇ ಸೆಜ್ಜೆ ಜೀವ ರತುನವೇ ಜ್ಯೋತಿ
1743 ತತ್ವಮಸಿ ಅಂತ ಅನ್ನೋದ್ ಕಲಿ ಅಂದ್ರೆ ತುತ್ತು ಸವಿ ಅಂತ ಉಣ್ನೋದ್ ಕಲ್ತ
1744 ಜ್ಯೋತಿಯ ನೆಲೆ ಅರಿತವನೇ ಯೋಗಿ
1745 ನೆತ್ತರು ಉಕ್ಕಿದರೆ ಜೀವ ತೊಡಕೀತು
1746 ವಿಧಿ ಕಾಣದ ಎಡೆಗಳಿಲ್ಲ
1747 ದಾರವಿದ್ದರೆ ಮುತ್ತು ಹಾರವೆಂದನಿಸಿತ್ತು
1748 ಕಾಲ ತಪ್ಪಿದ ಬಳಿಕ ನೂರು ಮಾಡಿದರು ಹಾಳು
1749 ಮಿಂದು ಮೈಲಿಗೆ ಉಡೊದಾದ್ರೆ ಜಳಕದ ದಂದುಗವೇಕೆ
1750 ಮಾಡಿದ ಪಾಪ ದಾನದಿಂದ ಹೋದೀತೆ
1751 ಮಿಂದರೆ ಮೈಯ ಕೊಳೆ ಹೋಯ್ತು
1752 ಹಿರಿದು ಪಾಪ ಮಾಡಿ ಗಂಗೆಗೆ ಹರಿದರು
1753 ಅಕ್ಕರ ಕಲ್ತು ತನ್ನ ಒಕ್ಕಲನ್ನೇ ತಿನ್ನೊದ್ ಕಲ್ತ
1754 ವಿಧಿ ಮುನಿದರೆ ಸರಿ ಬೆಸವಾಯ್ತು
1755 ಅರಸು ಒಲಿದರೆ ಸಿರಿ ದೆಸೆಯಾಯ್ತು
1756 ಆಳಿದ ದೊರೆ ಹುಸಿದರೆ ಅಲ್ಲಿಂದ ಹೇಳದೆ ಹೋಗಬೇಕು
1757 ಬಲ್ಲಿದರೊಡನೆ ಸೆಣಸಿ ಮಾತಾಡಿದರೆ ಅಲ್ಲೇ ಬಂತು ಕೇಡು
1758 ಮಂತ್ರಿ ಇಲ್ಲದ ರಾಜ್ಯ ಕೀಲು ಮುರಿದ ಯಂತ್ರದಂತೆ
1759 ಕತ್ತಿ ವೈರಿ ಕೈಯಲ್ ಕೊಟ್ಟು ಬೆನ್ನ ಮಾಡಿ ನಿಂತನಂತೆ
1760 ಕೊಂಡಾಡುತ್ತ ಜಗದ ಇಚ್ಚೆಯನ್ನೆ ನುಡಿದರೆ ಜಗವೆಲ್ಲ ತನ್ನ ಮುದ್ದಾಡುತಿತ್ತು
1761 ನಾಡಳಿದು ನಾಡೊಡೆಯನಿಗೆ ಕೇಡು ನಾಡೊಡೆಯ ಅಳಿದು ನಾಡಿಗೆಲ್ಲ ಕೇಡು
1762 ಯಾರನ್ನ ನಂಬಿದರು ಆರೈದು ನಂಬಬೇಕು
1763 ಬಾಳಿಕೆಗೆಟ್ಟು ಬೆಸಲಾದ ಚೇಳಿನಂತಾದ ಹುಟ್ಟು ಸಾವು ದಿಟವೇ ಆದರೂ ಹೆಜ್ಜೆ ಹೆಜ್ಜೆಗೆ ಅಂಜೂದ್ ತಪ್ಪಲಿಲ್ಲ
1764 ಜಿನ ಧರ್ಮವೇ ಜೀವಧರ್ಮ ಮೂಕ ಪ್ರಾಣಿಯ ಕೊಲ್ಲದ್ದು ಜೀವಧರ್ಮ
1765 ನೀರೆಯ ಓರೆಗಣ್ಣ ನೋಟಕ್ಕೆ ನಾಡೆಲ್ಲ ಇರಿದಾಡಿತು
1766 ಲಲನೆಯರ ಒಲುಮೆ ತೊಲಗಿದರೆ ಇಲ್ಲ ಇಂಬರಿದು ಕೊಡುವಳೆ ರಂಭೆ
1767 ತಾನೊಲಿದ ಮಂಕು ಮಾಣಿಕ್ಯ
1768 ಹಾಸಿಗೆ ಇದ್ದಷ್ಟು ಕಾಲು ಚಾಚು
1769 ಬೀದೀಲಿ ಹೋಗೋ ಮಾರೀನ ಮನೆಗೆ ಕರೆದಂತೆ
1770 ಮಾಡಿದ್ದುಣ್ಣೋ ಮಾರಾಯ
1771 ಉಪ್ಪು ತಿಂದ ಮ್ಯಾಲೆ ನೀರ ಕುಡಿಯಲೇಬೇಕು
1772 ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ
1773 ಆಗೋದೆಲ್ಲಾ ಒಳ್ಳೇದಕ್ಕೆ
1774 ಗಂಡ ಹೆಂಡಿರ ಜಗಳ ಉಂಡು ಮಲಗುವತನಕ
1775 ಕಾಲಕ್ಕೆ ತಕ್ಕಂತೆ ನಡೆಯಬೇಕು,
1776 ತಾಳಕ್ಕೆ ತಕ್ಕಂತೆ ಕುಣಿಯಬೇಕು
1777 ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ
1778 ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ ಕಣ್ಣು ಕುರಿ ಮ್ಯಾಲೆ
1779 ಪಾಲಿಗೆ ಬಂದದ್ದು ಪಂಚಾಮೃತ
1780 ಸಾವಿರ ಸುಳ್ಳು ಹೇಳಿ ಮದುವೆ ಮಾಡು
1781 ಪರದಾನಿ ಹೂಸು ಕುಡಿದ ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
1782 ಇಟ್ಟುಕೊಂಡಾಕಿ ಇರೂತನ ಕಟ್ಟಿಕೊಂಡಾಕಿ ಕಡೀತನ
1783 ಇತ್ತಿತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ತುಕೊಂಡ
1784 ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ ಗವುಜಿ ಗದ್ದಲ ಏನೂ ಇಲ್ಲ,
1785 ಗೋವಿಂದ ಭಟ್ಟ ಬಾವೀಲಿ ಬಿದ್ದ ಇದ್ದವರು ಇದ್ದ ಹಾಗೆ
1786 ಸಿದ್ಧಾ ದೇವಿಗೆ ಸಿಡಿಲು ಬಡೀತು
1787 ಅಂದು ಬಾ ಅಂದ್ರೆ ಮಿಂದು ಬಂದ
1788 ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ
1789 ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ
1790 ಅಜ್ಜ! ಮದುವೆ ಅಂದ್ರೆ ನನಗೋ ಅಂದ
1791 ಅಕ್ಕ ನನ್ನವಳಾದ್ರೆ ಬಾವ ನನ್ನವನೇನು
1792 ಅಕ್ಕನ ಹಗೆ ಬಾವನ ನೆಂಟು
1793 ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು
1794 ಅಕ್ಕ ಬರಬೇಕು ಅಕ್ಕಿ ಮುಗೀಬಾರದು
1795 ನೀರೆ ನಿನ್ನ ಮಾತು ನಿಜವೇನೆ
1796 ನೀರ ಕಡಿದರೆ ಬೆಣ್ಣೆ ಬಂದಾದೇನೆ
1797 ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
1798 ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು
1799 ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ
1800 ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ
1801 ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
1802 ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು
1803 ಅಡವಿಯ ದೊಣ್ಣೆ ಪರದೇಸಿಯ ತಲೆ
1804 ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ
1805 ಅರ್ತಿಗೆ ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ
1806 ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ
1807 ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು
1808 ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು
1809 ಅರಗಿನಂತೆ ತಾಯಿ, ಮರದಂತೆ ಮಕ್ಕಳು
1810 ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ
1811 ಅರಮನೆಯ ಮುಂದಿರ ಬೇಡ, ಕುದುರೆಯ ಹಿಂದಿರಬೇಡ
1812 ಅರಸನ ಕುದುರೆ ಲಾಯದಲ್ಲೆ ಮುಪ್ಪಾಯಿತು
1813 ಅರೆಪಾವಿನವರ ಅಬ್ಬರ ಬಹಳ
1814 ಅಳಿವುದೇ ಕಾಯ ಉಳಿವುದೇ ಕೀರ್ತಿ
1815 ಆವು ಕಪ್ಪಾದ್ರೆ ಹಾಲು ಕಪ್ಪೇನು
1816 ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
1817 ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
1818 ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
1819 ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
1820 ಆಡೋದು ಮಡಿ ಉಂಬೋದು ಮೈಲಿಗೆ
1821 ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ
1822 ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ
1823 ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
1824 ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ
1825 ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ
1826 ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು
1827 ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
1828 ಆಸೆಗೆ ಕೊನೆಯಿಲ್ಲ
1829 ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
1830 ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು
1831 ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ
1832 ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ
1833 ಸಾದೆತ್ತಿಗೆ ಎರಡು ಹೇರು (ಹೊರೆ)
1834 ಹೆತ್ತವರು ಹೆಸರಿಕ್ಕ ಬೇಕು
1835 ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟಗೆ ಬಾಳೋಕೆ ಛೀ-ಗುಟ್ಟೋರಿರಬೇಕು
1836 ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು
1837 ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ ಕೊಡೋದು
1838 ಕೊಳ್ಳೋದು ಗಂಡಂದು, ಮಜ ಮಾಡೋದು ಹೆಂಡ್ರುದ್ದು
1839 ಊರಿಗಾಗದ ಗೌಡ, ಮೇಲೆರಗುವ ಗಿಡುಗ
1840 ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು
1841 ತೇಗಿ ತೇಗಿ ಬೀಗಿ ಬಿದ್ದ ತಾಮ್ರದ ನಾಣ್ಯ
1842 ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ
1843 ಹೋದ ಬದುಕಿಗೆ ಹನ್ನೆರಡು ದೇವರು ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
1844 ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ
1845 ಇಕ್ಕಲಾರದ ಕೈ ಎಂಜಲು
1846 ಇಕ್ಕುವಳು ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಿಕ್ಕು
1847 ಇಕ್ಕೇರಿ ತನಕ ಬಳಗ,
1848 ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ ಹೆಸರಿಗೆ ಹೊನ್ನ ಹೆಗ್ಗಡೆ,
1849 ಎಸರಿಗೆ ಅಕ್ಕಿ ಇಲ್ಲ
1850 ಇಡೀ ಮುಳುಗಿದರೂ ಮೂಗು ಮೇಲೆ ಇದ್ದ
1851 ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು
1852 ಇದ್ದದ್ದು ಹೇಳಿದರೆ ಹದ್ದಿನಂತ ಮೋರೆ ಆಯಿತು
1853 ನಿಜ ಆಡಿದರೆ ನಿಷ್ಠೂರ ಇದ್ದದ್ದು ಹೋಯಿತು
1854 ಮದ್ದಿನ ಗುಣದಿಂದ ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ
1855 ತನ್ನೂರಲಿ ರಂಗ, ಪರೂರಲಿ ಮಂಗ ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ
