ಹಬ್ಬಗಳು ಹೆಚ್ಚಾಗಿ ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ. ಎರಡು ರೀತಿಯ ಜೀವನ ಶೈಲಿಯ ಒಂದು ತುಲನಾತ್ಮಕ ನೋಟ........ 1990 ಕ್ಕಿಂತ ಮೊದ - ಕೃಪೆ ವಾಟ್ಸಪ್,
ಹಬ್ಬಗಳು ಹೆಚ್ಚಾಗಿ ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ . ಎರಡು ರೀತಿಯ ಜೀವನ ಶೈಲಿಯ ಒಂದು ತುಲನಾತ್ಮಕ ನೋಟ ........ 1990 ಕ್ಕಿಂತ ಮೊದಲಿನ ಸಾಮಾನ್ಯ ವರ್ಗದ ಜನರ ಜೀವನ ಬಹಳ ಕುತೂಹಲಕಾರಿ . ಇಂದಿನ ಜನರಿಗೆ ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು ..... ಆಗ ದೇಶದ ಸುಮಾರು ಶೇಕಡಾ 75% ರಷ್ಟು ಜನ ಬಡತನದಲ್ಲಿಯೇ ಇದ್ದರು . ಎರಡು ಹೊತ್ತಿನ ಹೊಟ್ಟೆ ತುಂಬಾ ಊಟ ಸಹ ಕಷ್ಟವಾಗಿತ್ತು . ಬೆಳಗ್ಗೆ ಮತ್ತು ರಾತ್ರಿ ಮಾತ್ರ ಊಟ ಮಾಡುತ್ತಿದ್ದರು . ಕೆಲವರಿಗೆ ಅದೂ ಸಿಗುತ್ತಿರಲಿಲ್ಲ . ಬಡವರು ಅಂದಿನ ಕೂಲಿ ಹಣದಲ್ಲಿ ಅಂದೇ ರಾಗಿ ಜೋಳ ಗೋದಿ ತಂದು ಅದನ್ನು ಪುಡಿ ಮಾಡಿಸಿ ಊಟ ಮಾಡಬೇಕಿತ್ತು ...... ಗಮನಿಸಿ , ಅಂದಿನ ಕಾಲದಲ್ಲಿ ಒಂದು ಮಾತು ಚಾಲ್ತಿಯಲ್ಲಿತ್ತು . " ಹಬ್ಬದಲ್ಲಿ ಅನ್ನ ಊಟ ಮಾಡಿದಂತೆ " ಅಂದರೆ ಹಬ್ಬಗಳಲ್ಲಿ ಮಾತ್ರ ಅನ್ನ ತಿನ್ನುತ್ತಿದ್ದರು . ಉಳಿದಂತೆ ಮುದ್ದೆ ರೊಟ್ಟಿ ಮತ್ತು ಗೊಜ್ಜು . ತರಕಾರಿಗಳು , ಬೇಳೆಗಳು , ಹಣ್ಣುಗಳು ಕೇವಲ ಕೆಲವೇ ಶ್ರೀಮಂತರು ಮಾತ್ರ ಉಪಯೋಗಿಸುತ್ತಿದ್ದರು . ಒಣ ದ್ರಾಕ್ಷಿ , ಗೋಡಂಬಿ , ಬಾದಾಮಿ , ಕರ್ಜೂರ ಬಹಳ ಜನ ನೋಡೇ ಇರಲಿಲ್ಲ . ಬನ್ನು , ಬ್ರೆಡ್ಡು ಕೇವಲ ಜ್ವರ ಬಂದಾಗ ಮಾತ್ರ ಕೊಡುತ್ತಿದ್ದರು . ಬನ್ನು ತಿನ್ನುವ...