ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Tuesday, May 7, 2013
ಕೃತಜ್ಞತೆ - ಗುರುರಾಜ ಕರ್ಜಗಿ,
ಗಾಂಧೀಜಿ ಪುಣೆಯ ಯೆರವಡಾ ಜೈಲಿನಲ್ಲಿದ್ದಾಗ ಒಂದು ದಿನ ಅವರಿಗೊಂದು ಪತ್ರ ಬಂದಿತು. ದಿನಾಲೂ ಗಾಂಧೀಜಿಗೆ ಪತ್ರಗಳು ಬರುವುದು ಸಾಮಾನ್ಯವಾದ ವಿಷಯವಾಗಿದ್ದರೂ ಈ ಪತ್ರ ವಿಶೇಷವಾಗಿತ್ತು. ರಣಛೋಡದಾಸರೆಂಬವರು ಬರೆದ ಈ ಪತ್ರದಲ್ಲಿ ಎಂಭತ್ತೆಂಟು ಪ್ರಶ್ನೆಗಳಿದ್ದವು. ಪ್ರತಿಯೊಂದು ಪ್ರಶ್ನೆಗೂ ಗಾಂಧೀಜಿ ಉತ್ತರಿಸಲೇಬೇಕೆಂಬ ಒತ್ತಾಯವೂ ಇತ್ತು. ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಮಹಾದೇವ ದೇಸಾಯಿಯವರಿಗೆ ಕೋಪ ಬಂತು. ಅದನ್ನು ಬಾಪೂಜಿಗೆ ತೋರಿಸಿ ಹರಿದುಹಾಕಬೇಕೆಂದುಕೊಂಡರು.
![]() |
ಗುರುರಾಜ ಕರ್ಜಗಿ |
ಇದು ಮಹಾದೇವ ದೇಸಾಯಿಯವರಿಗೆ ಸರಿ ಕಾಣಲಿಲ್ಲ, ಬಾಪೂ, ರಣಛೋಡದಾಸರು ನಮ್ಮೆಲ್ಲರ ಮನಸ್ಸಿಗೆ ನೋವಾಗುವಂತೆ ಉದ್ದೇಶಪೂರ್ವಕವಾಗಿ ಬರೆದಿದ್ದಾರೆ. ನೀವು ಆ ಪತ್ರಕ್ಕೆ ಅಷ್ಟೊಂದು ಮಹತ್ವ ನೀಡಿ ಉತ್ತರ ಬರೆದಿದ್ದು ನನಗೆ ಸರಿ ಕಾಣುವುದಿಲ್ಲ ಎಂದರು. ಆಗ ಗಾಂಧೀಜಿ ಹೇಳಿದರು, ಮಹಾದೇವ, ರಣಛೋಡದಾಸರು ನನಗೆ ತುಂಬ ಅವಶ್ಯವಾಗಿದ್ದಾಗ ಸಹಾಯ ಮಾಡಿದ್ದಾರೆ. ನಾನು ಕೊನೆಯ ಉಸಿರು ಇರುವ ತನಕ ಅವರು ಮಾಡಿದ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ
ಮಹಾದೇವ ಬಾಪೂಜಿ ಬರೆದ ಪತ್ರವನ್ನು ನೋಡಿದರು. ಪತ್ರವನ್ನು ಗೌರವಾನ್ವಿತರಾದ ರಣಛೋಡದಾಸಭಾಯಿ ಎಂದು ಪ್ರಾರಂಭಿಸಿ ಕೊನೆಗೆ ಮೋಹನದಾಸನ ಪ್ರಣಾಮಗಳು ಎಂದು ಮುಗಿಸಿದ್ದರು. ಮಹಾದೇವ ಕುತೂಹಲದಿಂದ ಕೇಳಿದರು, ತಾವು ಇಷ್ಟು ಗೌರವದಿಂದ ಬರೆದಿರುವುದರಿಂದ ಅವರು ತಮಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವರಾಗಿರಬೇಕಲ್ಲ? ಗಾಂಧೀಜಿ, ಇಲ್ಲ, ಅವರು ನನಗಿಂತ ಏಳೆಂಟು ವರ್ಷ ದೊಡ್ಡವರು. ಆದರೆ ಅವರು ನನಗೆ ಮಾಡಿದ ಸಹಾಯಕ್ಕೆ ನಾನು ಅವರನ್ನು ಹಿರಿಯಣ್ಣ ಎಂದೇ ಭಾವಿಸಿದ್ದೇನೆ. ನಾನು ಮೆಟ್ರಿಕ್ಯುಲೇಶನ್ ಪರೀಕ್ಷೆಗೆ ಹೋದಾಗ ಇವರ ಅಣ್ಣನ ಮನೆಯಲ್ಲಿಯೇ ಇದ್ದೆ. ಆಗ ರಣಛೋಡದಾಸಭಾಯಿ ನನ್ನನ್ನು ಪ್ರೀತಿಯಿಂದ ವಿಚಾರಿಸಿಕೊಳ್ಳುತ್ತಿದ್ದರು.
ಮುಂದೆ ನಾನು ಮುಂಬೈಗೆ ಹೋಗುವಾಗ ಐದು ಸಾವಿರ ರೂಪಾಯಿಗಳನ್ನು ನೀಡಿದ್ದರು. ಈ ಸಹಾಯವಿಲ್ಲದಿದ್ದರೆ ನಾನು ಮುಂಬೈಯಲ್ಲಿ ನೆಲೆಸುವ ಮತ್ತು ನಂತರ ಪರದೇಶಕ್ಕೆ ಹೋಗುವ ವಿಚಾರ ಕನಸಾಗಿಯೇ ಉಳಿಯುತ್ತಿತ್ತು ಎಂದರು.
ಅದು ಸರಿ, ಆದರೆ ಈಗ ಅವರು ನಿಮಗೆ ಯಾವ ಸಹಾಯವನ್ನೂ ಮಾಡುತ್ತಿಲ್ಲವಲ್ಲ? ಬದಲಾಗಿ ನಿಮಗೆ ಇರಿಸುಮುರಿಸಾಗುವಂಥ ಮಾತುಗಳನ್ನೇ ಆಡುತ್ತಿದ್ದಾರೆ ಕೇಳಿದರು ಮಹಾದೇವ. ಆಗ ಗಾಂಧೀಜಿ ಭಾವಾವೇಶದಿಂದ ಮಾತನಾಡಿದರು. ಅವರ ಧ್ವನಿ ನಡುಗುತ್ತಿತ್ತು.
ಅವರು ಈಗ ಏನು ಮಾಡುತ್ತಾರೆ ಎಂಬುದು ಮುಖ್ಯವಲ್ಲ. ಆದರೆ ಒಂದು ಕಾಲಕ್ಕೆ ನನಗೆ ಅವಶ್ಯವಾಗಿದ್ದಾಗ ಕೈ ಹಿಡಿದಿದ್ದಾರೆ. ಇಂದು ನಾನೇನು ಆಗಿದ್ದೀನೋ ಅದಕ್ಕೆ ತಳಪಾಯ ಹಾಕಿದವರು ಅವರು. ಅವರನ್ನು ನಾನು ಎಂದಿಗೂ ಮರೆಯಲಾರೆ ಎಂದರು. ಈ ಮಾತುಗಳನ್ನು ಕೇಳುತ್ತಿದ್ದ ಮಹಾದೇವ ದೇಸಾಯಿ ಮತ್ತು ವಲ್ಲಭಭಾಯಿ ಪಟೇಲರಿಗೆ ಆಶ್ಚರ್ಯವಾಯಿತು.
ಉಪಕಾರ ಸ್ಮರಣೆ ಮನುಷ್ಯರನ್ನು ಬೇರೆ ಪ್ರಾಣಿಗಳಿಂದ ಬೇರ್ಪಡಿಸುತ್ತದಂತೆ. ಪ್ರಾಣಿಗಳೂ ಉಪಕಾರ ಮಾಡಿದವರನ್ನು ಮರೆಯುವುದಿಲ್ಲ. ಆದರೆ ಕೆಲವು ಮನುಷ್ಯರ ಆಕಾರದಲ್ಲಿರುವವರಿಗೆ ಆ ಪ್ರಜ್ಞೆಯೇ ಇಲ್ಲ ಎನ್ನಿಸುತ್ತದೆ. ಯಾರು ತಮ್ಮನ್ನು ಎತ್ತರಕ್ಕೆ ಒಯ್ದರೋ, ಯಾರು ನೆಲೆ ಕೊಟ್ಟರೋ, ಯಾರು ಸಮಾಜದಲ್ಲಿ ಸ್ಥಾನ ನೀಡಿದರೋ ಅಂಥವರ ಕತ್ತನ್ನೇ ಅತ್ಯಂತ ಸರಿಯಾದ ಸಮಯದಲ್ಲಿ ಕತ್ತರಿಸಿ ಮತ್ತೆ ಮೊಸಳೆ ಕಣ್ಣೀರು ಸುರಿಸಿ ಜನರ ಅನುಕಂಪೆಯನ್ನು ಬಯಸುತ್ತಾರೆ. ಕತಜ್ಞತೆ ಇಲ್ಲದ ಮನುಷ್ಯನಷ್ಟು ಅಪಾಯಕಾರಿ ವಸ್ತು ಮತ್ತೊಂದಿಲ್ಲ.
ಕೃಪೆ - ಪ್ರಜಾವಣಿ
ದಾನದ ಮಹಿಮೆ : ಕೃಪೆ - ಪ್ರಜಾವಣಿ
ಡಾ. ಚಂದ್ರಶೇಖರ ಕಂಬಾರ ಅವರು ಬರೆದ ಅನೇಕ ಸುಂದರ ಜನಪದ ಕಥೆಗಳಲ್ಲಿ ಇದೊಂದು.
ಒಂದು ಊರಿನಲ್ಲಿ ತಾಯಿ ಮಗ ಇದ್ದರು. ತಾಯಿ ಬೇರೆಯವರ ಮನೆಗಳಲ್ಲಿ ದುಡಿದು ಹಣಗಳಿಸಿ, ಅದರಲ್ಲೇ ಸಾಕಷ್ಟನ್ನು ದಾನ ಮಾಡಿ ಉಳಿದದ್ದರಲ್ಲಿ ಇಬ್ಬರ ಜೀವನ ಸಾಗಿಸುತ್ತಿದ್ದಳು. ಮಗನಿಗೆ ಈ ದಾನ ಇಷ್ಟವಿಲ್ಲ. ಆಕೆಯನ್ನು ಕೇಳಿದ, `ಯಾಕೆ ಹೀಗೆ ದಾನ ಮಾಡುತ್ತೀ. ಕೆಲವೊಮ್ಮೆ ಉಪವಾಸ ಇದ್ದು ದಾನ ಮಾಡುತ್ತಿ. ಈ ದಾನದ ಮಹತ್ವ ಏನು' ತಾಯಿ ಹೇಳಿದಳು, `ಮಗೂ, ದಾನದಿಂದ ಪುಣ್ಯ ಬರುತ್ತದೆ.
ಪುಣ್ಯ ಎಂದರೇನು' ಮಗ ಕೇಳಿದ. ತಾಯಿ, `ನನಗೇನು ಗೊತ್ತಪ್ಪ. ಅದು ಶಿವನಿಗೇ ಗೊತ್ತು. ಅವನನ್ನೇ ಹೋಗಿ ಕೇಳು' ಎಂದಳು.
ಮಗ ಶಿವನನ್ನು ಕಾಣಲು ಹೊರಟ. ದಾರಿಯಲ್ಲಿ ದಟ್ಟವಾದ ಅರಣ್ಯ. ಕತ್ತಲೆಯೂ ಆಯಿತು. ತರುಣನಿಗೆ ಗಾಬರಿ. ಆಗ ಅಲ್ಲಿಗೊಬ್ಬ ಬೇಡ ಬಂದ.
