Sunday, June 12, 2011

ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ


ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ ।
ಹುಲ್ಲುಬಯಲೊಂದೆಡೆಯಿನೊಂದಕ್ಕೆ ನೆಗೆದು ।।
ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊ ।
ಡೆಲ್ಲಿಯೊ ಸುಖ ನಿನಗೆ ಮಂಕುತಿಮ್ಮ ।।

Saturday, June 11, 2011

ಸರಿಯಾಗಲಿಲ್ಲವದು

ಸರಿಯಾಗಲಿಲ್ಲವದು ಸರಿಯಿದಲ್ಲವೆನುತ ।
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ।।
ಕೊರೆಯಾದೊಡೇನೊಂದು ನೆರೆದೊಡೇನಿನ್ನೊಂದು ।
ಒರಟು ಕೆಲಸವೊ ಬದುಕು ಮಂಕುತಿಮ್ಮ ।।

Friday, June 10, 2011

ಪುಣ್ಯದಿಂ ಬಂದ

ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲ ।

ಖಿನ್ನನಾಗಿಪ ಪಾಪಫಲವಾತ್ಮಶುದ್ಧಿ ।।

ಅನ್ಯೋನ್ಯಜನಕಗಳು ಪುಣ್ಯಪಾಪಗಳಿಂತು ।

ಧನ್ಯನುಭಯವ ಮೀರೆ ಮಂಕುತಿಮ್ಮ ।।

Thursday, June 9, 2011

ಅನ್ನದಾತುರಕಿಂತ ಚಿನ್ನದಾತುರ

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ ಮಂಕುತಿಮ್ಮ ।।

Wednesday, June 8, 2011

ಎದೆ ತುಂಬಿ ಹಾಡಿದೆನು

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರೂ ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈ ದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ಎನಗಿಲ್ಲ ಚಿಂತೆ
-- ಜಿ.ಎಸ್.ಶಿವರುದ್ರಪ್ಪ

ಹುಳು ಹುಟ್ಟಿ ಸಾಯುತಿರೆ

ಹುಳು ಹುಟ್ಟಿ ಸಾಯುತಿರೆ ನೆಲ ಸವೆದು ಕರಗುತಿರೆ ।
ಕಡಲೊಳೆತ್ತಲೋ ಹೊಸ ದ್ವೀಪವೇಳುವುದು ।।
ಕಳೆಯುತೊಂದಿರಲಿಲ್ಲಿ ಬೆಳೆವುದಿನ್ನೊಂದೆಲ್ಲೊ ।
ಅಳಿವಿಲ್ಲ ವಿಶ್ವಕ್ಕೆ ಮಂಕುತಿಮ್ಮ ।।

Tuesday, June 7, 2011

ಒಂದು ಮರಿಮೀನಿಗೆ!

ಕಾರ್ಮುಗಿಲು ಆಗಸದ ತುಂಬ ಗೇರಾಯಿಸಿ
ಬೇಸಿಗೆಯ ತುದಿಗೆ ಮತ್ತೊಂದು ಉರುಬು!
ಒಣ ಧಗೆ-ಗಮ್ಮು-ಜೂಬರಿಕೆ-ಎಂಥದೊ ಜಡ್ಡು.
ತೂಗು ನಾಲಗೆ ಬಿದ್ದ ಗಂಟೆ ಕೊರಳು!

ಫಳ್ಳೆನುವ ಮಿಂಚು! ನಡು ನಡುವೆ ಸಿಡಿಮಿಡಿ ಗುಡುಗು
ಒಮ್ಮೆಗೇ ಆಹಾ! ತಂಗಾಳಿ ನುಗ್ಗು!
ಮೊದಲು ಹನಿ ಹನಿ ಚುಮುಕು. ಕೊನೆಗೆ ತಡಬಡವಿರದ
ಸುರಿತ. ಹೂವಾಗುವುದು ಎದೆಯ ಮೊಗ್ಗು!

ಅಂತರಾಳದ ತುಂಬ ನೆಲದ ಮಾದಕ ಗಂಧ
ನೆನೆಮಳೆಗೆ ಕಾದ ಮೈತುಂಬ ಝಳಕ
ಮಳೆಗಾಲ ಕಳೆಯಿತೋ ಮತ್ತದೇ ಒಣ ಬಾನು
ಇನ್ನೊಂದು ಮಳೆಗಾಲ ಬರುವ ತನಕ.

ಒಂದು ಮರಿಮೀನಿಗೆಷ್ಟಗಲ ಆಕಾಶ ಬಲೆ!
ಚುಕ್ಕಿ ಹುಳ ಚುಚ್ಚಿರುವ ಚಂದ್ರಗಾಳ!


ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......