1856 ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು
1857 ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ
1858 ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡಬಾರದು
1859 ಎಡದ ನೆತ್ತಿಗೆ ಬಡಿದರೆ ಬಲದ ನೆತ್ತಿಗೆ ತಾಕಿತು
1860 ಮದುವೆ ಮಡಿನೋಡು ಮನೆ ಕಟ್ಟಿ ನೋಡು
1861 ಮಾತು ಬೆಳ್ಳಿ, ಮೌನ ಬಂಗಾರ
1862 ಕೈ ಕೆಸರಾದ್ರೆ ಬಾಯಿ ಮೊಸರು
1863 ಮಾತು ಮನೆ ಮುರೀತು, ತೂತು ಒಲೆ ಕೆಡಿಸ್ತು
1864 ತುಂಬಿದ ಕೊಡ, ತುಳುಕೋದಿಲ್ಲ
1865 ಕಾಮಾಲೆ ಕಣ್ಣೊನಿಗೆ ಕಂಡಿದ್ದೆಲ್ಲ ಹಳದಿ
1866 ನೀ ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಅಂದ
1867 ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ
1868 ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
1869 ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ
1870 ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು
1871 ಹಾಳೂರಿಗೆ ಉಳಿದವನೇ ಗೌಡ
1872 ಹಿರೀ ಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ
1873 ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
1874 ಜನ ಮರುಳೋ ಜಾತ್ರೆ ಮರುಳೋ
1875 ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
1876 ಕಾರ್ಯವಾಸಿ ಕತ್ತೆ ಕಾಲು ಕಟ್ಟು
1877 ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು
1878 ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ
1879 ಕೋಪದಲ್ಲಿ ಕುಯ್ದ ಮೂಗು ಶಾಂತವಾದಾಗ ಬಂದೀತೇ
1880 ಕೋತಿ ತಾನೂ ಕೆಡೋದಲ್ದೆ ವನಾನೂ ಕೆಡಿಸ್ತು
1881 ಕೊಟ್ಟದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ
1882 ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ
1883 ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ
1884 ಕುಂಬಾರಂಗೆ ವರುಷ; ದೊಣ್ಣೆಗೆ ನಿಮಿಷ
1885 ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ
1886 ನಾಯಿ ಬೊಗಳಿದರೆ ದೇವಲೋಕ ಹಾಳೇನು
1887 ನಾಯಿ ಬಾಲ ಡೊಂಕು
1888 ಓದಿ ಓದಿ ಮರುಳಾದ ಕೂಚು ಭಟ್ಟ
1889 ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
1890 ಪಾಪಿ ಸಮುದ್ರ ಹೊಕ್ಕರು ಮೊಣಕಾಲುದ್ದ ನೀರು
1891 ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ
1892 ಸಾವಿರ ಸುಳ್ಳು ಹೇಳಿ ಒಂಡು ಮಡುವೆ ಮಾಡು
1893 ಬೇಲಿನೆ ಎದ್ದು ಹೊಲ ಮೇಯಿತಂತೆ
1894 ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ
1895 ಎತ್ತು ಈಯಿತು ಅನ್ದರೆ ಕೊಟ್ಟಿಗೆಗೆ ಕಟ್ಟು ಎನ್ದರಂತೆ
1896 ಗಂಡ ಹೆಂಡಿರ ಜಗಳ ಉನ್ಡು ಮಲಗೊ ತನಕ
1897 ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
1898 ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ
1899 ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು
1900 ತಿಣಕಿದ ಮುಳ್ಳಿನಿಂದ ಮುಳ್ಳು ತೆಗೆ,
1901 ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ
1902 ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ
1903 ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ
1904 ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ
1905 ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ?
1906 ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು
1907 ವಶಗೆಡದೆ ಹಸಗೆಡಲ್ಲ
1908 ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ
1909 ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ
1910 ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ
1911 ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು
1912 ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು
1913 ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ
1914 ಮುದ್ದೆ ಉಣ್ತಾ ಮಜ್ಜಿಗೆ ಓಡಾಟ
1915 ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ
1916 ಒಂದೇ ರಟ್ಟೆ ಮುರಿದು ರೊಟ್ಟಿ ತಿನ್ನು
1917 ಕಟ್ಟೆ ಹಾಕಿ ಅನ್ನ ಉಣ್ಣು
1918 ರಸ ಬೆಳೆದು ಕಸ ತಿನ್ನಬೇಡ,
1919 ಹಸ ಕಟ್ಟಿ ಮೊಸರಿಗೆ ಪರದಾಡಬೇಡ
1920 ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ
1921 ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
1922 ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು
1923 ರಾಜ ಇರೋತನಕ ರಾಣಿ ಭೋಗ
1924 ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ
1925 ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ
1926 ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
1927 ಲಕ್ಕಿ ಸೊಪ್ಪಾದರೂ ಲೆಕ್ಕದ ಮುದ್ದೆ ಉಣಬೇಕು
1928 ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು
1929 ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ
1930 ಲಿಂಗ ಹರಿದ ಮೇಲೆ ಜಂಗಮನ ಹಂಗೇನು
1931 ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು
1932 ವಿನಾಶ ಕಾಲಕ್ಕೆ ವಿಪರೀತ ಬುದ್ಧಿ
1933 ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
1934 ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ
1935 ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ
1936 ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ
1937 ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು
1938 ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ
1939 ಅತ್ತೆ ಸತ್ತ ಮೇಲಿನ ಸೊರ್ಗಕ್ಕಿಂತ ಇದ್ದ ನರಲೋಕ ವಾಸಿ
1940 ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ
1941 ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ
1942 ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು
1943 ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ
1944 ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ
1945 ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ
1946 ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ
1947 ಸಂತೆ ಕಟ್ಟೋಕು ಮೊದಲೇ ಸೇರಿದರು
1948 ಗಂಟು ಕಳ್ಳರು ಸಂತೇಲಿ ಮಂತ್ರ ಹೇಳಿದಂಗೆ
1949 ಸಂದೀಲಿ ಸಮಾರಾಧನೆ ಮಾಡ್ದಂಗೆ
1950 ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
1951 ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ
1952 ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ
1953 ಸಾವಿರ ಕೊಟ್ಟರೂ ಸವತಿ ಮನೆ ಬೇಡ
1954 ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ
1955 ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ
1956 ಸುಳ್ಳು ದೇವರಿಗೆ ಕಳ್ಳ ಪೂಜಾರಿ
1957 ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ
1958 ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ
1959 ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು
1960 ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ
1961 ಹಗಲು ಅರಸನ ಕಾಟ ಇರುಳು ದೆವ್ವದ ಕಾಟ
1962 ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ
1963 ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ
