Saturday, July 5, 2014

ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" - ಶ್ರೀವತ್ಸ ಜೋಶಿ

ನಿಮ್ಮ ಮೆಚ್ಚಿನ FB ಪೋಸ್ಟುಗಳು...
====================
ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕಟಿಸುವಂತೆ ಕೋರಿಕೆ ಎಂದು ಅರ್ಥ  ಪತ್ರ ಬರೆದವರು ಶಿಕಾಗೋದಿಂದ Anil Deshpande.

ಇದು ಮನಮಿಡಿಯುವ ಪದ್ಯ. ನಾನು ಕಲಿತ ಸಿಲೆಬಸ್‌ನಲ್ಲಿರಲಿಲ್ಲವಾದರೂ ಬೇರೆಬೇರೆ ವರ್ಷಗಳಲ್ಲಿ ಕನ್ನಡ ಪಠ್ಯಪುಸ್ತಕಗಳನ್ನು ಅಲಂಕರಿಸಿ, ವಿದ್ಯಾರ್ಥಿಗಳ ಮನದಾಳದಲ್ಲಿ ಅಚ್ಚಳಿಯದೇ ನಿಂತಿರುವ ಕವನಕುಸುಮಗಳಲ್ಲಿ ಇದೊಂದು. ಪ್ರಪಂಚದಲ್ಲಿ ಈಗೀಗ ಪ್ರತಿಯೊಬ್ಬರೂ ತನ್ನ ಲಾಭ, ತನ್ನ ಸಂಪತ್ತು, ತನ್ನ ಸುಖಗಳಲ್ಲಷ್ಟೇ ಮಗ್ನರಾಗಿರುವಾಗ ಕವಿಯ ಆಶಯ ತದ್ವಿರುದ್ಧ! ತನಗೆ ಕಷ್ಟಗಳಿರಲಿ, ಬಡತನವಿರಲಿ ಚಿಂತೆಯಿಲ್ಲ, ಆದರೆ ಜಗತ್ತು ಸುಖವಾಗಿರಲಿ ಎಂಬ ಹಂಬಲ ಕವಿಯದು. ಈಶ್ವರ ಸಣಕಲ್ಲರವರು ಇದನ್ನು "ಅಕ್ಷರಗಳನ್ನಲಂಕರಿಸುತ್ತಾ ನಾನೂ ಒಂದು ಕವನ ಬರೆದೆ, ಫೇಸ್‌ಬುಕ್‌ನಲ್ಲಿ ಹತ್ತಾರು ಲೈಕುಗಳನ್ನು ಗಿಟ್ಟಿಸಿದೆ" ಎಂಬ ರೀತಿಯಲ್ಲಿ ಬರೆದದ್ದಲ್ಲ. ಅವರು ಬರೆದಂತೆಯೇ ಬದುಕಿದವರು, ಬದುಕಿದಂತೆಯೇ ಬರೆದವರು. ಕಸ್ತೂರಿನಿವಾಸ ಚಿತ್ರಗೀತೆಯಲ್ಲಿ ಚಿ.ಉದಯಶಂಕರ್ ಬರೆದ "ಮೈಯನೆ ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು... ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು... ತಾನೇ ಉರಿದರೂ ದೀಪವು ಮನೆಗೆ ಬೆಳಕ ಕೊಡುವುದು...’ ಎಂಬ ಸಾಲುಗಳಲ್ಲಿನ ಕಬ್ಬು, ಗಂಧ, ದೀಪಗಳಂತೆಯೇ ಈ ಕವಿಯ ಆತ್ಮ. ತನಗೆ ತೊಂದರೆಯಾದರೂ ಸರಿಯೇ, ಜಗವು ನಗುನಗುತಿರಲಿ ಎಂಬ ನಿವೇದನೆ.

ಸ್ನೇಹಿತ ಅನಿಲ ದೇಶಪಾಂಡೆಯವರು ಈ ಕೋರಿಕೆ ಸಲ್ಲಿಸಿರುವುದು ಅರ್ಥಪೂರ್ಣವೇ ಆಗಿದೆ. ಅವರು ‘SEWA’ (Selfless Efforts for Welfare of All. www.sewausa.org ) ಎಂಬ ಸ್ವಯಂಸೇವಾ ಸಂಸ್ಥೆಯ ಶಿಕಾಗೋ ಶಾಖೆಯ ಸಕ್ರಿಯ ಕಾರ್ಯಕರ್ತ. ಈ ಕವಿತೆಯು ಅವರ ಮೇಲೆ ಪ್ರಭಾವ ಬೀರಿರುವುದು, ಮತ್ತು, ಇನ್ನಷ್ಟು ಸಮಾನಮನಸ್ಕರ ಮೇಲೆ ಇದು ಪ್ರಭಾವ ಬೀರಲಿ ಎಂದು ಅವರು ಬಯಸಿರುವುದು ಸಹಜವೇ ಆಗಿದೆ. ಇಷ್ಟು ಒಳ್ಳೆಯ, ಭಾವಪೂರ್ಣ ಕವಿತೆಯನ್ನು ನೆನಪಿಸಿದ್ದಕ್ಕೆ ಅನಿಲ್ ಅವರಿಗೆ ಧನ್ಯವಾದಗಳು.

* * *
ಇನ್ನೋರ್ವ ಹಿರಿಯಸ್ನೇಹಿತ ಪುತ್ತೂರಿನ Moorthy Deraje ಅವರ ಸಂಗ್ರಹದಿಂದ, ಗಾಯಕ ಗರ್ತಿಕೆರೆ ರಾಗಣ್ಣ ಅವರ ಧ್ವನಿಯಲ್ಲಿ ಈ ಕವಿತೆಯನ್ನು ಇಲ್ಲಿ ಕೇಳಬಹುದು:
https://soundcloud.com/srivathsajoshi/mbnaooaoyiok

* * *
"ಕೋರಿಕೆ" - ಈಶ್ವರ ಸಣಕಲ್ಲ ಅವರ ಪದ್ಯದ ಸಾಹಿತ್ಯ:

ಜಗವೆಲ್ಲ ನಗುತಿರಲಿ!
ಜಗದಳುವು ನನಗಿರಲಿ!
ನಾನಳಲು, ಜಗವೆನ್ನನೆತ್ತಿಕೊಳದೇ?
ನಾ ನಕ್ಕು, ಜಗವಳಲು ನೋಡಬಹುದೇ?

ತೆರವಾಗಿ ನನ್ನೆದೆಯು,
ಧರೆಯೆದೆಯು ಉಕ್ಕಿರಲಿ!
ಧರೆಯೊಳಗೆ ತೇಲಿಸುವೆನೆನ್ನೆದೆಯನು!
ಧರೆ ಬತ್ತಿ, ಎನ್ನೆದೆಯು ಉಕ್ಕಲೇನು?

ಪೊಡವಿಯೈಸಿರಿವಡೆದು,
ಬಡತನವು ನನಗಿರಲಿ
ಕೈಯೊಡ್ಡೆ ಪೊಡವಿಯೆನಗಿಕ್ಕದೇನು?
ಪೊಡವಿಯೇ ಮೈಯಳಿಯೆ, ಮಾಡಲೇನು?

ವಿಶ್ವವನು ತುಂಬಿರುವ
ಈಶ್ವರನೆ ಅಳತೊಡಗೆ,
ಸೈತಿಡಲು, ಸೈಪಿಡಲು ಬರುವನಾವಂ?
’ಹೇ ತಂದೆ’,ಎನಲೆನ್ನನವನೆ ಕಾವಂ!

* * *
ಕವಿ ಕೃತಿ ಪರಿಚಯ:
ಈಶ್ವರ ಸಣಕಲ್ಲ (1906-1984): ’ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ…’ ಎಂದು ಹಾಡಿ, ಸಂಭಾವಿತ ಕವಿ ಎಂಬ ಅಗ್ಗಳಿಕೆಗೆ ಪಾತ್ರರಾಗಿ ಬದುಕಿನುದ್ದಕ್ಕೂ ಕಷ್ಟಗಳನ್ನೇ ಉಂಡ ಈಶ್ವರ ಸಣಕಲ್ಲರು ಹುಟ್ಟಿದ್ದು ಜಮಖಂಡಿ ತಾಲ್ಲೂಕಿನ ರಬಕವಿಯಲ್ಲಿ. ತಂದೆ ಮಹಾರುದ್ರಪ್ಪ, ತಾಯಿ ನೀಲಮ್ಮ. ನೇಕಾರರ ಕುಟುಂಬ. ಪ್ರಾರಂಭಿಕ ವಿದ್ಯಾಭ್ಯಾಸ ತಾಯಿಯ ತೌರೂರಾದ ಯಾದವಾಡ, ರಬಕವಿಯಲ್ಲಿ. ಬಾಲ್ಯದಿಂದಲೇ ಓದಿನಲ್ಲಿ ಆಸಕ್ತಿ, ಪ್ರೌಢಶಿಕ್ಷಣ ಬೆಳಗಾವಿಯ ಜಿ.ಎ. ಹೈಸ್ಕೂಲ್‌ನಲ್ಲಿ. ಆಗಲೇ ಹಲವಾರು ಕವನಗಳ ರಚನೆ. ಶಿವಾನಂದ ಸ್ವಾಮಿಗಳವರ "ಬ್ರಹ್ಮಚರ‍್ಯವೇ ಜೀವನ, ವೀರ‍್ಯನಾಶವೇ ಮೃತ್ಯು" ಗ್ರಂಥದ ಕನ್ನಡಾನುವಾದ ಮಾಡಿದ್ದು 22ರ ಹರೆಯದಲ್ಲಿ. 1929ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣ. ಕೊಲ್ಲಾಪುರದ ರಾಜಾರಾಮ ಕಾಲೇಜಿಗೆ ಸೇರ‍್ಪಡೆ. ಹಣಕಾಸಿನ ತೊಂದರೆಯಿಂದ ಕಾಲೇಜು ಶಿಕ್ಷಣಕ್ಕೆ ಸಂಚಕಾರ. ಉದ್ಯೋಗಕ್ಕೆ ಸೇರಿದ್ದು ರಬಕವಿಯಲ್ಲಿ . ಮಿತ್ರ ಸಮೂಹ ಖಾದಿ ಭಂಡಾರ, ನಂತರ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ‘ಶಿವಾನುಭವ’ ಮತ್ತು ನವಕರ್ನಾಟಕದ ಪತ್ರಿಕೆಯ ಪ್ರಕಟಣೆಯ ಸಹಾಯಕರಾಗಿ. 1934ರಲ್ಲಿ ಮೊದಲ ಕವನ ಸಂಕಲನ ‘ಕೋರಿಕೆ’ಪ್ರಕಟ. ನಂತರ ಉದ್ಯೋಗಕ್ಕೆ ಸೇರಿದ್ದು ಹರ್ಡೇಕರ್ ಮಂಜಪ್ಪನವರ ಆಲಮಟ್ಟಿ ಆಶ್ರಮದಲ್ಲಿ. ಶರಣ ಸಂದೇಶ, ಖಾದಿ ಗ್ರಾಮೋದ್ಯೋಗ ಪತ್ರಿಕೆಗಳ ಸಂಪಾದಕತ್ವ, ಬೆಳಗಾವಿಯ ಗ್ರಾಮಸೇವಕ ಪತ್ರಿಕೆಯ ಉಪಸಂಪಾದಕ, ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠರವರಿಂದ ಬಂದ ಕರೆ, ಸಂಶೋಧನೆ ಶಾಖೆಯಲ್ಲಿ 1962ರಿಂದ 1972ರವರೆಗೂ ಸೇವೆ. ಈಶ್ವರ ಸಣಕಲ್ಲ ಸತ್ಯ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು. ನಿಷ್ಠುರವಾದಿಗಳಾಗಿದ್ದರು. ಆ ಕಾರಣದಿಂದಾಗಿಯೇ ಅವರು ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಆಗಲಿಲ್ಲ. ಮತ್ತು ಸಾಂಸಾರಿಕ ಜೀವನದಲ್ಲಿಯೂ ನೆಮ್ಮದಿ ಕಾಣಲಿಲ್ಲ. ಬಡತನದ ಬೇಗೆಯಿಂದ ಹೊರಬರಲೂ ಇಲ್ಲ. ಬದುಕಿನ ಉದ್ದಕ್ಕೂ ಬಡತನವನ್ನೇ ಹಾಸಿ, ಬಡತನವನ್ನೇ ಹೊದ್ದು ಬದುಕು ನೂಕಿದರು. ಒಟ್ಟು ಸುಮಾರು ಇಪ್ಪತ್ತು ಕೃತಿ ಪ್ರಕಟಿತ. ‘ಬಟ್ಟೆ’ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ, 1980ರ ಬೆಳಗಾವಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ. ಸಣಕಲ್ಲರ ಉತ್ತಮ ಬರವಣಿಗೆಯಿಂದಾಗಿ ರಾಷ್ಟ್ತ್ರಕವಿ ಕುವೆಂಪು ಮನದಲ್ಲಿಯೂ ಅವರು ಸ್ಥಾನ ಪಡೆದಿದ್ದರು. ಸಾಮಾನ್ಯವಾದುದಾವುದನ್ನೂ ಒಪ್ಪಿಕೊಳ್ಳದ ಕುವೆಂಪು ಅವರು ತಮ್ಮ ಆತ್ಮ ಕಥೆಯಲ್ಲಿ ಈಶ್ವರ ಸಣಕಲ್ಲರ ಬಗ್ಗೆಯೂ ಉಲ್ಲೇಖಿಸಿದ್ದಾರನ್ನುವುದು ಸಾಮಾನ್ಯ ಸಂಗತಿಯಲ್ಲ.























