ಸಂದರ್ಶನ - ತಾರಾ ಶೈಲೇಂದ್ರ
ತಾರಾ ಶೈಲೇಂದ್ರ ಅವರು ನಡೆಸಿದ ಜಯಂತ ಕಾಯ್ಕಿಣಿ ಅವರ ಸಂದರ್ಶನದ ಒಂದು ಆಯ್ದ ಭಾಗ. ಪೂರ್ತಿ ಓದಿಗೆ ಈ ಲಿಂಕ್ ಕ್ಲಿಕ್ಕಿಸಿ... http://taraantaranga.blogspot.in/2014/06/blog-post.html ಪ್ರಶ್ನೆ : ತಾವು ಮೂಲತಃ Biochemist ಆಗಿದ್ದು , ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದು ಹೇಗೆ ? ಉತ್ತರ : ವಿಜ್ಞಾನ ಹಾಗೂ ಸಾಹಿತ್ಯ ಬೇರೆ ಎಂಬ ಕಲ್ಪನೆ ತಪ್ಪು . ಕುವೆಂಪು ಅವರು QUANTUM PHYSICS ಓದಿದವರು . ಬೇಂದ್ರೆಯವರ ಗ್ರಂಥಾಲಯದ ೧೩,೦೦೦ ಪುಸ್ತಕಗಳಲ್ಲಿ ೧೦,೦೦೦ ವಿಜ್ಞಾನಕ್ಕೆ ಸಂಬಂಧಿಸಿದವು . ಯಶವಂತ್ ಚಿತ್ತಾಲರು ಒಬ್ಬ Polymer Chemist. ಪೂರ್ಣಚಂದ್ರ ತೇಜಸ್ವಿಯವರು ಒಬ್ಬ ಸಸ್ಯಶಾಸ್ತ್ರಜ್ಞರು ಕಾರಂತರು ನಡೆದಾಡುವ ವಿಜ್ಞಾನ ವಿಶ್ವಕೋಶ ಎನಿಸಿಕೊಂಡವರು ನಿಸಾರ್ ಅಹ್ಮದ್ ಅವರು Geologist ಆಗಿದ್ದವರು . ನಾವು ಮಕ್ಕಳಲ್ಲಿ ವಿಜ್ಞಾನ ಓದಿದವ ಬುದ್ಧಿವಂತ , ಕಲೆ ಓದಿದವ ದಡ್ಡ ಎಂಬ ತಪ್ಪು ಅಭಿಪ್ರಾಯ ಬೆಳೆಸಿ, ದಾರಿ ತಪ್ಪಿಸಿದ್ದೇವೆ. ವಿಜ್ಞಾನ ಮತ್ತು ಕಲೆ ಎರಡೂ ಒಂದಕ್ಕೊಂದು ಪೂರಕವಾಗಿರಬೇಕು.