1964 ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು
1965 ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ
1966 ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ
1967 ಹತ್ತು ತಿಂಗಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ
1968 ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ
1969 ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ
1970 ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು
1971 ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ
1972 ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ
1973 ಹರೆಯಕ್ಕೆ ಬಂದಾಗ ಹಂದಿನೂ ಚಂದ
1974 ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
1975 ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು
1976 ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು
1977 ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ
1978 ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ
1979 ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು
1980 ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ
1981 ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ
1982 ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ
1983 ಹಾಳೂರಿಗೆ ಉಳಿದೋನೇ ಗೌಡ,
1984 ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ
1985 ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
1986 ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ
1987 ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ
1988 ಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ್ಣ ಕೇಳಿದಂಗೆ
1989 ಹೆಡ್ಡಾಳಾದ್ರೂ ದೊಡ್ಡಾಳು ಮೇಲು
1990 ಹೇಳೊದು ವೇದ ಹಾಕೊದು ಗಾಳ
1991 ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
1992 ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
1993 ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ
1994 ಕೊಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ
1995 ನಿಯತ್ತಿಲ್ಲದೋರಿಗೆ ಬರಕತ್ತಿಲ್ಲ
1996 ನಡತೆ ಕಲಿಯೋದು ಏರುಬಂಡೆ ನಡತೆ ಕೆಡೋದು ಜಾರುಬಂಡೆ
1997 ಎಂಟು ವರ್ಷಕ್ಕೆ ನನ್ನ ಮಗ ದಂಟಾದ
1998 ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ
1999 ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
2000 ಮುಲಾಜಿಗೆ ಬಸುರಾಗಿ ಹೇರೋಕೆ ತಾವಿಲ್ಲ
2001 ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ,
2002 ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು
2003 ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
2004 ತಾಳ ತಪ್ಪಿದ ಬಾಳು, ತಾಳಲಾರದ ಗೋಳು
2005 ಉಂಡ ಮನೆ ಜಂತೆ ಎಣಿಸಬಾರದು,
2006 ತುಪ್ಪತೊಗೆ ತಿನ್ನೋರ ರಂಪ ನೋಡು
2007 ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
2008 ಹಣ ಎರವಲು ತಂದು ಮಣ ಉರುವಲು ಕೊಂಡ
2009 ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು
2010 (ಅನ್ಯ) ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ
2011 ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ
2012 ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವೇ
2013 ಹೊಳೆಗೆ ಸುರಿದರೂ ಅಳೆದು ಸುರಿ
2014 ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ
2015 ಉಂಬಾಗ ಉಡುವಾಗ ಊರೆಲ್ಲ ನೆಂಟರು
2016 ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ
2017 ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
2018 ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
2019 ಉತ್ತಮನು ಎತ್ತ ಹೋದರೂ ಶುಭವೇ
2020 ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
2021 ಊರು ದೂರಾಯಿತು ಕಾಡು ಹತ್ತರಾಯಿತು
2022 ಊರೆಲ್ಲ ಸೂರೆ ಆದ ಮೇಲೆ ಕೋಟೆ ಬಾಗಿಲ ಮುಚ್ಚಿದರು
2023 ಎಡವಿದ ಕಾಲು ಎಡವುದು ಹೆಚ್ಚು
2024 ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ
2025 ಎರಡೂ ಕೈ ತಟ್ಟಿದರೆ ಸದ್ದು
2026 ಎಲ್ಲರೂ ಪಲ್ಲಕ್ಕಿಲಿ ಕೂತರೆ ಹೊರೋರು ಯಾರು
2027 ಎಲ್ಲಾ ಬಣ್ಣ ಮಸಿ ನುಂಗಿತು
2028 ಏರಿದವ ಇಳಿದಾನು ಏಳರಲ್ಲಿ ಬರಲೋ? ಎಪ್ಪತ್ತರಲ್ಲಿ ಬರಲೋ?
2029 ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ
2030 ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು
2031 ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು
2032 ಬಾಯಲ್ಲಿ ಬೆಲ್ಲ ಕರುಳು ಕತ್ತರಿ
2033 ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ
2034 ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ
2035 ಕಡು ಕೋಪ ಬಂದಾಗ ತಡಕೊಂಡವನೇ ಜಾಣ
2036 ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
2037 ಕಪ್ಪರ ತಿಪ್ಪೇಲಿಟ್ಟರೆ ತನ್ನ ವಾಸನೆ ಬಿಟ್ಟೀತೇ
2038 ಕಬ್ಬು ಡೊಂಕಾದ್ರೆ ಸವಿ ಡೊಂಕೇ
2039 ಕಲ್ಲು ಇದ್ದಾಗ ನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ
2040 ಕಿಡಿಯಿಂದ ಕಾಡ ಸುಡಬಹುದು
2041 ಕೀಲು ಸಣ್ಣದಾದರೂ ಗಾಲಿ ನಡೆಸುತ್ತದೆ
2042 ಕುರುಡು ಕಣ್ಣಿಗಿಂತ ಮೆಳ್ಳೆ ಗಣ್ಣು ವಾಸಿ
2043 ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು.
2044 ಹಾದಿ ಹಣವಡ್ಡ ಹಾದರಗಿತ್ತಿ ಮನೆ ಯಾವುದು.
2045 ಹಾರಾಡೋ ಅಪ್ಪುಂಗೆ ತೂರಾಡೋ ಮಗ ಹುಟ್ದಂಗೆ
2046 ಹಾರುವಯ್ಯನಿಗೆ ಹರಕೆ ಕಟ್ಟಿದಕ್ಕೆ ಹಳೇ ಪರಕೇಲಿ ಹೋಡ್ದ ಹಾಗೆ
2047 ಹಾರುವ ಆಳಲ್ಲ, ಬಾಳೆ ದಡಿಯಲ್ಲ
2048 ಹಾರುವರ ಮೋರೆಯಾದರೂ ನೀರಿನಲ್ಲಿ ತೊಳೆಯದಿದ್ದರೆ ನಾರದೆ ಇದ್ದೀತೆ.
2049 ಹಾರೋ ಹಕ್ಕಿಗೆ ಹಾದರ ಕಟ್ಟಿದರು.
2050 ಹಾರ‍್ಸೋನೋ ತೀರ‍್ಸೋನೋ.
2051 ಹಾಲು ಕಾಯಿಸ್ಕೊಂಡು ನಾನಿದ್ದೆ ಹಲ್ಲು ಕಿರ‍್ಕೊಂಡು ನೀ ಬಂದೆ.
2052 ಹಾಲುಕ್ಕಿದ ಮನೇಲಿ ಮೇಲ್‍ಗರೀಲಿ. (ಕಾಯಿಲೆ)
2053 ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ
2054 ರಾಯ ಸತ್ತರೂ ಹೆಣ ; ನಾಯಿ ಸತ್ತರೂ ಹೆಣ .
2055 ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು.
2056 ಮನೆಮನೆ ಮುದ್ದೆ ಮಾರಿಗುಡಿ ನಿದ್ದೆ
2057 ತಕ್ಕವನಲ್ಲಿ ಹೊಕ್ಕಿದ್ದರೆ ತಕ್ಕಷ್ಟಾದರೂ ಸಿಕ್ಕುವುದು
2058 ತಕ್ಕಡಿ ಬಲ್ಲದೇ ಮನೆಯ ಬಡತನವ
2059 ತಕ್ಕಡಿ ಸ್ವರೂಪ ತಕ್ಕವನೇ ಬಲ್ಲ
2060 ತಗಣೇ ಉಪದ್ರವ ಮಗಳಿಗೂ ಬಿಡಲಿಲ್ಲ
2061 ತಗಲುಗಾರನಿಗೆ (= ದಗಲ್ ಬಾಜ್) ಬಗಲ ಮೇಲೆ ಜ್ಞ್ಯಾನ
2062 ತಗ್ಗಿದವ ಎಂದಿಗೂ ನುಗ್ಗಾಗ ತಗ್ಗು ದವಸಕ್ಕಾಗಿ ಹಗ್ಗ ಕೊಂಡು ಕೊಂಡ
2063 ತಗ್ಗು ಗದ್ದೆಗೆ ಮೂರು ಬೆಳೆ ಎತ್ತರದ ಗದ್ದೆಗೆ ಒಂದೇ ಬೆಳೆ
2064 ತಟಕಿನಿಂದ ತಟಪಟವಾಯಿತು ತಟಕು ಬಿದ್ದು ಮಠಾ ಕೆಡಿಸಿತು
2065 ತಟಸ್ಥನಾದವನಿಗೆ ತಂಟೆಯೇನು?
2066 ತಟದಲ್ಲಾಗಲೀ ಮಠದಲ್ಲಾಗಲೀ ಹಟದ ಜಂಗಮನ ಕಾಟ ತಪ್ಪುವುದಿಲ್ಲ
2067 ತಟ್ಟನೆ ಆಡಿದರೆ ಕೊಟ್ಟಷ್ಟು ಫಲ
2068 ತಟ್ಟನೆ ಬಾ ಅಂದ್ರೆ ತುಟಿ ಬಿಟ್ಟನಂತೆ
2069 ತಡವಿದರೆ ಮಡಿ ಸಹಾ ಕೆಡುವುದು
2070 ತಡವ ಮಾಡುವವನ ಗೊಡವೆ ಬೇಡ ತ
2071 ಡೇ ಕಟ್ಟುವವನ ಮುಂದೆ ಮುಡಿಯೇನು
2072 ತಣ್ಣಗಿದ್ದರೆ ಮಣ್ಣಾದರೂ ಅಸಾಧ್ಯ
2073 ತಣ್ಣೀರು ಆದರೂ ಪುಣ್ಯದಿಂದ ದೊರಕಬೇಕು
2074 ತನಗೆ ಬಂದ ಹಾನಿ ದುಡ್ಡಿನಿಂದ ಹೋಯಿತು
2075 ತನಗೇ ಇಲ್ಲದವ ಪರರಿಗೆ/ಮಂದಿಗೆ ಏನು ಕೊಟ್ಟಾನು
2076 ತನಗೆ ಇಲ್ಲದವಳು ಮಕ್ಕಳಿಗೆ ಏನು ಹೊದಿಸ್ಯಾಳು
2077 ತನ್ನ ಮರ‍್ಯಾದೆ ಕೆಟ್ಟವ ಪರರ ಮರ‍್ಯಾದೆ ಇಟ್ಟಾನೆ?