ಶ್ರೀವತ್ಸ ಜೋಶಿ


Saturday, June 28, 2014

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ನಿಮ್ಮ ಮೆಚ್ಚಿನ FB ಪೋಸ್ಟುಗಳು...
====================
ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್ಲ ಇದ್ದದ್ದು ’ಪದ್ಯ’ಗಳ ಪೂರ್ಣಸಾಹಿತ್ಯ ಪ್ರಕಟಿಸುವುದಕ್ಕೆ. ಈ ಸಲ ಪದ್ಯ ಅಲ್ಲ, ಗದ್ಯ. ಅದೂ ಯಾವುದೆಂದರೆ ’ಪದ್ಯಂ ವಧ್ಯಂ ಗದ್ಯಂ ಹೃದ್ಯಂ’ ಎಂದು ಗದ್ಯವನ್ನು ಕೊಂಡಾಡುವ ಗದ್ಯ, ಅದೇ ಮುದ್ದಣ-ಮನೋರಮೆಯ ಜಗದ್ವಿಖ್ಯಾತ ಸರಸಸಲ್ಲಾಪ ಸಂಭಾಷಣೆ. ಹಳಗನ್ನಡದಲ್ಲಿರುವಂಥ ಗದ್ಯ. ಇದು, ನಮಗಿಂತ ಹಿಂದಿನ ಬ್ಯಾಚ್‌ನಲ್ಲಿ ಏಳನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಮೊದಲನೆಯ ಪಾಠವಾಗಿತ್ತು. ಇದರಲ್ಲಿ ಬರುವ ಕೆಲವೆಲ್ಲ ವಾಕ್ಯಗಳು- "ಪದ್ಯಂ ವಧ್ಯಂ ಗದ್ಯಂ ಹೃದ್ಯಂ", "ನೀರಿೞಯದ ಗಂಟಲೊಳ್ ಕಡುಬಂ ತುಱುಕಿದಂತಾಯ್ತು", "ಕನ್ನಡ ಕತ್ತುರಿಯಲ್ತೆ." "ಕರ್ಮಣಿಸರದೊಳ್ ಚೆಂಬವಳಮಂ ಕೋದಂತಿರೆ" ಮುಂತಾದುವು ನುಡಿಗಟ್ಟುಗಳಾಗಿ ಕನ್ನಡ ಜನಮಾನಸದಲ್ಲಿ ಅಚ್ಚಳಿಯದೆ ನಿಂತಿವೆ. ವಿದ್ವತ್ಪೂರ್ಣ ಭಾಷಣಗಳನ್ನೂ ಲೇಖನಗಳನ್ನೂ ಮುತ್ತುಹವಳಗಳಂತೆ ಅಲಂಕರಿಸಿವೆ.

ಹಾಂ. ಹೇಳೋದೇ ಮರೆತೆ. ಈ ವಾರದ ಕೋರಿಕೆ ಸಲ್ಲಿಸಿದವರು ಬೆಂಗಳೂರಿನಿಂದ Jyothi Umesh. ಅವರು ತುಂಬಾ ಹಿಂದೆಯೇ ಒಮ್ಮೆ ಇದರ ಬಗ್ಗೆ ಕೇಳಿದ್ದರು. ಮತ್ತೆ ಮೊನ್ನೆಯಷ್ಟೇ ನಾನು ಬೇರೆ ಒಂದು ಪೋಸ್ಟ್‌ನಲ್ಲಿ ’ಮುದ್ದಣ ಮನೋರಮೆ’ಯರ ಪ್ರಸ್ತಾವ ಮಾಡಿದಾಗ ಮತ್ತೆ ನೆನಪಿಸಿಕೊಂಡು ಯಾವಾಗ ಪ್ರಕಟಿಸುತ್ತೀರಿ ಎಂದು ಕೇಳಿದರು. ಬಹುಶಃ ಅವರು ಉಮೇಶ್ ಅವರೊಡನೆ ಈ ಸಂಭಾಷಣೆಯನ್ನು ಕಂಠಪಾಠ ಮಾಡಿ ಶ್ರಾವಣ ಮಾಸದ ಸೋನೆಮಳೆ ಸುರಿಯುವ ಒಂದು ಮುಸ್ಸಂಜೆಯಲ್ಲಿ ಸಂಭಾಷಿಸುತ್ತ ವಿಶಿಷ್ಟ ಅನುಭೂತಿ ಪಡೆಯಬೇಕೆಂದಿದ್ದಾರೋ ಏನೊ.

ಈ ಪಠ್ಯಭಾಗವು ನನಗೆ ತಮಿಳುನಾಡು ಸರಕಾರದ ಕನ್ನಡ ಮಾಧ್ಯಮ ಪಠ್ಯಪುಸ್ತಕಗಳ ಪೈಕಿ ಅಲ್ಲಿನ ಹತ್ತನೇ ತರಗತಿಯ ಪುಸ್ತಕದಲ್ಲಿ ಸಿಕ್ಕಿತು. ಅದರ pdfನಿಂದ ಈ ಪಾಠದ ಎರಡು ಪುಟಗಳನ್ನು image ರೀತಿಯಲ್ಲಿ ಇಲ್ಲಿ ಹಂಚಿಕೊಂಡಿದ್ದೇನೆ. ಅಂತೆಯೇ, ಆಸಕ್ತರಿಗೆ ಸಂಗ್ರಹಕ್ಕೆ ಅನುಕೂಲವಾಗಲಿ ಎಂದು ಯುನಿಕೋಡ್ ಆವೃತ್ತಿಯಲ್ಲಿ ಮೂಲ ಪಾಠವನ್ನು, ಜೊತೆಯಲ್ಲೇ ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಹೊಸಗನ್ನಡ ಅರ್ಥಾನುವಾದವನ್ನೂ ಸೇರಿಸಿ ಈ ಕೆಳಗೆ ಪ್ರಕಟಿಸಿದ್ದೇನೆ. ಇವತ್ತು ಆಷಾಢಸ್ಯ ಪ್ರಥಮದಿವಸೇ ಯಕ್ಷನ ವಿರಹವೇದನೆ ಅಲ್ಲ, ದಂಪತಿಯ ಸರಸಸಂಭಾಷಣೆ...

* * *
ಮುದ್ದಣ ಮನೋರಮೆಯ ಸಲ್ಲಾಪ

ಈ ತೆಱದೆ ಕಾಡುಂ ನಾಡುಂ ಮನೋಜ್ಞಮಾಗೆ ಸಂಪ್ರಾಪ್ತಮಾದ ವರ್ಷಾಕಾಲದೊಳೊಂದು ದೆವಸಂ ಬೈಗುಂಬೊೞನೊಳೆಂದಿನಂತಿರೋಲಗಂ ಪರಿಯೆ, ಕಬ್ಬಿಗರ ಬಲ್ಲಹಂ ಮುದ್ದಣನರಮನೆಯಿಂ ಪೊಱಮಟ್ಟು ನೆರೆವೀದಿವಿಡಿದು ಪೊರೆವೀಡಿಂಗೆಯ್ತರ್ಪುದುಮಾತನ ಮಡದಿ ಮನೋರಮೆ ದೂರದೆ ಕಂಡೆೞ್ದು ಇದಿರ್ವಂದು ಕಾಲ್ಗೆ ನೀರಂ ನೀಡಿ ಮತ್ತಂ ಕಯ್ವಿಡಿದೊಳಚೌಕಿಗೆಗುಯ್ದು ಮಣೆಯಿತ್ತು ಕುಳ್ಳಿರಿಸಿ ಒಡನೆಯೆ ತನಿವಣ್ಣಂ ತಿನಲಿತ್ತು ಕೆನೆವಾಲಂ ಕುಡಿವೊಡಿತ್ತು ಉಪಚರಿಸುತಿರ್ದಳ್. ಈವುಪಚಾರದಿನಾತನ ಪಸಿವುಂ ಬೞಲ್ಕೆಯುಂ ಮುಗಿಯೆ, ಕೆಳದಿ ನಱುದಂಬುಲಮಂ ಸವಿಯಲ್ಕೆಂದು ಮಡಿದೀಯುತುಮಿರೆ, ಇಂತು ಸುಖಸಲ್ಲಾಪಂಗೊಳುತಿರ್ದರ್, ಅದೆಂತೆನೆ.

[ಈ ರೀತಿ ಕಾಡು ನಾಡೆಲ್ಲ ಮುದಗೊಳ್ಳುವಂತೆ ಒದಗಿಬಂದ ಮಳೆಗಾಲದಲ್ಲಿ ಒಂದು ದಿನ ಸಂಜೆಹೊತ್ತು ಎಂದಿನಂತೆ ರಾಜಸಭೆ ಮುಗಿದು ಕವಿಗಳ ಗುರು ಮುದ್ದಣನು ಅರಮನೆಯಿಂದ ಹೊರಟು ನೇರವಾಗಿ ಬೀದಿಗುಂಟ ಬಂದು ತನ್ನ ಮನೆಯನ್ನು ತಲುಪಲು, ಆತನ ಹೆಂಡತಿ ಮನೋರಮೆ ದೂರದಿಂದಲೇ ಅವನನ್ನು ನೋಡಿ ಇದಿರುಗೊಂಡು ಕಾಲುತೊಳೆಯಲು ನೀರು ಕೊಟ್ಟು ಮತ್ತೆ ಕೈಹಿಡಿದು ಒಳಚೌಕಿಯೊಳಕ್ಕೊಯ್ದು ಮಣೆ ಕೊಟ್ಟು ಕುಳ್ಳಿರಿಸಿ ಆಮೇಲೆ ಪಕ್ವವಾದ ಹಣ್ಣುಗಳನ್ನು ತಿನ್ನಲಿಕ್ಕೆ ಕೊಟ್ಟು, ಕಾಯಿಸಿ ಕೆನೆಗೂಡಿದ ಹಾಲನ್ನು ಕುಡಿಯಲಿಕ್ಕೆ ಕೊಟ್ಟು ಉಪಚರಿಸತೊಡಗಿದಳು. ಈ ಉಪಚಾರದಿಂದ ಆತನ ಹಸಿವು ಬಾಯಾರಿಕೆ ತೀರಿ, ಆಮೇಲೆ ಹೆಂಡತಿ ಕೊಟ್ಟ ಎಲೆ‌ಅಡಿಕೆಯನ್ನೂ ಸವಿದು ಈರೀತಿ ಸುಖಸಲ್ಲಾಪದಲ್ಲಿದ್ದುದನ್ನು ಏನೆಂದು ಬಣ್ಣಿಸಲಿ!

ಮನೋರಮೆ: (ಮೆಲ್ನುಡಿಯಿಂ) ನೋೞ್ಪುದೀ ಪಗಲ್ಗಳೆಂತೊ ಪಿರಿಯುವು ! ಪಗಲುಮಿರುಳುಂ ಸುರಿವ ಬಲ್ಸೋನೆಯ ಜಿನುಂಗಿನತ್ತಣಿನೆನ್ನ ಬಗೆಯುಂ ಬೇಸತ್ತುದು. ಅಂತದಱನೇನಾನುಮೊಂದು ನಲ್ಗತೆ ಯಂ ಪೇೞ!
[(ಪಿಸುಮಾತಿನಿಂದ) ನೋಡ್ತಿದ್ದೇನೆ, ಹಗಲುಗಳು ದೀರ್ಘವಾಗಿವೆ. ಹಗಲೂರಾತ್ರಿಯೂ ಸುರಿಯುವ ಸೋನೆಮಳೆ ಜಿನುಗುತ್ತಿರುವುದರಿಂದ ನನ್ನ ಮನಸ್ಸು ಬೇಸತ್ತಿದೆ. ಎಂಬ ಕಾರಣಕ್ಕಾಗಿ ಯಾವುದಾದರೂ ಒಳ್ಳೆಯದೊಂದು ಕಥೆ ಹೇಳಿ!]

