Posts

Showing posts from October, 2018

ಸಂಗ್ರಹ

ಯಾರೋ ಪುಣ್ಯಾತ್ಮರು ಬಹಳ ಸುಂದರವಾಗಿ ಬರೆದಿದ್ದಾರೆ ತಪ್ಪದೇ ಓದಿ ನಾನು ಜೀವನದಲ್ಲಿ ಗೆದ್ದೇ ಗೆಲ್ಲುವೇ ಎನ್ನುವವರು ದಯವಿಟ್ಟು ಓದಿ. ಸಾಧಿಸುವ ಛಲ ಇದ್ದರೆ ಜಗತ್ತನ್ನೇ ಗೆಲ್ಲಬಹುದು. ಒಂದು ಯುದ್ಧದಿಂದಾಗಿ  ತಿಮ್ಮಪ್ಪ ನಾಯಕ ಕನಕದಾಸ ನಾಗಿ ಬದಲಾದ. ನಾರದ ನ  ಭೇಟಿಯಿಂದ ಕ್ರೂರನಾಗಿದ್ದ ವ್ಯಕ್ತಿ   ವಾಲ್ಮೀಕಿ ಯಾದ. ಎಂಟನೆಯ ವಯಸ್ಸಿಗೆ ಉಪನಯನವನ್ನು ತಿರಸ್ಕರಿಸಿ  ಬಸವಣ್ಣ ಜಗಜ್ಯೋತಿ ಯಾದ. ಸತತ ಪ್ರಯತ್ನ ಪ್ರಾಮಾಣಿಕ ಪರಿಶ್ರಮದಿಂದ ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಯಾದ. ತನ್ನ ಅದ್ಬುತ ವಿಚಾರಧಾರೆಗಳಿಂದ ಜಗತ್ತನ್ನು ಗೆದ್ದ ನರೇಂದ್ರ ವಿವೇಕಾನಂದ ನಾದ. ತನ್ನ ಮಗನಿಗೆ ಊಟ ಹಾಕಲಾಗದೆ ತನ್ನ ಮಗನನ್ನೇ ವಿಷ ಹಾಕಿ ಕೊಲ್ಲಲು ತಾಯಿ ನಿರ್ಧರಿಸಿದ್ದಳು. ಅಂದು ಅಚಾನಕ್ ಬದುಕುಳಿದ ವ್ಯಕ್ತಿ ಇಂದು ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ನಾದ. ತನ್ನ ಬಡತನ ಹಸಿವುಗಳನ್ನು ಮೆಟ್ಟಿ ನಿಂತು ಸತತ ಅಬ್ಯಾಸದಿಂದ ರವಿ ಡಿ ಚನ್ನಣ್ಣನವರ್ ಇಂದು ಐಪಿಎಸ್ ಅಧಿಕಾರಿಯಾದ. ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗದೆ ಎಸ್.ಆರ್.ಕಂಠಿ ಯವರು ಮುಖ್ಯಮಂತ್ರಿಯ ಸ್ಥಾನ ಬಿಟ್ಟು ಕೊಟ್ಟು ರಾಜಕೀಯದ "ಭರತ" ನಾದ. ಇಳಿವಯಸ್ಸಿನಲ್ಲಿಯೂ ಸರ್ಕಾರದ ತಪ್ಪು ನಿರ್ಧಾರ,  ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿ ಸತ್ಯಾಗ್ರಹ ನಡೆಸಿದ ಅಣ್ಣಾ ಹಜಾರೆ ಆಧುನಿಕ ಗಾಂಧಿ ಯಾದರು. ಬೀದಿ ದೀಪದಲ್ಲಿ ಓದಿದ ವಿಶ್ವೇಶ್ವರಯ್ಯ ಭಾರತ...