ಈತನನ್ನು ಕರೆದುಕೊಂಡು ತನ್ನ ಗುಡಿಸಲಿಗೆ ಹೋದ. ಹೆಂಡತಿಗೆ ಹಣ್ಣು, ಹಂಪಲುಗಳನ್ನು ನೀಡಲು ಕೇಳಿದ. ಆಕೆ ಸಿಡುಕಿನಿಂದ, `ನನ್ನದ್ದನ್ನು ಕೊಡಲಾರೆ, ಬೇಕಾದರೆ ನಿನ್ನ ಪಾಲಿನಲ್ಲೇ ಕೊಡು' ಎಂದಳು. ಬೇಡ ತನ್ನ ಪಾಲಿನ ಆಹಾರವನ್ನು ಈತನಿಗಿತ್ತು, ಕಾಲು ಒತ್ತಿ, ಹಾಸಿಗೆ ಹಾಸಿ ಗುಡಿಸಲಿನಲ್ಲಿ ಮಲಗಿಸಿದ. ತಾನು ಗುಡಿಸಿಲಿನ ಅರ್ಧ ಒಳಗೆ, ಅರ್ಧ ಹೊರಗೆ ಮಲಗಿದ. ರಾತ್ರಿ ಹುಲಿ ಬಂದು ಬೇಡನನ್ನು ಹೊಡೆದು ತಿಂದಿತು.
ಗುಡಿಸಲಿನೊಳಗೆ ನುಗ್ಗಿ ಅವನ ಹೆಂಡತಿಯನ್ನು ಎಳೆದುಕೊಂಡು ಹೋಗಿ ಮುಗಿಸಿತು. ಹುಡುಗ ದುಃಖದಿಂದ ಮುಂದೆ ನಡೆದ. ಮುಂದೆ ದಾರಿಯಲ್ಲಿ ರಾಜನೊಬ್ಬ ಸಿಕ್ಕ. ಈತ ಶಿವನ ಕಡೆಗೆ ಹೊರಟಿದ್ದನ್ನು ತಿಳಿದು, `ಹುಡುಗಾ, ನನ್ನದೊಂದು ಸಮಸ್ಯೆಗೆ ಶಿವನಿಂದ ಪರಿಹಾರ ಕೇಳಿಕೊಂಡು ಬಾ, ನಾನು ಕೋಟಿ ಹೊನ್ನು ಖರ್ಚುಮಾಡಿ ಕೆರೆ ಕಟ್ಟಿಸಿದ್ದೇನೆ. ಆದರೆ ಒಂದು ಹನಿ ನೀರೂ ಬೀಳಲಿಲ್ಲ'. ಹುಡುಗ `ಹ್ಞೂ' ಎಂದು ನಡೆದ. ಸ್ವಲ್ಪ ಮುಂದೆ ಹೋಗುವಾಗ ದಾರಿಯಲ್ಲಿ ಒಬ್ಬ ಕುಂಟ ಮನುಷ್ಯ ಸಿಕ್ಕ. ಆತನೂ ಕೇಳಿದ, `ನನ್ನ ಕುಂಟತನಕ್ಕೆ ಕಾರಣವನ್ನು ಕೇಳಿ ಬಾ'. ಹಾಗೆಯೇ ಮುಂದುವರೆದಾಗ ದಾರಿಯಲ್ಲಿ ಒಂದು ದೊಡ್ಡ ಸರ್ಪ ಕಂಡಿತು. ಅದು ಹುತ್ತದೊಳಗೆ ಹೋಗಲಾರದೆ, ಹೊರಗೆ ಬರಲಾರದೆ ಒದ್ದಾಡುತ್ತಿತ್ತು. `ನಾನು ಇದರಿಂದ ಪಾರಾಗುವುದು ಹೇಗೆ ಎಂದು ಕೇಳಿಕೊಂಡು ಬಾ' ಎಂದಿತು.
ತರುಣ ಬಂದು ಶಿವನನ್ನು ಕಂಡ `ಪ್ರಭೋ, ದಾನದ ಪುಣ್ಯ ಎಂದರೇನು, ದಯವಿಟ್ಟು ಹೇಳು' ಎಂದ. ಅದಕ್ಕೆ ಶಿವ, `ನೋಡು, ನೇಪಾಳ ದೇಶದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನಾನು ಕೊಡುವ ಪ್ರಸಾದವನ್ನು ಆಕೆಗೆ ಕೊಡು. ಆಕೆ ಗಂಡು ಮಗುವನ್ನು ಹಡೆಯುತ್ತಾಳೆ. ಆ ಕೂಸು ನಿನಗೆ ದಾನದ ಪುಣ್ಯವೇನೆಂದು ಹೇಳುತ್ತದೆ' ಎಂದ. ರಾಜನ ಕೆರೆಯ ನೀರಿನ ಬಗ್ಗೆ ಕೇಳಿದಾಗ, `ರಾಜ ತನ್ನ ಮಗಳಿಗೆ ಒಳ್ಳೆಯ ವರನನ್ನು ನೋಡಿ ಮದುವೆ ಮಾಡಿದರೆ ನೀರು ಬೀಳುತ್ತದೆ' ಎಂದ. ಅಂತೆಯೇ ಕುಂಟನ ಕಾಲಿನ ಪರಿಹಾರವನ್ನು ಕೇಳಿದಾಗ, `ಆತ ವಿದ್ಯಾದಾನ ಮಾಡಿಲ್ಲ.
ತನ್ನ ವಿದ್ಯೆಯನ್ನು ಯಾರಿಗಾದರೂ ದಾನ ಮಾಡಿದರೆ ಕುಂಟತನ ಹೋಗುತ್ತದೆ' ಎಂದು ನುಡಿದ. ಹಾಗಾದರೆ ಹಾವಿನ ತೊಂದರೆಗೆ ಪರಿಹಾರವೇನು ಎಂಬ ಪ್ರಶ್ನೆಗೆ, `ಅದರ ನೆತ್ತಿಯಲ್ಲಿ ಒಂದು ರತ್ನವಿದೆ. ಅದನ್ನು ಯಾರಿಗಾದರೂ ಕೊಟ್ಟರೆ ಅದರ ಸಮಸ್ಯೆ ಬಗೆಹರಿಯುತ್ತದೆ' ಎಂದು ಉತ್ತರಿಸಿದ. ಬರುವಾಗ ದಾರಿಯಲ್ಲಿ ಹಾವು ಸಿಕ್ಕಿತು. ಶಿವನ ಮಾತನ್ನು ತಿಳಿಸಿದಾಗ ನೆತ್ತಿಯ ರತ್ನವನ್ನು ಇವನಿಗೇ ಕೊಟ್ಟಿತು. ಕುಂಟ ಈತನಿಗೆ ಎಲ್ಲ ವಿದ್ಯೆಗಳನ್ನು ದಾನ ಮಾಡಿದ. ವಿದ್ಯೆ ಮತ್ತು ರತ್ನವನ್ನು ಪಡೆದ ಇವನಿಗೇ ರಾಜ ಮಗಳನ್ನು ಕೊಟ್ಟು ಮದುವೆ ಮಾಡಿದ.
ರಾಜ್ಯವನ್ನು ಕೊಟ್ಟ. ಕೆರೆ ತುಂಬಿತು. ನಂತರ ತರುಣ ನೇಪಾಳಕ್ಕೆ ಹೋದ. ರಾಣಿ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದಳು. ಈತ ಕೊಟ್ಟ ಪ್ರಸಾದ ತಿಂದೊಡನೆ ಸುಖಪ್ರಸವವಾಗಿ ಗಂಡುಮಗು ಹುಟ್ಟಿತು. ಅದನ್ನು ಬಂಗಾರದ ತಟ್ಟೆಯಲ್ಲಿ ತಂದು ಇವನ ಮುಂದಿಟ್ಟರು. ಈತ ಕೇಳಿದ, `ದಾನದ ಪುಣ್ಯ ಯಾವುದು' ಮಗು ಪಕಪಕನೇ ನಕ್ಕು ಹೇಳಿತು, `ಹುಚ್ಚಾ, ಶಿವನನ್ನು ಕಂಡು ಬಂದರೂ ಜ್ಞಾನ ಬರಲಿಲ್ಲವೇ? ಯಾವ ಬೇಡ ನಿನಗೆ ಕಾಡಿನಲ್ಲಿ ಆಶ್ರಯ ಕೊಟ್ಟನೋ ಅವನೇ ನಾನು. ಅನ್ನದಾನ ಮಾಡಿದ್ದಕ್ಕೆ ಈಗ ರಾಜಕುಮಾರನಾಗಿ ಹುಟ್ಟಿದ್ದೇನೆ. ದಾನ ಮಾಡದ ನನ್ನ ಹೆಂಡತಿ ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ'.
ಹುಡುಗ ತನ್ನ ಊರಿಗೆ ಬಂದು ತಾಯಿಯನ್ನು ಕರೆದುಕೊಂಡು ಹೋಗಿ ದೊರೆತ ರಾಜ್ಯದ ರಾಜನಾಗಿ ಸುಖದಿಂದ ಬದುಕಿದ.
ನಾವು ಜೀವನದಲ್ಲಿ ಪಡೆಯುತ್ತಲೇ ಇರುತ್ತೇವೆ. ಅದರಲ್ಲೇ ಸಂತೋಷವನ್ನೂ ಪಡೆಯುತ್ತೇವೆ. ಆದರೆ, ನಿಜವಾದ ಮಾತೆಂದರೆ ನೀಡುವುದರಲ್ಲಿ ಇರುವ ಸುಖ, ನೆಮ್ಮದಿ ಪಡೆಯುವುದರಲ್ಲಿ ಇಲ್ಲ. ಹಾಗೆಂದು ಎಲ್ಲವನ್ನು ತ್ಯಾಗ ಮಾಡಿ ಸನ್ಯಾಸಿಯಾಗಬೇಕೆಂದಿಲ್ಲ. ನಮ್ಮ ಆಸೆ, ದುರಾಸೆಯಾಗದಂತೆ. ಅಪೇಕ್ಷೆ ಪರಪೀಡಕವಾಗದಂತೆ, ಬದುಕು ಪರರಿಗೆ ಹೊರೆಯಾಗದಂತೆ, ಇರುವ ನೆಲೆಯಲ್ಲೇ ಮತ್ತಷ್ಟು ಜನರಿಗೆ ನೆರಳಾಗುವ, ಪ್ರಯೋಜನಕಾರಿಯಾಗುವಂತೆ ಬದುಕುವುದು ಸಾರ್ಥಕತೆಯ ಲಕ್ಷಣ.
Krupe Prajavani 05/03/2013
ಮಾಹಿತಿ ಹಕ್ಕು ಅಧಿನಿಯಮ, ೨೦೦೫ - ಒಂದು ಅವಲೋಕನ
E0zÀÄ vÀ0vÀæeÁÕ£À ±ÀgÀªÉÃUÀzÀ°è ¨É¼ÉAiÀÄÄwÛgÀĪÀÅzÀÄ ¸ÁéUÀvÁºÀð. « - ªÁtÂdå, « - ªÀiÁgÀÄPÀmÉÖ, « - ¨Áå0Q0Uï, « - DqÀ½vÀ, « - «zÁå¨sÁå¸À J®èªÀÇ «zÀÄå£ÀäAiÀĪÁVzÉ. ¨sÁgÀvÀzÀ°è ªÀiÁ»w ªÀÄvÀÄÛ vÀ0vÀæeÁÕ£À PÁ¬ÄzÉUÉ C¨sÀÆvÀ¥ÀǪÀð ¸ÁéUÀvÀ ¹QÌzÉ. F ªÀiÁ»w ªÀÄvÀÄÛ vÀ0vÀæeÁÕ£À PÁ¬ÄzÉ- 2000 zÀ°è ªÀiÁ»wAiÀÄ §UÉÎ ¸ÀzÀj PÁ£ÀÆ£ÀÄ ¸ÀĪÀÄä¤zÀÄÝzÀÄ M0zÀÄ «¥ÀAiÀiÁð¸À. 2005 gÀ°è ªÀiÁ»w ºÀPÀÄÌ C¢ü¤AiÀĪÀÄ eÁjUÉ §0zÀÄ ªÀiÁ»w J0§ ¥ÀzÀPÉÌ ªÀĺÀvÀéªÀ£ÀÄß PÉÆnÖzÉ. ªÀiÁ»w J0zÀgÉ ¸ÁªÀiÁ£Àå £ÁUÀjÃPÀ¤UÉ ¸ÀPÁðgÀzÀ E¯ÁSÉUÀ¼À°ègÀĪÀ PÀqÀvÀUÀ¼À §UÉÎ, ¸ÀPÁðgÀzÀ RZÀÄð ªÉZÀÑUÀ¼À §UÉÎ, CzÀgÀ DqÀ½vÀzÀ §UÉÎ ¹UÀĪÀ ªÀiÁ»w. E0zÀÄ ªÀiÁ»w ºÀPÀÄÌ C¢ü¤AiÀĪÀÄ eÁjUÉ §0zÀÄ ¥ÀæwAiÉÆ§â £ÁUÀjÃPÀ¤UÉ ¸ÀPÁðgÀzÀ°ègÀĪÀ ªÀiÁ»w ®¨sÀåªÁVzÉ. F C¢ü¤AiÀĪÀĪÀ£ÀÄß £ÀªÀÄä ¸À0¸ÀvÀÄÛ ¨sÁgÀwÃAiÀÄjUÉ ¤Ãr £ÀªÀÄä ¸À0«zsÁ£ÀªÀ£ÀÄß UËgÀ«¹zÉ.