ಮುದ್ದಣ: ಪ್ರಾಣೇಶ್ವರಿ ! ತಡೆಯೇಂ ! ಇನಿತೊಂದು ಬಯಕೆ ತಲೆದೋಱೆ ಆವ ಗಹನಂ? ಆದೊಡಮಾವ ನಲ್ಗತೆಯಂ ಪೇೞ್ವೆಂ ? ಏಂ ಭೋಜಪ್ರಬಂಧಂ ? ವಿಕ್ರಮವಿಜಯಂ, ಮಹಾವೀರಚರಿತಂ ?
[ ಪ್ರಾಣೇಶ್ವರಿ, ಅಡ್ಡಿಯೇನು? ನೀನು ಇಷ್ಟೊಂದು ಆಸೆಪಟ್ಟಿರುವಾಗ ಅದೇನು ಕಷ್ಟ? ಆದರೆ ಯಾವ ಒಳ್ಳೆಯಕಥೆ ಹೇಳಲಿ? ಭೋಜಪ್ರಬಂಧವೇ? ವಿಕ್ರಮವಿಜಯವೇ? ಮಹಾವೀರಚರಿತೆಯೇ?]

ಮನೋರಮೆ: ಇಸ್ಸಿ ! ಇವರೊಳೆನಗೞ್ಕಱಲ್ಲಂ; ಉೞದೊಡಮೞದೊಡಂ ಬಟ್ಟೆದೋಱುಪ ರಸಭರಿತಂ ಚರಿತಮೈಸೆ.
[ಛೀ. ಇವೆಲ್ಲ ನನಗಲ್ಲ. ಉಳಿದರೂ ಅಳಿದರೂ ದಾರಿತೋರುವ ರಸಭರಿತ ಚರಿತೆಯೇ ಇರಲಿ.]

ಮುದ್ದಣ: ನಿನಗಾವ ರಸದೊಳಿಷ್ಟಂ ? ಶೃಂಗಾರರಸದೊಳೆ ? ವೀರರಸದೊಳೆ ? ಹಾಸ್ಯರಸದೊಳೆ ?
[ನಿನಗೆ ಯಾವ ರಸದಲ್ಲಿ ಇಷ್ಟ? ಶೃಂಗಾರ ರಸವೇ? ವೀರ ರಸವೇ? ಹಾಸ್ಯರಸವೇ?]

ಮನೋರಮೆ: ಆವರಸದೊಳೆಂದೊಡೇಂ ? ನವರಸದೊಳಂ.
[ಯಾವ ರಸದಲ್ಲಿ ಅಂತ ಕೇಳಿದ್ರಾ? ನವರಸಗಳೂ ಇರಲಿ.]

ಮುದ್ದಣ: ಅಂತಿರೆ ಮತ್ತಮಾಕತೆ ಯಾವುದು ?
[ಹಾಗಾದರೆ ಅದು ಯಾವ ಕಥೆ?]

ಮನೋರಮೆ: ರಾಮಾಯಣದೊಳೇನಾನುಮೊಂದು.
[ರಾಮಾಯಣದೊಳಗೆ ಯಾವುದಾದರೂ ಒಂದು.]

ಮುದ್ದಣ: ಅಂತೆಯ ಅಕ್ಕೆ. ಸೀತಾಸ್ವಯಂವರಮಂ ಪೇೞ್ವೆಂ.
[ಹಾಗೆಯೇ ಆಗಲಿ. ಸೀತಾಸ್ವಯಂವರದ ಕಥೆ ಹೇಳುವೆ.]

ಮನೋರಮೆ: ಆಂ ಮುನ್ನಮೆ ಕೇಳ್ದಿರ್ಪೆನಲ್ತೆ !
[ಆಹ್. ಅದನ್ನು ನಾನು ಈ ಮೊದಲೇ ಕೇಳಿಸಿಕೊಂಡಾಗಿದೆಯಲ್ಲ!]

ಮುದ್ದಣ: ಏಂ ಸೀತಾಪಹರಣಕಥನದೊಳ್ ಬಯಕೆಯೆ ?
[ಮತ್ತೇನು, ಸೀತಾಪಹರಣ ಕಥೆಯನ್ನು ಕೇಳುವ ಬಯಕೆಯೇ?]

ಮನೋರಮೆ: ಉಃ ! ಆನೊಲ್ಲೆಂ.
[ಊಹೂಂ, ಅದೂ ಬೇಡಾ ನನಗೆ.]

ಮುದ್ದಣ: ಮೇಣಾವ ನಲ್ಗತೆಯಂ ಪೇೞ್ವೆನೋ.
[ಮತ್ತ್ಯಾವ ಒಳ್ಳೆಯ ಕಥೆಯನ್ನು ಹೇಳುವೆನೋ!]

ಮನೋರಮೆ: ಇಂತೇಕುಸಿರ್ವಯ್? ನಾಡೊಳೆನಿತ್ತೊ ರಾಮಾಯಣಂಗಳೊಳವು. ನೀಂ ಕೇಳ್ದುದಱೊಳೊಂದಂ ನಲ್ಮೆದೋಱೆ ಕಂಡು ಪೇೞ್ವುದು.
[ಇಷ್ಟೇಕೆ ಗೊಂದಲ? ಈ ದೇಶದಲ್ಲಿ ಅದೆಷ್ಟು ರಾಮಾಯಣ ಆವೃತ್ತಿಗಳಿಲ್ಲ! ನಿಮಗೆ ಗೊತ್ತಿರುವಂಥವುಗಳಲ್ಲಿ ಒಳ್ಳೆಯದೆನಿಸಿದ್ದನ್ನು ನನಗೆ ಹೇಳಿ.]

ಮುದ್ದಣ: ನೀನೆ ಒಂದನಾಯ್ದುಕೊಳ್ವುದು.
[ನೀನೇ ಒಂದನ್ನಾಯ್ದುಕೋ.]

ಮನೋರಮೆ: ಶ್ರೀರಾಮಂ ಅಶ್ವಮೇಧಮಂ ಕಯ್ಕೊಂಡನೆಂಬರಲ್ತೆ; ಆ ಕತೆಯೆ ಅಕ್ಕುಂ.
[ಶ್ರೀರಾಮನು ಅಶ್ವಮೇಧಯಾಗವನ್ನು ಕೈಕೊಂಡನೆನ್ನುತ್ತಾರಲ್ಲ. ಆ ಕಥೆಯೇ ಆಗಬಹುದು.]

ಮುದ್ದಣ: ಈಗಳಱತೆಂ; ಶೇಷರಾಮಾಯಣಮಂ ಪೇೞ್ವುದೆಂಬೆಯೆ ?
[ಈಗ ತಿಳಿಯಿತು. ಉತ್ತರರಾಮಾಯಣವನ್ನು ಹೇಳಬೇಕಂತೀಯಾ?]

ಮನೋರಮೆ: ಅಪ್ಪುದಪ್ಪುದು. ಆದೊಡೆ ಮುನ್ನಮಾರಾರ್ಗಿದನೊರೆದರ್ ?
[ಹೌದುಹೌದು. ಅದನ್ನು ಮೊದಲು ಯಾರು ಯಾರಿಗೆ ಹೇಳಿದರು?]

ಮುದ್ದಣ: ಮುನ್ನಂ ಶೇಷಂ ವಾತ್ಸ್ಯಾಯನಂಗೆ ಪೇೞ್ದನದನೆ ನಿನಗೆ ಬಿತ್ತರಿಪೆಂ. ಆದೊಡೆ ಬಲ್ಗತೆ ಕಣಾ ! ಒಂದೆರೞ್ದೆವಸಕ್ಕೆ ಮುಡಿಯದು.
[ಮೊದಲು ಶೇಷನು ವಾತ್ಸ್ಯಾಯನನಿಗೆ ಹೇಳಿದನು. ಅದನ್ನೇ ನಾನು ನಿನಗೆ ಹೇಳುವೆನು. ಅದೊಂದು ದೊಡ್ಡ ಕಥೆ ಮಾರಾಯ್ತೀ. ಒಂದೆರಡು ದಿವಸಕ್ಕೆ ಮುಗಿಯದು!]

ಮನೋರಮೆ: ಇರ್ಕೆ. ಓರೊಂದು ದೆವಸಮಿನಿಸಿನಿಸಂ ಪೇೞ್ದೊಡೇಂ ?
[ಇರಲಿ. ದಿನಕ್ಕೊಂದಿಷ್ಟಿಷ್ಟರಂತೆ ಹೇಳಿದರಾಯ್ತಲ್ಲ?]

ಮುದ್ದಣ: ಅಕ್ಕುಂ. ಆವ ಧಾಟಿಯೊಳ್ ಪೇೞ್ವೆಂ; ಪದ್ಯದೊಳ್ ಪೇೞ್ವೆನೊ? ಗದ್ಯದೊಳ್ ಪೇೞ್ವೆನೋ
[ಹೌದು. ಯಾವ ಧಾಟಿಯಲ್ಲಿ ಹೇಳಲಿ? ಪದ್ಯದಲ್ಲಿ ಹೇಳಲೇ? ಗದ್ಯದಲ್ಲಿ ಹೇಳಲೇ?]

ಮನೋರಮೆ: ಪದ್ಯಂ ವಧ್ಯಂ, ಗದ್ಯಂ ಹೃದ್ಯಂ. ಹೃದ್ಯಮಪ್ಪ ಗದ್ಯದೊಳೆ ಪೇೞ್ವುದು.
[ಪದ್ಯ ಸತ್ತುಹೋಗಲಿ. ಗದ್ಯವೇ ಒಳ್ಳೆಯದು. ಹೃದಯಸ್ಪರ್ಶಿಯಾದ ಗದ್ಯದಲ್ಲೇ ಹೇಳೋಣವಾಗಲಿ.]

ಮುದ್ದಣ: (ನಸುನಗೆಯಿಂ) ಅದಂತಿರ್ಕೆ. ಅದಱೊಳ್ ಇಂತಪ್ಪ ನಲ್ಗತೆಯಂ ಬಿತ್ತರಿಸಿದೊಡೆ ಅರಮನೆಯೊಳ್ ರನ್ನಗಡಗಮಂ ಪೊನ್ನಕಂಠಿಕೆಯಂ ಮೆಚ್ಚನೀವರ್. ನೀನೀವುದೇಂ ?
[ನಸುನಗುತ್ತ- ಅದಿರಲಿ. ಈರೀತಿಯ ಒಳ್ಳೆಯ ಕಥೆಯನ್ನು ಹೇಳಿದರೆ ಅರಮನೆಯಲ್ಲಾದರೆ ರತ್ನದ ಕಡಗ, ಹೊನ್ನಿನ ಹಾರವನ್ನು ಮೆಚ್ಚುಗೆಯೆಂದು ಕೊಡುವರು. ನೀನೇನು ಕೊಡುತ್ತೀ?]

ಮನೋರಮೆ: ಪೆಱತೇಂ ? ಎನ್ನನೆ ನಾನೀವೆಂ.
[ಮತ್ತೇನು? ನನ್ನನ್ನೇ ಕೊಡುತ್ತೇನೆ.]

ಮುದ್ದಣ: ಬಲ್ಗಡುಸುಗಾರ್ತಿಯೈಸೆ ! ಅಱಯಾ ಮುನ್ನಮೆ ನಿನ್ನ ತಾಯ್ತಂದೆವಿರೆನಗಿತ್ತರೆಂಬುದಂ ?
[ಭಲಾ! ಬಲು ಜಾಣೆಯಿದ್ದೀ ನೀನು. ಅಳಿಯನನ್ನು ಮಾಡಿಕೊಂಡಾಗಲೇ ನಿನ್ನ ತಾಯ್ತಂದೆಯರು ನಿನ್ನನ್ನು ನನಗೆ ಕೊಟ್ಟಿಹರಲ್ಲ?]

ಮನೋರಮೆ: ಇದೇತಱ ನುಡಿ ! ಪೋಕೆ. ಆಂ ಪರಾಧೀನೆ ಗಡ ! ಪುರಾಣಮನೋದಿದಿಂ ಬೞಯಮಲ್ತೆ ದಕ್ಷಿಣೆಯನೀವುದು? ಅರಮನೆಯವರುಂ ಕಬ್ಬಮಂ ಕಂಡಲ್ತೆ ಕಚ್ಚೞಯನಿತ್ತರ್ ? ಆನುಂ ಕತೆಯಂ ಕೇಳ್ದು ಸೊಗಸಾಗೆ ಬಲ್ಲಂತೆ ಸಮ್ಮಾನಿಸುವೆಂ.
[ಇದೇನಿದು. ಹೋಗಿ. ನಾನು ಪರಾಧೀನೆಯೇ? ಪುರಾಣವನ್ನು ಓದಿದ್ದಕ್ಕನುಗುಣವಾಗಿ ಅಲ್ಲವೇ ದಕ್ಷಿಣೆ ಕೊಡುವುದು? ಅರಮನೆಯವರಾದರೂ ಕಾವ್ಯ ಹೇಗಿದೆ ಎಂದು ನೋಡಿದ ಮೇಲೆಯೇ ಅಲ್ಲವೇ ಉಡುಗೊರೆ ಕೊಡುವುದು? ಹಾಗೆಯ ನಾನು ಸಹ ಕಥೆ ಕೇಳಿದಮೇಲೆ ಸೊಗಸಾಗಿದ್ದರೆ ಸನ್ಮಾನಿಸುವೆ.]