2078 ತನ್ನ ನೆರಳು ತಾ ಕಂಡು ನರಳುವವ ಮರುಳನಲ್ಲವೇ?
2079 ತನ್ನ ಕಾಲಿಗೆ ತಾನೇ ಶರಣು ಮಾಡಿ ಹರಸಿಕೊಂಡ ಹಾಗೆ
2080 ತನ್ನ ಅಕ್ಕನ ಅರಿಯದವಳು ನೆರೆಮನೆ ಬೊಮ್ಮಕ್ಕನ ಬಲ್ಲಳೇ?
2081 ಬೆನ್ನ ಹಿಂದೆ ಉರಿಯೋ ತನ್ನ ಸುಖವೇ ಲೋಕದ ಸುಖ, ತನ್ನ ಕಷ್ಟವೇ ಲೋಕದ ಕಷ್ಟ
2082 ತನ್ನ ಹೊಟ್ಟೆ ತಾ ಹೊರೆಯದವ ಮುನ್ನಾರ ಸಲಹುವ?
2083 ತನ್ನ ತಾನರಿತರೆ ತಾನ್‍ಆದಾನು ತನ್ನ ತಾ ಮರೆತರೆ ತಾ ಹೋದಾನು
2084 ತನುವರಿಯದ ನೋವಿಲ್ಲ ಮನವರಿಯದ ತಾಪವಿಲ್ಲ
2085 ತಪಸ್ಸಿಗೆಂತ ಹೋಗಿ ಕುಪ್ಪಸಾ ಕಳಕೊಂಡ
2086 ತಪಸ್ಸು ಇದ್ದವನೇ ಗಭಸ್ತಿ (=ಕಾಂತಿ)
2087 ಉಳ್ಳವನು ತಪ್ಪನೆ ಬಾ (=ತಕ್ಷಣ ಬಾ ) ಅಂದ್ರೆ ತಬ್ಬಲಿಕ್ಕೆ ಬಂದ ಹಾಗೆ
2088 ತಪ್ಪಲೇಲಿ ಇದ್ದದ್ದು ಹೋದರೆ ಕಪಾಲದಲ್ಲಿ ಇದ್ದದ್ದು ಹೋದೀತೇ
2089 ತಪ್ಪಿ ಬಿದ್ದವನಿಗೆ ತೆಪ್ಪ (=ದೋಣಿ) ಏನು ಮಾಡೀತು
2090 ತಪ್ಪಿದವನಿಗೆ ಒಪ್ಪು ಇಲ್ಲ ತಪ್ಪು ಹೊರಿಸಿದವನಿಗೆ ಒಪ್ಪುವವನು ಯಾರು
2091 ತಬ್ಬಲಿ ತಬಕು (ಎಲೆ ಅಡಿಕೆ ತಟ್ಟೆ, ತಂಬಾಕು ತಟ್ಟೆ) ಕದ್ದು ಜಗಲೀಲಿ ಸಿಕ್ಕಿಬಿದ್ದ
2092 ತಬ್ಬಲಿಯಾದವನು ಬೊಬ್ಬೆ ಹಾಕಿ ಹೆಬ್ಬುಲಿಯ ಓಡಿಸ್ಯಾನೆ?
2093 ತಮ್ಮ ಕಲಹಕ್ಕೆ ಐವರು ಪರರ ಕಲಹಕ್ಕೆ ನೂರಾ ಐವರು
2094 ತಮ್ಮ ಒಳ್ಳೆಯವನೇ ಸರಿ ಒಮ್ಮಾನಕ್ಕಿಗೆ ಮಾರ್ಗವಿಲ್ಲ
2095 ತಮ್ಮ ನಮ್ಮವನಾದರೂ ನಾದಿನಿ ನಮ್ಮವಳಲ್ಲ
2096 ತಮ್ಮ ಸಂಗಡ ತಂಗಿಯ ಗಂಡ ದೂರು ಹೇಳಿದರೆ ನಿನಗೇನಪ್ಪ
2097 ತರತರವಾಗಿ ಹೇಳಿದ್ದು ಮರೆತರೆ ಮರಕ್ಕಿಂತಾ ಕಡೆ ತರಹರಿಸಾಳಾರದವಳು
2098 ಮರಣಕ್ಕೆ ಪಾತ್ರಳು ತರಬಲ್ಲವನ ಹೆಂಡತಿ ಅಡಜಾಣೆ (ಅಡಕವಾದ ಜಾಣ್ಮೆ ಉಳ್ಳವಳು) ತರಲಿಲ್ಲ ಬರಲಿಲ್ಲ
2099 ಬರ ಹ್ಯಾಗೆ ಹಿಂಗೀತು
2100 ತರಗು (=ಒಣಗಿದ ಎಲೆ) ತಿಂಬುವುದೇ ಪರಮ ಸುಖ
2101 ತರಗು ತಿಂಬವನಿಗೆ ಒರಗೊಂದು ಕೇಡು
2102 ತರಗು ತಿನ್ನುವವನ ಮನೆಗೆ ಹಪ್ಪಳಕ್ಕೆ ಹೋದರು ತರಗು (ಮರದಿಂದ ಬಿದ್ದ ಒಣ ಎಲೆಗಳು)ಮೊರದಲ್ಲಿ ಹಿಡಿಯದು ‍
2103 ತರಗು ಲಡ್ಡಿಗೆ ಡೊಳ್ಳು ಗಣಪತಿಯೇ ಶ್ರೇಷ್ಠ
2104 ತರಗೆಲೆ ಅಡಿಕೆ ತಿರಿದು ತಿನ್ನಬೇಕೆ
2105 ತರುವವ ಮರೆತರೆ ಮೊರ ಏನು ಮಾಡೀತು
2106 ತರುವವ ಹೋದಮೇಲೆ ಮರಗುವವರುಂಟೇ
2107 ತರುಬಿದವಗೂ (=ಅಡ್ಡಕಟ್ಟು, ಹೊಡೆ) ಓಡಿದವಗೂ ಸರಿಪಾಲು
2108 ಕಷ್ಟ ತರುಬಿ ಹೋಗುವನ್ನ ಕರುಬಿ (=ಅಸೂಯೆ) ಮಾಡುವುದೇನು?
2109 ತರಲೆ ಕೇಳುವವ ಮರುಳಗಿಂತ ಕಡೆ ತಲೆಗೆ ಎಣ್ಣೆ ಇಲ್ಲ
2110 ತನು ಮೃಗನಾಭಿ ಬೇಡಿತು
2111 ತಲೆ ಚೆನ್ನಾಗಿದ್ದರೆ ಮುಂಡಾಸು ನೂರು ಕಟ್ಟಬಹುದು
2112 ತಲೆ ತಾಗಿದ್ದಲ್ಲದೆ ಬುದ್ಧಿ ಬಾರದು
2113 ತಲೇ ಸಿಡಿತಕ್ಕೆ ಮಲಶೋಧನೇ ಕೊಂಡ ಹಾಗೆ
2114 ತಲೇ ಕೂದಲಿದ್ದರೆ ಎತ್ತ ಬೇಕಾದರು ತುರುಬು ಹಾಕಿಕೊಳ್ಳಬಹುದು
2115 ತಲೇ ಕೂದಲಿಲ್ಲದವಳು ತುರುಬು ಬಯಸಿದಳಂತೆ
2116 ತಲೇ ಕೂದಲು ಉದ್ದವಿದ್ದವಳು ಹ್ಯಾಗೆ ಕಟ್ಟಿದರೂ ಚಂದ
2117 ತಲೇ ಕೂದಲು ನೆರೆಯಾದ ಮೇಲೆ ತಬ್ಬಿಕೊಂಡ ತಬ್ಬಲಿ ಮುರವ (=ತಿರುಕ)
2118 ತವಡು ತಿಂಬುವನಿಗೆ ವಯ್ಯಾರ ಯಾಕೆ
2119 ತವಡು ತಿಂಬುವವ ಹೋದರೆ ಉಮ್ಮಿ ತಿಂಬುವವ ಬತ್ತಾನೆ
2120 ತಳವಾರನಿಗೆ ಪಟ್ಟ ಕಟ್ಟಿದರೆ ಕುಳವಾರು (ಒಕ್ಕಲಿಗರ ಸಮೂಹ) ಹೋದೀತೋ?
2121 ತಳಾ ಬಿಟ್ಟು ಬಂಡಿ ಹಾರದು
2122 ತಳಿಗೆ ಚಂಬು ಹೋದ ಮೇಲೆ ಮಳಿಗೇ ಬಾಗಿಲು ಮುಚ್ಚಿದ ಹಾಗೆ
2123 ತಾ ಕಳ್ಳೆ ಪರರ ನಂಬಳು,
2124 ಹಾದರಗಿತ್ತಿ ಗಂಡನ ನಂಬಳು
2125 ತಾ ಕಾಣದ ದೇವರು ಪೂಜಾರಿಗೆ ವರ ಕೊಟ್ಟೀತೇ?
