Thursday, September 18, 2014

ಶಿಲ್ಪಕಲೆ ೧ ರಾಜೇಶ್ ಶ್ರೀವತ್ಸ

ಶಿಲ್ಪಕಲೆಯ ಅಭ್ಯಾಸ ನಮ್ಮ ಪಠ್ಯದ ಒಂದು ಭಾಗವಾಗಿತ್ತು. ನಮ್ಮ ಪ್ರಾಚಾರ್ಯರಾದ ’ಕಾಳೇಶ್ವರಾಚಾರ್ಯ ಹಂಸಬಾವಿ ’ಯವರೊಡನೆ ಮಹಾಬಲಿಪುರಮ್ ದೇವಸ್ಥಾನದ ವೀಕ್ಷಣೆಗೆ ಹೋಗಿದ್ದೆವು. ಗೈಡ್ಗಳ ಸಹಾಯವಿಲ್ಲದೆ ಶಿಲ್ಪಗಳನ್ನು ನೋಡಿ ಬಂದು ಟಿಪ್ಪಣಿ ಬರೆದು ತೋರಿಸಬೇಕೆಂದು ನಮ್ಮ ಗುರುಗಳ ಆದೇಶ. ಸರಿ ನಮ್ಮ ದೇಗುಲ ವೀಕ್ಷಣೆ ಮುಗಿಸಿ ಟಿಪ್ಪಣಿ ಬರೆದುಕೊಂಡು ಗುರುಗಳಿರುವಲ್ಲಿ ಹಿಂತಿರುಗಿದೆವು ಎಂದಿನಂತೆ ಮುಂದೆ ನಿಂತಿದ್ದ ನಾನೇ ಟಿಪ್ಪಣಿಯನ್ನು ಗುರುಗಳ ಕೈಗಿಟ್ತೆ. ನಾನು ಬರೆದ ಟಿಪ್ಪನಿಯ ಒಂದು sample...೧ನೇ ಗುಹೆಯಲ್ಲಿ ಸುಂದರವಾದ ಗಜಲಕ್ಶ್ಮೀ ದೇವಿಯ ಕೆತ್ತನೆ ಇದೆ. ಎಡ-ಬಲಗಳಲ್ಲಿ ಚಾಮರಧಾರಿಣಿಯರಿದ್ದಾರೆ. ೨ನೇ ಗುಹೆಯಲ್ಲಿ ಮಹಿಷಾಸುರಮರ್ದಿನಿ.. ಒಂದೆರಡು ಸಾಲುಗಳ ಮೇಲೆ ಕಣ್ಣಾಡಿಸುತ್ತಿದ್ದಂತೆ ಗುರುಗಳ ಮುಖ ಕೋಪದಿಂದ ಕಪ್ಪಿಟ್ತಿತು. ಪರ್ರನೆ ಕಾಗದವನ್ನು ಹರಿದು ಚೂರು ಚೂರು ಮಾಡಿದರು’ ಏನಪ್ಪಾ PWD report ಬರ್ದಿದ್ದೀಯಲ್ಲಾ... ನಿನ್ನಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಕಲೆ ನೋಡಲಿಕ್ಕೆ ಬಂದಿದ್ಯೋ ? ಕಲ್ಲು ನೋಡಲಿಕ್ಕೆ ಬಂದಿದ್ಯೋ? ನಡಿ ಮತ್ತೆ ಒಂದೇ ಒಂದು ಶಿಲ್ಪದ್ದಾದರೂ ಸರಿ ಬರ್ಕೊಂಡು ಬಾ..’. ಎಂದು ಗುಡುಗಿದರು. ಸರಿ ಸಾರ್ ಎಂದು ಮತ್ತೊಮ್ಮೆ ಶಿಲ್ಪ ವೀಕ್ಷ್ಣೆಣೆಗೆ ಹೋಗಲು ಹಿಂದೆ ತಿರುಗಿದೆ ಸಹಪಾಠಿಗಳೆಲ್ಲಾ ಮಂಗಮಾಯವಾಗಿದ್ದರು. ಒಬ್ಬರಿಗೂ ಅವರು ಬರೆದದ್ದನ್ನು ಗುರುಗಳಿಗೆ ತೋರಿಸುವ ಧೈರ್ಯ ಉಳಿದಿರಲಿಲ್ಲ. ತಲೆ ಕೆಡಿಸಿಕೊಂಡು ಎರಡನೆ ಸಲ ಬರೆದ ಟಿಪ್ಪಣಿ ಹೀಗಿತ್ತು.