ಮುದ್ದಣ: ಒಳ್ಳಿತೊಳ್ಳಿತು ! ಕತೆಯನಾಲಿಸಿ ಲಾಲಿಸಿ ಬೞಕ್ಕ ಮೀಯೆನೆಂದೊಡೆ ಬಿಡೆ ನೋೞ್ಪೆಂ.
[ಒಳ್ಳೆದೊಳ್ಳೆದು. ಕಥೆಯನ್ನು ಕೇಳಿದ ಮೇಲೆ ಉಡುಗೊರೆ ಕೊಡುವುದಿಲ್ಲ ಅಂದಿಯೋ ಬಿಡೋದಿಲ್ಲ ನಿನ್ನನ್ನು, ನೋಡ್ತೇನೆ.]

ಮನೋರಮೆ: ಆನುಂ ನೋೞ್ಪೆಂ ಕತೆಯ ಪುರುಳೆಂತಿರ್ಕುಮೆಂದು.
[ನಾನೂ ನೋಡುತ್ತೇನೆ. ಕತೆಯ ಹೆಚ್ಚುಗಾರಿಕೆ ಎಷ್ಟಿದೆಯೆಂದು.]

ಮುದ್ದಣ: ಆದೊಡಾಲಿಸು. ಸ್ವಸ್ತಿ ಶ್ರೀಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ ಫಣೀಂದ್ರ ಮಣಿಮಕುಟ ತಟಘಟಿತ
[ಆಯ್ತು. ಕೇಳು. ಸ್ವಸ್ತಿಶ್ರೀಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ ಫಣೀಂದ್ರ ಮಣಿಮುಕುಟ ತಟಘಟಿತ]

ಮನೋರಮೆ: ಓ ಓ ! ತಡೆ ! ತಡೆ. ವಸುಧೆಗೊ ಡೆಯನ ರಾಮಚಂದ್ರನ ಕತೆಯಂ ಪೇೞೆನೆ ಬಸದಿಗೊಡೆಯನಪ್ಪ ಸುರೇಂದ್ರರ ಚರಿತೆಯಂ ಪೇೞ್ವುದೇಂ !ಸಾಲ್ಗುಂ ಸಾಲ್ಗುಂ. ಇಂತೆರ್ದೆಗೊಳ್ವ ಕತೆಗೆಂತುಡುಗೊಱೆಯಂ ಗೆಯ್ವೆನೋ !
[ಓ ಓ ನಿಲ್ಲಿಸಿ ನಿಲ್ಲಿಸಿ. ಭೂಮಿಗೊಡೆಯ ಶ್ರೀರಾಮಚಂದ್ರನ ಕಥೆ ಹೇಳಿರೆಂದು ಕೇಳಿದರೆ ಬಸದಿಗೊಡೆಯ ಸುರೇಂದ್ರರ ಚರಿತ್ರೆ ಹೇಳುವುದೇ? ಸಾಕು ಸಾಕು. ಈರೀತಿ ಶುರುವಾಗುವ ಕಥೆಗೆ ಅದೆಂತು ಗಮನವೀಯುವೆನೋ.]

ಮುದ್ದಣ: ನಲ್ನುಡಿಯಿದು ರಮಣಿ ! ಕಚಂಗಳಾಣೆ ! ಆಲ್ತು ಬಸದಿಯಿಂದ್ರರ ಕತೆಯಲ್ತು; ರಾಮಚಂದ್ರನ ಕತೆಯನೆ ಪೊಗೞ್ದು ಪೇೞ್ವುದಿದು ಸಕ್ಕದದೊಂದು ಚೆಲ್ವು.
[ಒಳ್ಳೆಯ ಮಾತಿದು ಪ್ರಿಯೇ. ತಲೆ(ಗೂದಲಿನ)ಆಣೆ. ಅಲ್ಲ, ಇದು ಬಸದಿಯಿಂದ್ರರ ಕಥೆಯಲ್ಲ. ರಾಮಚಂದ್ರನ ಕಥೆಯನ್ನೇ ಸೊಗಸಾಗಿ ಹೇಳುವುದಿದು ಸಂಸ್ಕೃತದ್ದೊಂದು ಚೆಲುವು.]

ಮನೋರಮೆ: ಲೇಸು, ಲೇಸು ! ನೀರಿೞಯದ ಗಂಟಲೊಳ್ ಕಡುಬಂ ತುಱುಕಿದಂತಾಯ್ತು; ಕನ್ನಡದ ಸೊಗಸನಱಯಲಾರ್ತೆನಿಲ್ಲೆನಗೆ ಸಕ್ಕದದ ಸೊಗಸಂ ಪೇೞ್ವುದು ಗಡ !
[ಇದೊಳ್ಳೇ ಕಥೆ. ನೀರೇ ಇಳಿಯದ ಗಂಟಲಿನೊಳಗೆ ಕಡುಬು ತುರುಕಿದಂತೆ ಆಯ್ತು. ಕನ್ನಡಸ ಸೊಗಸನ್ನೇ ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಾಗದ ನನಗೆ ಸಂಸ್ಕೃತದ ಸೊಗಸನ್ನು ಹೇಳುವುದೇ?]

ಮುದ್ದಣ: ಅಪ್ಪೊಡಿನ್ನೆಂತೊ ಒರೆವೆಂ ?
[ಮತ್ತೆ ಹೇಗೆ ಹೇಳಲಿ?]

ಮನೋರಮೆ: ತಿರುಳ್ಗನ್ನಡದ ಬೆಳ್ನುಡಿಯೊಳೆ ಪುರುಳೊಂದೆ ಪೇೞ್ವುದು. ಕನ್ನಡ ಕತ್ತುರಿಯಲ್ತೆ.
[ಕಥೆಯ ತಿರುಳನ್ನು ಕನ್ನಡದ ಸವಿನುಡಿಯಲ್ಲೇ ಹೇಳುವಂಥವರಾಗಿ. ಕನ್ನಡವು ಕಸ್ತೂರಿಯಲ್ಲವೇ?]

ಮುದ್ದಣ: ಅಪ್ಪುದಪ್ಪುದು. ಆದೊಡಂ ಸಕ್ಕದಮೊಂದೆ, ರನ್ನವಣಿಯಂ ಪೊನ್ನಿಂ ಬಿಗಿದಂತೆಸಗುಂ; ಅದಱಂ ಕರ್ಮಣಿಸರದೊಳ್ ಚೆಂಬವಳಮಂ ಕೋದಂತಿರೆ, ರಸಮೊಸರೆ, ಲಕ್ಕಣಂ ಮಿಕ್ಕಿರೆ, ಎಡೆಯೆಡೆಯೊಳ್ ಸಕ್ಕದದ ನಲ್ನುಡಿ ಮೆಱೆಯೆ ! ತಿರುಳ್ಗನ್ನಡದೊಳೆ ಕತೆಯನುಸಿರ್ವೆಂ ಎಂಬಲ್ಲಿಗೆ ಮುದ್ದಣ ಪೇೞ್ದ ಶ್ರೀ ರಾಮಾಶ್ವಮೇಧದೊಳ್ ಕಥಾಮುಖಮೆಂಬ ಪ್ರಥಮಾಶ್ವಾಸಂ ಸಂಪೂರ್ಣಂ
[ಹೌದು ಹೌದು. ಆದರೂ ಸಂಸ್ಕೃತವೂ ಇರಲಿ. ಮಣಿ-ರತ್ನವನ್ನು ಚಿನ್ನದ ಸರದಲ್ಲಿ ಬಿಗಿದಂತೆ. ಕರಿಮಣಿ ಸರದಲ್ಲಿ ಕೆಂಪು ಹವಳ ಪೋಣಿಸಿದಂತೆ. ರಸಭರಿತವಾಗಿರಲು, ಲಕ್ಷಣ ಹೆಚ್ಚಿದರೆ, ನಡುನಡುವೆ ಸಂಸ್ಕೃತದ ನುಡಿಗಳೂ ಮೆರೆಯಲಿ. ಆದರೆ ಕಥೆಯ ತಿರುಳನ್ನು ಕನ್ನಡದಲ್ಲೇ ವಿವರಿಸುವೆನು ಎಂಬಲ್ಲಿಗೆ ಮುದ್ದಣನು ಹೇಳಿದ ಶ್ರೀ ರಾಮಾಶ್ವಮೇಧದಲ್ಲಿ ಕಥಾಮುಖವೆಂಬ ಮೊದಲ ಆಧ್ಯಾಯವು ಮುಗಿದುದು.]

* * *
ಕವಿಕೃತಿ ಪರಿಚಯ: ಮುದ್ದಣನ ಕಾಲ ಕ್ರಿ.ಶ. 1870-1901. ಮುದ್ದಣ ಎಂಬ ಕಾವ್ಯನಾಮದಿಂದ ಗ್ರಂಥರಚನೆ ಮಾಡಿದ ಲಕ್ಷ್ಮೀನಾರಣಪ್ಪನು ಉಡುಪಿಯ ಸಮೀಪದ ‘ನಂದಳಿಕೆ’ ಎಂಬಲ್ಲಿ ಹುಟ್ಟಿದನು. ಇವನ ತಂದೆ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಷ್ಮಮ್ಮ. ಈತ ಉಡುಪಿಯ ಒಂದು ಶಾಲೆಯಲ್ಲಿ ಕೆಲವು ಕಾಲ ವ್ಯಾಯಾಮ ಶಿಕ್ಷಕನಾಗಿದ್ದನು. ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಪರಿಪೂರ್ಣ ಪಾಂಡಿತ್ಯ ಪಡೆದಿದ್ದನು. ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಿದರೂ ಮುದ್ದಣ ಬಹಳ ರಸಿಕ ಕವಿ. ಕನ್ನಡ ಸಾಹಿತ್ಯದಲ್ಲಿ ಮುದ್ದಣ-ಮನೋರಮೆಯರ ಸರಸ ಸಂವಾದದ ಶೈಲಿ ವಿನೂತನವಾದುದು. ಸಾಮಾನ್ಯವಾಗಿ ಇವನ ಕೃತಿಗಳಲ್ಲಿ ತಿಳಿಯಾದ ಗದ್ಯಶೈಲಿ ಹಾಗೂ ಚಿಕ್ಕಚಿಕ್ಕ ವಾಕ್ಯಗಳ ಪ್ರಯೋಗಗಳನ್ನು ಕಾಣಬಹುದು. ‘ರತ್ನಾವತಿ ಕಲ್ಯಾಣ’, ‘ಕುಮಾರ ವಿಜಯ’ ಎಂಬ ಯಕ್ಷಗಾನ ಪ್ರಸಂಗಗಳನ್ನು ಮುದ್ದಣ ರಚಿಸಿದ್ದಾನೆ. ವಾರ್ಧಕ ಷಟ್ಪದಿಯಲ್ಲಿ ಬರೆದ ‘ಶ್ರೀರಾಮ ಪಟ್ಟಾಭಿಷೇಖಂ’ ಎಂಬ ಕಾವ್ಯ ಅತ್ಯುತ್ತಮ ಕೃತಿಯಾಗಿದೆ. ‘ರಾಮಾಶ್ವಮೇಧಂ’ ಎಂಬ ಗದ್ಯಕಾವ್ಯದಲ್ಲಿ ಮುದ್ದಣ-ಮನೋರಮೆಯರ ಸರಸ ಸಂವಾದವು ಹರ್ಷದಾಯಕವಾಗಿದೆ. ಕಥಾಮುಖದಲ್ಲಿ ಬರುವ ಈ ಸಂವಾದವನ್ನು ಕವಿಯು ಹೃದಯಂಗಮವಾಗಿ ವರ್ಣಿಸಿದ್ದಾನೆ. ಮುದ್ದಣನು ತನ್ನ ಬಡತನದ ಬೇಗೆಯನ್ನು ಮರೆಯುವುದಕ್ಕಾಗಿ ತನ್ನ ಕೃತಿಗಳಲ್ಲಿ ಇಂತಹ ಹಾಸ್ಯಪ್ರಸಂಗಗಳನ್ನು ತರುತ್ತಾನೆ. ಯಾವುದೇ ಕಷ್ಟ ಬರಲಿ, ನಷ್ಟ ಬರಲಿ ಎಲ್ಲವನ್ನೂ ಎದುರಿಸುವ take it easy policy ಎಂಬ ಸಿದ್ಧಾಂತ ಎಂದೆಂದಿಗೂ ಸತ್ಯವಾದುದಲ್ಲವೇ ?