zÀ±ÀPÀUÀ¼À PÁ®¢0zÀ®Æ ¸ÀPÁðgÀzÀ PÀqÀvÀUÀ¼À gÀºÀ¸Àå ¸ÁªÀiÁ£Àå £ÁUÀjÃPÀ¤UÉ w½AiÀÄĪÀÅzÀÄ zÀÄ®ð¨sÀªÁVvÀÄÛ. £ÀªÀÄUÉ ¸ÁévÀ0vÀæ÷å §0zÀ ªÉÄÃ®Æ ¸ÀºÀ ©ænõÀgÀ ¥ÀgÀ0¥ÀgÉAiÀiÁzÀ ¸ÀPÁðgÀzÀ gÀºÀ¸Àå PÁ¥ÁqÀÄ«PÉAiÀÄ£ÀÄß £ÀªÀÄä ¸ÀPÁðgÀ ªÀÄÄ0zÀĪÀj¹zÀÄÝ M0zÀÄ «¥ÀAiÀiÁð¸À. ¨sÁgÀwÃAiÀÄ £ÁUÀjÃPÀ ªÀiÁ»w ºÀPÀÄÌUÀ½UÁV £ÀÆgÁgÀÄ ¨Áj £ÀªÀÄä ¸ÀªÉÇðÃZÀÒ £ÁåAiÀiÁ®AiÀÄzÀ ¨ÁV®Ä §rzÀgÀÆ ¥ÀæAiÉÆÃd£ÀªÁUÀ°®è. ¸ÀPÁðgÀzÀ gÀºÀ¸ÀåªÉ0§ PÀqÀvÀUÀ¼À°è ¨sÀæµÁÖZÁgÀ J0§ gÁPÀë¸À ClÖºÁ¸À ªÀiÁqÀÄwÛzÀÝ. ¥ÀæeÁ¥Àæ¨sÀÄvÀé ªÀåªÀ¸ÉÜAiÀÄ°è ªÀiÁ»wAiÀÄ ºÀPÀÄÌ £ÀªÀÄä d£Àä¹zÀÞ ºÀPÀÄÌ J0§ PÀÆUÀÄ PÀ¼ÉzÀ zÀ±ÀPÀ¢0zÀ PÉüÀ¯ÁgÀ0©ü¹vÀÄ. £ÀªÀÄä ¸ÀªÉÇðÃZÀÒ £ÁåAiÀiÁ®AiÀĪÀÇ ¸ÀºÀ ¸ÁªÀiÁ£Àå £ÁUÀjÃPÀ£À F PÀÆVUÉ ªÀÄ£ÀßuÉ ¤Ãr, ªÀiÁ»w ºÀPÀÄÌ £ÀªÀÄä ¸À0«zsÁ£ÀzÀ ªÀÄÆ®¨sÀÆvÀ ºÀPÀÄÌUÀ¼À°èAiÉÄà CqÀPÀªÁVzÉ J0zÀÄ wÃ¥ÀÅð ¤ÃrvÀÄ. «±Àé¸À0¸ÉÜAiÀÄÄ 2000 gÀ°è ¥ÀæwAiÉÆ0zÀÄ ¸ÀzÀ¸Àå gÁµÀÖçUÀ¼ÀÄ ªÀiÁ»w ºÀPÀÄÌ C¢ü¤AiÀĪÀĪÀ£ÀÄß CªÀgÀ £ÁUÀjÃPÀjUÉ ¤ÃqÀ®Ä ¸ÀÄvÉÆÛïÉAiÀÄ£ÀÄß ºÉÆgÀr¹vÀÄ. (¸ÀÄvÉÆÛÃ¯É ¸À0SÉå AiÀÄÄ. J£ï. rN¹ / ¹J£ï 4/2000 d£ÀªÀj 15) EzÀj0zÀ dÆ£ï 15, 2005 gÀ0zÀÄ ªÀiÁ»w ºÀPÀÄÌ J0§ ªÀĸÀÆzÉ £ÀªÀÄä gÁµÀÖç¥ÀwAiÀĪÀj0zÀ C0VÃPÀÈvÀªÁV dÆ£ï 15, 2005 j0zÀ eÁjUÉ §0vÀÄ.
ªÀiÁ»w J0zÀgÉãÀÄ?
¸ÀPÁðgÀzÀ PÀqÀvÀzÀ°ègÀĪÀ AiÀiÁªÀÅzÉà ªÀiÁ»w C0zÀgÉ ¸ÀPÁðj PÉ®¸ÀzÀ vÀ¥Á¸ÀuÉ, ¸ÀPÁðj PÀqÀvÀUÀ¼À ªÀiÁ»w, PÀqÀvÀUÀ¼À ¥ÀæªÀiÁt ¥ÀvÀæ, ¥ÀæªÀiÁtÂÃPÀj¹zÀ ¥ÀzÁxÀðUÀ¼À £ÀªÀÄÆ£É, UÀtPÀAiÀÄ0vÀæUÀ¼À ¥sóÁè¦ ªÀÄvÀÄÛ EvÀgÀ AiÀiÁªÀÅzÉà ªÀiÁ»wAiÀÄ£ÀÄß £ÁUÀjPÀ ¸À0§0zsÀ¥ÀlÖ E¯ÁSÉUÀ½0zÀ ¥ÀqÉAiÀħºÀÄzÀÄ. ¸ÀPÁðgÀ ¤ÃrzÀ UÀÄwÛUÉUÀ¼À ¥ÀæwUÀ¼À£ÀÄß ªÀÄvÀÄÛ CzÀgÀ £ÀPÉëUÀ¼À£ÀÄß CzÀgÀ ªÉZÀÑzÀ ªÀiÁ»wAiÀÄ£ÀÆß ¸ÀºÀ ¥ÀqÉAiÀħºÀÄzÀÄ. ¸ÀPÁðgÀ¢0zÀ UÀÄwÛUÉAiÀÄ£ÀÄß ¥ÀqÉzÀ UÀÄwÛUÉzÁgÀgÀÄ G¥ÀAiÉÆÃV¹zÀ ¥ÀzÁxÀðUÀ¼À £ÀªÀÄÆ£ÉAiÀÄ£ÀÆß ¸ÀºÀ ¥ÀqÉAiÀħºÀÄzÀÄ.
ªÀiÁ»w ºÀPÀÄÌ C¢ü¤AiÀĪÀÄ ¨sÁgÀwÃAiÀÄ £ÁUÀjÃPÀ¤UÉ ¸ÀPÁðgÀzÀ AiÀiÁªÀÅzÉà ªÀiÁ»wAiÀÄ£ÀÄß w½zÀÄPÉÆ¼ÀÄîªÀ ºÀPÀÄÌ ¤ÃrzÉ. zÀ±ÀPÀUÀ½0zÀ £ÁUÀjÃPÀ¤UÉ ¸ÀPÁðgÀzÀ AiÀiÁªÀÅzÉà ªÀiÁ»wAiÀÄ£ÀÄß w½zÀÄPÉÆ¼ÀÄîªÀ ºÀPÀÄÌ ¤ÃrzÉ. FUÀ £ÁUÀjÃPÀgÀÄ PÉýzÀ AiÀiÁªÀÅzÉà ªÀiÁ»wAiÀÄ£ÀÄß ¤ÃqÀĪÀÅzÀÄ ¸ÀPÁðgÀzÀ PÀvÀðªÀåªÁVzÉ. DzÀgÉ ªÀiÁ»wAiÀÄ£ÀÄß ¨sÁgÀwÃAiÀÄ £ÁUÀjÃPÀgÀÄ PÉêÀ® ¸ÀPÁðgÀ ºÁUÀÆ ¸ÀPÁðgÀzÀ ¸ÁéªÀÄåzÀ PÀ0¥À¤UÀ½0zÀ ªÀiÁvÀæ ¥ÀqÉAiÀħºÀÄzÀÄ. SÁ¸ÀV PÀ0¥À¤UÀ¼ÀÄ CgÉ ¸ÀPÁðj PÀ0¥À¤UÀ½UÉ F PÁAiÉÄÝ C£Àé¬Ä¸ÀĪÀÅ¢®è.
ªÀiÁ»w ºÀPÀÄÌ C¢ü¤AiÀĪÀÄ - ªÀÄÄSÁå0±ÀUÀ¼ÀÄ:
¥ÀæeÁ¥Àæ¨sÀÄvÀézÀ ªÀåªÀ¸ÉܬÄ0zÀ gÁµÀÖçUÀ¼À°è £ÁUÀjÃPÀgÉà AiÀÄdªÀiÁ£ÀgÀÄ. ¸ÀPÁðgÀªÀ£ÀÄß £ÁUÀjÃPÀgÉà gÀa¸ÀÄvÁÛgÉ. zÉñÀzÀ ¥ÀæwAiÉÆ§â £ÁUÀjÃPÀ¤UÀÆ vÁ£ÀÄ gÀa¹zÀ ¸ÀPÁðgÀ ºÉÃUÉ PÉ®¸À ¤ªÀð»¸ÀÄwÛzÉ J0zÀÄ w½zÀÄPÉÆ¼ÀÄîªÀ ºÀPÀÄÌ EzÉ. vÁªÀÅ ZÀÄ£Á¬Ä¹zÀ ±Á¸ÀPÀgÀÄ, ¸À0¸ÀzÀgÀÄ vÉUÉzÀÄPÉÆ¼ÀÄîªÀ ¤zsÁðgÀ, CªÀgÀÄ PÉ®¸À ªÀiÁqÀĪÀ ªÉÊRjAiÀÄ£ÀÄß £ÉÆÃr, w½zÀÄ ¥Àæ²ß¸ÀĪÀ ºÀPÀÄÌ £ÁUÀjÃPÀ¤VzÉ. £ÀªÀÄä ¸À0«zsÁ£ÀzÀ ªÀÄÆ®¨sÀÆvÀ ºÀPÁÌzÀ ªÁPï ªÀÄvÀÄÛ C©üªÀåQÛ ¸ÁévÀ0vÀæ÷å F ªÀiÁ»w ºÀPÀÄÌ E®èzÉà ¥Àj¥ÀÇtð J¤¸ÀĪÀÅ¢®è. ¸ÀPÁðgÀ ¸ÁªÀiÁ£Àå £ÁUÀjÃPÀgÀÄ PÀµÀÖ¥ÀlÄÖ ¨ÉªÀgÀÄ ¸ÀÄj¹ ¸À0¥Á¢¹PÉÆqÀĪÀ vÉjUɬÄ0zÀ PÉ®¸À ªÀiÁqÀÄvÀÛzÉ. £ÁªÀÅ PÉÆlÖ vÉjUÉ ºÀt ¸ÀPÁðgÀ AiÀiÁªÀ jÃw ªÉZÀÑ ªÀiÁqÀÄwÛzÉ J0zÀÄ w½zÀÄPÉÆ¼ÀÄîªÀ ºÀPÀÄÌ £ÀªÀÄUÉ R0rvÀªÁVAiÀÄÆ EzÉ. ¸ÀPÁðgÀzÀ°è £ÀqÉAiÀÄĪÀ ¨sÀæµÁÖZÁgÀªÀ£ÀÆß ¸ÀºÀ F ªÀiÁ»wAiÀÄ£ÀÄß ¸Àé®à ªÀÄnÖUÉ PÀrªÉÄ ªÀiÁqÀĪÀÅzÀgÀ°è AiÀiÁªÀÅzÉà ¸À0±ÀAiÀÄ«®è. F C¢ü¤AiÀĪÀÄ¢0zÀ ¸ÀPÁðgÀzÀ ¥ÀæwAiÉÆ0zÀÄ ¤zsÁðgÀ, PÉ®¸À £ÁUÀjÃPÀjUÉ w½AiÀÄÄvÀÛzÉ.