"ಮಹಾಬಲಿಪುರಂನ ಮಹಿಷಾಸುರಮರ್ದಿನಿಯ ಶಿಲ್ಪವು ಕಲಾ ಪ್ರಪಂಚಕ್ಕೆ ಪಲ್ಲವರ ಅದ್ಭುತ ಕೊಡುಗೆಗಳಲ್ಲೊಂದು. ಇಲ್ಲಿ ದುರ್ಗೆಯನ್ನು ಭಯಂಕರವಾದ ಯುದ್ಧ ರಂಗದಲ್ಲಿ ಮಹಿಷಾಸುರನೊಡನೆ ನೇರವಾಗಿ ಮುಖಾಮುಖಿಯಾಗಿ ಹೋರಾಡುತ್ತಿರುವುದನ್ನು ಶಿಲ್ಪಿಯು ಚಿತ್ರಿಸಿದ್ದಾನೆ. ಮಹಿಷನಿಗೆ ಹೋಲಿಸಿದರೆ ದೇವಿಯು ಗಾತ್ರದಲ್ಲಿ ಸಣ್ಣವಳು. ಮಹಿಷನು ಕೋಣನ ತಲೆ ಮನುಷ್ಯನ ದೇಹವನ್ನು ಹೊಂದಿದ್ದು ಗಾತ್ರದಲ್ಲಿ ಬಹಳ ದೊಡ್ದವನು. ಆದರೂ ದೇವಿ ಹಾಗು ಮಹಿಷ ಇಬ್ಬರೂ ಇಲ್ಲಿ ಸಮಬಲರಾಗಿ ಚಿತ್ರಿತರಾಗುವಂತೆ ದೃಶ್ಯವನ್ನು ಸಂಯೋಜಿಸಲಾಗಿದೆ. ರಾಕ್ಷಸನ ಗಾತ್ರದಿಂದ ಸ್ವಲ್ಪವೂ ದೃತಿಗೆಡದೆ ದೇವಿಯು ಸಿಂಹ ವಾಹನೆಯಾಗಿ ವೀರಾವೇಶದಿಂದ ಧನುರ್ಬಾಣಗಳನ್ನು ಹಿಡಿದು ರಣರಂಗದಲ್ಲಿ ಮುನ್ನುಗ್ಗುತ್ತಿದ್ದಾಳೆ. ಇತ್ತ ಮಹಿಷನು ತನ್ನ ಭಯಂಕರ ಸೈನ್ಯದೊಡನೆ ಜಯವು ಇನ್ನು ತನ್ನದೇ ಎಂಬಂತೆ ಭಾರೀ ಗದೆಯೊಂದನ್ನು ಲೀಲಾಜಾಲವಾಗಿ ಎರಡೂ ಕೈಗಳಲ್ಲಿ ಆಟಿಕೆಯಂತೆ ಹಿಡಿದುಕೊಂಡು ಬೀಸಲು ಸಿದ್ದವಾಗುತ್ತಿರುವಂತೆ ಕೆತ್ತಿದ್ದಾನೆ. ಅವನ ರಾಜ ವೈಭವವನ್ನು ಎತ್ತಿ ಹಿಡಿಯಲು ಅವನಿಗೆ ಛತ್ರಿಹಿಡಿದಿರುವುದನ್ನು ತೋರಲಾಗಿದೆ. ದೇವಿಯ ಅನುಯಾಯಿಗಳು ಕುಬ್ಜರಾಗಿದ್ದರೂ ದೇವಿಯ ಹಿಂದು ಮುಂದೆ ಆತ್ಮ ವಿಶ್ವಾಸದಿಂದ ಹೋರಾಡುತ್ತಿದ್ದಾರೆ. ಯುದ್ದವೆಂಬುದು ಆ ಕುಬ್ಜರಿಗೆ ಆಟವೇನೋ ಎಂಬಂತೆ ಉತ್ಸಾಹದಲ್ಲಿ ನಲಿಯುತ್ತಿದ್ದಾರೆ. ಆದರೆ ಮಹಿಷನ ಸೈನಿಕರು ದೈಹಿಕವಾಗಿ ಬಲಶಾಲಿಗಳಾಗಿದ್ದರೂ ಬಾಣದ ಮಳೆಗೆ ಹಿಂಜರಿಯುತ್ತಿರುವಂತೆ ತೋರಿಸಲಾಗಿದೆ. ದೇವಿ ಹಾಗು ಮಹಿಷ ಇಬ್ಬರೂ ಯೋಧರಿಗೆ ಹಿತಮಿತವಾಗುವಷ್ಟು ಮಾತ್ರ ಆಭರಣಗಳನ್ನು ಧರಿಸಿದ್ದಾರೆ. ದೇವಿಯು ಅಷ್ಟ ಭುಜೆಯಾಗಿದ್ದು ಬಲಗೈಯೊಂದರಲ್ಲಿ ಘಂಟೆಯನ್ನು ಹಿಡಿದಿದ್ದು ಅದನ್ನು ಸೈನಿಕರನ್ನು ಹುರಿದುಂಬಿಸಲು ವಾದನಮಾಡತ್ತಿರುವಂತೆ ಹಸ್ತವನ್ನು ತೋರಿದ್ದನೆ. ಎಡಗೈಲಿ ಹಿಡಿದಿರುವ ಶಂಖವು ಬಾಯಿಗಿಡಲು ಸಿದ್ದವಾಗಿರುವಂತೆ ತುದಿಯನ್ನು ದೇವಿಯ ಮುಖದ ಕಡೆ ತಿರುಗಿಸಲಾಗಿದೆ. ದೇವಿಯ ವಾಹನ ಸಿಂಹದ ಮುಂಭಾಗದ ವಿವರಗಳನ್ನು ಮಾತ್ರ ಕೆತ್ತಲಾಗಿದ್ದು ಹಿಂಬದಿಯನ್ನು ಸೈನಿಕರಿಂದ ಮರೆಮಾಚಿ ರಣರಂಗವು ಸೈನಿಕರಿಂದ ದಟ್ತವಾಗಿ ತುಂಬಿರುವ ಭ್ರಮೆ ಮೂಡಿಸಲಾಗಿದೆ. ಸಿಂಹದ ಮುಖ್ಹದಲ್ಲಿ ಕ್ರೋಧ ಮಡುಗಟ್ಟಿದ್ದು ಅದರ ಬಲಗಾಲಿನ ಪಂಜವನ್ನೆತ್ತಿ ಧಾಳಿ ಮಾಡಲು ಮುನ್ನುಗ್ಗುತ್ತಿದೆ. ಸಿಂಹದ ಕತ್ತಿನ ಸುತ್ತ ಇರುವ ಸುರುಳಿ ಸುರುಳಿಯಾಗಿರುವ ಕೇಸರ ವನರಾಜನ ಗಾಂಭಿರ್ಯವನ್ನು ಎತ್ತಿ ತೋರಿಸುತಿದೆ."
ಎರಡನೇಯ ಟಿಪ್ಪಣಿ ಓದಿದ ನಮ್ಮ ಗುರುಗಳು "ಈಗ ಅರಿವಾಯ್ತಾ ಶಿಲ್ಪಕಲಾ ವೀಕ್ಷಣೆ ಅಂದರೆ ಏನೂ ಅಂತ ? " ಎನ್ನುತ್ತಾ ನನ್ನ ಬೆನ್ನು ತಟ್ಟಿದರೆಂದು ಹೇಳಬೇಕಿಲ್ಲ ತಾನೆ? ಅವರ ಆಶೀರ್ವಾದ ಸದಾ ನನ್ನ ಮೇಲಿರಲಿ