2126 ತಾಗದೆ ಬಾಗದು ಬಿಸಿಯಾಗದೆ ಬೆಣ್ಣೆ ಕರಗದು
2127 ತಾಟುಗಾರ (ಗರ್ವದ ಮನುಷ್ಯ) ಆಟಕ್ಕೆ ಹೋಗಿ ಮೋಟಗಾರನಾಗಿ (ತನ್ನಿಂದಲೇ ತಾ ಮೂರ್ಕನಾಗುವುದು) ಬಿದ್ದ ತಾತಾಚಾರ‍್ಯರ ಮನೆಗೆ ಏನಪ್ಪಣೆ?
2128 ತಾನಾಗಿ ಬೀಳುವ ಮರಕ್ಕೆ ಕೊಡಲಿ ಇಕ್ಕಿದ ಹಾಗೆ
2129 ತಾನುಂಟೋ? ಮೂರು ಲೋಕವುಂಟೋ? *ತಾ ಕೋಡಗ ಪರರ ಅಣಕಿಸಿತು
2130 ತಾನು ನೆಟ್ಟ ಬೀಳು (ಬಳ್ಳಿ) ತನ್ನ ಎದೆಗೆ ಹಬ್ಬಿತು
2131 ತಾನು ಜಾರಿಬಿದ್ದು ಉಣ್ಣೆಯಂತ ನೆಲ ಅಂದ
2132 ತಾನು ತಿಂಬೋದು ಪಲ್ಲೆ ಸೊಪ್ಪು
2133 ಹಿರೇ ಕುದರೆ ಚೇಷ್ಟೆ ತಾನು ಬಾಳಲಾರದೆ ವಿಧಿಯ ಬೈದಂತೆ
2134 ತಾನು ಗರತಿ ಆದರೆ ಸೂಳೆಗೇರೀಲಿ ಮನೆ ಕಟ್ಟು
2135 ತಾನು ಸಾಯಬೇಕು ಸ್ವರ್ಗಾ ಪಡೆಯಬೇಕು
2136 ತಾನು ಹೋದರೆ ಮಜ್ಜಿಗೆ ಇಲ್ಲ ಮೊಸರಿಗೆ ಚೀಟು
2137 ಹೇಳಿ ಕಳಿಸಿದರೆ ಮೊಸರು ಕೊಟ್ಟಾರೆ ತಾನೂ ಕುಡಿಯ ಕುಡಿಯಲೀಸ
2138 ತಾನೊಂದೆಣಿಸಿದರೆ ದೈವವೊಂದೆಣಿಸಿತು
2139 ತಾಪತ್ರಯದವನಿಗೆ ತಾಪೆ/ಚಾಪೆ ಯಾಕೆ
2140 ತಾಯಂತೆ ಕರು ನಾಯಂತೆ ಬಾಲ ತಾಯಂತೆ ಮಕ್ಕಳು ನೂಲಂತೆ ಸ್ಯಾಲೆ
2141 ತಾಯಿದ್ದರೆ ತವರು ಮನೆ ನೀರಿದ್ದರೆ ಕೆರೆ ಬಾವಿ
2142 ತಾಯಿಲ್ಲದ ತವರು ಕಾಟಕದಿದ್ದ ಅಡವಿ
2143 ತಾಯಿ ಒಂದಾದರೂ ಬಾಯಿ ಬೇರೆ
2144 ತಾಯಿ ಕಲಿಸಿದ ಊಟ ತಂದೆ ಕಲಿಸಿದ ಬುದ್ಧಿ
2145 ತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗ
2146 ತಾಯಿಯ ಹತ್ತಿರ ತರ್ಕವಲ್ಲ ಗುರುವಿನ ಹತ್ತಿರ ವಿದ್ಯೆಯಲ್ಲ
2147 ತಾಯಿಗೆ ಕಂಡರೆ ತಲೆ ನೋವು
2148 ತಾಯಿಗೆ ಕುಲವಿದ್ದರಷ್ಟೇ ಮಗಳಿಗೂ ಕುಲ
2149 ತಾಯಿಗೆ ಸೇರದ್ದು ನಾಯಿಗೂ ಸೇರದು
2150 ತಾಯಿ ಬೇಕು ಇಲ್ಲವೆ ಬಾಯಿ ಬೇಕು
2151 ತಾಯಿ ಮಾರಿಯಾದರೆ ತರಳನು ಎಲ್ಲಿ ಹೋದಾನು
2152 ತಾಯಿನ್ನ ನೋಡಿ ಮಗಳನ್ನ ತಕ್ಕೋ ಹಾಲನ್ನ ನೋಡಿ ಎಮ್ಮೇನ್ನ ತಕ್ಕೋ ತಾರಕ್ಕೆ (ಎರಡು ಕಾಸಿನ ನಾಣ್ಯ)
2153 ಮೂರು ಸೇರು ಉಪ್ಪಾದರೂ ತರುವುದಕ್ಕೆ ಗತಿ ಬೇಡವೋ
2154 ತಾರಕ್ಕೊಂದು ಸೀರೆಯಾದರೂ ನಾಯಿ ತಿಕ ಬೆತ್ತಲೆ
2155 ತಾರತಮ್ಯ ಅರಿಯದವ ದೊರೆಯಲ್ಲ ಮಾತು ಮೀರಿದವ ಸೇವಕನಲ್ಲ *ತಾರುಣ್ಯವೇ ರೂಪು ಕಾರುಣ್ಯವೇ ಗುಣ
2156 ತಾರು ಮಾರು ಮಾಡುವವನಿಗೆ ಯಾರು ತಾನೆ ನಂಬ್ಯಾರು
2157 ತಾರೇಮರದ ಕಾಯಾದರೂ ಕರೆದರೆ ಬಂದೀತೇ
2158 ತಾರೇ ಬಡ್ಡೀ ನೀರಾ ಅಂದ್ರೆ ತರುವೆನು ನಿಲ್ಲೊ ತಿರುಕ
2159 ಮುರವ ತಾವು ಮಾಡುವುದು ಗಂಧರ್ವರು ಮಾಡಿದರು
2160 ತಾಸಿನ ಗೊತ್ತು ದಾಸಿಗೆ ತಿಳಿದೀತೇ?
2161 ತಾಸಿಗೊಂದು ಕೂಸು ಹೆತ್ತರೆ ಈಸೀಸು ಮುತ್ತು
2162 ತಾಸಿನ ಬಟ್ಟಲು ನೀರ ಕುಡಿದರೆ ತಾಸಿಗೆ ಕೊಡತೀ ಪೆಟ್ಟು
2163 ತಾಳ ತಪ್ಪಿದರೆ ಕುಣಿಯೊದು ತಪ್ಪುವುದಿಲ್ಲ
2164 ತಾಳದಲ್ಲಿ ಜಾಣನಾದರೆ ತಾಳಿಕೆ ಇದ್ದೀತೇ
2165 ತಾಳಲಾರದ ವಿರಹ ತಿಣಕಿದರೆ ಹೋದೀತೇ?
2166 ತಾಳಿಕೆ (ತಾಳ್ಮೆ) ಉಳ್ಳವನಲ್ಲಿ ಕೇಳಿದರೆ ಕಾಳು ಸಿಕ್ಕುವುದು
2167 ತಾಳಿದವ ಬಾಳ್ಯಾನು
2168 ತಾಳು ಬಡಿದರೆ ಕಾಳು ಸಿಕ್ಕೀತೇ
2169 ತಾಳೆಮರ ಉದ್ದವಾದರೆ ಕೋಳಿಗೆ ಬಂದದ್ದೇನು
2170 ತಾಳೆಮರ ದೊಡ್ಡದಾದರೂ ತಾಳೆ ಹೂವಿಗೆ ಸರಿಯಾದೀತೇ
2171 ತಾಳೇ ಹಣ್ಣು ತಾನೇ ಬಿದ್ದರೂ ಬಾಳಾದ ಮುರವಗೆ ಬಾಯಿ ಮುಚ್ಚಿತು
2172 ತಾಳ್ಮೆ ಇದ್ದ ಪುರುಷರಲ್ಲಿ ಬೀಳು ಬಿದ್ದರೆ ಬಾಳ್ಯಾನು
2173 ತಾಳೆ ಹೂವು ಶಿವನಿಗೆ ಆಗದು ಸಂಪಿಗೆಯ ಹೂ ಸಾಲಿಗ್ರಾಮಕೆ ಆಗದು
2174 ತಾ ಕೆಡುತ್ತಾ ಏಳು ನೆರೆ ಕೆಡಿಸಿದ ತಿಗಳಗಿತ್ತಿಯ ಬಾಯಿ ಕೆಣಕಬೇಡ
2175 ಬಗಳೊ ನಾಯಿ ಬಡಿಯಬೇಡ ತಿಗುಳಗೆ
2176 ತುತ್ತಿಗೆ ತತ್ವಾರವಾದರೂ ನೆತ್ತಿತುಂಬಾ ನಾಮಕ್ಕೆ ಕಡಿಮೆ ಇಲ್ಲ
2177 ತಿಪ್ಪಯ್ಯಗೆ ಸೂಜಿ ಮೇಲು ಕಳ್ಳಗೆ ಬಾಯಿ ಮೇಲು
2178 ತಿಪ್ಪೆಯ ಮೇಲೆ ಕುಂಡ್ರುವವಗೆ ತಕ್ಯೆ ಯಾತಕ್ಕೆ
2179 ತಿಪ್ಪೇ ಮೇಲಣ ಅರಿವೆಯಾದರೂ ಕಾಲಿಗೆ ಕಟ್ಟಿದರೆ ಬಿರುದು
2180 ತಿಪ್ಪೇ ಮೇಲಣ ದೀಪ ಉಪ್ಪರಿಗೆಯ ಮೇಲೆ ಬಂದೀತೋ?
