ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, January 16, 2012

ನಿನ್ನ ಪ್ರೀತಿಯ ಶೇಷ ಹಾಗೇನೆ ನನ್ನೆದೆಯಲ್ಲಿ ಉಳಿದು ಹೋಗಿದೆ....

ಒಲವು ಎದೆ ಭಿತ್ತಿಯಲ್ಲಿ ಅದಾಗಿಯೆ
ಮೂಡುವ ಕನಸಿನ ಬಣ್ಣಗಳ ಸುಂದರ ಚಿತ್ತಾರ....ಹೇಳು,
ಬಯಸಿ ಬಯಸಿ ಸಣ್ಣಪುಟ್ಟ ಕ್ಷುಲ್ಲಕ ಕಾರಣಗಳಿಗೆಲ್ಲ
ಅದನ್ನ ಶಾಶ್ವತವಾಗಿ ಅಲ್ಲಿಂದ ಯಾರಾದ್ರೂ ಅಳಿಸ್ತಾರಾ/
ನನ್ನೆದೆಯ ನಿಘಂಟಿನಲ್ಲಿ ಒಲವಿಗೆ ಪರ್ಯಾಯ ಪದ ನೀನೇನೆ
ನೀ ಹೀಗೆ ಕಾಡುತಿರು ಕೊನೆವರೆಗೂ, ನಾನು ಕಾಯುತಿರುತೀನಿ ಹೀಗೇನೆ....
ಧೂಳು ಬಿದ್ದಿದೆ ಅಂತ ಆಗಾಗ ನೀನೂನು ಕಣ್ಣೊರೆಸಿಕೊಂಡು
ಕಂಬನಿಯ ಮರೆಮಾಚುತ್ತೀಯಲ್ಲ,
ನಿನ್ನ ಕಣ್ಣಲ್ಲಿ ಬಿದ್ದು ಕಾಡುವ ಆ ದುಷ್ಟ ಧೂಳು ನಾನೇನ//


ಕಾದು ಕಾದು ಬಸವಳಿದ ನನ್ನ ಮನಕ್ಕೆ
ನೀ ಬಾರದಿದ್ದರೂ....
ನಿನ್ನ ನೆನಪುಗಳಾದರೂ ಬಂದವಲ್ಲ ಅನ್ನೋದಷ್ಟೆ ಸಣ್ಣ ಸಮಾಧಾನ,
ನೆನಪಿನ ನಾವೆ ಏರಿ ಹೊರಟ ಮನಸಿನ ತುಂಬಾ
ನಿನ್ನ ನೆನಪಿನದೆ ನಿಲ್ಲದ ಕಲರವ/
ಬಾಳಿನ ಹರಿವ ತೊರೆಯಲ್ಲಿ ಒಲವ ನೊರೆ....ಪ್ರೀತಿ
ಮನಸ ಸೋಕಿ ಕನಸ ಮುದ್ದಿಸೋದೆ ಅದರ ರೀತಿ,
ಎದೆಯ ತಾನಕ್ಕೆ ಕನಸಲ್ಲಿ ಬರೆದ
ಕನವರಿಕೆಯ ಸಾಲುಗಳನ್ನೆ ಒಲವೆನ್ನಬಹುದ//


ನಿನ್ನೊಂದಿಗೆ ಕಳೆದ
ನಾನು ಬಾಳಿನಲ್ಲಿ ಕೂಡಿದ ನೆನಪುಗಳನ್ನೆಲ್ಲ....
ಮನಸಾರ ಗುಣಿಸಿ ಭಾಗಿಸಿದರೂ
ನಿನ್ನ ಪ್ರೀತಿಯ ಶೇಷ ಹಾಗೇನೆ ನನ್ನೆದೆಯಲ್ಲಿ ಉಳಿದು ಹೋಗಿದೆ,
ಎದೆಯ ಕನವರಿಕೆಗಳೆಲ್ಲ ಕರಗಿ ಕಣ್ಣೀರಾಗಬಾರದಲ್ಲ
ನಿನ್ನ ನೆನಪುಗಳೆಲ್ಲ ಹಾಗೆ ಸೋರಿ ಹೋಗಬಾರದಲ್ಲ....
ಹಾಗಂತಲೆ ನೀನು ನೋವಿನಲ್ಲೂ ಈ ನಡುವೆ ಅಳೋದೇ ಇಲ್ಲ/
ಸರದಿ ಮುರಿದ ನೆನಪುಗಳೆಲ್ಲ
ಮತ್ತೆ ಕನಸಲ್ಲಿ ಬಂದು ಕಾಡುವಂತೆ.......
ನೀನೂ ನಿತ್ಯ ನನ್ನ ಸ್ವಪ್ನದಲ್ಲಿ
ಬಂದು ಕಾಡುವಿಯಂತೆ//

No comments:

Post a Comment