'' ಹೊರಗೆ ಹನಿ ಹನಿ ತುಂತುರು ಮಳೆ,..... ''
ಹೊರಗೆ ಹನಿ ಹನಿ ತುಂತುರು ಮಳೆ,ಆಳುವ ಮಂದಿಯ ಕೃಪೆಯಿಂದ ಊರೆಲ್ಲ ಇಳಿಸಂಜೆಯಲ್ಲಿ ನನ್ನಂತೆಯೆ ವಿಷಾದಕ್ಕೆ ಜಾರಿದ ಹಾಗೆ ಕತ್ತಲಲ್ಲಿ ಮುದುಡಿ ಮುಳುಗಿದೆ...ನಿನ್ನ ನೆನಪಿನ ತುಂತುರಲ್ಲಿ ಒಳಗೂ-ಹೊರಗೂ ನೆನೆಯುತ್ತ ಈ ಕತ್ತಲ ಹಾದಿಯನ್ನ ಸವೆಸುತಿದ್ದೇನೆ.ನಿನ್ನನ್ನೆ ಕ್ಷಣಕ್ಷಣಕ್ಕೂ ಮೌನದಲ್ಲೇ ಜಪಿಸುತ್ತಿದ್ದೇನೆ.ಎಷ್ತೋದು ಒಂಟಿಯಾದೆನಲ್ಲ ನಾನು,ಹೋಗಹೋಗ್ತಾ, ನೀನು ಹಾಗೆಯೆ ಹೋಗಲಿಲ್ಲ ;ನನ್ನ ನೆಮ್ಮದಿ,ಖುಷಿ,ಗೆಲುವನ್ನೆಲ್ಲ ಜೊತೆಗೆ ಗಂಟು ಕಟ್ಟಿಕೊಂಡು ದೂರ ಸರಿದೆ.ಮತ್ತೆ ನನ್ನ ಬಾಳಿನ ಬುಟ್ಟಿಯ ತುಂಬಾ ಸಂಕಟದ ಮುಳ್ಳುಗಳನ್ನೆ ಸುರಿದೆ. ಹುಟ್ಟಿನಿಂದಲೂ ನನಗೇನೆ ದೊಡ್ಡ ಪ್ರಶ್ನೆಯಾಗಿದ್ದ ನನ್ನೊಳಗಿನ ಕೀಳರಿಮೆಯಿಂದ ಕುಗ್ಗಿ ಹೋಗಿದ್ದ ನನಗೂ ಬಾಳಿನ ಸಂಭ್ರಮದ ಅಸಲು ಪರಿಚಯ ಆದದ್ದು ನಿನ್ನಿಂದ.ಕಾರಣವೆ ಇಲ್ಲದ ನಮ್ಮ ಸುತ್ತಾಟಗಳು-ಜಂಟಿ ಪ್ರವಾಸಗಳು-ಕಲಾಕ್ಹೇತ್ರದ ತೀರ್ಥಯಾತ್ರೆಗಳು-ಟೌನ್'ಹಾಲಿನ ಉದ್ದನುದ್ದ ಮೆಟ್ಟಲುಗಳ ಮೇಲೆ ಕೂತು ನಾವು ಹೆಣೆದಿದ್ದ ಕನಸುಗಳ ಜಾತ್ರೆಗಳು-ಇಂಡೋ ಜರ್ಮನ್ ಸಿನಿಮಾ,ಬೆಂಗಳೂರು ಹಬ್ಬ ಅಂತೆಲ್ಲ ನಡೆಸಿದ್ದ ಹುಚ್ಚುಹುಚ್ಚು ಓಡಾಟಗಳು,ಗಾಂಧಿನಗರದ ಸಂದುಗೊಂದುಗಳ ಶ್ರದ್ಧಾಪೂರ್ವಕ ಅನ್ವೇಷಣೆಗಳು...ಓಹ್, ಬಾಳು ಎಷ್ಟೊಂದು ಸೋಗಸಾಗಿತ್ತಲ್ಲ ಆಗೆಲ್ಲ! ಹೀಗೆ ಅರಿವಿಲ್ಲದೆ ಹೊಸತೊಂದು ಸಂತಸದ ಹಾಡನ್ನ ನಾನು ಹೆಚ್ಚುಹೆಚ್ಚು ಗುನುಗೋಕೆ ಕಾರಣವಾಗಿದ್ದುದು ಕೇವಲ ನೀನು.ನಿನ್ನ ಒಡನಾಟ.ನನ್ನ ಪಾಲಿಗೆ ಆತ್ಮದ ಬಂಧುವೆ ಆಗಿರು...