2181 ತಿಪ್ಪೇ ಮ್ಯಾಲೆ ಮಲಗಿ ಉಪ್ಪರಿಗೆ ಕನಸು ಕಂಡ ಹಾಗೆ
2182 ತಿಪ್ಪೇ ಮೇಲೇ ಮುಪ್ಪಾದ ಕುಂಬಾರ
2183 ತಿರುದುಂಬುವುದಕ್ಕೆ ಬೀದಿ ಹಂಚಿಕೊಂಡ ಹಾಗೆ
2184 ತಿರಿತಿರಿಗಿ ಗೋಕರ್ಣಕ್ಕೆ ಹೋಗಿ ತುರಕನಿಂದ ದೆಬ್ಬೆ ತಿಂದ
2185 ತಿರಿತಿರಿಗಿ ತಿಮ್ಮಪ್ಪನ ಹತ್ತರ ಹೋದರೆ ತಿರಿದುಂಬೋದು ತಪ್ಪೀತೇ?
2186 ತಿರಿದುಂಬುವ ಭಟ್ಟ ದಕ್ಷಿಣೆಯಾದರೂ ಬಿಟ್ಟಾನು ಭೊಜನ ಸಿಕ್ಕಿದರೆ ಬಿಡಲೊಲ್ಲ
2187 ತಿರಿಚಿನಾಪಳ್ಳಿಗೆ ತಿರಿದುಂಬೊದಕ್ಕೆ ಇಲ್ಲಿಂದ ಕೈ ಸವರಿಸಬೇಕೆ
2188 ತಿರುಪತಿ ಕ್ಷೌರಿಕರು ತಲೆ ಬೋಳಿಸಿದ ಹಾಗೆ
2189 ತಿರುಕನ ಬಳಿಗೆ ತಿರುಕ ಹೋದರೆ ಮರುಕ ತಾ ಬರುವುದೇ?
2190 ತಿರುಕನಿಗೆ ಮುರುಕು (ಬೆಡಗು ಕೊಂಕು) ಇದ್ದಾಗ್ಯೂ ತಿರಿದುಂಬುವುದು ತಪ್ಪದು
2191 ತಿರುಪದ ಪುಟ್ಟಿಯಲ್ಲಿ ಶನೀಶ್ವರ ಕೂತ ತಿರುಪಿನಂತೆ ಇರಬೇಕು
2192 ತಿಳಿದವ ತಿರುಳು ತಿಂದರೂ ಮರುಳು ಹೋಗಲಿಲ್ಲ
2193 ೮ತಿರುಳು ಹೋಗಿ ಬೆಂಡು ಉಳೀತು ತಿರೋಕಲ್ಲು
2194 ಗಾಳಿಯಿಂದ ಹಾರುವುದೋ ತಿರೋಕಲ್ಲು ಮಳೇಲಿ ಬಿದ್ದರೆ ಮರಕ್ಕಿಂತಾ ಕಡೆಯಾದೀತೇ
2195 ತಿಮ್ಮಪ್ಪನ ದಯೆ ತಿಳಿದ ಕಳ್ಳ ತಿರಿಗಿದರೂ ಬಿಡ
2196 ತಿಳಿದವನಾದರೂ ಮಲಮೂತ್ರ ಬಿಟ್ಟೀತೇ?
2197 ತಿಳಿದವ ಮಾಡ್ಯಾನು ನಳಪಾಕವ
2198 ಮಕ್ಕಳ ಹೆತ್ತು ತಿರುಮಲ ದೇವರ ಹೆಸರಿಟ್ಟ ಹಾಗೆ
2199 ತೀರಕ್ಕೆ ಬಂದ ಮೇಲೆ ತೆರೆಯ ಭಯವೇ
2200 ತೀರದಲ್ಲಿರುವ ಮರಕ್ಕೆ ನೀರು ಯಾತಕ್ಕೆ
2201 ತೀರದ ಕಾರ್ಯ ಹಾರಿದರೂ ಆಗದು
2202 ಇಂಗು ತೆಂಗು ಇದ್ದರೆ ಮಂಗಮ್ಮನೂ ಅಡಿಗೆ ಮಾಡ್ತಾಳೆ.
2203 ಹಪ್ಪಳಕ್ಕೆ ಊರಿತು ; ಸಂಡಿಗೆಗೆ ಏರಿತು.
2204 ಉಕ್ಕಿದರೆ ಸಾರಲ್ಲ ; ಸೊಕ್ಕಿದರೆ ಹೆಣ್ಣಲ್ಲ.
2205 ಮಘಾ ಮಳೆ ಬಂದಷ್ಟು ಒಳ್ಳೇದು ; ಮನೆ ಮಗ ಉಂಡಷ್ಟೂ ಒಳ್ಳೆಯದು .
2206 ಆಶ್ಲೇಷ ಮಳೆ , ಈಸಲಾರದ ಹೊಳೆ.
2207 ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.
2208 ಅಣ್ಣ ಹುಸಿಯಾದರೂ ತಮ್ಮ ತಂಪು ತರದೇ ಹೋಗಲ್ಲ.
2209 ಆರಿದ್ರಾ ಮಳೆ ಆರದೇ ಹುಯ್ಯುತ್ತೆ.(ಪೂರ್ವಾಷಾಢ,ಉತ್ತರಾಷಾಢ ಮಳೆಗಳು)
2210 ಅಮ್ಮನ ಮನಸ್ಸು ಬೆಲ್ಲದ ಹಾಗೆ ; ಆರಿದ್ರಾ ಹನಿ ಕಲ್ಲಿನ ಹಾಗೆ.
2211 ಮಳೆಗಾಲದ ಮಳೆ ನಂಬಲಾಗದು ; ಮನೆ ಹೆಂಡ್ತಿ ನಗೆ ನಂಬಲಾಗದು.
2212 ತುಂತುರು ಮಳೆಯಿಂದ ತೂಬು ಒಡೆದೀತೆ?
2213 ಉಪವಾಸ ಇರಬಹುದು , ಉಪದ್ರವ ತಾಳಲಾರದು.
2214 ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ.
2215 ಉದ್ದರಿ ಕೊಟ್ಟು ಸೆಟ್ಟಿ ಕೆಟ್ಟ, ಕಡ ಸಿಕ್ಕು ಬಡವ ಕೆಟ್ಟ.
2216 ಉಣ್ಣುವಾಗ ಎರಡು ತುತ್ತು ಕಡಿಮೆ ಉಣ್ಣು.
2217 ತಮ್ಮ ಕಲಹಕ್ಕೆ ಐವರು ,ಪರರ ಕಲಹಕ್ಕೆ ನೂರಾ ಐವರು. (ಸುಳಿವು ಪಾಂಡವಕೌರವರು)
2218 ತಾನಾಗಿ ಬೀಳುವ ಮರಕ್ಕೆ ಕೊಡಲಿ ಏಟು ಹಾಕಿದ ಹಾಗೆ .
2219 ತೀರ್ಥಕ್ಕೆ ಥಂಡಿ, ಪ್ರಸಾದಕ್ಕೆ ಅಜೀರ್ಣ , ಮಂಗಳಾರತಿಗೆ ಉಷ್ಣ (ನಾಜೂಕು ದೇಹಸ್ಥಿತಿ) ಉಂಡರೆ ಉಬ್ಬಸ , ಹಸಿದಿದ್ದರೆ ಸಂಕಟ(ನಾಜೂಕು ದೇಹಸ್ಥಿತಿ)
2220 ಊರು ನೋಡಿ ಬಾ ಅಂದರೆ ತೋರಣ ಕಟ್ಟಿ ಬಂದ. .
2221 ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ.
2222 ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು.
2223 ಕತ್ತೆ ತಪ್ಪಿಸಿಕೊ೦ಡರೆ ಹುಡುಕುತಾರ್‍ಯೇ?
2224 ಆಕಳಿದ್ದವನಿಗೆ ವ್ಯಾಕುಲವಿಲ್ಲ. ಅಕ್ಕಿ ತಿ೦ದವರಿಗೆ ಅನ್ನಿಲ್ಲ,
2225 ಮೊಟ್ಟೆ ತಿ೦ದವರಿಗೆ ಮರಿ ಇಲ್ಲ.
2226 ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ.
2227 ಉಳೋ ಎತ್ತಾದರೆ ಇರೋ ಊರಿನಲ್ಲಿ ಬೆಲೆಯಾಗದೇ.
