Posts

Showing posts from December, 2013

ಸಿಬಿರು - ಕವನ ಸಂಕಲನದಿಂದ - ಶರತ್ ಚಕ್ರವರ್ತಿ

Image

ತಾಳ ತಪ್ಪಿದ ನನ್ನೆದೆಯ ಘಜಲ್...!

Image
ತಾಳ ತಪ್ಪಿದ ನನ್ನೆದೆಯ ಘಜಲ್...! ನನ್ನೆದೆಯ ಘಜಲ್ ಒಂದು ಅರ್ಥವಿರುತಿತ್ತು ಅವಳ ಅಂದದ ಗೆಜ್ಜೆಗಳು ಮೈದುಂಬಿ ಚೆಂದದಿ ಕುಣಿದಿದ್ದರೆ ಮಾತ್ರ ಆದರೆ, ಬರೆದಿಟ್ಟ ಸಾವಿರ ಸಾಲುಗಳಿಗೆ ಸಾಹುಕಾರಳಾಗಲೊಲ್ಲದೆ ಎಸಳಾಗಿ ನೆಲೆ ನಿಂತ ಹುಸಿ-ಹಸಿರ ಮೇಲಿನ ಮಂಜಿನಂತೆ ಪದೇ-ಪದೇ ಕರಗಿ ನೀರಾಗುತ್ತಾಳವಳು! ನೀರಾಗಿ ಹರಿವ ಮಂಜಿನ ಸೋನೆ ನಯನದೂರ ಕನಸುಗಳಿಗೆ ಸೋಂಕು ತಗುಲಿಸಿ ಕೋಥ ಹೊಡೆಯುತ್ತದೆ! ಕ್ಷಿತಿಜದೆಡೆಗೆ ತಲುಪಿ ಮುಗಿಲಿಗೆ ಮುತ್ತಿಕ್ಕ ಬಯಸುವ ದಿಗಂತ ಕನಸುಗಳು ಅವಳಿರದ ನೋವು ಕಂಡು ಕ್ಷಾಮಕ್ಕೊಳಗಾದ ಎದೆಗೆ ನೋವಿನ ನಿದ್ದೆಯ ಹಾದಿ ತೋರಿಸುತ್ತವೆ. ಭಾವಗಳ ಬೆಸುಗೆಯಲಿ ಹಾಡಾಗಬೇಕಿದ್ದ   ನನ್ನೆದೆಯ ಘಜಲ್ ತಾಳತಪ್ಪಿ ಅರ್ಥವಿಲ್ಲದ ಬರಿಯ ಖಂಡ ಕಾವ್ಯವಾಗುತ್ತದೆ -ಚೇತನ್ ಸೊಲಗಿ, ಮುಂಡರಗಿ

ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ ಕವಿಗಳ ಕವನ ಸಂಕಲನ ಅರ್ಪಣೆ

Image
ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ  ಕವಿಗಳ  ಕವನ ಸಂಕಲನ ಅರ್ಪಣೆ ಶರತ್ ಚಕ್ರವರ್ತಿ , ರಾಜೇಂದ್ರ ಪ್ರಸಾದ್ , ಪ್ರವರ ಕೊಟ್ಟೂರು

