Posts

Showing posts from October, 2015

ಕೆಲವು ಕನ್ನಡ ಪುಸ್ತಕಗಳು,

Image
ಇಲ್ಲಿ ಕ್ಲಿಕಿಸಿ -ಕೆಲವು ಕನ್ನಡ ಪುಸ್ತಕಗಳು, 

ಚುಟುಕ - ಸಂತೋಷ್ ಕುಮಾರ್ ಎಲ್. ಎಂ.

---1 --- ಬತ್ತಿಯ ಬಾಯಿಗೆ ಬೆಂಕಿಯಿಟ್ಟವನ ಆಶಯ ಬೆಳಕಷ್ಟೇ! ಮುಗಿಯುವ ಅದರ ಆಯಸ್ಸಲ್ಲ ---2--------- ಗೂಡು ಕಟ್ಟಿದ್ದ ಮರವ ಧರೆಗುರುಳಿಸಿದ ಕಾರಣ ಹುಡುಕುತ್ತಿದ್ದ ಹಕ್ಕಿಗೆ ವಿಳಾಸವಿಲ್ಲ... ಹಕ್ಕಿಯೂ ಶಪಿಸಿತು, ಉರುಳಿಸಿದ ದುರುಳನಿಗೂ ಮುಂದೊಂದು ದಿನ ವಿಳಾಸವಿಲ್ಲ!

ಅತೀ ಎತ್ತರದ ಕಟ್ಟಡಗಳ ಮೇಲೆ ಹಗ್ಗ ಕಟ್ಟಿ ನಡೆದ - Philippe Petit

Image
ಚಿಕ್ಕವನಿದ್ದಾಗ ಫ್ರಾನ್ಸಿನ ಬೀದಿಗಳಲ್ಲಿ ತಿರುಗುತ್ತ, ಜನಗಳು ಅಚ್ಚರಿಪಡುವ ಪುಟ್ಟ ಪುಟ್ಟ ಸಾಹಸ ಪ್ರದರ್ಶನಗಳನ್ನು ನೀಡುತ್ತ ಸಂಪಾದಿಸುವ ಹುಡುಗ Philippe Petit. ಇದರ ಬಗ್ಗೆ ಅವರ ಅಪ್ಪ ಅಮ್ಮನಿಗೆ ಕೊಂಚವೂ ಇಷ್ಟವಿರುವುದಿಲ್ಲ. ಸರ್ಕಸ್ಸೊಂದರಲ್ಲಿ ಹಗ್ಗದ ಮೇಲೆ ನಡೆಯುವ ಸರ್ಕಸ್ಸಿನವನೊಬ್ಬನ ಕೌಶಲ್ಯದಿಂದ ಪ್ರೇರಿತನಾಗುವ Philippe Petitಗೆ ಮುಂದೆ ತಾನೂ ಈ ಸಾಹಸವನ್ನು ಮಾಡಬೇಕೆಂಬ ಆಸೆಯಾಗುತ್ತದೆ. ಅದನ್ನು ಕಲಿಯುತ್ತ ಸಾಗುವ ಹಾದಿಯಲ್ಲಿ ಆತ ಹಗ್ಗ ಕಟ್ಟಿ ಮಧ್ಯೆ ನಡೆಯಲು ಅನುಕೂಲವಾಗಬಲ್ಲ ಎರಡು ಎತ್ತರದ ವಸ್ತುಗಳನ್ನು ಸದಾ ಹುಡುಕುತ್ತಿರುತ್ತಾನೆ. ಯಾವುದೋ ಒಂದು ದೃಶ್ಯದಲ್ಲಿ ಹಲ್ಲು ನೋವಾಗಿ Dental Clinic ಗೆ ಹೋದಾಗ, ಅಲ್ಲಿಟ್ಟ ಮ್ಯಾಗಜೈನುಗಳ ಪೈಕಿ ಒಂದರಲ್ಲಿ ಪ್ರಪಂಚದ ಅತೀ ಎತ್ತರದ ಕಟ್ಟಡ ನ್ಯೂಯಾರ್ಕಿನ WTCಯ ಬಗೆಗಿನ ಮಾಹಿತಿ ಇವನ ಕಣ್ಣಿಗೆ ಬೀಳುತ್ತದೆ. ಕೇವಲ ಅದರ ಚಿತ್ರ ನೋಡಿಯೇ ರೋಮಾಂಚನಗೊಂಡು, ಜೀವನದಲ್ಲೊಮ್ಮೆ ತಾನು ಆ ಜೋಡಿ ಕಟ್ಟಡಗಳ ಮಧ್ಯೆ ಹಗ್ಗ ಕಟ್ಟಿ ನಡೆಯಬೇಕೆಂಬ ಮಹದಾಶೆ ಆ ಕ್ಷಣದಲ್ಲೇ ಅವನೆದೆಯೊಳಗೆ ಚಿಗುರೊಡೆಯುತ್ತದೆ. ಇಂಟರ್ನೆಟ್ಟುಗಳಿಲ್ಲದ ಎಪ್ಪತ್ತರ ದಶಕಗಳಲ್ಲಿ ಕೇವಲ ಪುಸ್ತಕಗಳಲ್ಲಿ, ವೃತ್ತಪತ್ರಿಕೆಗಳಲ್ಲಿ ಬರುವ ಆ ಕಟ್ಟಡದ ಬಗೆಗಿನ ಮಾಹಿತಿಯನ್ನು ಸಂಗ್ರಹಿಸುತ್ತ ತಯಾರಿ ಶುರುವಿಟ್ಟುಕೊಳ್ಳುತ್ತಾನೆ. ಈ ಮಧ್ಯೆ ಮನೆಯಿಂದ ಹೊರಹಾಕಿಸಿಕೊಳ್ಳುವ Philippe Petitಗೆ Annie ಪರಿಚಯವಾಗುತ್ತಾಳೆ. ಈತ...