¨sÀæµÁÖ ¤ªÀÄÆð®£É ªÀÄvÀÄÛ ªÀiÁ»w ºÀPÀÄÌ C¢ü¤AiÀĪÀÄ:E0zÀÄ ¨sÀæµÁÖZÁgÀ £ÀªÀÄä PÁ£ÀÆ£À£Éßà PÉÆ0zÀÄ ºÁPÀÄwÛgÀĪÀÅzÀÄ M0zÀÄ «¥ÀAiÀiÁð¸À. ¨sÀæµÁÖZÁgÀ E0zÀÄ gÁdQÃAiÀÄ gÀ0UÀzÀ°è C¥ÀgÁ¢üUÀ¼À£ÀÄß vÀÄ0§ÄwÛzÉ. ¨sÀæµÁÖZÁgÀ £ÀªÀÄä ªÁ¶ðPÀ §eÉmï£À CzsÀð ¨sÁUÀªÀ£Éßà w0zÀÄ ºÁPÀÄwÛzÉ. M0zÀÄ gÀÆ¥Á¬ÄAiÀÄ ¸ÀPÁðj UÀÄwÛUÉAiÀİè UÀÄwÛUÉzÁgÀ UÀÄwÛUÉ PÉ®¸ÀPÁÌV RZÀÄð ªÀiÁqÀĪÀÅzÀÄ PÉêÀ® 20 ¥ÉʸÉ. G½zÀ 80 ¥ÉÊ¸É ¨sÀæµÁÖZÁgÀzÀ°è ªÀåAiÀĪÁUÀÄvÀÛzÉ. ¸ÀPÁðgÀzÀ E¯ÁSÉUÀ¼À°è £ÀqÉAiÀÄÄwÛgÀĪÀ ¨sÀæµÁÖZÁgÀ¢0zÀ £ÁUÀjÃPÀ E0zÀÄ gÉÆÃ¹ ºÉÆÃVzÁÝ£É. ¸ÀPÁðgÀzÀ ªÉÄÃ¯É vÀ£Àß £À0©PÉAiÀÄ£ÀÄß PÀ¼ÉzÀÄPÉÆ¼ÀÄîwÛzÁÝ£É.
«±Àé¨Áå0Q£À M0zÀÄ ¸À«ÄÃPÉëAiÀÄ ¥ÀæPÁgÀ M0zÀÄ gÁµÀÖçzÀ ¨É¼ÀªÀtÂUÉAiÀÄ£ÀÄß ¨sÀæµÁÖZÁgÀ ±ÉÃRqÁ 0.5 j0zÀ 1.0 PÀÄ0pvÀUÉÆ½¸ÀÄwÛzÉ. zÀ±ÀPÀUÀ½0zÀ ¸ÀPÁðj E¯ÁSÉUÀ¼À°è ®0ZÀUÀĽvÀ£À gÁeÁgÉÆÃµÀªÁV £ÀqÉAiÀÄÄwÛzÉ. ªÀiÁ»w ºÀPÀÄÌ C¢ü¤AiÀĪÀÄ F ¨sÀæµÁÖZÁgÀªÀ£ÀÄß ¸À0¥ÀÇtðªÁV vÉÆqÉzÀÄ ºÁPÀ¢zÀÝgÀÆ, ¸Àé®à ªÀÄnÖUÉ ¸ÀÄzsÁj¸À§ºÀÄzÀÄ.
eÁUÀwÃPÀ ªÀÄlÖzÀ°è ªÀiÁ»w ºÀPÀÄÌ:
E0zÀÄ ¥Àæ¥À0ZÀzÀ 50 gÁµÀÖçUÀ¼À°è ªÀiÁ»w ºÀPÀÄÌ eÁjAiÀİèzÉ. 90 gÀ zÀ±ÀPÀzÀ°è d¥Á£ï, §¯ÉÎÃjAiÀiÁ, L¯Áð0qï, zÀQët D¦üûæPÁ, xÉʯÁå0qï, E0UÉè0qï ªÀÄÄ0vÁzÀ 26 gÁµÀÖçUÀ½UÉ ªÀiÁ»w ºÀPÀÄÌ ¤ÃqÀ¯Á¬ÄvÀÄ. ¹éÃqÀ£ï gÁµÀÖçzÀ°è 18 £Éà ±ÀvÀªÀiÁ£ÀzÀ°èAiÉÄà ªÀiÁ»w ºÀPÀÄÌ C¢ü¤AiÀĪÀÄ eÁjAiÀİèzÉ. E0zÀÄ ¥ÀæeÁ¥Àæ¨sÀÄvÀé ªÀåªÀ¸ÉÜ EgÀĪÀ ¥ÀæwAiÉÆ0zÀÄ gÁµÀÖçzÀ°è ªÀiÁ»w ºÀPÀÄÌ C¢ü¤AiÀĪÀÄ eÁjAiÀİèzÉ.
¸ÀPÁðgÀ CxÀªÁ ¸À0¸ÀvÀÄÛ C¢ü¤AiÀĪÀÄ ªÀiÁrzÀgÉ ¸Á®zÀÄ. F C¢ü¤AiÀĪÀĪÀ£ÀÄß ¸ÀªÀÄ¥ÀðPÀªÁV eÁj ªÀiÁqÀ¨ÉÃPÀÄ. ºÁUÀÆ £ÁUÀjÃPÀgÀÄ ¸ÀzÀj C¢ü¤AiÀĪÀĪÀ£ÀÄß ¸ÀªÀÄ¥ÀðPÀªÁV G¥ÀAiÉÆÃV¹PÉÆ¼Àî¨ÉÃPÀÄ. GzÁºÀgÀuÉUÉ d¥Á£ï gÁµÀÖçzÀ°è 2001 gÀ°è ªÀiÁ»w ºÀPÀÄÌ ¤ÃqÀ¯Á¬ÄvÀÄ. ªÉÆzÀ® ªÀµÀðzÀ¯Éèà CzsÀð «Ä°AiÀÄ£ï£ÀµÀÄÖ £ÁUÀjÃPÀgÀÄ F ºÀPÀÌ£ÀÄß G¥ÀAiÉÆÃV¹zÀgÀÄ. CªÉÄÃjPÁzÀ ªÀiÁ»w ¸ÁévÀ0vÀæ÷å PÁAiÉÄÝ 2000 ªÀ0vÀÆ CªÉÄÃjPÀ£ÀßjUÉ M0zÀÄ ªÀgÀ¥Àæ¸ÁzÀªÁVvÀÄÛ. 100 PÉÌ 90 gÀµÀÄÖ CªÉÄÃjPÀ£ÀßgÀÄ ¸ÀzÀj ºÀPÀÌ£ÀÄß ZÀ¯Á¬Ä¹zÀgÀÄ.
£ÁªÀÅ ¨sÁgÀwÃAiÀÄgÀÄ eÁUÀÈvÀgÁUÀ¨ÉÃPÀÄ. ¸ÀPÁðgÀzÀ ¥ÀæwAiÉÆ0zÀÄ PÉ®¸ÀzÀ ªÉÄÃ®Æ £ÀªÀÄä PÀtÂÚgÀ¨ÉÃPÀÄ. £É£À¦gÀ°. ¨sÀæµÁÖZÁgÀªÉ0§ gÁPÀë¸À £ÀªÀÄä£ÀÄß D½zÁÝ£É. £ÀªÀÄä£ÀÄß zÁ¸ÀåzÀ ¸À0PÉÆÃ¯ÉUÀ½0zÀ §0¢ü¹zÁÝ£É. F ¸À0PÉÆÃ¯ÉUÀ¼À£ÀÄß QvÀÄÛ ºÁPÀ¨ÉÃPÀÄ. £ÀªÀÄä°è C£ÉÃPÀ ¨sÁµÉUÀ½ªÉ, eÁwUÀ½ªÉ, ¥À0UÀqÀUÀ½ªÉ, zsÀªÀÄðUÀ½ªÉ. DzÀgÉ F ªÉÊ«zsÀåvÉAiÀÄ®Æè £ÀªÀÄä°è KPÀvÉ EzÉ. ¨sÁgÀwÃAiÀÄvÀ£À«zÉ. ¸Áé©üªÀiÁ£À EzÉ. E0zÉà £ÁªÀÅ F ºÀPÀÌ£ÀÄß ZÀ¯Á¬Ä¸ÉÆÃt. £ÀªÀÄä ªÀÄÄ0¢£À d£Á0UÀPÉÌ ¨sÀæµÁÖZÁgÀ gÀ»vÀ ¸ÀÄ0zÀgÀ CR0qÀ ¨sÁgÀvÀªÀ£ÀÄß GqÀÄUÉÆgÉAiÀiÁV ¤ÃqÀĪÀ F PÁAiÉÄÝ £ÀªÀÄä M0zÀÄ ªÀĺÀvÀézÀ ºÉeÉÓAiÀiÁUÀ°.
Dgï. eÉ. ¸ÀwÃ±ï ¹0Uï,
ªÀQîgÀÄ, ªÉÄʸÀÆgÀÄ
Sunday, April 28, 2013
Saturday, April 27, 2013
‘ಮಲೆಗಳಲ್ಲಿ ಮದುಮಗಳು’ ನೋಡುವ ಮುನ್ನ ಈ ಟಿಪ್ಪಣಿ ಮಾಡಿಕೊಳ್ಳಿ « ಅವಧಿ / avadhi
‘ಮಲೆಗಳಲ್ಲಿ ಮದುಮಗಳು’ ನೋಡುವ ಮುನ್ನ ಈ ಟಿಪ್ಪಣಿ ಮಾಡಿಕೊಳ್ಳಿ « ಅವಧಿ / avadhi
ಮಲೆಗಳಲ್ಲಿ ಮದುಮಗಳ ಪ್ರಪಂಚ
ಬಿ ಆರ್ ಸತ್ಯನಾರಾಯಣ್
’ಏನು ಕಾಫಿಗೆ ಬರುವುದಿಲ್ಲವೆ?’
’ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು ಹಂಡೆ ಸದ್ದಾಗುತ್ತಿದೆ’
’ಚಿನ್ನಮ್ಮಗೆ ಏನೂ ತೊಂದರೆಯಿಲ್ಲ. ತಪ್ಪಿಸಿಕೊಂಡು ಹೋಗುವಳು ನೀವು ಬಂದು ಕಾಫಿ ಕುಡಿದು ಹೋಗಿ’
ಅರ್ಧ ಗಂಟೆಯ ನಂತರ ಕಾಪಿ ಕುಡಿಯುತ್ತಾ,
’ಚಿನ್ನಮ್ಮ ತಪ್ಪಿಸಿಕೊಂಡು ಹೋದಳೆ?’
’ಹ್ಞೂ ಅವಳು ಕ್ಷೇಮವಾಗಿ ಹುಲಿಕಲ್ಲು ನೆತ್ತಿ ಹತ್ತಿದಳು’
ಈ ಸಂಭಾಷಣೆ ಕುವೆಂಪು ದಂಪತಿಗಳದ್ದು. ಮಲೆಗಳಲ್ಲಿ ಮಧುಮಗಳು ಕಾದಂಬರಿ ರಚನೆಯಾಗುತ್ತಿದ್ದ ಕಾಲದ ಒಂದು ದಿನ ಸಂಜೆ ಕಾಫಿಯ ಸಮಯದಲ್ಲಿ ನಡೆದದ್ದು. ಇದನ್ನು ಸೊಗಸಾಗಿ ತಾರಿಣಿಯವರು ’ಮಗಳು ಕಂಡು ಕುವೆಂಪು’ ಕೃತಿಯಲ್ಲಿ ದಾಖಲಿಸಿದ್ದಾರೆ.
ಮೊದಲು ಪ್ರಾರಂಭವಾಗಿ, ಒಂದೆರಡು ಅಧ್ಯಾಯಗಳನ್ನು ಬರೆದು ಮುಗಿಸಿದ ಮೇಲೆ, ನಂತರ ಸುಮಾರು ೩೦ ವರ್ಷಗಳಾದ ಮೇಲೆ ಮೂರು ವರ್ಷಗಳ ಕಾಲ ಬರೆಯಿಸಿಕೊಂಡು ಕಾದಂಬರಿ ಇದು! ಅದು ಹೇಗೆ ಸಾಧ್ಯವಾಯಿತು? ಇದಕ್ಕೂ ಉತ್ತರ ತಾರಿಣಿಯವರ ಕೃತಿಯಲ್ಲಿ ಸಿಗುತ್ತದೆ.
