ದೇಶದ ರಾಜಕೀಯಕ್ಕೇ ಹೊಸ ಆಶಾ ಕಿರಣವಾದ ಆಮ ಆದ್ಮೀ ಪಕ್ಷದ ಗೆಲುವು............
ದೇಶದ ರಾಜಕೀಯಕ್ಕೇ ಹೊಸ ಆಶಾ ಕಿರಣವಾದ ಆಮ ಆದ್ಮೀ ಪಕ್ಷದ ಗೆಲುವು ............ ಇಂದು ಪ್ರಕಟವಾದ ದೆಹಲಿ ರಾಜ್ಯದ ಚುನಾವಣಾ ಫಲಿತಾಂಶದಲ್ಲಿ ಆಮ ಆದ್ಮೀ ಪಕ್ಷಕೆ ದೊರೆತ ಭರ್ಜರಿ ಜಯ ದೇಶದ ರಾಜಕೀಯಕ್ಕೆ ಆಶಾ ಕಿರಣವಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ . ಕಾಂಗ್ರೇಸ್ಸನ ಭೃಷ್ಟತೆ , ಬಿಜಿಪಿಯ ಕೋಮವಾದ ರಾಜಕಾರಣ , ಉಳಿದ ಪ್ರಾದೇಶಿಕ ಪಕ್ಷಗಳ ಸ್ವಾರ್ಥ ರಾಜಕಾರಣದಿಂದಲ್ಲೇ ಕಳೆದ 25 ವರ್ಷಗಳಿಂದ ಭಾರತದ ರಾಜಕೀಯ ಕಲ್ಮಶವಾಗಿತ್ತು . ನಿಷ್ಠಾವಂತ ಮಯಾ೯ದಸ್ಥ ವ್ಯಕ್ತಿಗಳು ರಾಜಕೀಯ ಕ್ಷೇತ್ರಕ್ಕೆ ಬರಬಾರದು ಎಂಬತಹ ಸ್ಥಿತಿಗೆ ಭಾರತದ ರಾಜಕೀಯ ಕಲ್ಮಶವಾಗಿತ್ತು . ಇಂತಹ ಸಂದರ್ಭದಲ್ಲಿ ಅಣ್ಣಾಹಜಾರೆ ಹೋರಾಟದ ಕೂಸಾಗಿ ಹುಟ್ಟಿದ ಆಮ ಆದ್ಮೀ ಪಕ್ಷವು ಉದಯವಾದ 8 ತಿಂಗಳ ಒಳಗೆ ಉತ್ತಮ ಪ್ರದರ್ಶನವನ್ನು ನೀಡಿತು . ಕಾಂಗ್ರೆಸ್ಸನ ಬಾಹ್ಯ ಬೆಂಬಲದೊಂದಿಗೆ 49 ದಿನ ಸಕಾರ ರಚಿಸಿದ ಪಕ್ಷ ಆ ನಂತರ ಸಕಾ೯ರವನ್ನು ವಿಸಜಿ೯ಸಿತು . ವ್ಯವಸ್ಥೆಯೊಂದನ್ನು ಬದಲಿಸುವ ತುಡಿತದಲ್ಲಿದ್ದ ಪಕ್ಷ ಅಧಿಕಾರದಿಂದ ಕೆಳಗಿಳಿದಿದ್ದು ದುಡುಕಿನ ನಿಧಾ೯ರವೆಂದು ಬಿಂಬಿತವಾಯಿತು . ಅದೇ ಸಮಯದಲ್ಲಿ ಎದುರಾದ ಲೋಕಸಭೆಗೆ ಅತಿ ಆಸೆಯಿಂದ ಸೂಕ್ತ ತಯಾರಿ ಇಲ್ಲದೇ ಹೋಯಿತು ಈ ಕಾರಣದಿಂದಲ್ಲೇ ಸೋಲನ್ನು ಅನುಭವಿಸಿತು . ಆದರೇ ಸ...