ದೆಹಲಿಯಲ್ಲಿ 10 ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ- 2013

Image
ಚುಮ್ಮು ಚುಮ್ಮುಚಳಿಯ ವಾತಾವರಣದ ನಡುವೆ ನವದೆಹಲಿಯ ಆರ್ ಕೆ ಪುರಂ ದೆಹಲಿ ಕನಾ೯ಟಕ ಸಂಘದ ಸಭಾಭವನದಲ್ಲಿ 10 ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ ಇತ್ತಿಚೆಗೆ ನಡೆಯಿತು. ಹೃದಯವಾಹಿನಿ ಕನ್ನಡ ಬಳಗ ಮತ್ತು ದಿಲ್ಲಿ ಗಣೇಶ ಮಿತ್ರ ಮಂಡಳಿ ಹಮ್ಮಿಕೊಂಡ ಈ ಸಮ್ಮೇಳನವನ್ನು ಯಕ್ಷಗಾನ ಕಲಾವಿದರಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಪ್ರಾರಂಭದಲ್ಲಿಯೇ ಬಾಲಮಿತ್ರ ಪ್ರತಿಷ್ಠಾನ ಸರಳೇಬೆಟ್ಟು, ಮಣಿಪಾಲ ಇವರಿಂದ ಚಕ್ರವೂಹ್ಯ ಯಕ್ಷಗಾನ ಪ್ರದಶಿ೯ತವಾಯಿತು. ಈ ಸಮ್ಮೇಳನದ ಅಧ್ಯಕ್ಷರಾಗಿ ಉತ್ತರಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರೋಹಿದಾಸ ನಾಯಕ ಅವರು ಆಯ್ಕೆಯಾಗಿದ್ದರು. ಸಮ್ಮೇಳನದಲ್ಲಿ ಪ್ರಾಸ್ಥಾವಿಕವಾಗಿ ಹೃದಯವಾಹಿನಿ ಕನ್ನಡ ಬಳಗದ ಕೆ.ಪಿ ಮಂಜುನಾಥ ಅವರು ಮಾತನಾಡಿ ಹೊರ ರಾಜ್ಯ ಮತ್ತು ಹೊರ ದೇಶದಲ್ಲಿ ಕನ್ನಡವನ್ನು ಬೆಳೆಸುವ ಹಿನ್ನಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ನಡೆಸುಕೊಂಡು ಬರುತ್ತಿದ್ದ ಚಟುವಟಿಕೆಯನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಮತ್ತು ದೆಹಲಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷ ಶರೀಪ ಅವರು ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ರೋಹಿದಾಸ ನಾಯಕ ಮಾತನಾಡಿ, ಈ ಸಮ್ಮೇಳನದ ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವುದರಿಂದ ಈ ಸಮ್ಮೇಳನಕ್ಕೆ ಹೆಚ್ಚಿನ ಮಹತ್ವ ಇರುವುದು. ಕನ್ನಡ ಭಾಷೆಯೂ ಸಹ ರಾಷ್ಟ್ರ ಭಾಷೆ...

ಚಿಗುರು

ಮಿಂಚೆಂದರೆ ಮೋಡಕೆ ಮೀಸಲೆಂಬ ನಂಬಿಕೆ ಸುಳ್ಳಾಯಿತು ಅಂದು ನನ್ನೊಳಗೂ ಸಂಚಲಿಸ ಬಹುದು ಗೊತ್ತಾಯಿತು ಆಕೆಯ ಕಂಡು ಗೆಳೆತನದಲಿ ಮೊದಲಾಯಿತು ಪರಿಚಯ ಪ್ರೇಮಾಂಕುರದ ಪಥದಲ್ಲಿ ನಿದ್ದೆಗೂ ಮೀಸಲಿಡದ ಕನವರಿಕೆಗಳೇ ಕಾಮನೆ ಜೊತೆಯಲ್ಲಿ ಚಿಗುರಿದ ಮೀಸೆಗೂ ಕಾರಣವಿತ್ತು ಕಾಣುವ ಹಂಬಲ ಆಕೆಯನು ಒಂದೇ ಸಮನೆ ಗೊಂದಲ ಮನಸಲಿ ಹೃದಯವೂ ಬೆಂಬಲಿಸಿತು ತಾನು ಓದಿನ ಗೋಜಲಿ ಮೂಡಿದ ಅಂತರ ದುಃಸ್ವಪ್ನವೇ ಅನಿಸಿರಬಹುದು ಪಾಠಗಳೆಲ್ಲವೂ ಅವಳದೇ ಕುರಿತು ಅರ್ಥದಲೊಳಾರ್ಥವಿರಬಹುದು ನಕ್ಕರೆ ನವರಾತ್ರಿಯ ದೀಪೋತ್ಸವ ಮಾತಿಗೆ ಸಿಕ್ಕರೆ ಸಕ್ಕರೆಯು ಪ್ರೌಢತೆಯ ಮೂರುತಿಯಾಗಿದ್ದಳು ನಾ ಮೆರೆಸಿದ ರಥ ಸಾರಥಿಯೂ ಆಕೆ ಗಿರಿಜೆ, ಶಂಕರನಾಗೋ ಯೋಗ್ಯತೆ ನಾ ಪಡೆದಿರಲಿಲ್ಲ ನನ್ನೊಳ ಪ್ರೇಮ, ನುಡಿಸದ ಕೊಳಲು ಆಕೆಗೆ ಕೇಳಿಸಲಾಗಿಲ್ಲ !!                                  -- ರತ್ನಸುತ