ಕುವೆಂಪು ನಿವೃತ್ತರಾದ ಮೇಲೆ ಮನೆಯಲ್ಲಿ ಅರಾಮವಾಗಿದ್ದಾಗ ಒಂದು ದಿನ ಪುಸ್ತಕದ ಬೀರುವಿನಲ್ಲಿ ಏನನ್ನೋ ಹುಡುಕುತ್ತಿರುತ್ತಾರೆ. ತಾರಿಣಿ ’ಏನು?’ ಎಂದು ಕೇಳಿದಾಗ, ’ಅಕ್ಕಾ ಎಲ್ಲಾದರೂ ನನ್ನ ಪುಸ್ತಕಗಳ ಬೀರುವಿನಲ್ಲಿ ಆ ಕಾದಂಬರಿಯ ಮ್ಯಾಪ್ ಇದೆಯೇ ನೋಡುವೆಯಾ? ನಿನಗೆ ಸಮಯವಾದಾಗ ಹುಡುಕು’ ಎನ್ನುತ್ತಾರೆ. ’ಅದು ಹೇಗಿದೆ ಅಣ್ಣಾ?’ ಎನ್ನುವ ಪ್ರಶ್ನೆಗೆ, ಒಂದು ಫುಲ್ ಸ್ಕೇಪ್ ಬಿಳಿ ಹಾಳೆ, ಅದರಲ್ಲಿ ಎಲ್ಲಾ ಬರೆದಿರುವೆ’ ಎಂಬ ಉತ್ತರ ದೊರೆಯುತ್ತದೆ.
ಕೆಲ ದಿನಗಳ ನಂತರ, ಕುವೆಂಪು ತಮ್ಮ ಹಸ್ತಪ್ರತಿಗಳನ್ನು ಒಂದೊಂದೇ ತೆಗೆದು ನೋಡುತ್ತಿದ್ದಾಗ ಆ ಹಾಳೆ ಸಿಗುತ್ತದೆ. ಅವರು ಸಂತೋಷದಿಂದ ಅಲ್ಲಿಯೇ ಇದ್ದ ತಾರಿಣಿಗೆ ’ಅಕ್ಕಾ ಇಲ್ಲಿ ನೋಡು, ಅಂತೂ ಈ ಕಾದಂಬರಿ ಮ್ಯಾಪ್ ಸಿಕ್ಕಿತು’ ಎಂದು ಹರ್ಷದಿಂದ ಹೇಳುತ್ತಾರೆ.
(ತಾರಿಣಿಯವರ ಮಾತಿನಲ್ಲೇ ಹೇಳುವುದಾದರೆ) ಬಹಳ ಹಳೆಯದಾದ ಒಂದು ಕಾಗದದ ಹಾಳೆ. ಆ ಕಾಗದದ ಬಣ್ಣ ಮಾಸಿತ್ತು. ಬಿಳಿ ಬಣ್ಣ ಹೋಗಿ ಮಾಸಲು ಕೆಂಪು ಬಣ್ಣ ಬಂದಿತ್ತು. ಮಡಿಕೆಯಾದ ಜಾಗದಲ್ಲಿ ಸ್ವಲ್ಪ ಹರಿದಿತ್ತು. ಕಾಗದದಲ್ಲಿ ತಲೆಬರಹ ದೊಡ್ಡದಾಗಿ ಮಲೆಗಳಲ್ಲಿ ಮದುಮಗಳು ಎಂದು ಬರೆದಿತ್ತು. ಆ ಕಾಗದದ ತುಂಬ ಏನೇನೋ ಅತ್ತ ಇತ್ತ ಗೀರು, ಗೀರಿನ ಕೆಳಗೆ, ಮಧ್ಯೆ, ಪಕ್ಕ, ಕಾದಂಬರಿ ಪಾತ್ರಗಳ ಹೆಸರು, ಸ್ಥಳಗಳ ಹೆಸರು, ಊರಿನ ಹೆಸರು, ಬಾಣದ ಗುರುತುಗಳು, ಅಡ್ಡಗೀರು, ಉದ್ದಗೀರು, ತ್ರಿಕೋಣಗೆರೆಗಳು ಹೀಗೆ ಎಲ್ಲಾ ಕಡೆ ಚಿತ್ತಾರವಾಗಿ ನೋಡಿದವರಿಗೆ ಏನೂ ಅರ್ಥವಾಗುತ್ತಿರಲಿಲ್ಲ!
ಅದನ್ನು ನೋಡಿದ ತಾರಿಣಿಯವರು ’ಇದೇನಣ್ಣಾ ಈ ಮ್ಯಾಪ್ ಹೀಗಿದೆ? ನಾನು ಏನೋ ಬೇರೆಯೇ ತರವೇ ಊಹಿಸಿದ್ದೆ. ನನ್ನಿಂದ ಈ ಮ್ಯಾಪ್ ಹುಡುಕಲು ಆಗುತ್ತಿರಲಿಲ್ಲ’ ಎನ್ನುತ್ತಾರೆ. ಮತ್ತಿನ್ನೇನು? ಭೂಗೋಳ ಮ್ಯಾಪ್ ಹಾಗೆ ಇದರಲ್ಲಿ ಚಿತ್ರ ಬರೆದಿರುವೆ ಎಂದು ತಿಳಿದೆಯಾ? ಇಡೀ ಕಾದಂಬರಿ ಹೇಗೆ ಚಿತ್ರಿತವಾಗುವುದು ಎಂದು ಸ್ಥೂಲವಾಗಿ ಗುರುತು ಹಾಕಿದ್ದೆ. ಸಿಕ್ಕಿದ್ದು ಒಳ್ಳೆಯದಾಯಿತು. ಮತ್ತೆ ಬರೆಯಲು ಪ್ರಾರಂಭಿಸುವೆ. ಅಂತೂ ಸಧ್ಯ ಬೇಗ ಸಿಕ್ಕಿತಲ್ಲಾ. ಮೂವತ್ತು ವರ್ಷಗಳ ಹಿಂದೆ ಬರೆದಿಟ್ಟಿದ್ದು. ಹಾಳಾಗದೇ ಉಳಿದದ್ದೇ ಆಶ್ಚರ್ಯ’ ಎನ್ನುತ್ತಾರೆ.
ಆ ಕಾದಂಬರಿ ಮ್ಯಾಪ್ ಸಿಗದಿದ್ದರೆ…!?
ಮಲೆಗಳಲ್ಲಿ ಮದುಮಗಳು ಎಂಬ ಮಹಾ ಕಾದಂಬರಿ ಸೃಷ್ಟಿಯಾಗುತ್ತಿರಲೇ ಇಲ್ಲವೇನೋ! ಆದರೆ ಶ್ರೇಷ್ಠ ಸಾಹಿತ್ಯ ಕೃತಿಯೊಂದು ಜನ್ಮ ತಳೆಯುವುದು ಆ ಭುವನದ ಭಾಗ್ಯವಲ್ಲವೆ!
ತಾರಿಣಿಯವರ ಪುಸ್ತಕದಲ್ಲಿ ಈ ಘಟನೆಯನ್ನು ಓದಿದ ಮೇಲೆ, ಇಷ್ಟೊಂದು ಸಂಕೀರ್ಣ ಸಂರಚನೆಯುಳ್ಳ ಕಾದಂಬರಿ ಮೊದಲ ಬಾರಿಗೆ ಓದುಗನನ್ನು ಬೆಕ್ಕಸಬೆರಗುಗೊಳಿಸುವ ಈ ಕಾದಂಬರಿಯ ಬಗ್ಗೆ ನನಗೆ ಸಾಧ್ಯವಾದ ಹಾಗೆ ಓಂದು ಮ್ಯಾಪ್ ರಚಿಸಬೇಕೆಂದು ಕೊಂಡೆ, ವರ್ಷಗಳ ಹಿಂದೆಯೇ! ಆದರೆ ಅದನ್ನು ಮರು ಓದಿಗೆ ಒಳಪಡಿಸಿದ್ದು ತೀರಾ ಇತ್ತೀಚಿಗೆ. ಒಂದು ವಾರಗಳ ಕಾಲ ಓದುತ್ತಾ ವ್ಯಕ್ತಿನಾಮ, ಸ್ಥಳನಾಮ, ಪರಸ್ಪರ ಸಂಬಂಧಗಳನ್ನು ಗುರುತಿಸಿಕೊಳ್ಳುತ್ತಾ ಹೋದ ಹಾಗೆ ತೆರೆದುಕೊಂಡಿದ್ದೇ ಒಂದು ದೊಡ್ಡ ಪ್ರಪಂಚ!
ಒಂದು ಮಹಾ ಕಾದಂಬರಿ ಹೇಗೆ ಇರುತ್ತದೆ. ವರ್ತಮಾನದಲ್ಲಿದ್ದುಕೊಂಡೇ ಭೂತಕಾಲದಲ್ಲಿಯೂ ವಿಹರಿಸುತ್ತಾ ಭವಿಷ್ಯದತ್ತ ಸಾಗುವ ಅಚ್ಚರಿ! ಮೊದಲ ಸುಮಾರು ೨೦೦ ಪುಟಗಳ ಕಥೆ ಕೇವಲ ಒಂದು ದಿನದಲ್ಲಿ ನಡೆಯುವ ಘಟನೆಗಳು. ಇಡೀ ಕಾದಂಬರಿ ಸುಮಾರು ಒಂದು ಮಳೆಗಾಲ ಪ್ರಾರಂಭವಾಗಿ ಮುಗಿಯುವ ಮೊದಲೇ ಮುಗಿದು ಹೋಗುತ್ತದೆ. ಎಂಟನೂರಕ್ಕೂ ಅಧಿಕ ಪುಟಗಳಲ್ಲಿ ಕಾಲ ದೇಶಗಳನ್ನು ಮೀರಿ ನಡೆಯುವ ಘಟನೆಗಳು ಕಿಕ್ಕಿರಿದಿವೆ. ನೂರಾರು ಪ್ರಾಣಿ ಪಕ್ಷಿಗಳ ಹೆಸರುಗಳು ದಟ್ಟೈಸಿವೆ. ಮರಗಿಡಗಳ ಪ್ರಸ್ತಾಪವಾಗುತ್ತದೆ. ಮೇಲಿನವುಗಳಲ್ಲದೆ ಅಸಂಖ್ಯಾತ ಅನಾಮಿಕ ಪಾತ್ರಗಳು, ಜಾಗಗಳು ಪ್ರಸ್ತಾಪವಾಗುತ್ತವೆ. ಇಷ್ಟೊಂದು ಪಾತ್ರಗಳು ಅವುಗಳ ಮನೋಭಾವ, ಕಾರ್ಯವಿಧಾನ, ವೃತ್ತಿ, ಸಂಬಂಧಗಳು ಎಲ್ಲವನ್ನೂ ಕವಿ ನಿಭಾಯಿಸಿರುವುದು ಅದ್ಭುತ!
ಎಲ್ಲಿಯಾದರೂ ಸರಿ, ಹೇಗಾದರೂ ಸರಿ ಒಂದಿಷ್ಟೂ ಗೊಂದಲ ಕಾದಂಬರಿಕಾರನಿಗೆ ಬಂದಿರಬಹುದಲ್ಲ ಎನ್ನುವ ಸಹಜ(ಕೆಟ್ಟ)ಕುತೂಹಲ ಉತ್ತರವಾಗಿ ಸಿಕ್ಕಿದ್ದು ಎರಡು ಸನ್ನಿವೇಶಗಳು. ಅದರಲ್ಲು ಒಂದು ಸನ್ನಿವೇಶ ಕಾದಂಬರಿಕಾರನ ಉದ್ದೇಶಪೂರ್ವಕ ನಡೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮತ್ತೊಂದು ಇಬ್ಬರು ವ್ಯಕ್ತಿಗಳ ಹೆಸರು ಮತ್ತು ವೃತ್ತಿಯ ಅದಲು ಬದಲು ಅಷ್ಟೆ!
ಈ ಕೆಳಗೆ ನಾನು ಪಟ್ಟಿ ಮಾಡಿರುವ ಸ್ಥಳಗಳು, ಪಾತ್ರಗಳು, ಅವುಗಳ ಪರಸ್ಪರ ಸಂಬಂಧಗಳನ್ನು ಗಮನಿಸಿದರೆ ಮಹಾಕಾದಂಬರಿಯೊಂದರ ಅರಹು ಹೇಗಿರುತ್ತದೆ ಹಾಗೂ ಹೇಗಿರಬೇಕು ಎಂದು ತಿಳಿಯುತ್ತದೆ. ಮಲೆಗಳಲ್ಲಿ ಮದುಮಗಳು ಓದುವುದಕ್ಕೆ ಪೂರ್ವಭಾವಿಯಾಗಿ ಈ ಸಿದ್ಧಟಿಪ್ಪಣಿ ಒಳ್ಳೆಯ ಪ್ರವೇಶವಾಗಬಹುದು.