2228 ಗುಡ್ಡದ ಮೇಲೆ ಕಪಿ ಸತ್ತರೆ ಊರಿಗೆಲ್ಲಾ ಸೂತಕ.
2229 ಯಾರ ಹೆ೦ಡ್ತಿ ಎಲ್ಲಿಯಾದರೂ ಹೋಗಲಿ ನಮ್ಮ ಹೆ೦ಡ್ತಿ ನಮ್ಮನೇಲಿರಲಿ
2230 ಯಾವ ದೇವರು ವರ ಕೊಟ್ಟರೂ ಗ೦ಡನಿಲ್ಲದೆ ಮಕ್ಕಳಾಗದು.
2231 ಲೇ ಅನ್ನಲು ಅವಳೇ ಇಲ್ಲ ಮಗನ ಹೆಸರು ಮುದ್ದುರ೦ಗ.
2232 ವೈರವಿದ್ದವನ ಕರೆದು ಮುಖಕ್ಷೌರ ಮಾಡಿಸಿಕೊ೦ಡಹಾಗೆ.
2233 ಶ್ಯಾನುಭೋಗರ ಸ೦ಬಳ ಸ೦ತೋಷ ಕೇಳಬೇಡಾ.
2234 ಸರಿಮನೆಯಾಕೆ ಸರಿಗೆ ಹಾಕಿಕೊ೦ಡರೆ ನೆರೆಮನೆಯಾಕೆ ಉರ್ಲು ಹಾಕಿಕೊಳ್ಳಬೇಕೆ?
2235 ಸ೦ಬಳ ಸಾರಿಗೆ ಏನಿಲ್ಲದಿದ್ದರೂ ನನ್ನ ಗ೦ಡನ್ನ ಸುಬೇದಾರ ಅ೦ದರೆ ಎಷ್ಟೋ ಹೆಚ್ಚಳ ಅ೦ದಳ೦ತೆ.
2236 ಸು೦ದರ ಪುರುಷನೆಲ್ಲೆ ಸುಪಣಾತಿ ಅ೦ದ್ರೆ ಸೂಳೆ ಮನೇಲಿ ಸುಖನಿದ್ರೇಲವ್ರೆ ಎ೦ದಳು.
2237 ಪಾಪಿ ಚುನಾವಣೆಗೆ ನಿ೦ತರೆ ಮೂರೇ ಓಟು.
2238 ಸ್ಟ್ಯಾ೦ಪಿರುವಷ್ಟು ನಾಲಗೆ ಚಾಚು.
2239 ಹೆಸರು ಸರಸ್ವತಿ, ಎಡಗೈ ಹೆಬ್ಬೆಟ್ಟಿನ ಸಹಿ.
2240 ಕೆಲಸವಿಲ್ಲದ ಶಾನುಭೋಗ ಹಳೆ ಲೆಕ್ಕ ನೋಡಿದ ಹಾಗೆ.
2241 ಕಾಸೂ ಹಾಳು ತಲೆಯೂ ಬೋಳು.
2242 ದಾಕ್ಷಿಣ್ಯವ೦ತ ದೇಶಕ್ಕೆ ಹೋದರೆ ದಕ್ಷಿಣೆ ಸಿಕ್ಕೀತೇ!
2243 ಚ೦ಡಾಲ ದೇವರಿಗೆ ಚಪ್ಪಲಿ ಪೂಜೆ
2244 ಛತ್ರದಲ್ಲಿ ಊಟ ಮಠದಲ್ಲಿ ನಿದ್ರೆ
2245 ತಿನ್ನೋದು ತವಡು ನಡೆಯೋದು ವೈಯಾರ
2246 ತಾನು ಕೋತಿಯಾಗಿ ರತಿಯನ್ನು ಬಯಸುವುದೇ?
2247 ದೊಡ್ಡ ಗೌಡನ ಮನೇಲಿ ದೊಡ್ಡ ಗುಡಾಣ ಎತ್ತಿದರೆ ಏನೂ ಇಲ್ಲ.
2248 ಮದುವೆ ಆಗೋ ಗ೦ಡಿಗೆ ಅದೇ ಇಲ್ಲ ಅ೦ದ೦ಗೆ.
2249 ಆಸೆಯಿ೦ದ ಅಳಿಯ ಬ೦ದ್ರೆ ಮಗಳು ಹೊರಗಾಗಿರೋದೇ?
2250 ಅ೦ಗ ತೋರಿಸಿ ಅರ್ಧಾ೦ಗಿಯಾದಳು.
2251 ಅಳಿಯನಿಗೆ ದೀಪಾವಳಿ ಮಾವನಿಗೆ ಕೋಪಾವಳಿ.
2252 ಆಫೀಸಿನಲ್ಲಿ ಆಫೀಸರ್, ಮನೆಯಲ್ಲಿ ಕುಕ್ಕರ್. .
2253 ಅಗಸನ ಸಿಟ್ಟು ಅನ್ಯರ ವಸ್ತ್ರದ ಮೇಲೆ.
2254 ಅ೦ಗಳದಾಗೆ ಒದ್ದು ಅಡಿಗೆ ಮನೆಯಲ್ಲಿ ಕಾಲು ಹಿಡಿದ.
2255 ಅಶ್ವಥ ಸುತ್ತಿದರೆ ಮಕ್ಕಳಾಗುತ್ತೆ ಅ೦ದ್ರೆ ಸುತ್ತು ಸುತ್ತಿಗೂ ಹೊಟ್ಟೆ ಮುಟ್ಟಿ ನೋಡಿಕೊ೦ಡಳ೦ತೆ.
2256 ಎಲ್ಲರೂ ನಗ್ತಾರೆ ಅ೦ಥ ಕಿವುಡ ತಾನೂ ನಕ್ಕ.
2257 ಒಡೆಯನಿಗೆ ಹಾಲಿಲ್ಲವೆ೦ದು ಎಮ್ಮೆ ಈಯುತ್ಯೇ?
2258 ಕ೦ಡವರ ಮನೇಲಿ ನೋಡು ನನ್ನ ಕೈ ಧಾರಾಳವ!
2259 ಕುಡಿಯೋದು ಅ೦ಬಲಿ ಮುಕ್ಕಳಿಸೋದು ಪನ್ನೀರು. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
2260 ಕದ್ದ ರೊಟ್ಟಿ ಬೇರೆ ದೇವರ ಪ್ರಸಾದ ಬೇರೆ.
2261 ಕಡಗ ನೋಡಲಿ ಅ೦ತ ಗುಡಿಸಲು ಸುಟ್ಕೊ೦ಡ ಹಾಗೆ.
2262 ಗ್ರಾಮ ಶಾ೦ತಿಗೆ ತಳವಾರತಲೆ ಬೋಳಿಸಿಕೊ೦ಡನ೦ತೆ.
2263 ಗ೦ಡ ಪಟ್ಟೆ ಸೀರೆ ತರುತ್ತಾನೆ೦ದು ಇದ್ದ ಬಟ್ಟೆ ಸುಟ್ಟಳ೦ತೆ.
2264 ಇದ್ದಾಗ ನವಾಬ ಸಾಬ, ಇಲ್ಲದಾಗ ಫಕೀರ ಸಾಬ.
2265 ತಾನು ಸಾಯುವ ತನಕ ತನ್ನನ್ನು ಜೋಪಾನ ಮಾಡಿದರೆ ತತ್ತಿಯಷ್ಟು ಬ೦ಗಾರ ಕೊಟ್ಟೇನು ಅನ್ನುತ್ತ೦ತೆ ಕೋಳಿ. .
2266 ನಾಯಿಯ ಕನಸೆಲ್ಲ ಮೂಳೇನೇ.
2267 ಯಾರ ತೋಟದ ಹುಲ್ಲು ಮೇದಾದ್ರೂ ನಮ್ಮ ಕರು ದೊಡ್ಡದಾಗಲಿ.
2268 ವಿರೂಪಾಕ್ಷ ಹ೦ಪೆ ಬಿಡ, ವಿಘ್ನೇಶ್ವರ ಕೊ೦ಪೆ ಬಿಡ.
2269 ಸೊಕ್ಕಿದ್ದವನಿಗೆ ಯಾಣ, ರೊಕ್ಕಿದ್ದವನಿಗೆ ಪಟ್ಟಣ.
2270 ಹ೦ಪೆಗೆ ಹೋಗದಿದ್ದರೆ ಸ೦ಪಿಗೆ ನೋಡಲಿಲ್ಲವೇ?
2271 ನುಡಿಯೊಳು ಹೊಳೆವುದು ನಾಡಿನ ನಡವಳಿ.
2272 ನುಡಿಯೊಳು ಕ೦ಪಿಡುವುದು ಬದುಕು ನುಡಿಯಿರದವನಿಗೆ ಇಲ್ಲವು ನಾಡೂ ನುಡಿಯಲಿ ಸಲ್ಲನದಾವುದಕೂ.
2273 ಊಟಕ್ಕೇಳೋ ಗು೦ಡ ಅ೦ದ್ರೆ ಯಾವಕ್ಕಿ ಬೇಯಿಸಿದ್ದೀ ಅ೦ದ.
2274 ಗಂಡನಿಗೆ ಹೊರಸು ಆಗದು , ಹೆಂಡತಿಗೆ ನೆಲ ಆಗದು!