ಶ್ರೀವತ್ಸ ಜೋಶಿ



Thursday, June 26, 2014


MAzÀÄ ¥ÀæªÁ¸ÀzÀ C£ÀĨsÀªÀ-

ªÀÄÄPÀÛ ªÀÄÄPÀÛ ªÀÄÄPÀÛ ::::

PÁgÀÄ ªÉÆÃqÀ ªÀļÉAiÀiÁV ¸ÀÄjzÁUÀ PÀtÚºÀ¤UÉ ªÀÄÄQÛ,.. ªÀÄgÀzÀ ºÀQÌ ªÀÄj gÉPÉÌ ©Ã¹zÀgÉ CzÀgÀ UÀjUÀgÀ ªÀÄÄQÛ JzÉAiÀÄ £ÉÆÃªÀÅ ºÁqÁV ºÉÆ«ÄäzÀgÉ ¨sÁªÀPÉÌ §AzÀªÀÄÄQÛ,.. JAzÀÄ DzÉêÀÅ £ÁªÀÅ ªÀÄÄPÀÛ ªÀÄÄPÀÛ ªÀÄÄPÁÛ,.... EzÉãÀ¥Áà ºÁqÀÄ ºÉýÛzÁÝ£É C£ÉÆÌAqÁæ ? ºËzÀÄ ªÉÆ£Éß £À£Àß ªÉƨÉʯï jAUÀt¹zÀÄÝ »ÃUÉ, ºÀjzÀ ¸Éàlj£À vÉÆÃ¼ÀÄ ºÉƯÉAiÀÄÄwzÁÝUÀ  »ÃUÉà ªÉƨÉʯï jAUÀt¹vÀÄÛ,..ºÀ¯ÉÆÃ JAzÉ.... ªÀiÁªÀiï 3 UÀAmÉAiÀiÁAiÀÄÄÛ E£ÀÆß ªÀİÎâÝÃAiÀiÁ ? ¸ÁPÀÄ JzÉÝÃ¼ÉÆÃ gÉrAiÀiÁUÀÄ 5 UÀAmÉUÉ mÉæöÊ£ï PÀuÉÆÃ.. EªÀvÀÄÛ lÆgï ºÉÆÃVÛ¢éà £É£À¦zÁå ? CAzÁ..CAiÉÆåà gÁwæ¬ÄAzÀ ¤zÉÝãÉà ªÀiÁr®è ªÀiÁgÁAiÀÄ gÉr gÉr.. ¨ÉÃUÀ ¨Á CAvÀ ¥sÉÆÃ£ï PÀmï ªÀiÁrzÉ,..
EgÉÆÃ§gÉÆÃjUɯÁè ¥sÉÆÃ£ï ªÀiÁr £Á£ï PÉÃgÀ¼ÁUÉ lÆgï ºÉÆÃVÛâä PÀuÉÆæÃ K£ÁzÀÄæ vÀgÀ¨ÉÃPÁ ?CAvɯÁè ©®Ø¥ï PÉÆnÖzÀÄÝ DAiÀÄÄÛ.. PÉÆ£ÉUÉ HzÉÆÃ ¦Ã¦ ,vÁéPÉ vÀÄgÁ¬Ä J®èªÀ£ÀÆß ºÉÆvÀÄÛ ºÁUÀÆ »ÃUÀÆ ªÉÄeɹÖPï §¸ï ºÀwÛzÉ,..ªÉÄeɹÖPï vÀ®Ä¥ÀzÉ K£ÉÆÃ £É£À¥ÁV «dAiÀÄ£ÀUÀgÀzÀ¯Éèà E½zÉ. N ¤Ãj£À ¨ÁmÉ¯ï ªÀÄgÉvÉ£À¯Áè CAvÀ PÁ¦ü qÉà UÉ ºÉÆÃV ¤Ãj£À ¨Ál¯ï PÉÆAqÉ £À£ÀUÉ PÁ¦ü qÉà ¤Ãj £À ¨Ál¯ï CAzÉæ K£ÉÆÃ PÀĶ CzÀgÀ DPÁgÀ §tÚ «£Áå¸À J®èªÀÇ PÀĶ PÉÆqÀĪÀAvÀzÀÄÝ..ºÁUÀAvÀ £Á AiÀiÁªÀUÀ®Æ PÁ¦ü qÉà UÉ ºÉÆÃUÀĪÀªÀ£À®è.
E£ÉßãÀÄ ºÉÆgÀqÀĪÀ C£ÀÄߪÀµÀÖgÀ°è 60 dAiÀÄ£ÀUÀgÀ J¹ §¸ï £À M¼ÀVAzÀ AiÀiÁªÀÅzÉÆÃ PÁtzÀ PÀtÄÚ ¥sÉÆÃ¤£À°è ªÀiÁvÀ£ÁqÀÄvÁÛ £À£ÀߣÀ£Éßà £ÉÆÃqÀÄwvÀÄÛ CzÉà ¸ÀªÀÄAiÀÄPÉÌ £À£ÀUÀÆ MAzÀÄ PÀgÉ §AvÀÄ ,.. AiÀiÁªÁUÀ®Æ £ÀAUÀÆ ªÀ¹ PÉÆqÁè C£ÉÆßà gÁªÀÄ £Á¤£ÀÆß UÉÆ®ænÖ vÀªÀ E«ßà ªÀiÁVØ §¸ÁßUÉ §vÀÛ£ï EgÁè CAvÀ mÉÆÃ¯ï UÉÃmï C°è PÁ¬Ä¹©lÖ ,.. ºÉÆÃUÀĪÀ næ¥ï UÉ ªÉÆzÀ®Ä JzÀÄgÀÄUÉÆAqÀªÀgÀÄ «dAiÉÄÃAzÀæ ¸Àgï §AzÉÆqÀ£É C¥Àà£ÀAvÉ PÉÊ »rzÀÄ AiÀiÁPÉÆæÃ §¤ß ºÉÆÃUÉÆÃt CAzÀÄæ £ÁªÀÅ §jÛëà ¤ÃªÀÅ ºÉÆÃV CAvÀ ºÉýzɪÀÅ .. £À£ÀUÉ ¸Àé®à D±ÀÑgÀåªÀÇ DAiÀÄÄÛ AiÀiÁªÁUÀ®Æ  ¥sÁgÀä¯ï DV PÁtÂÛzÀÝ «dAiÉÄÃAzÀæ ¸Àgï CAzÀÄ ªÀiÁvÀæ nà ±Àmï ð zsÀj¹ n¥ï mÁ¥ï DVzÀÄæ..£ÀAvÀgÀ gÁªÀÄ §gÀ¯Éà E®è ¸ÀªÀÄAiÀĪÀÇ 5 DAiÀÄÄÛ ¥sÉÆÃ£À¯Éèà gÁªÀĤUÉ EgÉÆÃ ¨ÉÊUÀļÀUÀ¼À£É߯Áè ZÉ£ÁßV ¥sÉÆÃ¤UÉà GVzÀÄ £ÉAzÀÄ vÉÆ¥ÉàAiÀiÁAiÀÄÄÛ..PÀqÉUÉ gÁªÀÄ §AzÀ ªÉÆzÀ¯Éà ¸ÀªÀÄAiÀĪÁVvÀÄÛ AiÀÄgÁæ ©jæ C°èAzÀ gÉʯÉéà ¸ÉÖõÀ¤ßUÉ zËqÁ¬Ä¹zɪÀÅ...

J®ègÀ ªÀÄzÉå £À£ÀUÉ ¥sÉÆÃPÀ¸ï DzÀªÀgÀÄ «ÃuÁ JAUï CAqï J£ÀjÓnPï «ÃuÁ ªÉÄÃqÀA. CªÀgÀ ªÀÄÄUÀÝ ªÀÄ£À¹£À gËzÀæ ªÀÄÄR ¨ÉªÀgÀ ºÀ¤UÀ½AzÀ C®APÀÈvÀªÁVvÀÄÛ. E£ÀÄß ªÀiÁvÀ£Ár¹zÀgÉ EµÀÄÖ ¯ÉÃlÄ AiÀiÁPÉ JAzÀÄ ¨ÉÊzÁgÀÄ CAvÉý ¸ÀĪÀÄä£É mÉæöÊ£ÀÄ ºÀwÛzɪÀÅ. zÉÆvï CAvÀ zÀ¥ÀàUÉ JzÀÄgÀÄUÉÆAqÀªÀ £ÀªÀÄä vÀªÀÄÄäqÀÄ £ÁUÉÃAzÀæ CªÀ£ÉƧ⠣À°è ªÀiÁvÀæ PÀĶAiÀÄ C¯ÉUÀ¼ÀÄ G©â G©â £ÉÆgÉAiÀiÁqÀÄwzÀݪÀÅ E£ÀÄß G½zÀªÀgÀÄ ¸ÀĪÀÄä£É J¯ÉÆèà AiÀÄÄzÀÝPÉÌ ºÉÆÃUÀĪÀ ºÁUÉ, zÉñÀªÀ£Éßà ©lÄÖ ºÉÆÃUÀÄwÛgÀĪÀªÀgÀ ºÁUÉ ¸ÀĪÀÄä£É ¥ÉÃZÀÄ ªÉÆgÉ ºÁQPÉÆAqÀÄ QlQPÀqÉ ºÉÆÃUÀĪÀ §gÀĪÀ d£ÀgÀ£Éßà £ÉÆÃqÀÄwzÀÝgÀÄ.
CAvÀÆ EAvÀÆ §AzÀ PÀĶUÉ ¨ÁåUÀÄ J¸ÉzÀÄ eÁUÀ»rzÀÄ PÀÄAvÉÆÃ ,.. £ÀªÀÄä ªÀÄÄA¢£À PÁgÀåPÀæªÀÄ wAr ºÀÄqÀÄPÀÄ«PÉ, ªÉÆzÀ® ¨ÉÃmÉUÉ §°AiÀiÁzÀzÀÄÝ ªÀÄÄUÀÝ ªÀiÁ£À¸À gÀ«PÀĪÀiÁgÀ£À ¨ÁåUÀÄ DªÀ vÀªÀÄ¢zÀÝ J¯Áè wArUÀ¼À£Àß PÀëuÁgÀÞzÀ¯Éè wAzÀÄ DAiÀÄÄÛ, D £ÀAvÀgÀ ¤zÁ£ÀªÁV gÁªÀÄ vÀ£Àß CwÛUÉ ªÀiÁrPÉÆnÖzÀÝ M§âlÄÖ£ÀÄß ºÀjzÀÄ ºÀAZÁqÀĪÀAvÉ QvÀÄÛ wAzɪÀÅ.. »ÃUÉà PÀvÀÛ¯ÁAiÀÄÄÛ,..£ÀªÀÄUÀAvÉÆÃ mÉæöʤ£À PÀĶUÉ ¤zÉÝÃAiÉÄà §gÀzÀÄ EAvÀºÀÄUÀ¼À ªÀÄzÉå UÉÆgÀPÉ ºÉÆqÉAiÀÄÄwzÀÝ ±ÁåªÀįÁ,PÁªÀå E§âgÀ£ÀÆß PÀAqÀÄ J°è®èzÀ PÉÆÃ¥À §AvÀÄ JAvÁ ªÀiÁgÁAiÀÄ EªÉæÃ£ÀÄ CvÉÛ ªÀÄ£ÉUÉ ºÉÆVÛÃzÁgÁ? næ¥ï C®Æè ¤zÉÝà ªÀiÁrÛzÁÝgÀ¯ÉÆèà Eªïæ ªÀÄ£É ºÁ¼ÁUÀ »qÉÆÌà FZÉ J¸ÀÄÝ §ÄqÀĪÀiÁ CAzÀ gÁªÀÄ,..EªÀÅUÀ¼À ªÀÄzÉå DUÁUÀ mÁAiÀiï ¯Émï £À ªÁ¸À£É WÀªÀiï JAzÀÄ £À£Àß PÉÆÃ¥ÀªÀ£ÀÄß E£ÀßµÀÄÖ ºÉZÁÑUÀĪÀAvÉ ªÀiÁrvÀÄ, £ÀªÀÄUÀAvÀÄ ¤zÉæAiÉÄà §gÀzÀÄ,..
EªÉgÉ®ègÀ ªÀÄzÉå ²æÃ¤ªÁ¸À ¸Àgï ¥Àmï CAvÀ ¥ÁåAn¤AzÀ §gÀÄäqÁ ZÀrØUÉ vÀªÀÄä «£Áå¸À §zÀ°¹PÉÆArzÀÝgÀÄ EªÀjAzÀ  ¥ÉæÃjvÀgÁzÀ J®ègÀÆ ¥ÁåAlÄ PÀ¼Àa §gÀÄäqÁ 3/4  ZÀrØUÀ½UÉ §zÀ¯ÁzÀgÀÄ.. ªÁmï J «ÄgÁPÀ¯ï;;;; £Á£ÀÄ gÀ« vÀªÀÄÄäqÀÄ §gÀĪÀ ¤¯ÁÝtUÀ¼À¯É¯Áè E½zÀÄ , ¤¯ÁÝtzÀ°ègÀĪÀªÀjUɯÁè £ÀªÀÄä ±ÉPÉ,ZÀrØ ¥ÉÆÃµÁPÀÄUÀ¼À£É߯Áè vÉÆÃj¹ ¸ÀĪÀÄä£É K£ÀÆ PÉÆ¼Àî¢zÀÝgÀÆ CzɵÀÄÖ EzɵÀÄÖ JAzÀÄ PÉý §gÀĪÀ ¤zÉæAiÀÄ£ÀÆß CªÀjUÀÆ mÁæ£ï ¥sÁgï ªÀiÁqÀÄwzÉݪÀÅ,.. mÉæöʤ£À ¤ÃgÀÄ,WÀªÉÄä£ÀĪÀ mÁAiÀiï ¯Émï ªÁ¸À£É,DUÁUÀ bÁAiÀiï bÁAiÀiï J£ÀÄߪÀ d£À FUÀ®Æ PÀuï ªÀÄÄAzÉ vÉðºÉÆÃUÀĪÀ MAzÀÄ C£ÀĨsÀªÀ.mÉæöÊ£ï £À°è PÉÆlÖ Hl ZÉ£ÁßVvÀÄÛ J®ègÀ£ÀÄß J©â¹ J©â¹ ªÀİ΢ÃgÁ? ªÀİ΢ÃgÁ ? JAzÀÄ ªÀiÁvÀ£Ár¹zÀÆÝ DAiÀÄÄÛ..§AzÀ ¸ÉÖõÀ¤ß£À¯Éè¯Áè PÀ®gï ªÀiÁåZï DUÀzÀ d£ÀgÀ£ÀÄß ¨ÉÃqÀzÀ ¨sÁµÉAiÀÄ°è ¸ÀAªÀ»¹ ªÀÄÆPÀgÀAvÉ £Àn¹zÀÆÝ DAiÀÄÄÛ PÉÆ£ÉUÉ £ÁªÀÅ E½AiÀÄĪÀ ¸ÀܼÀ §AvÀÄ C°èAzÀ §¸ï £À°è ºÉÆÃmÉ®UÉ ºÉÆgÉmɪÀÅ. J®Ææ ¥sÉæ±ï C¥ï DV CgɤzÉæAiÀİè PÉÆaÑ£ï UÉ ºÉÆÃzɪÀÅ. PÉÆaÑ£ï ¨ÉÆÃlÄUÀ¼ÀÄ D £ÀUÀgÀ ,zÀÆgÀ¢AzÀ £ÉÆÃr £ÀUÀĪÀ «ÃuÁ ªÉÄÃqÀA £ÀUÀÄ J®èªÀÇ ¤zÉæAiÀÄ£ÀÄß MzÉÆÝÃr¹zÀªÀÅ. C°èAzÀ £ÀªÀÄä ¸ÀtÚ PÁåªÉÄgÁ PÉÊ ZÀ¼ÀPÀ ±ÀÄgÀĪÁAiÀÄÄÛ. PÀ°à¸À¯ÁUÀzÀ C®à PÀëªÀÄvÉAiÀÄ GvÀÄÛAUÀzÀ PÀIJAiÀÄ£ÀÄß D ¨ÉÆÃn£ÉƼÀUÉ PÀAqɪÀÅ EªÀÅUÀ¼À ªÀÄzÉå ºÉʸÀÆÌ°£À°è N¢zÀ ªÁ¸ÉÆÌÃqÀUÁªÀÄ,qÀZÀÑgÀÄ,¥sÉæªÀÄZÀgÀÄ J®ègÀÆ £É£À¥ÁzÀgÀÄ,.. ¤ÃgÉAzÀgÉ ºÁj ©Ã¼ÀĪÀµÀÄÖ vÀ®è¤¸ÀÄwÛzÀÝ ªÀÄ£À D ¸ÀªÀÄÄzÀæzÀ ªÀÄzÀåPÉÌ ºÉÆÃzÁUÀ £Á£ÀÄ K£ÀÆ C®èzÀ ¤ÃgÀªÀ ªÀiË£À,§zÀÄQ£À ¨sÀAiÀÄ,C®à±ÀÆ£ÀåvÉAiÀÄ dUÀvÀÄÛ J®èªÀÇ MªÉÄäUÉ PÁt¸ÀvÉÆqÀVzÀªÀÅ.. ºÉÆÃUÀÄ ºÉÆÃUÀÄvÁÛ gÁ² gÁ² ¤ÃgÀÄ PÀAqÀÄ ºÀÈzÀAiÀĪÀÇ ¸ÀzÁÝUÀzÉ zsÀUï zsÀUï JA§ vibration mode UÉ §zÀ¯ÁzÀªÀÅ.vÉÊ® WÀlPÀUÀ¼ÀÄ,¢éÃ¥ÀUÀ¼ÀÄ,ªÁå¥Ájà PÉÃAzÀæUÀ¼ÀÄ,ºÀqÀUÀÄUÀ¼ÀÄ,zÉÆqÀØ ©qïÓ J®èªÀÇ CzÀÄâvÀªÉ¤¹zÀªÀÅ. ZÀ°¸ÀÄwzÀÄÝzÀÄ ¨ÉÆÃmÉÆAzÉà J®èªÀÇ ¤ÃgÀªÀ ªÀiË£À, PÀtÄÚ ºÁ¬Ä¹zÀµÀÆÖ zÀÆgÀ §jAiÀÄ ¤ÃgÉÃ..§¸ï ¤¯ÁÝtzÀAvÉ DUÁUÀ §gÀĪÀ ¨ÉÆmï ¤¯ÁÝtUÀ¼ÀÄ, §¯ÉUÉ §zÀÄPÀ »rAiÀÄ®Ä ºÉÆgÀl ªÀÄ£ÀĵÀågÀÄ J®ègÀÆ CZÀѽAiÀÄzÉ G½zÀªÀgÀÄ.
2£Éà ¢£À PÁ®rUÉ ¨ÉÃn ¤ÃrzɪÀÅ ªÀÄ£À vÀtÚUÁUÀĪÀµÀÄÖ ¤ÃgÀ°è «ÄAzɪÀÅ.. C¯Éè £À¢AiÀÄ zÀqÀzÀ §½ PÀÆvÀÄ GAqÀ £ÀÄUÉÎÃPÁ¬Ä ¸ÁA¨Áj£À Hl GAqÀµÀÆÖ ¸À«AiÀiÁVvÀÄÛ.EªÀÅUÀ¼À ªÀÄzÉå £ÀÄUÉÎà PÁ¬Ä vÀåf¹ «ÄãÀÄ vÀj¹ wAzÀªÀgÀÄ,ªÁAw ªÀiÁrPÉÆAqÀªÀgÀÄ DlPÀÄÌAlÄ ¯ÉPÀÌQÌ®è.
ªÀÄvÀÛzÉà ±Á¦AUÀÄUÀ¼ÀÄ £ÀªÀÄUÀ®èzÀ ºÀÄqÀÄVAiÀÄjUÉ, £ÀqÀÄ£ÀqÀÄªÉ JAzÀÆ ºÁPÀzÀ §mÉÖUÀ¼À ¥ÀæzÀ±Àð£, NqÁl,PÀÄtÂvÀ,ªÀÄ£À¹UÉ PÀ£ÀßqÀP,À EvÁå¢.
3£Éà ¢£À CzÀÄâvÀªÉ¤¹vÀÄÛ CzÀÄ ªÀÄÄ£Áßgï ¨ÉÃn EAvÀºÀ ±ÉPÉAiÀÄ®Æè vÀA¥ÁVj¹zÀ D Vj²RgÀUÀ½UÉ , nà vÉÆÃlUÀ½UÉ £À£ÀßzÉÆAzÀÄ zÉÆqÀØ ¸À¯ÁªÀiï. JvÀÛ £ÉÆrzÀgÀÆ §jà ºÀ¹gÀ £ÉvÀÛgÀÄ. §AiÀÄ®Ä ¹ÃªÉÄAiÀÄ £ÁrAzÀ §AzÀ ªÀÄÄUÀÝ zÉêÉêÀÄzÀæ¤UÉ MªÉÄäUÉ CµÀÄÖ ºÀ¹gÀ PÀAqÀÄ ¤¨ÉâgÀUÁzÀ£ÀÄ. JA¢UÀÆ AiÀiÁgÉÆA¢UÀÆ vÀgÀUÀwAiÀÄ°è ªÀiÁvÀ£ÁqÀzÀ CªÀ wow beautiful C£ÀÄߪÀÅzÀPÉÌ CzÉãÉÃ£ÉÆÃ ¸ÀĪÀÄä£É PÉÊ eÉÆvÉ vÀ¯É C¯Áèr¸ÀÄvÁÛ ¸À£ÉߪÀiÁqÀÄvÁÛ ªÀÄvÉÛ ªÀÄvÉÛ ºÉüÀÄwzÁÝ,...

-²ªÀ¥Àæ¸ÁzÀ ¥ÀlÖtUÉgÉ





Monday, June 23, 2014

ದೇವರು ಹೊಸೆದ ಪ್ರೇಮದ ದಾರ - ಮುತ್ತಿನ ಹಾರ


ಚಿತ್ರ: ಮುತ್ತಿನ ಹಾರ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಡಾ.ಎಂ.ಬಾಲಮುರಳಿ ಕೃಷ್ಣ


ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ

ಬೇಸಿಗೆಯಲಿಯ ಸೂರ್ಯ ಭೂತಾಯಿಯ ಸುಡುತಾನೆ
ದೇವರು ಅಗ್ನಿ ಪರೀಕ್ಷೆ ಸಿಳಿವಿಲ್ಲದೆ ಕೊಡುತಾನೆ
ಬೇಡ ಏಂದರೆ ನಾವು ಸುಡದೆ ಇರುವುದೆ ನೋವು
ಸರಿಯೋ ಕಾಲದ ಜೊತೆಗೆ ವ್ಯಸನ ನಡೆವುದು ಹೊರಗೆ

ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ

ಮೇಘವೊ ಮೇಘವೊ ಮುಂಗಾರಿನ ಮೇಘವೊ
ಮೇಘವೊ ಮೇಘವೊ ಹಿಂಗಾರಿನ ಮೇಘವೊ
ಹನಿ ಹನಿ ಹನಿ ಹನಿ ಚಿಟ ಪಟ ಮಳೆ ಹನಿ
ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
ಗುಡು ಗುಡು ಗುಡು ಗುಡು ಗುಡುಗೊ ಗುಡುಗಿನ
ಪಳ ಪಳ ಮಿಂಚುವ ಸಿಡಿಯುವ ಸಿಡಿಲಿನ
ಧರಣಿ ತಣಿಸುವ ಭರಣಿ ಮಳೆ ಮಳೆ
ಹಸ್ತ ಚಿತ್ತ ಸ್ವಾತಿ ಮಳೆ ಮಳೆ
ಸಿಡಿಯುವ ಭೂಮಿಗೆ ಗಂಗಾವಾಹಿ
ಉರಿಯುವ ಪ್ರೇಮಕೆ ಅಮೃತವರ್ಷಿಣಿ

ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೆ
ನದಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು
ಋತುಗಳ ಚಕ್ರವು ತಿರುಗುತ ಇರಲು
ಕ್ಷಣಿಕವೆ ಕೊಗಿಲೆ ಗಾನದ ಹೊನಲು

ಬಿಸಿಲೊ ಮಳೆಯೊ ಚಿಗುರೊ ಹಿಮವೊ
ಅಳುವೋ ನಗುವೊ ಸೊಲೋ ಗೆಲುವೊ
ಬದುಕೆ ಪಯಣ ನಡಿಯೆ ಮುಂದೆ
ಒಲವೆ ನಮಗೆ ನೆರಳು ಹಿಂದೆ

ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ

Courtesy: http://kn.wikisource.org/wiki/ಮುತ್ತಿನ_ಹಾರ_-_ದೇವರು_ಹೊಸೆದ

Wednesday, June 18, 2014

ತಲೆನೋವಿಗೊಂದು ಮದ್ದು - ರಾಜೇಶ್ ಶ್ರೀವತ್ಸ

ತಲೆನೋವಿಗೊಂದು ಮದ್ದು 
ಸಹಪಾಠಿಗಳೊಡನೆ ಹಂಪಿಯ ಕಲಾಶಿಬಿರ ಮುಗಿಸಿ ಹೊಸಪೇಟೆಯಿಂದ ರೈಲಿನಲ್ಲಿ ಹಿಂತಿರುಗುತ್ತಿದ್ದೆ. ಬಳ್ಳಾರಿಯ ಘೋರ ಬಿಸಿಲಿಗೆ ಹದಿನೈದು ದಿನಗಳ ಕಾಲ ಬೆಂದು ಸಾಕಾಗಿ ಹೋಗಿತ್ತು. ರೈಲು ಹತ್ತಿದರೆ ಸರಿಯಾಗಿ ಕಾಲೂರಿ ನಿಲ್ಲಲೂ ಜಾಗವಿಲ್ಲ. ಅಂತೂ ಯಾವುದೋ ಊರಿನಲ್ಲಿ ನಮಗೆಲ್ಲಾ ಕೂರಲು ಸ್ಥಳ ದೊರಕಿತು. ದಣಿದಿದ್ದ ಎಲ್ಲರೂ ಕೆಲನಿಮಿಷಗಳಲ್ಲೇ ನಿದ್ದೆಗೆ ಜಾರಿದರು . ಆಗ ನನಗೆ ಶುರುವಾಯ್ತು ತಲೆ ನೋವಿನ ಕಾಟ. ತಲೆಯಮೇಲೆಲ್ಲಾ ನೂರಾರು ಮೊಳೆಗಳನ್ನು ಹೊಡೆಯುತ್ತಿರುವಂತೆ , ಆನೆ ಕಾಲಿಟ್ಟಂತೆ … ಅನುಭವಿಸಲಾಗದ ನೋವು. ಸುಖ ನಿದ್ದೆಗೆ ಜಾರಿದ ನನ್ನ ಸಹಪಾಠಿಗಳನ್ನು ನೋಡಿದಾಗಲೆಲ್ಲತಲೆನೋವು ಜಾಸ್ತಿಯಾದಂತಾಗುತ್ತಿತ್ತು. ತಲೆನೋವಿನ ಮಾತ್ರೆಗಳು ಮುಗಿದಿದ್ದು ನೆನಪಿದ್ದರೂ ಸುಮ್ಮನೆ ಕೈಚೀಲ ತಡಕಾಡಿ ಮಾತ್ರೆ ಹುಡುಕಿದ್ದಾಯ್ತು. ಕೊನೆಗೆ ಮನಸಿಲ್ಲದಿದರೂ ಒಬೊಬ್ಬರನ್ನೇ ಎಬ್ಬಿಸಿ ಮಾತ್ರೆ ಕೇಳಿದ್ದಾಯ್ತು. ಅವರೆಲ್ಲ ಮಾತ್ರೆಗೆ ತಡಕಾಡಿ ಇಲ್ಲ ಎಂದು ಹೇಳಿ ಮತ್ತೆ ನಿದ್ದೆಗೆ ಜಾರಿದ್ದಾಯ್ತು.
ಅಷ್ಟರಲ್ಲಿ ನಮ್ಮ ಹತ್ತಿರವೇ ಕುಳಿತು ಇದನೆಲ್ಲಾ ಗಮನಿಸುತ್ತಿದ್ದ ಲಂಬಾಣಿ ಅಜ್ಜಿಯೊಬ್ಬರು ಹತ್ತಿರ ಬಾ ಎಂದು ಕರೆದಂತಾಯ್ತು. ನನ್ನನ್ನೇ ಕರೆದದು ಎಂದು ಖಚಿತಪಡಿಸಿಕೊಂಡು ಅಜ್ಜಿಯ ಬಳಿ ನಡೆದೆ. (ಅವರೆಲ್ಲಾ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಕೊಯ್ಲಿನ ಕೂಲಿ ಕೆಲಸಕ್ಕೆ ಹೊರಟವರು)
“ಏನು ತಲೆನೋವಾ? ”
“ಹೂಂ “ ಎಂದೆ ನರಳುತ್ತಾ
“ನಾನು ಮದ್ದು ಕೊಟ್ರೆ ಅಗುತ್ತಾ?”
ಎನೋ ನಾಟಿ ಔಷಧವಿರಬೇಕೆಂದು “ಹೂಂ” ಆಗುತ್ತೆ ’ ಅಂದೆ
ಅಜ್ಜಿ ಪಕ್ಕದಲ್ಲಿದ್ದ ಹುಡುಗನಿಗೆ ಔಷಧಿ ತರುವಂತೆ ಕಣ್ಸನ್ನೆ ಮಾಡಿತು. ಆ ಹುಡುಗ ಔಷಧಿ ತರಲು ಎದ್ದು ನಡೆದ .
ನಾನು ಅಜ್ಜಿಯ ಪಕ್ಕದಲ್ಲೇ ಜಾಗ ಮಾಡಿಕೊಂಡು ನರಳುತ್ತಾ, ತೂಕಡಿಸುತ್ತಾ ಕೂತು ಕೊಂಡೆ. ಎಚ್ಚರವಾದಾಗ ಅಜ್ಜಿ ಎಲೆ ಅಡಿಕೆ ಚೀಲದಿಂದ ಸ್ವಲ್ಪ ಸುಣ್ಣ ತೆಗೆದು ಕೈಮೇಲೆ ಹಾಕಿಕೊಳ್ಳುತ್ತಾ ಇತ್ತು. ಹುಡುಗ ಕೈಯ ಮರೆಯಲ್ಲಿ ಔಷಧಿ ಹಿಡಿದುಕೊಂಡು ಮುಸಿ ಮುಸಿ ನಗುತ್ತಾ ಇದ್ದ. ಹುಡುಗನಿಂದ ಔಷಧಿ ತೆಗೆದುಕೊಂಡ ಅಜ್ಜಿ ”ಇದನ್ನ ತಿಕ್ಕಿ ನಿನ್ನ ಮೂಗಿಗೆ ಹಿಡಿತೀನಿ ಜೋರಾಗಿ ಉಸಿರು ಎಳ್ಕೋ ಬೇಕು “ ಅಂತ ಹೇಳಿದರು. “ ’ಹೂಂ” ಅಂದೆ. ಅಜ್ಜಿಯ ಅಣತಿಯಂತೆ ಹುಡುಗ ನನ್ನನ್ನು ಅಲ್ಲಾಡದಂತೆ ಗಟ್ಟಿಯಾಗಿ ಹಿಡಿದ.ಯಾಕಪ್ಪಾ ಎಂದು ನಾನು ಯೋಚಿಸುವಷ್ಟರಲ್ಲಿ ಅಜ್ಜಿ ಸುಣ್ಣದೊಡನೆ ಔಷಧವನ್ನು ಅಂಗೈಲಿ ಗಸ ಗಸನೆ ಉಜ್ಜಿ “ ಜೋರ್ ಉಸ್ರೆಳಿ ಉಸ್ರೆಳಿ ” ಎಂದು ಹೇಳುತ್ತಾ ನನ್ನ ಮೂಗಿಗೆ ಅಂಗೈ ಹಿಡಿದೇ ಬಿಟ್ಟಿತು. ನಾನು ಸ್ವಲ್ಪವೂ ಯೋಚಿಸದೆ ಜೋರಾಗಿ ಉಸಿರೆಳೆದೇಬಿಟ್ಟೆ… ’ಅಯ್ಯೋ ನರಕವೇ… ವಾಕರಿಸಿದಂತಾಗಿ ಹಿಂದೆ ಸರಿಯಲು ಪ್ರಯತ್ನಿಸಿದೆ. ಆ ದಾಂಡಿಗ ಹುಡುಗ ಬಿಡಬೇಕಲ್ಲ. ಅಜ್ಜಿ “ ಇನ್ನೊಂದ್ ಸರ್ತಾ ಇನ್ನೊಂದ್ ಸರ್ತಾ ” ಎನ್ನುತ್ತಾ ತನ್ನ ಅಂಗೈಯನ್ನು ಮೂಗಿನ ಹತ್ತಿರವೇ ಹಿಡಿದು ಕೊಂಡಿತ್ತು. ಅಂತೂ ಇಬ್ಬರಿಂದಲೂ ತಪ್ಪಿಸಿಕೊಂಡು ಅಲ್ಲೇ ಕುಕ್ಕರಿಸಿದೆ. ವಾಕರಿಕೆ ಬರುತ್ತಿದ್ದರೂ ತಡೆದುಕೊಂಡು ಮುದುಡಿ ಕುಳಿತೆ. ಅಜ್ಜಿ ಬೆನ್ನು ನೇವುತ್ತಾ “ ಈಗ ಸರಿಹೋಗುತ್ತೆ ಈಗ ಸರಿಹೋಗುತ್ತೆ” ಅನುತ್ತಾ ಇತ್ತು. ೫-೬ ನಿಮಿಷದಲ್ಲಿ ತಲೆ ಹಗುರಾಗಿ ನೋವು ಮಾಯವಾಯ್ತು. ತೂಕಡಿಕೆ ಶುರುವಾಯ್ತು ಸುಖ ನಿದ್ದೆಯೂ ಬಂತು.
ಅಷ್ಟಕ್ಕೂ ಆ ಹುಡುಗ ರೈಲಿನಲ್ಲಿ ಹುಡುಕಿ ತಂದಿದ್ದೇನು? ಅಜ್ಜಿ ಸುಣ್ಣದೊಡನೆ ತಿಕ್ಕಿದ್ದು ಏನು ಅಂತೀರಾ?
’ ತಿಗಣೆ ’

Saturday, June 14, 2014

ಸತ್ಯ ನಾಡೆಲ್ಲ ನಮ್ಮ ಹೆಮ್ಮಯ ಪ್ರತೀಕವೋ ಅಥವಾ ನಮ್ಮ ವ್ಯವಸ್ಥೆಯ ದೌರ್ಬಲ್ಯವೋ? - Sathvik

ಸತ್ಯ ನಾಡೆಲ್ಲ ನಮ್ಮ ಹೆಮ್ಮಯ ಪ್ರತೀಕವೋ ಅಥವಾ ನಮ್ಮ ವ್ಯವಸ್ಥೆಯ ದೌರ್ಬಲ್ಯವೋ?
ಫೆಬ್ರವರಿ 4ರಂದು ವಿಶ್ವದ ಐ.ಟಿ ದಿಗ್ಗಜ ಮೈಕ್ರೋಸಾಫ್ಟ್ ತನ್ನ ಹೊಸ ಸಿ.ಇ,ಓ ಆಗಿ ಭಾರತೀಯ ಮೂಲದವರಾದ ಸತ್ಯ ನಾಡೆಲ್ಲ ಅವರನ್ನು ನೇಮಿಸಿತು. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಸತ್ಯ ನಾಡೆಲ್ಲ ನಮ್ಮ ಕಂಪನಿಗೆ ನೀಡಿರುವ ಕೊಡುಗೆ ಮತ್ತು ಅವರ ಪ್ರತಿಭೆಯನ್ನು ಪರಿಗಣಿಸಿ ಅವರನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು. ನಮ್ಮ ಭಾರತೀಯ ಮಾಧ್ಯಮಗಳು ಸತ್ಯ ನಾಡೆಲ್ಲ ಭಾರತದ ಹೆಮ್ಮೆ ಎಂದು ಬಣ್ಣಿಸಿದವು. ಆದರೆ ಇಲ್ಲಿ ನಾವು ಪರಾಮರ್ಶಿಸುವ ವಿಷಯವೆಂದರೆ ಸತ್ಯ ನಾಡೆಲ್ಲರಂತ ಪ್ರತಿಭಾವಂತರು ಭಾರತದಲ್ಲೇಕೆ ಯಶಸ್ವಿಯಾಗಲಿಲ್ಲ? ಇದು ನಮ್ಮ ವ್ಯವಸ್ಥೆಯ ದೌರ್ಬಲ್ಯವಲ್ಲವೇ? ಸತ್ಯ ನಾಡೆಲ್ಲ ಎಷ್ಟು ಪ್ರತಿಭಾವಂತರೆಂದರೆ ಅವರು ಮುಖ್ಯಸ್ಥರಾದ ಪ್ರತಿ ವಿಭಾಗದಲ್ಲೂ ಅವರು ಮೈಕ್ರೋಸಾಫ್ಟ್ ಗೆ ಹೆಚ್ಚು ಲಾಭ ತಂದುಕೊಟ್ಟಿದ್ದಾರೆ ಹಾಗಾಗಿಯೇ ಬಿಲ್ ಗೇಟ್ಸ್ ಅವರನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಿರುವುದು. ಇಂತಹ ವ್ಯಕ್ತಿ ಭಾರತದಲ್ಲೇ ನೆಲಸಿ, ಅವರಿಗೆ ವಿಪುಲ ಅವಕಾಶಗಳು ದೊರಕಿ ಮೈಕ್ರೋಸಾಫ್ಟ್ ನಂತಹ ಕಂಪನಿಯನ್ನು ಭಾರತದಲ್ಲಿ ಹುಟ್ಟುಹಾಕಿದಿದ್ದರೆ ಭಾರತ ಐ.ಟಿ ಕ್ಷೇತ್ರದಲ್ಲಿ ಅಮೆರಿಕಾಕ್ಕೆ ಸರಿಸಮನಾಗಿ ನಿಲ್ಲುತ್ತಿರುತ್ತಿಲ್ಲವೇ? ಏಕೆ ಸತ್ಯ ನಾಡೆಲ್ಲರಂತ ಪ್ರತಿಭಾವಂತರ ಸೇವೆ ನಮಗೆ ಸಿಗಲಿಲ್ಲ?
ನಾಡೆಲ್ಲ ಭಾರತದಲ್ಲಿ ಯಶಸ್ವಿಯಾಗದೇ ಇರುವುದಕ್ಕೆ ಕಾರಣ ನಮ್ಮ ವ್ಯವಸ್ಥೆ, ನಮ್ಮ ವ್ಯವಸ್ಥೆಯ ದೌರ್ಬಲ್ಯ. ನಮ್ಮ ವ್ಯವಸ್ಥೆ ಸತ್ಯ ನಾಡೆಲ್ಲರಂತ ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಅವರಿಗೆ ವಿಪುಲ ಅವಕಾಶ ನೀಡಿದಿದ್ದರೆ, ಸತ್ಯ ನಾಡೆಲ್ಲ ನಮ್ಮ ಆಸ್ತಿಯಾಗುತ್ತಿದ್ದರು. ಆದರೆ ನಮ್ಮ ಸರ್ಕಾರಗಳು ಐ.ಟಿ ಮತ್ತು ವೈಜ್ಞಾನಿಕ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡದೇ ಇರುವುದರಿಂದ ಬಹಳಷ್ಟು ಪ್ರತಿಭಾವಂತರನ್ನು ಭಾರತ ಇಂದು ಕಳೆದುಕೊಳ್ಳುತ್ತಿದೆ.
ನಮ್ಮ ಸರ್ಕಾರಗಳು ಯುವಕರನ್ನು ಪ್ರೋತ್ಸಾಹಿಸಿ, ಐ.ಟಿ ಉದ್ಯಮಗಳನ್ನು ತೆರೆಯಲು ವಿಪುಲ ಅವಕಾಶಗಳನ್ನು ಕೊಟ್ಟಿದ್ದಿದ್ದೆರೆ ಇಂದು ಆಪಲ್, ಐ.ಬಿ.ಎಂ, ಮೈಕ್ರೋಸಾಫ್ಟ್, ಸ್ಯಾಮ್ ಸ್ಯಾಂಗ್ ಕಂಪೆನಿಗಳನ್ನು ಮೀರಿಸುವಂತಹ ಕಂಪನಿಗಳು ಭಾರತದಲ್ಲಿರುತ್ತಿದ್ದವು. ಈ ಮಾತನ್ನು ನಾನು ಸುಮ್ಮನೆ ಹೇಳುತ್ತಿಲ್ಲ. ವಿಶ್ವದ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೆರಿಕಾ ಭಾರತೀಯರ ಮೇಲೆ ಅವಲಂಬಿತವಾಗಿದೆ. 3.22 ಮಿಲಿಯನ್ ಭಾರತೀಯರು ಅಮೆರಿಕಾದಲ್ಲಿದ್ದಾರೆ. ಅಮೆರಿಕಾದಲ್ಲಿರುವ 38% ವೈದ್ಯರು, 12% ವಿಜ್ಞಾನಿಗಳು, 36% ನಾಸಾ ಉದ್ಯೋಗಿಗಳು, 34% ಮೈಕ್ರೋಸಾಫ್ಟ್ ಉದ್ಯೋಗಿಗಳು, 28% ಐ.ಬಿ.ಎಂ ಉದ್ಯೋಗಿಗಳು ಭಾರತದವರು. ಅಮೇರಿಕಾದ ಆದಾಯದಲ್ಲಿ ಭಾರತೀಯರ ಕೊಡುಗೆಯು ಇದೆ. ಈ ವಿಷಯ ಅರಿತ ಅಮೇರಿಕಾ ಅಧ್ಯಕ್ಷ ಒಬಾಮ ನಾವು ಭಾರತೀಯರನ್ನು ನೋಡಿ ಕಲಿಯಬೇಕೆಂದು ತಮ್ಮ ವಿಧ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಭಾರತೀಯರು ಸರಸ್ವತಿ ಪುತ್ರರು. ನಾವು ಸರಸ್ವತಿಯನ್ನು ವಿದ್ಯಾ ದೇವಿಯೆಂದು ಪೂಜಿಸುತ್ತೇವೆ. ಜಗತ್ತಿನ ಮೊದಲ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದ್ದು ಭಾರತದಲ್ಲಿ. 4ನೇ ನಳಂದಾ ವಿಶ್ವವಿದ್ಯಾಲಯದಲ್ಲಿ 4500 ಕ್ಕೂ ಹೆಚ್ಚು ವಿದ್ಯಾರ್ಥಿಗಳು 60ಕ್ಕೂ ಹೆಚ್ಚು ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಇತರ ದೇಶಗಳು ಕಣ್ತೆರೆಯುವ ಮೊದಲೇ ಭಾರತ ಜಗತ್ತಿಗೆ ಶಿಕ್ಷಣದ ಬೆಳಕನ್ನು ನೀಡಿತ್ತು. ಮುಂದೆ ಭಾರತವನ್ನು ಆಕ್ರಮಿಸಿದ ಬ್ರಿಟಿಷರು ನಮ್ಮ ಸ್ವಾಭಿಮಾನವನ್ನು ಹೊಸಕಿ ಹಾಕಲು ನಮ್ಮ ಚರಿತ್ರೆಯನ್ನೇ ತಿರುಚಿದರು.
ನಮ್ಮ ದೇಶವನ್ನು ಬಹುಪಾಲು ಆಳಿದ ಕಾಂಗ್ರೆಸ್ ಜನರಲ್ಲಿ ಸ್ವಾಭಿಮಾನವನ್ನು ಬೆಳೆಸುವ ಪ್ರಯತ್ನವನ್ನೇ ಮಾಡಲಿಲ್ಲ. ಯುವಕರಿಗೆ ವಿಪುಲ ಅವಕಾಶ ನೀಡಲಿಲ್ಲ. ಜಾತಿಯ ಆಧಾರದ ಮೇಲೆ ಮೀಸಲಾತಿ ನೀಡಿ ಪ್ರತಿಭಾವಂತರ ಆಸೆಗಳಿಗೆ ಮಣ್ಣೆರಚಿತು. ಮುಂದೆ ಅಟಲ್ ಬಿಹಾರಿ ವಾಜಪೇಯಿ ಮೀಸಲಾತಿಯನ್ನು ತೆಗೆಯಲು ಮುಂದಾದ ಕಾಂಗ್ರೆಸ್ ವಿರೋಧಿಸಿತು. ಕೆಳ ವರ್ಗದ ಜನರನ್ನು ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡಿತು. ಪ್ರತಿಭೆಯಿದ್ದ ಯುವಜನತೆ ಅವಕಾಶಕ್ಕಾಗಿ ಪರದೇಶಗಳಿಗೆ ಹೋಗಬೇಕಾಗಿ ಬಂತು. ಸತ್ಯ ನಾಡೆಲ್ಲ ರಂತ ಪ್ರತಿಭಾವಂತರು ಇದೇ ಹಾದಿಯನ್ನು ಅನುಸರಿಸದರು. ಇದಕ್ಕೆ ಪರಿಹಾರ ಬೇಕೆಂದರೆ ನರೇಂದ ಮೋದಿಯಂತ ದೂರ ದೃಷ್ಟಿ ಉಳ್ಳ ನಾಯಕರು ಪ್ರಧಾನಿಯಾಗಬೇಕು.
ಸುಮ್ಮನೆ ಮಾತಿನಲ್ಲಿ ಬೊಗಳೆ ಬಿಡುವ ನಾಯಕರ ನಡುವೆ ನರೇಂದ್ರ ಮೋದಿ ವಿಭಿನ್ನವಾಗಿ ಕಾಣುತ್ತಾರೆ. ಮೋದಿ ಭಾರತದಲ್ಲಿ ಮೈಕ್ರೋಸಾಫ್ಟ್, ಆಪಲ್ ನಂತಹ ಕಂಪನಿ ಆರಂಭವಾಗಬೇಕೆಂದು ಬಯಸುತ್ತಾರೆ. ಗುಜರಾತ್ನಲ್ಲಿ ಈಗಾಗಲೇ ಉದ್ಯಮಕ್ಕೆ ಪ್ರೋತ್ಸಾಹ ಮಾಡುವ ಮೂಲಕ ಗುಜರಾತನ್ನು ಉದ್ಯಮ ಸ್ನೇಹಿ ರಾಜ್ಯವನ್ನಾಗಿಸಿದ್ದಾರೆ. ಇಂತಹ ವ್ಯಕ್ತಿ ಭಾರತದ ಪ್ರಧಾನಿಯಾದರೆ ಸತ್ಯ ನಾಡೆಲ್ಲರಂತ ಪ್ರತಿಭಾವಂತರ ಸೇವೆ ಭಾರತಕ್ಕೆ ಸಿಗುತ್ತದೆ. ಇದರಿಂದಾಗಿ ಮೈಕ್ರೋಸಾಫ್ಟ್, ಆಪಲ್ ನಂತ ಕಂಪೆನಿಗಳನ್ನು ಮೀರಿಸುವ ಕಂಪನಿಗಳು ಭಾರತದಲ್ಲಿ ಹುಟ್ಟಿಕೊಳ್ಳುವುದರಲ್ಲಿ ಸಂಶಯವಿಲ್ಲ.

Saturday, April 19, 2014

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

Krupe :  http://azsmarane.blogspot.in/2012/01/blog-post_21.html 



ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾಗು ಪುಸ್ತಕಗಳು! ಓದಿ ಆನಂದಿಸಿ!


ತ್ರಿವೇಣಿಯವರ ಕಾದಂಬರಿಗಳು

MK ಇಂದಿರಾ ಕಾದಂಬರಿಗಳು

ಬಿದಿಗೆ ಚಂದ್ರಮ ಡೊಂಕು - MK ಇಂದಿರಾ 
 
ಮುಕ್ತ ಅವರ ಕಾದಂಬರಿಗಳು
 

ರೇಖಾ ಖಾಖoಡಕಿ ಅವರ ಕಾದಂಬರಿಗಳು 




ಜ್ಯೋತ್ಸ್ನಾ ಕಾಮತ್ 
"ಹೀಗಿದ್ದೇವೆ ನಾವು"  (ಲಲಿತ ಪ್ರಬಂಧಗಳು )

ಅನುಸೂಯ ಸಂಪತ್ ಅವರ ಕಾದಂಬರಿಗಳು 




ಹಾ ಮಾ ನಾಯಕ ಅವರ ಪುಸ್ತಕಗಳು 



ಹಾವು ಮತ್ತು ಹೆಣ್ಣು ( ಕಥಾ ಸಂಗ್ರಹ)

ಚದುರಂಗ 

ತ ರಾ ಸು ಅವರ ಪುಸ್ತಕಗಳು

ಹಿಂತಿರುಗಿ ನೋಡಿದಾಗ (ತ ರಾ ಸು ಅವರ ಜೀವನ ಚರಿತ್ರೆ )




ನೃಪತುಂಗ 


ಜಿ ಪಿ ರಾಜರತ್ನಂ ಅವರ ಪುಸ್ತಕಗಳು 




SL ಭೈರಪ್ಪ
K P ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳು

ಶಿವರಾಮು 
ಡಾ ಶಿವರಾಂ ಕಾರಂತ ಅವರ ಪುಸ್ತಕಗಳು 



















ಮಾಸ್ತಿ 
"ಚೆನ್ನಬಸವನಾಯಕ " ಕಾದಂಬರಿ (26 MB)



ಯಂಡಮೂರಿ ವೀರೇಂದ್ರನಾಥ್ ನೋವೆಲ್ಸ್ 



ಸುದರ್ಶನ ದೇಸಾಯಿ ಅವರ ಕಾದಂಬರಿಗಳು
  1)Airavata_tif.pdf
  2)Amar Deepa_tif.pdf 
  3)Badavana maneya Manikya_tif.pdf 
  4)Benkiya Madilalli_tif.pdf 
  5)Chinnada Beralu_tif.pdf
  6)Mruthyu Bandhan_tif.pdf
  7)Seelu Nalige_tif.pdf 
  8)Sheetal Koli_tif.pdf 
  9)Vichitra Aparadhi_tif.pdf 
  10)Visha Manthan_tif.pdf 
  11)Yamadootaru_tif.pdf 

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......