ಕಾದಂಬರಿಯ ಬಿಚ್ಚಿಕೊಳ್ಳುವ ಪ್ರಮುಖ ಸ್ಥಳಗಳು
ಸಿಂಬಾವಿ (ಭರಮೈ ಹೆಗ್ಗಡೆಯ ಮನೆ)
ಸೀತೂರುಗುಡ್ಡ (ಸಿಂಬಾವಿ-ಲಕ್ಕೂಂದದ ನಡುವಿನ ಒಂದು ಗುಡ್ಡ)
ಲಕ್ಕುಂದ (ಹಳೇಪೈಕದವರ ಹಟ್ಟಿ. ಸಿಂಬಾವಿಯಿಂದ ಮೂರ‍್ನಾಲ್ಕು ಮೈಲಿ)
ಮೇಗರವಳ್ಳಿ (ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿನ ಊರು. ಲಕ್ಕೂಮದದಿಂದ ಎರಡು ಮೈಲಿ)
ಬೆತ್ತದಸರ
ಹುಲಿಕಲ್ಲು
ಹಳೆಮನೆ (ಮೇಗರವಳ್ಳಿಯಿಂದ ಒಂದು ಹರಿದಾರಿ)
ಅರೆಕಲ್ಲು (ಹಳೆಮನೆಯಿಂದ ಬೆಟ್ಟಳ್ಳಿಗೆ ಹೋಗುವ ದಾರಿಯಲ್ಲಿ ಬೆಟ್ಟಳ್ಳಿಯ ಹೊಲಗೇರಿಗೆ ದಾರಿ ಕವಲೊಡೆಯುವ ಜಾಗ)
ಬೆಟ್ಟಳ್ಳಿ
ಬೆಟ್ಟಳ್ಳಿ ಹಕ್ಕಲು (ಬಿಸೇಕಲ್ ಸವಾರಿ ನಡೆದ ಜಾಗ)
ಬೆಟ್ಟಳ್ಳಿ ಹೊಲಗೇರಿ
ಅರೆಕಲ್ಲು ಕಾರೇಮೆಟ್ಟು (ಹೊಲಗೇರಿಯ ಹತ್ತಿರದ್ದು. ಗುತ್ತಿ ತಿಮ್ಮಿಗಾಗಿ ಕಾಯುತ್ತಾ ಕುಳಿತಿದ್ದ ಜಾಗ)
ಕಮ್ಮಾರಸಾಲೆ (ಕೋಣೂರಿಗೂ ಬೆಟ್ಟಳ್ಳಿಗೂ ಮಧ್ಯೆ, ಮೇಗರವಳ್ಳಿ ಹೂವಳ್ಳಿ ಹಳೆಮನೆಗಳಿಗೂ ಸಮದೂರದಲ್ಲಿದ್ದ ಜಾಗ. ಕಳ್ಳಂಗಡಿ, ಮೂರ‍್ನಾಲ್ಕು ಜೋಪಡಿಗಳಿದ್ದ ಜಾಗ)
ಕೋಣೂರು
ಭೂತದವನ (ಕೋಣುರು ಮನೆಗೆ ಸೇರಿದ್ದು)
ಹಾಡ್ಯದ ಮಾರಮ್ಮನ ಗುಡಿ
ಹಳೆಪೈಕದ ಯೆಂಕಯ ಮನೆ
ಹೂವಳ್ಳಿ
ಗುತ್ತಿ ಓಡಾಡಿದ ಮಾರ್ಗ
ಸಿಂಬಾವಿ
ಸೀತೂರುಗುಡ್ಡ
ಲಕ್ಕುಂದ
ಮೇಗರವಳ್ಳಿ
ಬೆತ್ತದಸರ
ಹುಲಿಕಲ್ಲು
ಹಳೆಮನೆ
ಅರೆಕಲ್ಲು
ಬೆಟ್ಟಳ್ಳಿ
ಬೆಟ್ಟಳ್ಳಿ ಹಕ್ಕಲು
ಬೆಟ್ಟಳ್ಳಿ ಹೊಲಗೇರಿ
ಅರೆಕಲ್ಲು ಕಾರೇಮೆಟ್ಟು
ಕಮ್ಮಾರಸಾಲೆ
ಕೋಣೂರು ದಾರಿ
ಹುಲಿಕಲ್ಲು
ಬೆತ್ತದ ಸರ
ಲಕ್ಕುಂದ
ಸೀತೂರುಗುಡ್ಡ
ಸಿಂಬಾವಿ ಹೊಲಗೇರಿ
ಸಿಂಬಾವಿ
ಮೇಗರವಳ್ಳಿ ತೀರ್ಥಹಳ್ಳಿ ರಸ್ತೆ
ಕಾಗಿನಹಳ್ಳಿ
ಹಳೆಮನೆ ಸ್ಮಶಾಣ
ಹಳೆಮನೆ ಹೊಲಗೇರಿ
ಹಳೆಮನೆ ಶಂಕರ ಹಗ್ಗಡೆ ಮನೆ
ಹುಲಿಕಲ್ಲು
ಕೋಣುರು ಮನೆ
ಕೋಣುರು ಐತನ ಬಿಡಾರ
ಹುಲಿಕಲ್ಲು
ಹೂವಳ್ಳಿ ಮನೆಯ ಹತ್ತಿರದವರೆಗೆ
ಹುಲಿಕಲ್ಲು
ತೀರ್ಥಹಳ್ಳಿ
ತುಂಗಾನದಿ ದೋಣಿ ಗಿಂಡಿ
ಕಾನೂರು
ಇತರೆ ಸ್ಥಳಗಳು
ದೇವಂಗಿ
ತೀರ್ಥಹಳ್ಳಿ ದೋಣಿಗಿಂಡಿ
ಮಂಡಗದ್ದೆ
ತೂದೂರು
ಸಿದ್ಧರಮಠ
ಸಿಂಧುವಳ್ಳಿ
ಕಾದಂಬರಿಯ ಹೊರ ವ್ಯಾಪ್ತಿಯಲ್ಲಿ ಪ್ರಸ್ತಾಪವಾಗುವ ಊರು/ನಗರ/ದೇಶಗಳು
ಮೈಸೂರು
ನಗರ
ಕೆಳದಿ
ಇಕ್ಕೇರಿ
ಕೌಲೆದುರ್ಗ
ತೀರ್ಥಹಳ್ಳಿ
ಶಿವಮೊಗ್ಗ
ಹೊನ್ನಾಳಿ
ಉಡುಪಿ
ಧರ್ಮಸ್ಥಳ
ಶೃಂಗೇರಿ
ಅಮೆರಿಕಾ
ಚಿಕಾಗೋ
ಕಲ್ಕತ್ತಾ
ವರಾಹನಗರ
ಕಾಶಿಪುರ
ಸ್ವಾಮಿವಿವೇಕಾನಂದರು ಭಾಗವಹಿಸಿದ್ದ ಸರ್ವಧರ್ಮ ಸಮ್ಮೇಳನ ೧೧-೯-೧೮೯೩
ಕಾದಂಬರಿಯಲ್ಲಿ ಪ್ರಸ್ತಾಪವಾಗುವ ಜಾತಿ/ಪಂಗಡಗಳು
ಗೌಡರು
ಹಸಲರು
ಬಿಲ್ಲವರು
ಸೆಟ್ಟರು
ಕರಾದಿಗರು
ಬೇಲರು
ಹೊಲೆಯರು
ದೀವರು
ಗೋಸಾಯಿಗಳು
ಹಳೆಪೈಕದವರು
ಕಾದಂಬರಿಯ ಮುಖ್ಯಪಾತ್ರಗಳಲ್ಲದೆ ಪ್ರಸ್ತಾಪವಾಗುವ ಜನಸಮೂಹ
ತೀರ್ಥಹಳ್ಳಿ ಆಗುಂಬೆ ಮುಖಾಂತರ ಓಡಾಡುವ ವ್ಯಾಪರಿಗಳು
ಸೇರೆಗಾರರು
ಕೂಲಿಯಾಳುಗಳು
ಗಂಧದ ಮರ ಕಡಿದು ಮಾರುವ ಗುಪ್ತ ದಳ್ಳಾಳಿಗಳು.
ಮುಖ್ಯ ಊರುಗಳು ಹಾಗೂ ವ್ಯಕ್ತಿಗಳು
ಸಿಂಬಾವಿ
ಭರಮೈ ಹೆಗ್ಗಡೆ : ಸಿಂಬಾವಿ ಮನೆಯ ಯಜಮಾನ
ದುಗ್ಗಣ್ಣಹೆಗ್ಗಡೆ : ಭರಮೈ ಹೆಗ್ಗಡೆಯ ದಿವಂಗತ ತಂದೆ
ಜಟ್ಟಮ್ಮ : ಭರಮೈ ಹೆಗ್ಗಡೆಯ ಹೆಂಡತಿ, ಹಳೇಮನೆ ಸುಬ್ಬಣ್ಣಹೆಗ್ಗಡೆಯವರ ದಿವಂಗತ ಅಣ್ಣ ದುಗ್ಗಣ್ಣಹೆಗ್ಗಡೆಯ ಮಗಳು, ಶಂಕರಹೆಗ್ಗಡೆಯವರ ತಂಗಿ
ಲಕ್ಕಮ್ಮ : ಭರಮೈ ಹೆಗ್ಗಡೆಯವರ ತಂಗಿ. ಮದುವೆಯಾಗಬೇಕಾಗಿದೆ. ಹಳೇಮನೆ ದೊಡ್ಡಹೆಗ್ಗಡೆಯವರ ಕಿರಿಯಮಗ ತಿಮ್ಮಪ್ಪಹೆಗ್ಗಡೆಗೆ ಕೊಡುವ ಮಾತಿದೆ
ಮರಾಟಿ ಮಂಜ : ಅಡುಗೆಯವನು
ದೊಳ್ಳ : ಮನೆಗೆಲಸದವನು
ಬುಲ್ಡ : ಹಳೆಪೈಕರವನು. ಭರಮೈಹೆಗ್ಗಡೆಗೆ ಹೆಂಡ ತಂದುಕೊಡುವವನು
ಗುತ್ತಿ : ಭರಮೈ ಹೆಗ್ಗಡೆಯ ನೆಚ್ಚಿನ ಆಳು. ಹೊಲೆಯರವನು
ಹುಲಿಯ : ಗುತ್ತಿಯ ನಾಯಿ
ಕರಿಸಿದ್ಧ : ಗುತ್ತಿಯ ಅಪ್ಪ
ಗಿಡ್ಡಿ : ಗುತ್ತಿಯ ಅವ್ವ, ಬೆಟ್ಟಳ್ಳಿ ದೊಡ್ಡಬೀರನ ತಂಗಿ.