2275 ಕೊಡುವವರದು ಕೊಟ್ಟರೆ ನನಗೇನು ಉಳಿಯಿತು ಅಂದನಂತೆ.
2276 ಕೋಳೀ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರೋದು ಬಿಟ್ಟೀತೆ? ಕತ್ತೆಯ ಕಾಲು ಮುರಿದರೇನು ? ನಾಯಿಯ ಹಲ್ಲು ಮುರಿದರೇನು?
2277 ಕಟ್ಟಿದ ಗೂಟ , ಹಾಕಿದ ಹಲ್ಲು. ಉಂಡರೆ ಉಬ್ಬಸ, ಹಸಿದರೆ ಸಂಕಟ .
2278 ಜೋಡಿದ್ದರೆ ನಾಡು ತಿರುಗಬಹುದು.
2279 ಆಕಾಶ ಹರಿದು ಬೀಳುವಾಗ ಕೈ ಅಡ್ಡ ಹಿಡಿಯಬಹುದೇ ?
2280 ಆಗ-ಭೋಗ ಸೂಳೆ ಪಾಲು , ಗೂರಲು ಉಬ್ಬಸ ಹೆಂಡತಿ ಪಾಲು.
2281 ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ ?
2282 ನಾವೂ ನೀವೂ ನೆಂಟರು , ಗಂತಿಗೆ ಮಾತ್ರ ಕೈ ಹಚ್ಚಬೇಡಿ.
2283 ನಾಯಿಯನ್ನು ಹೊಡೆಯಲು ಬಣ್ಣದ ಕೋಲೇ ?
2284 ಪದದೊಳಿಲ್ಲ ತಾನರ್ಥದೊಳಿಲ್ಲವು ಪದಾರ್ಥ ಸ೦ಘಾತದೊಳಿಲ್ಲ ಎದೆಎದೆಯನು ಪಿಸು ಮಾತೊಳಗರಳಿಸಿ ಮುದ ಹರಡುವ ಕಲೆ ಋಷಿ ಬಲ್ಲ.
2285 ಅಜ್ಜಿಗೆ ಅಕ್ಕಿ ಚಿ೦ತೆಯಾದರೆ ಮೊಮ್ಮಗಳಿಗೆ ಮೂಗುತಿ ಚಿ೦ತೆ
2286 ಸೂಳೆ ಕೈಯಲ್ಲಿ ಜೋಳ ಕುಟ್ಟಿಸಿದ ಹಾಗೆ
2287 ಮೀಸೆ ಬ೦ದವಗೆ ದೇಶ ಕಾಣದು, ಮೊಲೆ ಬ೦ದವಳಿಗೆ ನೆಲ ಕಾಣದು.
2288 ಹೆ೦ಗಸಿನ ಬುದ್ಧಿ ಮೊಣಕಾಲ ಕೆಳಗೆ
2289 ಅತೀ ಬುದ್ಧಿ, ಅ೦ಡು ಚಪ್ಪಟೆ!
2290 ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯ್ತು.
2291 ಕೆಲಸವಿಲ್ಲದ ಬಡಗಿ ಮಗುವಿನ ಕು೦ಡೆ ಕೆತ್ತಿದನ೦ತೆ.
2292 ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು
2293 ಮನೆ ಮಗ ಉ೦ಡಷ್ಟೂ ಒಳ್ಳೇದು, ಮಗೆ ಮಳೆ ಬ೦ದಷ್ಟೂ ಒಳ್ಳೇದು.
2294 ಆಡಿ ಪೋಕರಿ ಅನ್ನಿಸಿಕೊಳ್ಳುವುದಕಿಂತ ಆಡದೆ ಮೂಗ ಅನ್ನಿಸಿಕೊಳ್ಳುವುದು ಮೇಲು.
2295 ಮಾತಿಗೆ ಸಾಯದೇ ಇದ್ದೋನೂ ಏಟಿಗೂ ಸಾಯುವುದಿಲ್ಲ.
2296 ಹಾವು ಸಾಯಬಾರದು, ಕೋಲು ಮುರೀಬಾರದು.
2297 ಇತ್ತಿತ್ತ ಬಾ ಅಂದರೆ ಇದ್ದ ಮನೆ ಕಿತ್ತುಕೊಂಡರು.
2298 ಬೆರಳು ತೋರಿಸಿದರೆ ಅಂಗೈ ನುಂಗಿದಂತೆ. ಅಪ್ಪನ ಕಾಲಕ್ಕೆ ಅರಮನೆ, ಮಗನ ಕಾಲಕ್ಕೆ ಬರೀಮನೆ.
2299 ವೇದ ಸುಳ್ಳಾದರು ಗಾದೆ ಸುಳ್ಳಾಗದು.
2300 ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ.
2301 ತುಂಬಿದ ಕೊಡ ತುಳುಕುವುದಿಲ್ಲ.
2302 ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
2303 ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
2304 ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
2305 ಮು೦ಡೆಯ ಮದುವೆಯಲ್ಲಿ ಉ೦ಡೋನೆ ಜಾಣ.
2306 ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
2307 ಹಟದಿಂದ ಹೆಣ್ಣು ಕೆಟ್ಟಳು ಚಟದಿಂದ ಗಂಡು ಕೆಟ್ಟ
2308 ಗಂಡಸರ ಕೈಯಲ್ಲಿ ಕೂಸು ನಿಲ್ಲದು ಹೆಂಗಸರ ಕೈಯಲ್ಲಿ ಮಾತು ನಿಲ್ಲದು
2309 ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ
2310 ಮೇಲೆ ಬಸಪ್ಪ ಒಳಗೆ ವಿಷಪ್ಪ
2311 ಹೊರಗೆ ಬೆಳಕು ಒಳಗೆ ಕೊಳಕು
2312 ಹಿಟ್ಟೂ ಹಳಸಿತ್ತು ನಾಯಿಯೂ ಹಸಿದಿತ್ತು
2313 ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
2314 ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗೆ
2315 ಒಪ್ಪವಿಲ್ಲದ ಮಾತು ತುಪ್ಪವಿಲ್ಲದ ಊಟ
2316 ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
2317 ಇದ್ದಾಗ ಹಿರಿಯಣ್ಣ ಇಲ್ಲದಾಗ ತಿರಿಯಣ್ಣ
2318 ಒಕ್ಕುವುದು ರೈತನ ಗುಣ ನೆಕ್ಕುವುದು ನಾಯಿಯ ಗುಣ
2319 ಅರಮನೆಯ ಮುಂದಿರಬೇಡ ಕುದುರೆಯ ಹಿಂದಿರಬೇಡ
2320 ತಾಯಿಯಂತೆ ಮಗಳು ನೂಲಿನಂತೆ ಸೀರೆ
2321 ಕತ್ತೆಯಂಥ ಅತ್ತೆ ಬೇಕು ಮುತ್ತಿನಂಥ ಗಂಡ ಬೇಕು
2322 ಅರಿತರೆ ಮಾತನಾಡು ಮರೆತರೆ ಕೂತು ನೋಡು
2323 ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
2324 ಹಾಲಿದ್ದ ಕ೦ಡಲ್ಲಿ ಬೆಕ್ಕು ಹೇಲು ಕ೦ಡಲ್ಲಿ ನಾಯಿ
2325 ಆಪತ್ತಿಗಾದವನೇ ನೆಂಟ ಕೆಲಸಕ್ಕಾದವನೇ ಭಂಟ
2326 ಗಂಜಿಯ ಕುಡಿದರೂ ಗಂಡನ ಮನೆ ಲೇಸು
2327 ಒಲಿದರೆ ನಾರಿ ಮುನಿದರೆ ಮಾರಿ
2328 ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು
2329 ಕಚ್ಚೋ ನಾಯಿ ಬೊಗಳುವುದಿಲ್ಲ
2330 ತುಂಬಿದ ಕೊಡ ತುಳುಕುವುದಿಲ್ಲ
2331 ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ
2332 ತಾಳಿದವನು ಬಾಳಿಯಾನು
2333 ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
2334 ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ
2335 ಮುದುಕರಿಗೆ ಮುದ್ದೆ ಕೇಡು ಹಳೇ ಬಟ್ಟೆಗೆ ನೂಲು ಕೇಡು
2336 ಲಾಲಿಸಿದರೆ ಮಕ್ಕಳು ಪೂಜಿಸಿದರೆ ದೇವರು
2337 ಉತ್ತರೆ ಹೊಲ ಚಂದ ಬಿತ್ತರೆ ಬೆಳೆ ಚಂದ
2338 ಹಂಗಿನರಮನೆಗಿಂತ ಕುಂದಣದ ಗುಡಿ ಲೇಸು
2339 ಹಸಿದು ಹಲಸು, ಉಂಡು ಮಾವು.
2340 ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ?
2341 ಮನೆಗೆ ಮಾರಿ ಊರಿಗೆ ಉಪಕಾರಿ.
2342 ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ.
2343 ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.
2344 ಬರಗಾಲದಲ್ಲಿ ಅಧಿಕಮಾಸ ಬಂದ ಹಾಗೆ.
2345 ತಾನೂ ತಿನ್ನ, ಪರರಿಗೂ ಕೊಡ.
2346 ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.
2347 ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
2348 ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು