Monday, December 11, 2023

ರಾಜನ ಮೂರು ಪ್ರಶ್ನೆಗಳು... ⁉ ( ಸಂಗ್ರಹ)

 - ರಾಜನ ಮೂರು ಪ್ರಶ್ನೆಗಳು... ⁉

ಪ್ರತಿದಿನವೂ ಶ್ರದ್ಧೆಯಿಂದ ಭಗವಂತನನ್ನು ಪೂಜಿಸುವವರೂ ಕೂಡಾ ಭಗವಂತ ನೆಂದರೆ ಏನು? ಯಾರು? ಎನ್ನುವ ಪ್ರಶ್ನೆಗೆ ಉತ್ತರಿಸಲಾರರು(ಬಹುಶಃ ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು)

ಈ ಕಥೆಯನ್ನು ಕೇಳಿ --

ಒಬ್ಬ ರಾಜನಿಗೆ ಮೂರು ಅರ್ಥವಾಗದ ಪ್ರಶ್ನೆಗಳು ಬಹುವಾಗಿ ಕಾಡುತ್ತಿದ್ದವು --

೧  - ದೇವರು ಯಾವ ಕಡೆ ನೋಡುತ್ತಾನೆ?

೨  - ದೇವರು ಎಲ್ಲಿರುತ್ತಾನೆ?

೩  - ದೇವರು ಏನು ಮಾಡುತ್ತಾನೆ?

ಈ ಮೂರು ಪ್ರಶ್ನೆಗಳಿಗೆ ಎಷ್ಟು ಯೋಚಿಸಿದರು ಸರಿಯಾದ ಉತ್ತರ ದೊರಕಲಿಲ್ಲ ದರ್ಬಾರಿನಲ್ಲಿ ರಾಜನು ಎಲ್ಲರೊಡನೆ  ಸಮಾವೇಶಗೊಂಡು ಅಲ್ಲಿ ಹಾಜರಿದ್ದ ಎಲ್ಲ ಪಂಡಿತರು ಮೇಧಾವಿಗಳನ್ನುದ್ದೇಷಿಸಿ ಈ ಎಲ್ಲಾ ಪ್ರಶ್ನೆಗಳಿಗೆ

ಸರಿಯಾದ ಉತ್ತರ ಕೊಟ್ಟವರಿಗೆ ಸೂಕ್ತವಾದ ಬಹುಮತಿಯನ್ನು ಕೊಡುವುದಾಗಿಯೂ ತಪ್ಪಿದರೆ/ ತಪ್ಪಿದ್ದಲ್ಲಿ ಉಗ್ರವಾದ ಶಿಕ್ಷೆಯನ್ನು ನೀಡುವುದಾಗಿಯೂ ತಿಳಿಸುತ್ತಾನೆ.ರಾಜನ ಶಿಕ್ಷೆಯ  ಭಯದಿಂದ ಉತ್ತರ ಕೊಡಲು ಯಾರು ಮುಂದೆ ಬರಲಿಲ್ಲ.ಇದೇ ವಿಷಯವಾಗಿ ರಾಜ್ಯದಲ್ಲೆಲ್ಲಾ ಡಂಗುರ ಸಾರಿಸಲಾಯಿತು.ಇದನ್ನು ಕೇಳಿಸಿಕೊಂಡ ದನಗಾಹಿ ಒಬ್ಬನು ಉತ್ತರ ಕೊಡುವುದಾಗಿ ಒಪ್ಪಿ

ಮುಂದೆ ಬಂದನು ಅವನನ್ನು ರಾಜನ ಆಸ್ಥಾನಕ್ಕೆ ಕರೆಸಲಾಯಿತು ಅವನು ಉತ್ತರಿಸುವ ಮೊದಲು ರಾಜನಿಗೆ ಒಂದು ವಿಷಯವನ್ನು ಹೇಳುತ್ತಾನೆ-- 

"ಹೇಳುವವನು ಗುರು ಅವನು ಮೇಲಿರಬೇಕು ಅದರಂತೆ ಕೇಳುವವನು ಶಿಷ್ಯ ಅವನು ಕೆಳಗಿರಬೇಕು"

-- ಅದಕ್ಕೆ ರಾಜನು ಸಮ್ಮತಿಸಿ ಸಿಂಹಾಸನದಿಂದ ಕೆಳಗಿಳಿದು ಕುಳಿತನು ದನಗಾಹಿ ಸಿಂಹಾಸನದ ಮೇಲೆ ಕೂರುತ್ತಾನೆ.

ನಂತರ ದನಗಾಹಿ ರಾಜನಿಗೆ ಪ್ರಶ್ನೆಗಳನ್ನು ಕೇಳಲು ಸೂಚಿಸುತ್ತಾನೆ* 


(1) - ಮೊದಲನೇ ಪ್ರಶ್ನೆ -ದೇವರು ಯಾವ ಕಡೆ ನೋಡುತ್ತಾನೆ?

- ಕೂಡಲೇ ದನಗಾಹಿ ಒಂದು ಉರಿಯುತ್ತಿರುವ ದೀಪವನ್ನು ತರಿಸಲು ಹೇಳುತ್ತಾನೆ ಅದರಂತೆ ಸಭೆಯ ಮಧ್ಯದಲ್ಲಿ ಉರಿಯುತ್ತಿರುವ ದೀಪವನ್ನು ತಂದಿಡಲಾಗುತ್ತದೆ. ರಾಜರೇ ಹೇಳಿ -ಈ ದೀಪ ಯಾವ ಕಡೆಗೆ ನೋಡುತ್ತಿದೆ- ನನ್ನ ಕಡೆಗೋ,

ನಿಮ್ಮ ಕಡೆಗೋ, ಮೇಲೆಯೋ, ಕೆಳಗಡೆಯೋ, ಪೂರ್ವಕ್ಕೋ , ಪಶ್ಚಿಮಕ್ಕೋ ಎನ್ನುತ್ತಾನೆ*

ಆಗ ರಾಜನು  - "ಎಲ್ಲ ಕಡೆಗೂ" ಎಂದು ಉತ್ತರಿಸುತ್ತಾನೆ ಆಗ ದನಗಾಹಿ ಇಷ್ಟು ಸಣ್ಣ ಜ್ಯೋತಿ ಎಲ್ಲಾ ಕಡೆಗೂ ನೋಡುತ್ತಿದೆಯಾದರೆ ಪರಂಜ್ಯೋತಿ ಸ್ವರೂಪನಾದ ಭಗವಂತನು ಎಲ್ಲ ಕಡೆಗೂ ನೋಡಲಾರನಾ, ಸಮಸ್ತ ಜೀವಿಗಳ ಕಣ್ಣಲ್ಲಿ ಬೆಳಕಾಗಿರುವ ಪರಂಜ್ಯೋತಿಯೇ ಪರಮಾತ್ಮ...!!🪔🙏

 (2) - ಎರಡನೇ ಪ್ರಶ್ನೆ "ದೇವರು ಎಲ್ಲಿರುವನು?"

ಆಗ ದನಗಾಹಿ ಒಂದು ಪಾತ್ರೆಯಲ್ಲಿ ಹಾಲನ್ನು ತರುವಂತೆ ಹೇಳುತ್ತಾನೆ ಹಾಲನ್ನು ತಂದಿರಿಸಿದಾಗ ರಾಜರೇ ಈ ಹಾಲಿನಲ್ಲಿ ತುಪ್ಪ ಎಲ್ಲಿರುವುದು ತೋರಿಸುವಿರಾ ಎನ್ನುವನು ಆಗ ರಾಜನು ಹಾಲನ್ನು ಕುದಿಸಿ, ಹೆಪ್ಪಿಟ್ಟು ಅದು ಮೊಸರಾದ ನಂತರ ಅದನ್ನು ಚೆನ್ನಾಗಿ ಕಡೆದರೆ ಬೆಣ್ಣೆ ಸಿಗುತ್ತೆ ನಂತರ ಅದನ್ನು ಹದವಾಗಿ ಕಾಯಿಸಿದಾಗ ತುಪ್ಪ ಸಿಗುತ್ತದೆ.

ಆಗ ದನಗಾಹಿ - ಸರಿಯಾಗಿ ಹೇಳಿದಿರಿ ರಾಜರೇ- ಅದೇ ರೀತಿ ಹೃದಯವೆಂಬ "ಹಾಲ"ನ್ನು "ಗುರು" ಎನ್ನುವ "ಬೆಂಕಿ"ಯಿಂದ ಚೆನ್ನಾಗಿ ಕಾಯಿಸಿ "ಮನಸ್ಸು" ಎನ್ನುವ ಹೆಪ್ಪನ್ನಿಟ್ಟು ಬರುವ ಮೊಸರನ್ನು "ಸಾಧನೆ" ಎಂಬ ಕಡಗೋಲಿನಿಂದ ಚೆನ್ನಾಗಿ ಕಡೆದರೆ "ಜ್ಞಾನ" ಎನ್ನುವ ಬೆಣ್ಣೆ ಸಿಗುತ್ತದೆ...!

ಆ ಬೆಣ್ಣೆಯನ್ನು "ಅಂತರಾತ್ಮ" ಎನ್ನುವ ಬೆಂಕಿಯಿಂದ ಹದವಾಗಿ ಕಾಯಿಸಿದರೆ "ಪರಮಾತ್ಮ' ಎನ್ನುವ ತುಪ್ಪ ಸಿಗುತ್ತದೆ*

(3) - ಮೂರನೇ ಪ್ರಶ್ನೆ- ದೇವರು ಏನು ಮಾಡುತ್ತಾನೆ?

ಆಗ ದನಗಾಹಿ ನಾನೊಬ್ಬ ದನಗಾಹಿ, ನೀವು ಈ ರಾಜ್ಯದ ಮಹಾರಾಜರು- ಕೆಳಗಿದ್ದ ನನ್ನನ್ನು ಸಿಂಹಾಸನದ ಮೇಲೆ ಕೂಡಿಸಿ,  ಸಿಂಹಾಸನದಲ್ಲಿದ್ದ

ನಿಮ್ಮನ್ನು ಕೆಳಗಿಳಿಸಿದ್ದು..!, ಇದೇ ಪರಮಾತ್ಮನ ಲೀಲೆ, ಸತ್ಕರ್ಮಗಳನ್ನು ಮಾಡುವ ಜೀವಿಗಳಿಗೆ ಮುಂದಿನ  ಜನ್ಮದಲ್ಲಿ ಉತ್ತಮ ಜನ್ಮವನ್ನು ನೀಡುವ,  ದುಷ್ಕರ್ಮ ಮಾಡುವವರಿಗೆ ಮುಂದಿನ ಜನ್ಮದಲ್ಲಿ ದುಸ್ತರ ಜೀವನ ನೀಡುವುದು ಪರಮಾತ್ಮನ ಕೆಲಸ...!🙏

ಈ ಉತ್ತರಗಳನ್ನು ಕೇಳುತ್ತಿದ್ದಂತೆ ಇಡೀ ಸಭೆಯು ಅಲ್ಲಿ ನೆರದಿದ್ದವರ ಕರತಾಡನದಿಂದ ಮಾರ್ಮೊಳಗಿತು

🕉 ಸರ್ವೇ ಜನಾಃ ಸುಖಿನೋ ಭವಂತು🕉


Thursday, December 29, 2022

ಶಿಕಾರಿ ಕಾದಂಬರಿ - ಯಶವಂತ ಚಿತ್ತಾಲ - 2

ನಸುಕಿನ ಮಬ್ಬು ಹಾಗೂ ತಂಪು ಎರಡೂ ಬರವಣಿಗೆಗೆ ಸ್ಫೂರ್ತಿ ನೀಡುವಂತವುಗಳು. ಬೆಳಗಿನ ಜಾವದ ಮುಹೂರ್ತ ಸೃಜನಶೀಲತೆಗೆ ಅತ್ಯಂತ ಉತ್ತೇಜಕವಾದದ್ದು. ನಿತ್ಯವ್ಯವಹಾರಗಳಲ್ಲಿ, ಅವುಗಳಿಂದಾಗಿ ಹುಟ್ಟುವ ರಾಗದ್ವೇಷಗಳಲ್ಲಿ, ಆತಂಕ ದುಗುಡಗಳಲ್ಲಿ ತೊಡಕಿಕೊಂಡಿರದ ಮನಸ್ಸಿನ ಯಾವುದೋ ಭಾಗ ಇಂತಹ ಹೊತ್ತಿನಲ್ಲಿ ಜಾಗೃತವಾಗಿರುತ್ತದೆ. ಸೃಷ್ಟಿ ಕಾರ್ಯದಲ್ಲಿ ತೊಡಗಿರುವ ಮನಸ್ಸಿನ ಅಂಶ ನಿತ್ಯ ವ್ಯವಹಾರದಲ್ಲಿ ತೊಡಗಿರುವ ಮನಸ್ಸಿನಿಂದ ತೀರ ಬೇರೆಯಾದದ್ದು. ✍ ಯಶವಂತ ಚಿತ್ತಾಲ {'ಶಿಕಾರಿ' ಕಾದಂಬರಿ}

ಶಿಕಾರಿ ಕಾದಂಬರಿ - ಯಶವಂತ ಚಿತ್ತಾಲ

ಬರೇ ಅವಿತುಕೊಳ್ಳುವ ತಾಣ ಹುಡುಕುತ್ತ ಓಡುತ್ತಿರಬೇಡ. ಎಲ್ಲ ಪರಾರಿಗೂ ಕೊನೆಯೆಂಬುದಿರಬೇಕು. ಒಮ್ಮೆಯಾದರೂ ಸ್ವಸ್ಥಾನಕ್ಕೆ ಮರಳುವ ಧೈರ್ಯ ಮಾಡಬೇಕಪ್ಪಾ. ರಾತ್ರಿ ಮಾಡಿಕೊಂಡ ನಿರ್ಧಾರವನ್ನು ದಿನಬೆಳಗಾಗುವುದರಲ್ಲಿ ಸಡಿಲುಗೊಳ್ಳಲು ಬಿಡಬಾರದು. ಬಿಗಿ ಹಿಡಿ. ಬಿಗಿಯಾಗು. ಗಟ್ಟಿಯಾಗು. ಕವಚ ಕುಂಡಲಗಳನ್ನು ಕಳಚು. ನೀನೇ ನಿನ್ನ ಸುತ್ತ ಬೆಳೆಯಿಸಿಕೊಂಡ ಚಿಪ್ಪನ್ನೊಡೆದು ಹೊರಕ್ಕೆ ಬರಬೇಕು. ತೆರೆ. ತೆರೆದುಕೋ.... ✍ ಯಶವಂತ ಚಿತ್ತಾಲ {'ಶಿಕಾರಿ' ಕಾದಂಬರಿ}

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......