? : ಹೊಲೇರ ಕುರುದೆ (ಹುಡುಗಿ)
? : ಹೊಲೇರ ಕುರುದೆ (ಹುಡುಗಿಯ ಅಣ್ಣ)
ಲಕ್ಕುಂದ ಹಳೇಪೈಕರ ಹಟ್ಟಿ
ಸೇಸನಾಯ್ಕ : ಲಕ್ಕುಂದದ ಹಿರಿಯ, ಸೀತೂರು ತಿಮ್ಮನಾಯ್ಕರ ನೆಂಟಭಾವ
ಹಮೀರನಾಯ್ಕ : ಸೇಸನಾಯ್ಕನ ಮಗ
ಪುಟ್ಟನಾಯ್ಕ : ಸೇಸನಾಯ್ಕನ ತಮ್ಮ
ಕಾಡಿ : ಪುಟ್ಟನಾಯ್ಕನ ಅತ್ತೆ (ಮಗಳು ಸತ್ತರೂ ಅಳಿಯನ ಮನೆಯಲ್ಲೇ ಉಳಿದಿದ್ದಾಳೆ. ಆಗ ಬಸುರಾಗಿ, ಬಸಿರು ಇಳಿಸಿಕೊಂಡ ಅಪವಾದ ಇದೆ)
ರಂಗ : ಪುಟ್ಟನಾಯ್ಕನ ನೆರೆಮನೆಯವ
ಚೌಡಿ : ರಂಗನ ಹೆಂಡತಿ
? : ರಂಗನ ತಾಯಿ
ಸೀತೂರು
ತಿಮ್ಮನಾಯ್ಕ : ಸೀತೂರು ಸೀಮೆಯ ಹಳೇಪೈಕರ ಮುಖಂಡ, ಲಕ್ಕುಂದದ ಸೇಸನಾಯ್ಕನ ನೆಂಟಭಾವ
? : ತಿಮ್ಮನಾಯ್ಕರ ಮಗಳು
ಮೇಗರವಳ್ಳಿ
ಕಣ್ಣಾಪಂಡಿತ : ಮಲೆಯಾಳಿ ನಾಟಿ ವೈದ್ಯ,
ಅಂತಕ್ಕ : ಸೆಟ್ಟಿಗಿತ್ತಿ, ಘಟ್ಟದ ಕೆಳಗಿನಿಂದ ಬಂದು ನೆಲೆನಿಂತವಳು
ಸುಬ್ಬಯ್ಯಸೆಟ್ಟಿ : ಅಂತಕಸೆಟ್ಟಿಗಿತ್ತಿಯ ದವಂಗತ ಪತಿ. ಹಳೆಮನೆಯ ವಕ್ಕಲಾಗಿದ್ದವನು
ಕಾವೇರಿ : ಅಂತಕ್ಕನ ಮಗಳು
ಕೊರಗಹುಡುಗ : ಅಂತಕಸೆಟ್ಟಿಯ ಮನೆಯ ಆಳು
ಕಿಟ್ಟಯ್ಯ : ಅಂತಕ್ಕನ ಅಳಿಯನಾಗಲು ಬಂದವನು
ಕಾಮತರು : ಮೇಗರವಳ್ಳಿಯ ಕೆಳಪೇಟೆಯಲ್ಲಿ ದಿನಸಿಮಳಿಗೆಯಿಟ್ಟುಕೊಂಡಿದ್ದವರು
ಭಟ್ಟರು : ಮೇಗರವಳ್ಳಿಯ ಕೆಳಬೀದಿಯಲ್ಲಿ ಜವಳಿ ಅಂಗಡಿಯಿಟ್ಟುಕೊಂಡಿದ್ದವರು
ಕರಿಮೀನು ಸಾಬಿ : ಮಾಪಿಳ್ಳೆ. ಮೂಲ ಹೆಸರು ಕರೀಂ ಸಾಬಿ. ಮೇಗರವಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದಾನೆ.
ಪುಡಿಸಾಬಿ : ಕರಿಮೀನು ಸಾಬಿಯ ತಮ್ಮ
ಅಜ್ಜಿಸಾಬು : ಅಜೀಜ್ ಮೂಲ ಹೆಸರು. ಚರ್ಮದ ವ್ಯಾಪಾರಿ, ಕರ‍್ಮೀನು ಸಾಬರ ಕಡೆಯವನು. ಹೊನ್ನಾಳಿ ಹೊಡ್ತ ಹೊಡೆಯುವವನು
ಲುಂಗೀಸಾಬು : ಮೂಲ ಹೆಸರು ಬುಡನ್, ಹೊನ್ನಾಳಿ ಹೊಡ್ತ ಹೊಡೆಯುವವನು
ಇಜಾರದಸಾಬು : ಹೊನ್ನಾಳಿ ಹೊಡ್ತ ಹೊಡೆಯುವವನು
ಹಳೆಮನೆ
ಸುಬ್ಬಣ್ಣ ಹೆಗ್ಗಡೆ : ಹಳೆಮನೆಯ ಯಜಮಾನ, ಮನೆಗೆ ಸೋಗೆ ಹೊದೆಸಿರುವುದರಿಂದ ಸೋಗೆಮನೆಯವರು ಎನ್ನುತ್ತಾರೆ
? : ಸುಬ್ಬಣ್ಣಹೆಗ್ಗಡೆಯವರ ದಿವಂಗತ ಹೆಂಡತಿ
ತಿಮ್ಮಪ್ಪಹೆಗ್ಗಡೆ : ಸುಬ್ಬಣ್ಣ ಹೆಗ್ಗಡೆಯ ಕಿರಿಮಗ
ಮಂಜಮ್ಮ : ಬುಚ್ಚಿ ಎಂಬುದು ಅವಳ ಇನ್ನೊಂದು ಹೆಸರು. ಸುಬ್ಬಣ್ಣ ಹೆಗ್ಗಡೆಯ ಮಗಳು (ಸಿಂಬಾವಿ ಭರಮೈಹೆಗ್ಗಡೆಯವರಿಗೆ ಎರಡನೇ ಹೆಂಡತಿಯಾಗಿ ಮದುವೆಯಾಗುವ ಪ್ರಸ್ತಾಪವಿದೆ)
ದೊಡ್ಡಣ್ಣಹೆಗ್ಗಡೆ : ಸುಬ್ಬಣ್ಣಹೆಗ್ಗಡೆಯವರ ಹಿರಿಯಮಗ (ತಿರುಪತಿಗೆ ಹೋದವರು ತಿರುಗಿಬಂದಿಲ್ಲ)
ರಂಗಮ್ಮ : ದೊಡ್ಡಣ್ಣಹೆಗ್ಗಡೆಯ ಹೆಂಡತಿ, ಕೋಣೂರು ಮನೆಯ ಕಾಗಿನಹಳ್ಳಿ ಅಮ್ಮನ ಮೊದಲನೇ ಮಗಳು, ರಂಗಪ್ಪಗೌಡರ ತಂಗಿ, ಮುಕುಂದಯ್ಯನ ಅಕ್ಕ (ಗಂಡ ಕಾಣೆಯಾಗಿರುವುದರಿಂದ ಮಾನಸಿಕವಾಗಿ ನೊಂದಿದ್ದಾಳೆ. ಜನ ಅವಳನ್ನು ಹುಚ್ಚುಹೆಗ್ಗಡತಿ ಎಂದೂ ಕರೆಯುತ್ತಾರೆ)
ಧರ‍್ಮು : ದೊಡ್ಡಣ್ಣಹೆಗ್ಗಡೆ ಮತ್ತು ರಂಗಮ್ಮನ ಮಗ. ಕೋಣೂರಿನ ಮಾವನ ಮನೆಯಲ್ಲಿರುವ ಐಗಳ ಶಾಲೆಯಲ್ಲಿ ಕಲಿಯುತ್ತಿದ್ದಾನೆ
ಹಳೇಪೈಕದ ಹೂವಿ : ಸುಬ್ಬಣ್ಣಹೆಗ್ಗಡೆಯ ಮನೆಗೆಲಸದವಳು
ದುಗ್ಗಣ್ಣಹೆಗ್ಗಡೆ : ಸುಬ್ಬಣ್ಣಹೆಗ್ಗಡೆಯವರ ದಿವಂಗತ ಅಣ್ಣ
ಶಂಕರಹೆಗ್ಗಡೆ : ಸುಬ್ಬಣ್ಣಹೆಗ್ಗಡೆಯವರ ದಿವಂಗತ ಅಣ್ಣ ದುಗ್ಗಣ್ಣಹೆಗ್ಗಡೆಯ ಮಗ, ಆಸ್ತಿ ಪಾಲಾಗಿ ಬೇರೆಯಿದ್ದಾನೆ. ಮನೆಗೆ ಹೆಂಚು ಹಾಕಿಸಿದ್ದರಿಂದ ಹೆಂಚಿನಮನೆಯವರು ಎನ್ನುತ್ತಾರೆ
ಸೀತಮ್ಮ : ಶಂಕರಹೆಗ್ಗಡೆಯ ಹೆಂಡತಿ
ರಾಮು : ಶಂಕರಹೆಗ್ಗಡೆಯ ಆರುವರ್ಷದ ಮಗ
? : ಶಂಕರಹೆಗ್ಗಡೆಯ ಮಗಳು ತೊಟ್ಟಿಲ ಕೂಸು
ಕೆಂಪಿ : ಬಾಲೆಯಾಡಿಸುವವಳು, ಶಂಕರಹೆಗ್ಗಡೆಯ ಮನೆಯಲ್ಲಿರುತ್ತಾಳೆ
ಹಳೆಮನೆ ಹೊಲಗೇರಿ
ಹಳೆಮನೆ ಪಾಲಾದ ಮೇಲೆ ಸುಬ್ಬಣ್ಣಹೆಗ್ಗಡೆಯವರ ಕಡೆಗೆ ಬಂದ ಆಳುಗಳು
ಮಂಜ
ಸಿದ್ದಿ : ಮಂಜನ ಹೆಂಡತಿ
ತಿಮ್ಮ
ಗಿಡ್ಡಿ : ತಿಮ್ಮನ ಹೆಂಡತಿ
ಸಣ್ಣ : ಹೊಲಗೇರಿಯ ಮುಖಂಡ, ಕುಳವಾಡಿ
ಪುಟ್ಟಿ : ಸಣ್ಣನ ಮಗಳು. ಮೈನೆರೆದು ನಾಲ್ಕು ವರ‍್ಷವಾದರೂ ಮದುವೆಯಾಗಿಲ್ಲ
ಗಂಗ : ಸಣ್ಣನ ರೋಗಿಷ್ಟ ಮಗ
ಬೈರ : ಹಳೆಮನೆ ದನಕಾಯುವ ಆಳು
? : ಬೈರನ ದಿವಂಗತ ಹೆಂಡತಿ
ಮಂಜ
ಸಿದ್ದ
ಕರಿಸಿದ್ದ
ಸಣ್ಣತಿಮ್ಮ
ಶಂಕರಹೆಗ್ಗಡೆಯವರ ಪಾಲಿಗೆ ಬಂದ ಆಳುಗಳು
ಬಚ್ಚ
ಪುಟ್ಟ
ಬೆಟ್ಟಳ್ಳಿ
ಕಲ್ಲಯ್ಯಗೌಡರು : ಬೆಟ್ಟಳ್ಳಿ ಮನೆಯ ಯಜಮಾನ
ದೊಡ್ಡಮ್ಮ ಹೆಗ್ಗಡತಿ : ಕಲ್ಲಯ್ಯಗೌಡರ ಹೆಂಡತಿ
ದೇವಯ್ಯಗೌಡ : ಕಲ್ಲಯ್ಯಗೌಡರ ಹಿರಿಯ ಮಗ. ಕೋಣೂರು ಮನೆಯ ಅಳಿಯ. ಕಾಗಿನಹಳ್ಳಿ ಅಮ್ಮನವರ ಎರಡನೇ ಮಗಳ ಗಂಡ. ಕೋಣೂರು ರಂಗಪ್ಪಗೌಡರು ಮತ್ತು ಮುಕುಂದಯ್ಯನ ಭಾವ
? : ದೇವಯ್ಯಗೌಡರ ಹೆಂಡತಿ, ಕೋಣೂರಿನ ಕಾಗಿನಹಳ್ಳಿ ಅಮ್ಮನವರ ಎರಡನೇ ಮಗಳು
ಕಾಡು : ಕಲ್ಲಯ್ಯಗೌಡರ ಕಿರಿಯ ಮಗ. ಕೋಣೂರಿನ ಮನೆಯ ಐಗಳ ಶಾಲೆಯಲ್ಲಿ ಓದುತ್ತಿದ್ದಾನೆ
ಸುಬ್ಬಣ್ಣಸೆಟ್ಟಿ : ಬೆಟ್ಟಳ್ಳಿ ಮನೆಯ ಸೇರೆಗಾರ
ಚೆಲುವಯ್ಯ : ದೇವಯ್ಯಗೌಡರ ಮಗ. ತೊಟ್ಟಲಕೂಸು
ಸೆಟ್ಟಿಯಾಳು : ಬೆಟ್ಟಳ್ಳಿ ಮನೆಗೆಲಸದವನು
? : ಬಾಲೆಯಾಡಿಸುವ ಹುಡುಗಿ
ಬೆಟ್ಟಳ್ಳಿ ಹೊಲಗೇರಿ
ದೊಡ್ಡಬೀರ : ಬೆಟ್ಟಳ್ಳಿ ಹೊಲಗೇರಿಯ ಹಿರಿಯ, ತಳವಾರ.