ರಾಜೇಶ್ ಶ್ರೀವತ್ಸ


Friday, September 12, 2014

ದೃಢ ಮನಸ್ಸಿನವರ ೧೨ ವರ್ತನೆಗಳು


1 ಮುಂದೆ ಸಾಗಿ ಬಿಡ್ತಾರೆ. ಸಾರಿ ಗೀರಿ ಅಂತೆಲ್ಲ ಹೇಳಿಕೊಂಡು ಸಮಯ ವ್ಯರ್ಥ
ಮಾಡುವ ಮಾತೇ ಇಲ್ಲ.
2 ಖುಷಿಯಾಗಿರುತ್ತಾರೆ. ಯಾರನ್ನೂ ದೂರುವುದಿಲ್ಲ. ಕೈಲಾಗದ ಕೆಲಸಕ್ಕೆ ಮುಂದಾಗುವುದಿಲ್ಲ.
3 ಸುಮ್ಮನೆ ಸುಮ್ಮನೆ ಹೊಗಳುವುದಿಲ್ಲ. ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಾರೆ. ಯಾರು ಯಾರಿಗೋ ಸಲಾಮು ಹೊಡೆಯುವುದಿಲ್ಲ.
4 ವರ್ತಮಾನಕ್ಕೆ ಶಕ್ತಿ ವ್ಯಯಿಸುತ್ತಾರೆ. ವರ್ತಮಾನದಲ್ಲಿ ಬದುಕುತ್ತಿರುತ್ತಾರೆ.
5 ಹಳೆಯ ತಪ್ಪನ್ನು ಒಪ್ಪಿಕೊಂಡಿರುತ್ತಾರೆ.ತಪ್ಪು ಮಾಡಿದ್ದಿದ್ರೆ ತಪ್ಪು ಅಂತ ಒಪ್ಪಿಕೊಂಡಿರುತ್ತಾರೆ. ಬೇರೆಯವರ ಮೇಲೆ ಅದನ್ನು ಹೊರಿಸುವುದಿಲ್ಲ. ಮುಂದೆ ಅಂಥ ತಪ್ಪು ಮಾಡುವುದಿಲ್ಲ.
6 ಬೇರೆಯವರ ಗೆಲುವಿಗೆ ಸಂಭ್ರಮಿಸುತ್ತಾರೆ. ಹೊಟ್ಟೆಕಿಚ್ಚು ಇಲ್ಲವೇ ಇಲ್ಲ. ಬೇರೆಯವರು ಗೆದ್ದರೆ ತಾವೇ ಗೆದ್ದಷ್ಟು ಖುಷಿಯಾಗುತ್ತಾರೆ.
7 ಏಕಾಂತವನ್ನೂ ಇಷ್ಟಪಡುತ್ತಾರೆ. ಏಕಾಂಗಿ ಅಂತ ನರಳುವುದಿಲ್ಲ, ಖುಷಿಯಲ್ಲಿರುತ್ತಾರೆ.
8 ಕೆಟ್ಟ ಯೋಚನೆಗಳಲ್ಲಿ ಮುಳುಗುವುದಿಲ್ಲ.ಬೇಡದ ವಿಷಯಗಳ ಬಗ್ಗೆ ಯೋಚಿಸುವುದೂ
ಇಲ್ಲ, ಮಾತನಾಡುವುದೂ ಇಲ್ಲ.
9 ಎಲ್ಲಿ ಹೋದರೂ ಸಲ್ಲುತ್ತಾರೆ.ಅದೇ ಬೇಕು, ಇದೇ ಬೇಕು ಅಂತ ಇಲ್ಲ. ಎಲ್ಲಿ ಹೋದರೂ ಹೇಗೆ ಇದ್ದರೂ ಹೊಂದಿಕೊಳ್ಳುತ್ತಾರೆ.
10 ಜಾಣ್ಮೆಯಿಂದ ಸವಾಲು ಎದುರಿಸುತ್ತಾರೆ. ಯೋಚನೆ ಮಾಡದೆ ಮುನ್ನುಗ್ಗಿ ಸೋಲುವುದಿಲ್ಲ. ಸಾಕಷ್ಟು ಲೆಕ್ಕಹಾಕಿ, ಯೋಚನೆ ಮಾಡಿ ಗೆಲ್ಲುತ್ತಾರೆ.
11 ಭಯಂಕರ ತಾಳ್ಮೆ ಇರುತ್ತದೆ. ಕೆಲಸ ಮಾಡುತ್ತಾರೆ, ತಾಳ್ಮೆಯಿಂದ ಕಾಯುತ್ತಾರೆ.
12 ಸೋಲುವುದಕ್ಕೂ ರೆಡಿ.ಯಾವತ್ತೂ ಸೋಲಬಾರದು ಅನ್ನುವ ಯೋಚನೆ ಇವರಿಗಿಲ್ಲ. ಸೋತರೆ ಅದನ್ನು ಸ್ವೀಕರಿಸುತ್ತಾರೆ.

ಕೃಪೆ: ಉದಯವಾಣಿ

Friday, September 5, 2014

ಕನಸು.

 ಕನಸು.*

ಬಾನಂಚಿನ ಅಂಗಳದಿ ನಾ ಕಂಡ ಆ ಕನಸು
ತಾರೆಗಳ ಆಗಸದಿ ಚಿತ್ತಾರವ ಬಿಡಿಸಿದಂತೆ
ಚಂದಿರನ ಬೆಳದಿಂಗಳಲಿ ನಾ ನಗುವ ಕಂಡೆ
ನಗುವಿನಾಳದ ನೋವ ಮರೆತು
ಮೋಡಗಳು ಬಂಧಿಸಿದ ಆ ಚಂದ್ರನ ಪರದಾಟ
ಜೀವನದಿ ಕಮರಿದ ಕನಸುಗಳ ಹುಡುಕಾಟ
ಕಪ್ಪಗಿನ ಮೋಡದ ಅಂಚಿನಲಿ ನಿಂತ ಮಳೆಯಹನಿ
ಕಣ್ಣಂಚಿನಲಿ ತುಂಬಿದ ಕಣ್ಣೀರ  ಹನಿಯ ಸಾಲು
ಮೋಡಗಳ ಪೈಪೋಟಿ ಭಾವನೆಗಳ ಮಿಡುಕಾಟ
ದೂರದಾಗಸದ ಕಡೆಗೆ ನೆಮ್ಮದಿಯ ನೋಟ.

ಸ್ಮೃತಿ..   

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......