ಹುಟ್ಟಿದಾಗ ಅಳುವ, ಆ ನಂತರದಲ್ಲಿ ಹಸಿವಾದಾಗ, ನೋವಾದಾಗ ಅಳುತ್ತಾ, ತನ್ನಷ್ಟಕ್ಕೆ ನಗುತ್ತಾ ಬೆಳೆಯುವ ಮಗು ತೊದಲು ಮಾತನಾಡಿದಾಗ...ಅಮ್ಮ, ಅಪ್ಪ...ಅಣ್ಣ ಏನೇ ಹೇಳಿದರು ಮನೆ ಮಂದಿಯೆಲ್ಲಾ ಸಂತೋಷದಿಂದ ಆ ಮಗುವಿನ ಸಹಜತೆಯಿಂದ ಆಕಷಿ೯ತರಾಗುವರು. ಯಾವುದೇ ಹುದ್ದೆ, ಅಂತಸ್ತು ಯಾವುದೂ ಸಹಾ ಆ ಮಗುವಿಕೆ ತಿಳಿದರುವುದಿಲ್ಲ, ಮಗುವಿನ ಜನನ ಅದರ ಆಕರ್ಷಣೆಯಿಂದಾಗಿ ಮಗುವಿನ ತಾಯಿ ಸಹಾ ನಿಧಾನವಾಗಿ ಗೌರವಕ್ಕೆ ಅರ್ಹಳಾಗುವಳು. ಇಂತಹ ಮುಗ್ದ ಮನಸ್ಸಿನ ಮಕ್ಕಳು ಚಿಕ್ಕ ಪುಟ್ಟ ಹೆಜ್ಜೆಯನ್ನು ಇಡುತ್ತಾ ಮನೆಯೆಲ್ಲಾ ಓಡಾಡುವುದು. ಅದಕ್ಕೊಂದು ಹೆಸರು, ಜಾತಿ ನೀಡಿ ಯಾವಾಗ ನಾವು ಪ್ರತೇಕ ಗುರುತಿಸುವಿಕೆ ಪ್ರಾರಂಭ ಮಾಡುವೆವು. ಅಂದಿನಿಂದ ಮಕ್ಕಳು ತಮ್ಮತನವನ್ನು ಕಳೆದುಕೊಳ್ಳತೊಡಗುವರು. ಸಹಜವಾಗಿ ಇರುವ ಮಗುವಿಗೆ ಮನೆಯ ಅಂತಸ್ತು, ಅಪ್ಪ ಅಮ್ಮನ ಗೌರವ ಜಾತಿ, ಧರ್ಮದ ರೀತಿ ಈ ಎಲ್ಲವನ್ನು ಆ ಮಗುವಿನ ನಡುವಳಿಕೆ, ಆಹಾರ ವೇಷ ಭೂಷಣದಲ್ಲಿ ಒತ್ತಾಯವಾಗಿ ತುರುಕಲು ಪ್ರಾರಂಭಿಸುವೆವು. ಅದರ ಮುಂದುವರೆದ ಭಾಗವಾಗಿಯೇ ಶಾಲೆಗಳು ಸೃಷ್ಠಿಯಾಗಿರುವುದು. ಯಾವಾಗ ಮಗು ಶಾಲೆಗೆ ಹೋಗಲು ಪ್ರಾರಂಭ ಮಾಡುವುದೋ ಅಂದಿನಿಂದ ಮಗು ಯಾಂತ್ರಿಕ ಮಗುವಾಗಿರುವುದು, ವಿನಹ: ಸಹಜ ಮಗುವಾಗಿರದು. ಸಹಜ ಮಗುವನ್ನು ಯಾಂತ್ರಿಕ ಮಗುವನ್ನಾಗಿಸುವಲ್ಲಿ ಮುಖ್ಯವಾಗಿ ತಾಯಿ, ತಂದೆ ಹಾಗೂ ಶಾಲಾ ಶಿಕ್ಷಕರ ಪಾತ್ರ ಬಹುಮುಖ್ಯವಾಗಿರುವುದು. ಸ್ವಲ್ಪ ಸಹಜತೆ ಬಗ್ಗೆ ಮಾತನಾಡುವ ಅಜ್ಜ, ಅಜ್ಜಿ ಕಡೆ ಸ...