ಸೇಸಿ : ದೊಡ್ಡಬೀರನ ಹೆಂಡತಿ. ಗುತ್ತಿಯ ತಂದೆ ಕರಿಸಿದ್ದನ ತಂಗಿ, ಗುತ್ತಿಯ ಸೋದರತ್ತೆ
ತಿಮ್ಮಿ : ದೊಡ್ಡಬೀರ ಮತ್ತು ಸೇಸಿಯ ಮಗಳು. ಆದರೆ ಕಲ್ಲಯ್ಯಗೌಡರು ತಮ್ಮ ಹಟ್ಟಿಯ ಆಳು ಬಚ್ಚನನ್ನೇ ಮದುವೆಯಾಗಬೇಕೆಂದು ಆಜ್ಞಾಪಿಸಿದ್ದಾರೆ. ಗುತ್ತಿಯ ಮೇಲೆ ಪ್ರೀತಿ. ಕೊನೆಗೆ ಗುತ್ತಿಯ ಜೊತೆಯಲ್ಲಿ ಓಡಿ ಹೋಗುತ್ತಾಳೆ.
ಸಣ್ಣಬೀರ : ದೊಡ್ಡಬೀರನ ಹಿರಿಯ ಮಗ
ಲಕ್ಕಿ : ಸಣ್ಣಬೀರನ ಹೆಂಡತಿ
ಪುಟ್ಟಬೀರ : ದೊಡ್ಡಬೀರನ ಎರಡನೇ ಮಗ
ಚಿಕ್ಕಪುಟ್ಟಿ : ಪುಟ್ಟಬೀರನ ಹೆಂಡತಿ
ಬಚ್ಚ : ಕಲ್ಲಯ್ಯಗೌಡ ಮತ್ತು ದೇವಯ್ಯಗೌಡರ ಬಂಟ. ಹೊಲೆಯನಾದರೂ ಎತ್ತಿನಗಾಡಿ ಹೊಡೆಯುವ ಅವಕಾಶವಿರುತ್ತದೆ.
? : ಕನ್ನಡ ಜಿಲ್ಲೆಯ ಆಳು. ಸೆಟ್ಟರವನು.
ಕೋಣೂರು
ಕಾಗಿನಹಳ್ಳಿ ಅಮ್ಮ : ಮನೆಯ ಹಿರಿಯರು
ರಂಗಪ್ಪಗೌಡ : ಕಾಗಿನಹಳ್ಳಿ ಅಮ್ಮನ ಹಿರಿಯ ಮಗ. ಮನೆಯ ಯಜಮಾನ
? : ರಂಗಪ್ಪಗೌಡರ ಹೆಂಡತಿ, ಹಳೆಮನೆ ಸುಬ್ಬಣ್ಣಹೆಗ್ಗಡೆಯ ಹಿರಿಯ ಮಗಳು
ಮುಕುಂದಯ್ಯ : ರಂಗಪ್ಪಗೌಡರ ತಮ್ಮ. ಹೂವಳ್ಳಿ ಚಿನ್ನಮ್ಮನ ಮೇಲೆ ಪ್ರೀತಿ
ತಿಮ್ಮು : ರಂಗಪ್ಪಗೌಡರ ಮಗ. ಐಗಳ ಶಾಲೆಯಲ್ಲಿ ಓದುತ್ತಿದ್ದಾನೆ
ಅನಂತಯ್ಯ : ಐಗಳು. ಘಟ್ಟದ ಕೆಳಗಿನವರು
ಹಳೇಪೈಕದ ಮುದುಕಿ : ಸೂಲಗಿತ್ತಿ
???? : ಐಗಳ ಶಾಲೆಯಲ್ಲಿದ್ದ ಇನ್ನೂ ನಾಲ್ಕು ಮಕ್ಕಳು
ಕುದುಕ : ಹಸಲೋರ ಆಳು
? : ಹಸಲೋರ ಆಳು
? : ಕುದುಕನ ಹೆಂಡತಿ
ಕೋಣುರು ಮನಗೆ ಸೇರಿದ್ದ ಘಟ್ಟದ ಕೆಳಗಿನ ಬಿಲ್ಲವರ ಆಳುಗಳು
ಚೀಂಕ್ರ : ಸೇರೆಗಾರನೆಂದು ಕರೆದುಕೊಳ್ಳುವ ವ್ಯಕ್ತಿ
ದೇಯಿ : ಚೀಂಕ್ರನ ಹೆಂಡತಿ
??? : ಚೀಂಕ್ರ-ದೇಯಿಯ ಮೂರು ಮಕ್ಕಳು
ಪಿಜಣ
ಅಕ್ಕಣಿ : ಪಿಜಣನ ಹೆಂಡತಿ
ಐತ
ಪೀಂಚಲು : ಐತನ ಹೆಂಡತಿ
ಮೊಡಂಕಿಲ
ಬಾಗಿ : ಮೊಡಂಕಿಲನ ಹೆಂಡತಿ
ಚಿಕ್ಕಿ
ಹೂವಳ್ಳಿ
ವೆಂಕಟಣ್ಣ : ವೆಂಕಟಪ್ಪನಾಯಕ ಮೂಲಹೆಸರು. ಹಳೆಮನೆ ಸುಬ್ಬಣ್ಣಹೆಗ್ಗಡೆಯವರ ಒಕ್ಕಲು. ಈತನ ಅಜ್ಜನೋ ಮುತ್ತಜ್ಜನೋ ದುರ್ಗದ ಪಾಳೆಗಾರಿಕೆಯ ಕಾಲದಲ್ಲಿ ದಂಡನಾಯಕನಾಗಿದ್ದನು.
? : ವೆಂಕಟಣ್ಣನ ದಿವಂಗತ ಹೆಂಡತಿ
ಚಿನ್ನಮ್ಮ : ವೆಂಕಟಣ್ಣನ ಮಗಳು. ಮುಕುಂದಯ್ಯನ ಬಗ್ಗೆ ಪ್ರೀತಿ.
? : ಚಿನ್ನಮ್ಮನನ್ನು ನೋಡಿಕೊಳ್ಳುತ್ತಿರುವ ಅಜ್ಜಿ. ಚಿನ್ನಮ್ಮನ ದಿವಂಗತ ತಾಯಿಯ ತಾಯಿ. ವೆಂಕಟಣ್ಣನ ಅತ್ತೆ.
ಸುಬ್ಬಿ : ಮನೆಯ ಆಳು
ಬೈರ : ಮನೆ ಆಳು
ಬೀರಿ : ಚಿನ್ನಮ್ಮನ ಸಾಕುಬೆಕ್ಕು
ಕಮ್ಮಾರಸಾಲೆ
ಪುಟ್ಟಾಚಾರಿ : ಕಮ್ಮಾರ
ಕಲ್ಲೂರು
ಮಂಜಭಟ್ಟ : ಜೋಯಿಸ, ಸಾಹುಕಾರ
ಕಿಟೈತಾಳ : ಕರಣಿಕ
ನಾರಾಯಣಭಟ್ಟ : ಮಂಜಭಟ್ಟನ ಮಗ
? : ಕಿಟ್ಟೈತಾಳನ ಹೆಂಡತಿ
? : ನಾರಾಯಣಭಟ್ಟನ ಹೆಂಡತಿ
? : ಬೋಳು ಮಡಿ ಹೆಂಗಸು
? : ಅರ್ಚಕರು
ಗಡ್ಡದಯ್ಯ
ಬಾವಿಕೊಪ್ಪ
? : ಸಿಂಬಾವಿ ಭರಮೈಹೆಗ್ಗಡೆಯ ದಿವಂಗತ ಆಳು. ನಾಗತ್ತೆ ಎನ್ನುವವಳಿಗೆ ಎರಡನೇ ಗಂಡ
ನಾಗತ್ತೆ : ಸಿಂಬಾವಿ ಹೆಗ್ಗಡೆಯ ದಿವಂಗತ ಆಳಿನ ನಾಲ್ಕನೇ ಹೆಂಡತಿ
ನಾಗಣ್ಣ : ನಾಗತ್ತೆಯ ದಿವಂಗತ ಮಗ
ನಾಗಕ್ಕ : ನಾಗತ್ತೆಯ ಸೊಸೆ
ಹೊಸಕೇರಿ
ಬಸಪ್ಪನಾಯಕರು : ಸಾಹುಕಾರರು. ಚಿನ್ನಮ್ಮನ ತಾಯಿ ವೆಂಕಟಪ್ಪನನ್ನು ಮದುವೆಯಾಗುವ ಮೊದಲು ಬಸಪ್ಪನಾಯಕರು ತಮ್ಮ ಮಗನಿಗೆ ತಂದುಕೊಳ್ಳಲು ಕೇಳಿದ್ದವರು. ಹಳೆಮೆನ ಸುಬ್ಬಣ್ಣಹೆಗ್ಗಡೆಯವರ ಹೆಂಡತಿಯ ಮಾತ್ಸರ‍್ಯದಿಂದಾಗಿ ಅದು ತಪ್ಪಿ ಕೊನೆಗೆ ವೆಂಕಟಣ್ಣನನ್ನು ಮದುವೆಯಾಗಬೇಕಾಯಿತು.
ತೀರ್ಥಹಳ್ಳಿ
ದಾಸಯ್ಯ : ತೀರ್ಥಹಳ್ಳಿಯವನು. ಹಳೇಮನೆ ದೊಡ್ಡಣ್ಣಹೆಗ್ಗಡೆಯವರ ಜೊತೆ ತಿರುಪತಿ ಯಾತ್ರೆಗೆ ಹೋಗಿದ್ದವನು
ಅಣ್ಣಪ್ಪಯ್ಯ : ತೀರ್ಥಹಳ್ಳಿಯಲ್ಲಿ ಕಾಫಿ ಹೋಟೆಲ್ ಇಟ್ಟುಕೊಂಡಿದ್ದವನು
ಜೀವರತ್ನಯ್ಯ : ಕಿಲಸ್ತರ ಪಾದ್ರಿ. ಶಿವಮೊಗ್ಗದಲ್ಲಿ ನೆಲೆಸಿರುತ್ತಾನೆ
ಜ್ಯೋತಿರ್ಮಣಿಯಮ್ಮ : ಜೀವರತ್ನಯ್ಯನ ಮಗಳು
ಮಾನನಾಯಕ : ದಫೇದಾರ
ಮಯಿಂದಪ್ಪ : ಪೋಲೀಸು
ತಮ್ಮಯ್ಯಣ್ಣ : ಅಂಬಿಗ
ಪೋಲೀಸರು
ಜಮಾದಾರ
ಅಮುಲ್ದಾರರು
ಡಾಕ್ಟರ್
ಹಾರುವರು
ಹೊಳೆ ದಾಟಲು ಬಂದವರು
ಕಾಗಿನಹಳ್ಳಿ
? : ಕಾಗಿನಹಳ್ಳಿ ಗೌಡರು, ಕೋಣೂರು ದಾನಮ್ಮನವರ ತಮ್ಮ
? : ಹಳೆಪೈಕದವನು
ಶಿವಮೊಗ್ಗ
ರೆವರೆಂಡ್ ಲೇಕ್‌ಹಿಲ್ : ಹಿರಿಯ ಪಾದ್ರಿ. ಯುರೋಪೇನ್ ಬಿಳಿದೊರೆ
ಮಂಡಗದ್ದೆ
ಮಿಸ್ ಕ್ಯಾಂಬೆಲ್ : ಮಿಷನ್ ಆಸ್ಪತ್ರೆಯ ಲೇಡಿ ಡಾಕ್ಟರ್
ಮಾಕಿಮನೆ
ಈರಣ್ಣ : ಕೊಲೆಯಾಗಿ ಹೋಗಿರುವ ವ್ಯಕ್ತಿ
ಸೀತೆಮನೆ
ಸಿಂಗಪ್ಪಗೌಡರು : ಸೀತೆಮನೆ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಪಾತ್ರ
ಮತ್ತೂರು
ಶಾಮಯ್ಯಗೌಡರು : ಮತ್ತೂರು ಮನೆಯ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಪಾತ್ರ. ಕಾನೂರು ಹೆಗ್ಗಡತಿಯಲ್ಲಿ ಮುತ್ತಳ್ಳಿ ಎಂದಾಗಿದೆ.
ಕಾನೂರು
ಚಂದ್ರಯ್ಯಗೌಡರು : ಕಾನೂರು ಮನೆಯ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಮುಖ್ಯಪಾ
Subscribe to:
Posts (Atom)
ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.
"ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......

-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕ...
-
ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಪಂಜೆ ಮಂಗೇಶ ರಾಯರು ಮೂಡಣ ರಂಗಸ್ಥಳದಲಿ ನೆತ್ತರ ಮಾಡುವನು ಕುಣಿದಾಡುವನು ಬೆಳಕಿನ ಕಣ್ಣುಗಳಿ೦ದಾ ಸೂರ್ಯನು ನೋಡ...