ನಾಡೋಜ ಶ್ರೀ ಕಯ್ಯಾರ ಕಿಞ್ಞಣ್ಣ ರೈ - Rohith Chakrathirtha

ಕನ್ನಡದ ಅಕ್ಷರಗಳನ್ನು ಕೈಬಿಡಬೇಕು, ಮಹಾಪ್ರಾಣ ತೆಗೆಯಬೇಕು, ಕೊನೆಗೆ ಕನ್ನಡದ ಪ್ರಾಣವನ್ನೂ ಉಡಾಯಿಸಬೇಕು ಎಂದು ನಮ್ಮೊಳಗಿನ ಕನ್ನಡಿಗರೇ ಸಂಚು ಮಾಡುತ್ತಿರುವಾಗ ಕಾಸರಗೋಡಿನಂಥ ಪರಸ್ಥಳದಲ್ಲಿದ್ದು ಮಾನಸಿಕವಾಗಿ ಎಂದೆಂದೂ ಕನ್ನಡಿಗನೇ ಆಗಿ ಉಳಿದ ಮತ್ತು ತನ್ನ ತಾಯ್ನಾಡು ಕಾಸರಗೋಡನ್ನು ಕಡೆಯವರೆಗೂ ಕನ್ನಡನಾಡಿನ ಭಾಗವೆಂದೇ ತಿಳಿದ ರೈಗಳು ಪರೋಕ್ಷವಾಗಿ 'ಞ' ಎಂಬ ಪಾಪದ ಅಕ್ಷರವನ್ನೂ ಉಳಿಸಲು ಹೋರಾಡಿದರು ಎನ್ನಬಹುದು. ಯಾಕೆಂದರೆ ರೈದಂಪತಿ ತಮ್ಮೆರಡು ಹೆಸರುಗಳಲ್ಲೇ ನಾಲ್ಕು 'ಞ'ಗಳನ್ನು ಮಕ್ಕಳಂತೆ ಕಟ್ಟಿಕೊಂಡಿದ್ದರು. ಹುಟ್ಟಿಸಿದ ತುಳುವಪ್ಪೆ, ಬೆಳೆಸಿದ ಕನ್ನಡತಾಯಿ ಇಬ್ಬರೂ ಬಡವಾಗಿದ್ದಾರೆ. 'ಞ' ಅಕ್ಷರ ಕೂಡ ತಬ್ಬಲಿಯಾಗಿದೆ. ನಾಡೋಜ ಶ್ರೀ ಕಯ್ಯಾರ ಕಿಞ್ಞಣ್ಣ ರೈ